ಮಾತೃಭಾಷೆಯಲ್ಲಿ ಮಾತನಾಡುವ ಮಕ್ಕಳಲ್ಲಿ IQ ಸಾಮರ್ಥ್ಯ ಹೆಚ್ಚು: ಅಧ್ಯಯನ

news18
Updated:August 27, 2018, 12:43 PM IST
ಮಾತೃಭಾಷೆಯಲ್ಲಿ ಮಾತನಾಡುವ ಮಕ್ಕಳಲ್ಲಿ IQ ಸಾಮರ್ಥ್ಯ ಹೆಚ್ಚು: ಅಧ್ಯಯನ
news18
Updated: August 27, 2018, 12:43 PM IST
-ನ್ಯೂಸ್ 18 ಕನ್ನಡ

ಮಾತೃಭಾಷೆ ಅಥವಾ ತಾಯಿನುಡಿಯಲ್ಲಿ ಹೇಳಿದರೆ ವಿಷಯ ತಲೆಗೆ ಹೊಕ್ಕುತ್ತದೆ ಎಂದು ಹೇಳುವುದು ಎಷ್ಟೋ ಸಲ ನೀವು ಕೇಳಿರುತ್ತೀರಿ. ಇದು ಅಕ್ಷರಶಃ ನಿಜ ಎಂಬುದನ್ನು ಹೊಸ ಅಧ್ಯಯನ ತಂಡವೊಂದು ನಿರೂಪಿಸಿದೆ. ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳಲ್ಲಿ ಯಾರೂ ತಮ್ಮ ಮನೆಯಲ್ಲಿ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ ಅಂತಹ ಮಕ್ಕಳಲ್ಲಿ ಐಕ್ಯೂ(IQ) ಬುದ್ದಿ ಸಾಮರ್ಥ್ಯ ಹೆಚ್ಚಿರುತ್ತದೆ ಎಂದು ಯುಕೆಯ ಅಧ್ಯಯನ ತಂಡ ತಿಳಿಸಿದೆ. ಯುನಿವರ್ಸಿಟಿ ಆಫ್ ರೀಡಿಂಗ್​ನ ಸಂಶೋಧಕರು ನಡೆಸಿರುವ ಈ ಅಧ್ಯಯನದಲ್ಲಿ ಯುನೈಟೆಡ್ ಕಿಂಗ್​ಡಮ್​ನಲ್ಲಿ ವಾಸಿಸುವ 7 ರಿಂದ 11 ವರ್ಷದೊಳಗಿನ 100 ಟರ್ಕಿಷ್ ಮಕ್ಕಳು ಭಾಗವಹಿಸಿದ್ದರು.

ಈ ಅಧ್ಯಯನಕ್ಕಾಗಿ ಶಾಲೆಯಲ್ಲಿ ಇಂಗ್ಲೀಷ್ ಮತ್ತು ಮನೆಯಲ್ಲಿ ಮಾತೃಭಾಷೆ ಮಾತನಾಡುವ ವಿದ್ಯಾರ್ಥಿಗಳನ್ನು ಮತ್ತು ತಾಯಿನುಡಿ ಬೇರೆಯಾಗಿದ್ದರೂ ಎರಡು ಕಡೆ ಇಂಗ್ಲೀಷ್​ನಲ್ಲಿ ಮಾತನಾಡುವ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಮನೆಯಲ್ಲಿ ಮಾತೃಭಾಷೆಯ ಮಾತನಾಡುವ ಮಕ್ಕಳ ಐಕ್ಯೂ ಸಾಮರ್ಥ್ಯ ಇತರೆ ಮಾತೃಭಾಷೆ ಮಾತನಾಡದ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

ಬಾಲ್ಯದಲ್ಲಿ ಮಕ್ಕಳು ಮೊದಲ ಭಾಷೆಯಾಗಿ ಮಾತೃಭಾಷೆಯನ್ನು ಕಲಿಯುವುದರಿಂದ ನಂತರ ಇತರೆ ಭಾಷೆಯನ್ನು ಕಲಿಯಲು ಸುಲಭವಾಗುತ್ತದೆ. ಹಾಗೆಯೇ ಮಕ್ಕಳಿಗೆ ಪರಿಚಿತವಲ್ಲದ ಭಾಷೆಯಲ್ಲಿ ಬಾಲ್ಯದಲ್ಲಿ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಕಠಿಣವಾಗಿರುತ್ತದೆ. ಇದರಿಂದಾಗಿ ಮಾತೃಭಾಷೆಯನ್ನು ಮಾತನಾಡದ ಮಕ್ಕಳು ಐಕ್ಯೂ ಪರೀಕ್ಷೆಯಲ್ಲಿ ಹಿಂದುಳಿಯಲು ಮುಖ್ಯ ಕಾರಣ ಎಂದು ಲೇಖಕ ಡಾ.ಮೈಕೆಲ್ ಡಲ್ಲರ್ ಹೇಳಿದ್ದಾರೆ.

ದ್ವಿಭಾಷೆಯನ್ನು ತಿಳಿದಿರುವ ಮಕ್ಕಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹೆಚ್ಚಾಗಿರುತ್ತದೆ ಎಂದು 2016 ರಲ್ಲಿ ಕೆನಡಿಯನ್ ಅಧ್ಯಯನ ತಂಡವೊಂದು ತಿಳಿಸಿತ್ತು. 2015 ರಲ್ಲಿ ಪ್ರಕಟವಾದ ಒಂದು ಅಧ್ಯಯನವು 608 ಮಂದಿ ಸ್ಟ್ರೋಕ್ ರೋಗಿಗಳನ್ನು ಪರಿಶೀಲಿಸಿದಾಗ ದ್ವಿಭಾಷಾ ಜ್ಞಾನ ಹೊಂದಿರುವವರು ತಮ್ಮ ಸಾಮರ್ಥ್ಯವನ್ನು ಮರಳಿ ಪಡೆಯಲು ಶಕ್ತರಾಗಿರುವುದು ಕಂಡು ಬಂದಿದೆ.

ಈ ಅಧ್ಯಯನಕ್ಕಾಗಿ ಒಂದೇ ಅಂತರದ ವಯಸ್ಸಿನ ಮತ್ತು ಹಿನ್ನಲೆಯ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.  ಈ ಹಿಂದಿನ ಪ್ರಯೋಗಗಳಿಗೆ ಹೋಲಿಸಿದರೆ ಈ ಅಧ್ಯಯನದ ಫಲಿತಾಂಶವು ಅತ್ಯುತ್ತಮವಾಗಿತ್ತು ಎಂದು ಸಂಶೋಧಕ ಡಲ್ಲರ್ ತಿಳಿಸಿದ್ದಾರೆ. ಮಾತೃಭಾಷೆ ಮತ್ತು ಐಕ್ಯೂ ಮೇಲಿನ ಅಧ್ಯಯನದ ವರದಿಯನ್ನು 2018 ರ ಜುಲೈನಲ್ಲಿ ನಡೆದ ಬ್ರಿಟಿಷ್ ಅಸೋಸಿಯೇಷನ್ ಫಾರ್ ಲಿಂಗ್ವಿಸ್ಟಿಕ್ಸ್-ವೊಕಬ್ಯುಲರಿ ಸ್ಪೆಷಲ್ ಇಂಟರೆಸ್ಟ್​ ಗ್ರೂಪ್ (BAAL ವೊಕಬ್ಯುಲರಿ SIG) ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಲಾಗಿದೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...