ಕಸ ವಿಲೇವಾರಿ ಮಾಡುವವರಿಗೆ ಕಾದಿತ್ತು ಶಾಕ್; ಆ ಗಾಡಿಯಲ್ಲಿತ್ತು ಬರೋಬ್ಬರಿ 14 ಲಕ್ಷ ರೂ!

ತಮ್ಮ ಗಾಡಿಯಲ್ಲಿರುವ ಕಸದ ಜೊತೆಗೆ ಭಾರೀ ಮೊತ್ತದ ಹಣ ಇರುವುದನ್ನು ನೋಡಿದ ತ್ಯಾಜ್ಯ ವಿಲೇವಾರಿ ಸಿಬ್ಬಂದಿ ಈ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸಿದ್ದರು. ಗಾಡಿಯ ಬಳಿ ಇದ್ದ ಸಿಸಿಟಿವಿ ದೃಶ್ಯಾವಳಿ ಮೂಲಕ ಪೊಲೀಸರು ಹಣದ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ.

Sushma Chakre | news18-kannada
Updated:January 8, 2020, 5:53 PM IST
ಕಸ ವಿಲೇವಾರಿ ಮಾಡುವವರಿಗೆ ಕಾದಿತ್ತು ಶಾಕ್; ಆ ಗಾಡಿಯಲ್ಲಿತ್ತು ಬರೋಬ್ಬರಿ 14 ಲಕ್ಷ ರೂ!
ಸಾಂದರ್ಭಿಕ ಚಿತ್ರ
  • Share this:
ಮನೆಯಲ್ಲಿ ಎಲ್ಲೆಲ್ಲೋ ಹಣ ಇಟ್ಟು, ನಮಗೆ ಬೇಕಾದಾಗ ಅದು ಸಿಗದೆ ಪರದಾಡುವ ಪ್ರಸಂಗಗಳು ಆಗಾಗ ನಡೆಯುತ್ತಲೇ ಇರುತ್ತದೆ. ಎಲ್ಲೂ ಕಳೆದುಹೋಗಬಾರದು ಎಂದು ಯಾವುದೋ ವಸ್ತುವನ್ನು ಜೋಪಾನವಾಗಿಟ್ಟಿಡುತ್ತೇವೆ. ಆದರೆ, ಆ ವಸ್ತುವನ್ನು ಎಲ್ಲಿಟ್ಟಿದ್ದೇವೆ ಎಂಬುದನ್ನು ಮರೆತುಬಿಡುವ ಸಮಸ್ಯೆಯೂ ಹಲವರಿಗೆ ಇರುತ್ತದೆ. ಆದರೆ, ಇದೆಲ್ಲದಕ್ಕಿಂತ ವಿಚಿತ್ರವಾದ ಘಟನೆಯೊಂದು ಇಂಗ್ಲೆಂಡ್​ನಲ್ಲಿ ನಡೆದಿದ್ದು, ಮನೆಯನ್ನು ಸ್ವಚ್ಛಗೊಳಿಸಿದ್ದ ದಂಪತಿ ಕಸದ ಜೊತೆಗೆ 14 ಲಕ್ಷ ರೂ.ಗಳನ್ನೂ ಬಿಸಾಡಿದ್ದಾರೆ.

ಅಚ್ಚರಿಯಾದರೂ ಇದು ಸತ್ಯ. ಭಾರತೀಯ ಮೌಲ್ಯದ ಪ್ರಕಾರ 14 ಲಕ್ಷ ರೂ.ಗಳನ್ನು ಕಸದ ಜೊತೆಗೆ ಎಸೆದ ದಂಪತಿಗೆ ಈ ಬಗ್ಗೆ ಗೊತ್ತೇ ಇರಲಿಲ್ಲ. ಕೆಲ ದಿನಗಳ ಹಿಂದೆ ಮೃತಪಟ್ಟಿದ್ದ ಅಜ್ಜ-ಅಜ್ಜಿಯ ಮನೆ ಸ್ವಚ್ಛ ಮಾಡಿ, ಕಸವನ್ನು ಬಿಸಾಡಿದ್ದ ದಂಪತಿಗೆ ಆ ಕಸದೊಂದಿಗೆ 14 ಲಕ್ಷ ರೂ. ಇರುವ ವಿಚಾರವೇ ಗೊತ್ತಿರಲಿಲ್ಲ. ಆದರೆ, ಕಸ ತೆಗೆದುಕೊಂಡು ಹೋದವರಿಗೆ ಈ ವಿಷಯ ಗೊತ್ತಾಗಿತ್ತು. ತಮ್ಮ ಗಾಡಿಯಲ್ಲಿರುವ ಕಸದ ಜೊತೆಗೆ ಭಾರೀ ಮೊತ್ತದ ಹಣ ಇರುವುದನ್ನು ನೋಡಿದ ಅವರು ಈ ವಿಷಯವನ್ನು ಸೋಮೆರ್​ಸೇಟ್ ಪೊಲೀಸ್ ಠಾಣೆಗೆ ತಿಳಿಸಿದ್ದರು.

ಇದನ್ನೂ ಓದಿ: ತಲೆಯಿಲ್ಲ, ಕಾಲೂ ಇಲ್ಲ; ಬೆಡ್​​ಶೀಟ್​ನೊಳಗಿದ್ದ ಮಹಿಳೆಯ ಮೃತದೇಹ ನೋಡಿದ ಪೊಲೀಸರು ಶಾಕ್

ಹಣವನ್ನು ತಾವೇ ಇಟ್ಟುಕೊಳ್ಳದೆ ತಮಗೆ ವಿಷಯ ತಿಳಿಸಿದ ಆ ಕಸ ಕೊಂಡೊಯ್ಯುವ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೊಲೀಸರು ಹಣದ ಮೂಲವನ್ನು ಪತ್ತೆ ಮಾಡಲು ಮುಂದಾದರು ಎಂದು ನವಭಾರತ್ ಟೈಮ್ಸ್​ ವರದಿ ಮಾಡಿದೆ. ಇಂಗ್ಲೆಂಡ್​ನಲ್ಲಿ ಒಂದೊಂದು ಪ್ರದೇಶದಲ್ಲಿ ಕಸದ ಗಾಡಿಯನ್ನು ನಿಲ್ಲಿಸಲಾಗುತ್ತದೆ. ಜನರು ತಮ್ಮ ಮನೆಯ ಕಸವನ್ನು ಆ ಗಾಡಿಗೆ ತಂದು ಹಾಕುತ್ತಾರೆ. ಹೀಗಾಗಿ, ಕಸದ ಗಾಡಿ ನಿಲ್ಲಿಸಿದ್ದ ಜಾಗದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ನೋಡಿದರೆ ಏನಾದರೂ ಸುಳಿವು ಸಿಗಬಹುದು ಎಂದು ಯೋಚಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆಸಿದರು.

ಇದನ್ನೂ ಓದಿ: ಹೊಸ ವರ್ಷಾಚರಣೆ ವೇಳೆ ಭಾರೀ ದುರಂತ; ಪಾರ್ಟಿ ವೇಳೆ ಲಿಫ್ಟ್​ ಕುಸಿದು 6 ಜನ ಸಾವು

ಕಸ ಹಾಕುವ ಗಾಡಿಯ ಬಳಿಗೆ ಕಾರಿನಲ್ಲಿ ಬಂದ ದಂಪತಿ ಕಸ ಹಾಕಿ ಹೋದ ದೃಶ್ಯ ಸೆರೆಯಾಗಿತ್ತು. ಆ ಕಸ ತುಂಬಿದ ಬ್ಯಾಗ್​ನಲ್ಲಿಯೇ ಹಣ ಇದ್ದುದರಿಂದ ಕಾರಿನ ನಂಬರ್ ಪ್ಲೇಟ್ ಮೂಲಕ ಪೊಲೀಸರು ಹಣದ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ. ತಮ್ಮ ತಂದೆಗೆ ಹಣವನ್ನು ಬಚ್ಚಿಡುವ ಅಭ್ಯಾಸವಿತ್ತು. ಈ ಹಣವನ್ನು ಕೂಡ ಅವರು ಅದೇ ರೀತಿ ಬಚ್ಚಿಟ್ಟಿರಬಹುದು. ಆದರೆ, ಅವರು ತೀರಿಕೊಂಡಿದ್ದರಿಂದ ಅವರು ಬಳಸುತ್ತಿದ್ದ ವಸ್ತುಗಳನ್ನೆಲ್ಲ ನಾವು ಬಿಸಾಡಿದ್ದೆವು. ಅದರಲ್ಲಿ ಹಣ ಇದ್ದ ವಿಷಯ ನಮಗೆ ಗೊತ್ತಿರಲಿಲ್ಲ ಎಂದು ಆ ದಂಪತಿ ಪೊಲೀಸರಿಗೆ ತಿಳಿಸಿದ್ದಾರೆ.

ನಂತರ ಆ ಹಣವನ್ನು ಪೊಲೀಸರು ದಂಪತಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಅವಾನ್ ಆ್ಯಂಡ್ ಸೋಮೆರ್​ಸೇಟ್ ಪೊಲೀಸರು ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದು, ಹಣವನ್ನು ಜೋಪಾನವಾಗಿ ತಂದುಕೊಟ್ಟ ಕಸ ವಿಲೇವಾರಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 
Published by: Sushma Chakre
First published: January 1, 2020, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading