ನಿರಂತರ ಲೈಂಗಿಕ ಕ್ರಿಯೆ ನಡೆಸಿದರೂ ಮಗುವಾಗಿಲ್ಲ; ವೈದ್ಯರನ್ನು ಭೇಟಿಯಾದಾಗ ತಿಳಿಯಿತು ಶಾಕಿಂಗ್ ಸಂಗತಿ

ವೈದ್ಯರು ಮೊದಲಿಗೆ ಇದು ಹೊಸ ರೀತಿಯ ಸಮಸ್ಯೆ ಎಂದು ಭಾವಿಸಿದ್ದರು. ಈ ಬಗ್ಗೆ ಮತ್ತಷ್ಟು ಪರೀಕ್ಷೆ ನಡೆಸಿದಾಗ ಮಹಿಳೆಯು ಇನ್ನೂ ಕನ್ಯೆಯಾಗಿ ಉಳಿದಿರುವ ಸಂಗತಿ ಗೊತ್ತಾಗಿದೆ!.

news18-kannada
Updated:March 24, 2020, 2:21 PM IST
ನಿರಂತರ ಲೈಂಗಿಕ ಕ್ರಿಯೆ ನಡೆಸಿದರೂ ಮಗುವಾಗಿಲ್ಲ; ವೈದ್ಯರನ್ನು ಭೇಟಿಯಾದಾಗ ತಿಳಿಯಿತು ಶಾಕಿಂಗ್ ಸಂಗತಿ
Sex-Relation
  • Share this:
ಇದೊಂದು ಅಪರೂಪದ ಘಟನೆ. ಕಳೆದ ಮೂರು ವರ್ಷಗಳಿಂದ ದಾಂಪತ್ಯ ಜೀವನ ನಡೆಸಿದ್ದ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಜೀವನದ ಸರಸ ಸಲ್ಲಾಪಗಳು ಸರಿಯಾಗಿ ನಡೆಯುತ್ತಿದ್ದರೂ ಈ ದಂತಿಗೆ ಮಗುವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇವರು ವೈದ್ಯರ ಬಳಿ ತೆರಳಿದರು. ಆಗ ದಂಪತಿಗಳಿಗೆ ಕಾದಿತ್ತು ಶಾಕ್ ಸಂಗತಿ.

ಕಳೆದ ಮೂರು ವರ್ಷಗಳಲ್ಲಿ ಅನೇಕ ಬಾರಿ ಲೈಂಗಿಕ ಬಂಧದಲ್ಲಿ ಏರ್ಪಟ್ಟಿದ್ದರೂ ಮಕ್ಕಳಾಗದೇ ಇದ್ದದು ಈ ದಂಪತಿಗಳ ಚಿಂತೆಗೆ ಕಾರಣವಾಗಿತ್ತು. ಈ ಬಗ್ಗೆ ಯುವ ದಂಪತಿಗಳು ಡಾ. ಲಿಯು ಹಾಂಗ್ಮೆಯಿ ಅವರನ್ನು ಭೇಟಿಯಾಗಿದ್ದಾರೆ. ದಂಪತಿಗಳನ್ನು ಪರೀಕ್ಷಿಸದ ವೈದ್ಯರಿಗೆ ಮೊದಲಿಗೆ ತೊಂದರೆ ಏನು ಎಂಬುದು ತಿಳಿದಿರಲಿಲ್ಲ.

ಊದುಬತ್ತಿ ಹೊಗೆಯೂ ಆರೋಗ್ಯಕ್ಕೆ ಹಾನಿಕರ ಎಂದರೆ ನಂಬಲೇಬೇಕು!

ಬಳಿಕ 24ರ ಹರೆಯದ ಪತ್ನಿಯನ್ನು ವಿಚಾರಿಸಿದಾಗ ತಮ್ಮ ಲೈಂಗಿಕ ಬಂಧದ ರಹಸ್ಯಗಳನ್ನು ತೆರೆದಿಟ್ಟಿದ್ದಾರೆ. ಈ ವೇಳೆ, ಲೈಂಗಿಕ ಕ್ರಿಯೆಯ ಸಮಯದಲ್ಲಿ ತನಗೆ ವಿಪರೀತ ನೋವಾಗುತ್ತದೆ. ಸಂಭೋಗ ಸಮಯದಲ್ಲಿ ಪ್ರತಿದಿನ ಇದೇ ನೋವು ಅನುಭವಿಸುತ್ತಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

ವೈದ್ಯರು ಮೊದಲಿಗೆ ಇದು ಹೊಸ ರೀತಿಯ ಸಮಸ್ಯೆ ಎಂದು ಭಾವಿಸಿದ್ದರು. ಈ ಬಗ್ಗೆ ಮತ್ತಷ್ಟು ಪರೀಕ್ಷೆ ನಡೆಸಿದಾಗ ಮಹಿಳೆಯು ಇನ್ನೂ ಕನ್ಯೆಯಾಗಿ ಉಳಿದಿರುವ ಸಂಗತಿ ಗೊತ್ತಾಗಿದೆ!. ದಂಪತಿಗಳ ದಾಂಪತ್ಯ ಜೀವನದ ರಹಸ್ಯಗಳನ್ನು ಕೆದಕಿದಾಗ ಲೈಂಗಿಕ ಕ್ರಿಯೆಯ ಪ್ರಮಾದ ಬೆಳಕಿಗೆ ಬಂದಿದೆ. ಏಕೆಂದರೆ ಚೀನಾದ ಈ ದಂಪತಿಗಳು ಗುದ ಸಂಭೋಗವನ್ನು ಮಾಡುತ್ತಿದ್ದರು. ಅದುವೇ ಸರಿಯಾದ ಲೈಂಗಿಕ ಕ್ರಿಯೆ ಎಂದು ಯುವ ದಂಪತಿಗಳು ತಪ್ಪಾಗಿ ಭಾವಿಸಿದ್ದರು.

ಭಾರತೀಯರು ಕಾಮ ಕಥೆಗಳ ವ್ಯಸನಿಗಳಾಗುತ್ತಿದ್ದಾರಂತೆ; ಅಧ್ಯಯನದಿಂದ ಹೊರಬಿತ್ತು ಆತಂಕಕಾರಿ ವಿಚಾರ

'ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗಳಿಗೆ ಗರ್ಭಿಣಿಯಾಗುವುದರ ಬಗ್ಗೆ ಗೊತ್ತಿತ್ತು. ಆದರೆ ಲೈಂಗಿಕ ಕ್ರಿಯೆಯ ಬಗ್ಗೆ ಸಾಮಾನ್ಯ ಜ್ಞಾನ ಇರಲಿಲ್ಲ. ಇಂತಹ ಘಟನೆಗಳು ತುಂಬಾ ಅಪರೂಪ' ಎಂದು ದಿ ಸನ್ ಮಾಡಿದ ವರದಿಯಲ್ಲಿ ಡಾ. ಲುಯಿ ತಿಳಿಸಿದ್ದಾರೆ.ಬಳಿಕ ಈ ದಂಪತಿಗಳಿಗೆ ಲೈಂಗಿಕ ಶಿಕ್ಷಣ ಕುರಿತಾದ 'ಸೆಕ್ಸ್ ಎಡ್ ಹ್ಯಾಂಡ್​ಬುಕ್' ನೀಡಿ ಮಾರ್ಗದರ್ಶನ ನೀಡಲಾಯಿತು. ಇದಾದ ಕೆಲವೇ ತಿಂಗಳಲ್ಲಿ ಆ ಮಹಿಳೆ ಗರ್ಭವತಿಯಾಗಿರುವ ಸುದ್ದಿ ಕೇಳಿ ಬಂದಿದೆ. ಜೊತೆಗೆ 100 ಮೊಟ್ಟೆ ಮತ್ತು ಒಂದು ಜೀವದ ಕೋಳಿಯನ್ನು ತಮ್ಮ ಖುಷಿ ವ್ಯಕ್ತಪಡಿಸಲು ಉಡುಗೊರೆಯಾಗಿ ನನಗೆ ಕಳುಹಿಸಿ ಕೊಡಲಾಗಿತ್ತು ಎಂದು ಡಾಕ್ಟರ್ ಲುಯಿ ತಿಳಿಸಿದ್ದಾರೆ.
First published: March 24, 2020, 2:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading