Tripಗೆ ನಾಯಿ ಜೊತೆ 'ಮನೆ'ಯನ್ನೇ ಹೊತ್ತುಕೊಂಡು ಹೋದ ದಂಪತಿ! ಅಚ್ಚರಿಯಾದರೂ ಇದು ನಿಜ

ಸುಮಾರು 2 ಖಂಡಗಳನ್ನು ಸುತ್ತಿರುವ ಇವರು 7 ದೇಶಗಳನ್ನು ನೋಡಿದ್ದಾರೆ,. ಮುಂದೆ 16 ದೇಶ ನೋಡುವ ಕನಸನ್ನು ನನಸು ಮಾಡಿಕೊಳ್ಳಲು ಶೀಘ್ರದಲ್ಲೇ 3ನೇ ಖಂಡಕ್ಕೆ ಎಂಟ್ರಿಯಾಗಲಿದ್ದಾರೆ! ಈ ದಂಪತಿಯ ಪ್ರವಾಸ ಹೇಗಿರುತ್ತೆ ಅಂತ ನೀವೇ ನೋಡಿ...

ವ್ಯಾನ್-ಹೋಮ್‌ನೊಂದಿಗೆ ದಂಪತಿ

ವ್ಯಾನ್-ಹೋಮ್‌ನೊಂದಿಗೆ ದಂಪತಿ

 • Share this:
  ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವ ಮಾತೇ ಇದೆ. ಕೆಲವರಿಗೆ ಟ್ರಾವೆಲಿಂಗ್ (Traveling) ಎನ್ನುವುದು ಕನಸಲ್ಲ ಅದೊಂದು ಹುಚ್ಚು. ಬೇರೆ ಊರು, ದೇಶ, ಸ್ಥಳ ನೋಡುವ ಹಂಬಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಟೂರ್ (Tour) ಮಾಡೋದು ಅಂದ್ರೆ ಸ್ವರ್ಗಕ್ಕೆ ಮೂರೇ ಗೇಣು ಅಂತ ಅನ್ನೋ ಮನಸ್ಥಿತಿ ಇರುವ ಅದೆಷ್ಟೋ ಜನರನ್ನು ನಾವು ನೋಡಬಹುದು. ಈಗ ನಾವು ಹೇಳುವ ಕಥೆಯಲ್ಲೂ ದಂಪತಿಗಳಿಬ್ಬರದು (Couples) ಇದೇ ಕನಸು. ತಮ್ಮ ಕನಸಿನ ಟ್ರಾವೆಲಿಂಗ್ ಅನ್ನು ನನಸು ಮಾಡಿಕೊಳ್ಳುತ್ತಿರುವ ದಂಪತಿಗಳು ಕಳೆದ ಒಂದೂವರೆ ವರ್ಷದಿಂದ ರಸ್ತೆಯ (Road) ಮೇಲೆ ವಾಸಿಸುತ್ತಾ ಊರು ಊರುಗಳನ್ನು ಸುತ್ತುತ್ತಿದ್ದಾರೆ. ಈ ಟ್ರಾವೆಲಿಂಗ್ ಕಥೆಯ ನಾಯಕ ನಾಯಕಿ ಭಾರತ ಮೂಲದ ಕಾರ್ತಿಕ್ (Karthik) ಮತ್ತು ಸ್ಮೃತಿ ಭಡೋರಿಯಾ (Smriti Bhadoria). ಇವರಿಬ್ಬರ ಕನಸು ಒಂದೇ 16 ದೇಶಗಳನ್ನು ಸುತ್ತುವುದು. ಅದಕ್ಕಂತಾನೇ ಈ ಎನ್‌ಆರ್‌ಐ ದಂಪತಿ ವ್ಯಾನಿನಲ್ಲೇ ತಮ್ಮ ಮನೆ ನಿರ್ಮಿಸಿಕೊಂಡು, ಅವರ ಪ್ರೀತಿಯ ನಾಯಿ ಜೊತೆ ದೇಶ ಸುತ್ತುತ್ತಿದ್ದಾರೆ.

  ವ್ಯಾನ್ ಅನ್ನೇ ಮನೆಯಂತೆ ಬದಲಾಯಿಸಿದ ದಂಪತಿ

  ತಮ್ಮ ಇಡೀ ಮನೆಯನ್ನು ವಿಂಟೇಜ್ ವ್ಯಾನ್‌ನಲ್ಲಿ ಪ್ಯಾಕ್ ಮಾಡಿಕೊಂಡು ಟೊರೊಂಟೊದಿಂದ ಹೊರಟ ಇವರು ತಮ್ಮ ಕನಸಿನ ಪ್ರಯಾಣ ಮುಂದುವರೆಸಿದ್ದಾರೆ. ದಂಪತಿಗಳ ಟ್ರಾವೆಲಿಂಗ್ ಕನಸಿಗೆ ಪ್ರೇರಣೆಯಾಗಿದ್ದು ಶಾರುಖ್ ಅಭಿನಯದ ಸ್ವದೇಸ್ (2004) ಚಿತ್ರವಂತೆ.

  ಜೊತೆಗೆ ತಮ್ಮ ಜಿ-ವ್ಯಾಗನ್‌ನಲ್ಲಿ ಆರು ಖಂಡಗಳನ್ನು ಸಂಚರಿಸಿದ ಗುಂಥರ್ ಹೋಲ್ಟೋರ್ಫ್ ಮತ್ತು ಕ್ರಿಸ್ಟೀನ್ ಅವರ ಕಥೆಯಿಂದ ಎನ್ನುತ್ತಾರೆ ಭಡೋರಿಯಾ. ಪ್ರಸ್ತುತ ಇಬ್ಬರು ತಮ್ಮ ಲ್ಯಾಬ್ರಡಾರ್ ನಾಯಿ ಜೊತೆ 27,000 ಕಿ.ಮೀ ಗಿಂತಲೂ ಹೆಚ್ಚು ಸಂಚರಿಸಿ 16 ತಿಂಗಳುಗಳಲ್ಲಿ ಏಳು ದೇಶಗಳನ್ನು ಕವರ್ ಮಾಡಿದ್ದಾರೆ ಮತ್ತು ಶೀಘ್ರದಲ್ಲೇ ತಮ್ಮ ಮೂರನೇ ಖಂಡವನ್ನು ಪ್ರವೇಶಿಸುವ ಹಾದಿಯಲ್ಲಿದ್ದಾರೆ.

  ಕೆಲಸ ಮಾಡುತ್ತಲೇ ದೇಶ ಸುತ್ತಾಟ!

  ಐಟಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳು ಉದ್ಯೋಗ ಬಿಡದೇ ತಮ್ಮ ಜರ್ನಿಯನ್ನು ಶುರು ಮಾಡಿದ್ದಾರೆ. ಮತ್ತು ದೇಶ ಸುತ್ತಲೂ ಅವರದ್ದೇ ಆದ ವಾಹನವೊಂದನ್ನು ತಯಾರಿಸಿಕೊಂಡು ಅದನ್ನೇ ತಮ್ಮ ಮನೆಯನ್ನಾಗಿಸಿದ್ದಾರೆ. 1977ರ ಡಾಡ್ಜ್ ವ್ಯಾನ್ ಒಂದನ್ನು 'ಬ್ರೌನ್ ವ್ಯಾನ್' ಎಂದು ಕರೆಯುತ್ತಾರೆ. ಈ ವ್ಯಾನನ್ನು ರಿಪೇರಿ ಮಾಡಿಸಿ ತಮ್ಮ ಕನಸಿನ ಸಾಹಸಕ್ಕೆ ಸಜ್ಜಾದೆವು ಎನ್ನುತ್ತಾರೆ ಕಾರ್ತಿಕ್ ಮತ್ತು ಸಿಮ್ ದಂಪತಿ.

  ಇದನ್ನೂ ಓದಿ: ಕೇರಳದ ಮೇಯರ್​​ಗೆ ಕೂಡಿಬಂತು ಕಂಕಣ ಭಾಗ್ಯ; ದೇಶದ ಕಿರಿಯ ಶಾಸಕನನ್ನೇ ವರಿಸಲಿದ್ದಾರೆ Arya Rajendran

  ಫೆಬ್ರವರಿ 2020ರಲ್ಲಿ, ಸಿಮ್ ಮತ್ತು ಕಾರ್ತಿಕ್ ಇಬ್ಬರ ವಿವಾಹ ನಡೆಯಿತು. ಮೊದಲ ಭೇಟಿಯಲ್ಲಿಯೇ ಸಿಮ್ ಜಗತ್ತು ಸುತ್ತುವ ಕನಸನ್ನು ಕಾರ್ತಿಕ್‌ಗೆ ಹೇಳಿದ್ದರಂತೆ. ಮತ್ತೆ 2020ರಲ್ಲಿ ತಮಗೆ ಸುತ್ತಲು ಬೇಕಿರುವ ಎಲ್ಲಾ ವಸ್ತುಗಳನ್ನು ಬ್ರೌನ್ ಕಾರಿನಲ್ಲಿ ಪ್ಯಾಕ್ ಮಾಡಿಕೊಂಡು ನಮ್ಮ ನಾಯಿ ಜತೆ ಇಬ್ಬರು ಮನೆ ಬಿಟ್ಟೆವು ಎನ್ನುತ್ತಾರೆ ದಂಪತಿ.

  ಸಿಮ್ ಮತ್ತು ಕಾರ್ತಿಕ್ ವಿಂಟೇಜ್ ವ್ಯಾನ್ ಹೇಗಿದೆ?

  ಬ್ರೌನ್ ವ್ಯಾನ್, ಮೊದಲನೆಯದಾಗಿ, ಒಂದು ವಿಶಿಷ್ಟವಾದ ದಕ್ಷಿಣ ಏಷ್ಯಾದ ಮನೆಯಾಗಿದೆ. ಮನೆ ಪ್ರವೇಶಿಸುವ ಮೊದಲು ನಿಮ್ಮ ಬೂಟುಗಳನ್ನು ಡೋರ್‌ಮ್ಯಾಟ್‌ನ ಹೊರಗೆ ಬಿಡಬೇಕು ಎನ್ನುತ್ತಾರೆ ಸಿಮ್.

  ವ್ಯಾನ್ ಒಳಗೆ ಇದೆ ಎಲ್ಲ ವಸ್ತುಗಳು

  ಒಳಗೆ, ಮಲಗಲು ಹಾಸಿಗೆ ಮತ್ತು ಕೆಲಸ ಮಾಡಲು ಮಂಚದಂತೆ ಪರ್ಯಾಯವಾಗಿ ಕುಳಿತುಕೊಳ್ಳುವ ಪ್ರದೇಶವಿದೆ. ದೊಡ್ಡ ಸಿಂಕ್ ಹೊಂದಿರುವ ಅಡುಗೆಮನೆ ಮತ್ತು, ಪಾತ್ರೆಗಳು ಮತ್ತು ಹಲವು ಬೇಕಾದ ವಸ್ತುಗಳನ್ನು ಸಂಗ್ರಹಿಸಲು ಅನೇಕ ಗುಪ್ತ ಸ್ಥಳಗಳಿವೆ.

  ತುರ್ತು ಬಳಕೆಗಾಗಿ ಶೌಚಾಲಯ, ಸಣ್ಣ ಫ್ರಿಡ್ಜ್, ಎಸಿ, ವಿದ್ಯುತ್ ವ್ಯವಸ್ಥೆ, ಫ್ಯಾನ್ ಕೂಡ ಇದೆ. ಹೊರಾಂಗಣದಲ್ಲಿ ಅಡುಗೆ ಮಾಡಲು ಇಷ್ಟಪಡುವ ಸಿಮ್, ರುಚಿಕರವಾದ ಊಟವನ್ನು ಬೇಯಿಸಲು ಪೋರ್ಟಬಲ್ ಸ್ಟೌವ್ ಅನ್ನು ಬಳಸುತ್ತಾರೆ.

  ಇದನ್ನೂ ಓದಿ: Rich Cat: ಡಿಸೈನರ್ ಡ್ರೆಸ್ ಧರಿಸಿ ಸ್ಪಾಗೆ ಹೋಗುತ್ತೆ ಈ ಶ್ರೀಮಂತ ಬೆಕ್ಕು..! ಬರ್ತ್​ಡೇಗೆ ಸಿಕ್ತು ಬಂಪರ್ ಗಿಫ್ಟ್

  ಸುಮಾರು 7 ದೇಶಗಳನ್ನು ನೋಡಿರುವ ದಂಪತಿ

  ದಂಪತಿಗಳು ಮಧ್ಯಾಹ್ನದ ವೇಳೆಗೆ ತಮ್ಮ ಕೆಲಸವನ್ನು ಮುಗಿಸುತ್ತಾರೆ ಮತ್ತು ತಮ್ಮ ಉಳಿದ ದಿನವನ್ನು ಸುತ್ತಾಡಲು ಕಳೆಯುತ್ತಾರೆ. ಹೊಸ ಜಾಗ, ಹೊಸ ಜನ ನಿಜಕ್ಕೂ ನಮಗೆ ಹತ್ತಿರವಾಗುತ್ತಿದ್ದಾರೆ. ಇದೊಂದು ಅದ್ಭುತ ಅನುಭವ ಎನ್ನುತ್ತಾರೆ ಸಿಮ್ ಮತ್ತು ಕಾರ್ತಿಕ್.

  ಸುಮಾರು 2 ಖಂಡಗಳನ್ನು ಸುತ್ತಿರುವ ಇವರು 7 ದೇಶಗಳನ್ನು ನೋಡಿದ್ದರೆ, ಮತ್ತು ತಮ್ಮ 16 ದೇಶ ನೋಡುವ ಕನಸನ್ನು ನನಸು ಮಾಡಿಕೊಳ್ಳಲು ಶೀಘ್ರದಲ್ಲೇ 3ನೇ ಖಂಡಕ್ಕೆ ಎಂಟ್ರಿಯಾಗಲಿದ್ದಾರೆ.
  Published by:Annappa Achari
  First published: