• Home
  • »
  • News
  • »
  • lifestyle
  • »
  • Body Health: ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನು ಹೆಚ್ಚಾಗವುದರ ಅನಾನುಕೂಲಗಳು ಯಾವವು?

Body Health: ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನು ಹೆಚ್ಚಾಗವುದರ ಅನಾನುಕೂಲಗಳು ಯಾವವು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾರ್ಮೋನುಗಳು ನಿಮ್ಮ ರಕ್ತಪ್ರವಾಹದ ಮೂಲಕ ನಿಮ್ಮ ಅಂಗಗಳು ಚರ್ಮ ಸ್ನಾಯು ಮತ್ತು ಇತರ ಅಂಗಾಂಶಗಳಿಗೆ ಸಂದೇಶನ್ನು ಸಾಗಿಸುವ ಮೂಲಕ ನಿಮ್ಮ ದೇಹದಲ್ಲಿನ ವಿವಿಧ ಕಾರ್ಯಗಳನ್ನು ಸಂಯೋಜಿಸುವ ರಾಸಾಯನಿಕ ವಿಷಯಗಳು ಆಗಿವೆ. ಕಾರ್ಟಿಸೋಲ್ ಹಾರ್ಮೋನು ನಿಮ್ಮ ದೇಹದಲ್ಲಿರುವ ಮೂತ್ರಜನಕಾಂಗದ ಗ್ರಂಥಿಗಳಿಂದ ಉತ್ಪತ್ತಿ ಆಗುತ್ತದೆ ಮತ್ತು ಬಿಡುಗಡೆ ಆಗುತ್ತದೆ.

ಮುಂದೆ ಓದಿ ...
  • Share this:

    ದೇಹದ (Body) ಕಾರ್ಯ ಚಟುವಟಿಕೆ ಚೆನ್ನಾಗಿ ನಡೆಯಲು ಹಲವು ಅಂಶಗಳು (Many Elements) ಪ್ರಮುಖ ಪಾತ್ರ ವಹಿಸುತ್ತವೆ. ಹುಟ್ಟಿನಿಂದ ವೃದ್ಧಾಪ್ಯದವರೆಗೆ ದೇಹದಲ್ಲಿ ಹಲವು ರೀತಿ ಬದಲಾವಣೆಗಳು (Changes) ಆಗುತ್ತವೆ. ಇದಕ್ಕೆ ಪ್ರಮುಖ ಕಾರಣ (Cause) ಅಂದ್ರೆ ಹಾರ್ಮೋನುಗಳಲ್ಲಿನ ಬದಲಾವಣೆ ಆಗುವುದು. ಮಹಿಳೆಯರು ಮತ್ತು ಪುರುಷರಲ್ಲಿ (Women’s And Men’s) ಹಾರ್ಮೋನುಗಳ ಬದಲಾವಣೆ ವಿಭಿನ್ನವಾಗಿರುತ್ತದೆ. ದೇಹದ ಆರೋಗ್ಯ ಮತ್ತು ಸರಿಯಾಗಿ ಕೆಲಸ ಮಾಡಲು ವಿವಿಧ ರೀತಿಯ ಹಾರ್ಮೋನುಗಳು ಬೇಕಾಗುತ್ತವೆ. ಅವುಗಳಲ್ಲಿ ಕಾರ್ಟಿಸೋಲ್ ಹಾರ್ಮೋನು ಕೂಡ ಒಂದಾಗಿದೆ. ಕಾರ್ಟಿಸೋಲ್ ಹಾರ್ಮೋನು ನಿಮ್ಮ ದೇಹದಲ್ಲಿರುವ ಮೂತ್ರಜನಕಾಂಗದ ಗ್ರಂಥಿಗಳಿಂದ ಉತ್ಪತ್ತಿ ಆಗುತ್ತದೆ ಮತ್ತು ಬಿಡುಗಡೆ ಆಗುತ್ತದೆ.


    ಕಾರ್ಟಿಸೋಲ್ ಹಾರ್ಮೋನು


    ಹಾರ್ಮೋನುಗಳು ನಿಮ್ಮ ರಕ್ತಪ್ರವಾಹದ ಮೂಲಕ ನಿಮ್ಮ ಅಂಗಗಳು, ಚರ್ಮ, ಸ್ನಾಯು ಮತ್ತು ಇತರ ಅಂಗಾಂಶಗಳಿಗೆ ಸಂದೇಶನ್ನು ಸಾಗಿಸುವ ಮೂಲಕ ನಿಮ್ಮ ದೇಹದಲ್ಲಿನ ವಿವಿಧ ಕಾರ್ಯಗಳನ್ನು ಸಂಯೋಜಿಸುವ ರಾಸಾಯನಿಕ ವಿಷಯಗಳು ಆಗಿವೆ. ಕಾರ್ಟಿಸೋಲ್ ಹಾರ್ಮೋನು ನಿಮ್ಮ ದೇಹದಲ್ಲಿರುವ ಮೂತ್ರಜನಕಾಂಗದ ಗ್ರಂಥಿಗಳಿಂದ ಉತ್ಪತ್ತಿ ಆಗುತ್ತದೆ ಮತ್ತು ಬಿಡುಗಡೆ ಆಗುತ್ತದೆ.


    ಈ ಸಂಕೇತಗಳು ನಿಮ್ಮ ದೇಹಕ್ಕೆ ಏನು ಮತ್ತು ಯಾವಾಗ ಮಾಡಬೇಕು ಎಂಬುದನ್ನು ತಿಳಿಸುವ ಕೆಲಸ ಮಾಡುತ್ತವೆ. ದೇಹದಲ್ಲಿ ಇದರ ಉತ್ಪಾದನೆ ಬೆಳಿಗ್ಗೆ ಅತ್ಯಧಿಕ ಆಗಿರುತ್ತದೆ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಕಾರ್ಟಿಸೋಲ್ ಹಾರ್ಮೋನು ಯಾಕೆ ಬೇಕು?


    ಈ ಹಾರ್ಮೋನ್‌ ಕಾರ್ಯಗಳು ನಿಮ್ಮ ದೇಹವು ಒತ್ತಡ ನಿಯಂತ್ರಿಸಲು, ದೇಹದ ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ ನಿಯಂತ್ರಿಸಲು ಬೇಕು. ಉರಿಯೂತ ವಿರುದ್ಧ ಹೋರಾಡಲು, ರಕ್ತದೊತ್ತಡ ನಿಯಂತ್ರಿಸಲು, ರಕ್ತದ ಸಕ್ಕರೆ ನಿಯಂತ್ರಿಸಲು ಮತ್ತು ನಿಮ್ಮ ನಿದ್ರೆ- ಚ್ಚರ ಚಕ್ರ ನಿಯಂತ್ರಿಸಲು ಸಹಾಯ ಮಾಡುತ್ತದೆ.


    ಯಾವುದೇ ಹಾರ್ಮೋನ್ ಅಥವಾ ಅಂಶದ ಅತಿಯಾದ ಪ್ರಮಾಣದಲ್ಲಿ ದೇಹದಲ್ಲಿ ಅದರ ಮಟ್ಟ ಹೆಚ್ಚಿಸುವುದು ಆರೋಗ್ಯಕ್ಕೆ ಅಪಾಯಕಾರಿ ಆಗಿದೆ. ಅದರ ಮಟ್ಟ ಹೆಚ್ಚಳ ಆಗುವುದು ನಿಮಗೆ ಯಾವ ಬದಲಾವಣೆ ತರುತ್ತದೆ ಎಂದು ಪೌಷ್ಟಿಕ ತಜ್ಞ ಲವ್ನೀತ್ ಹೇಳಿದ್ದಾರೆ.


    ದೇಹದಲ್ಲಿ ಹೆಚ್ಚಿದ ಕಾರ್ಟಿಸೋಲ್ ಹಾರ್ಮೋನುಗಳ ಅನಾನುಕೂಲಗಳು


    ಪೌಷ್ಟಿಕ ತಜ್ಞ ಲವ್ನೀತ್ ಪ್ರಕಾರ, ಕಾರ್ಟಿಸೋಲ್ ದೇಹದಲ್ಲಿ ದೀರ್ಘ ಕಾಲದವರೆಗೆ ಹೆಚ್ಚಾಗುವುದು ನಿಮ್ಮ ಆರೋಗ್ಯವು ಪ್ರಯೋಜನಕ್ಕೆ ಬದಲಾಗಿ ಬಳಲುವಂತೆ ಮಾಡುತ್ತದೆ. ಇದು ನಿಮಗೆ ಅನೇಕ ಗಂಭೀರ ಹಾನಿ ಉಂಟು ಮಾಡಬಹುದು.


    ಹೆಚ್ಚಿದ ಕಾರ್ಟಿಸೋಲ್ ಹಾರ್ಮೋನು ಅಡ್ಡ ಪರಿಣಾಮಗಳು


    ದೀರ್ಘ ಕಾಲದ ಒತ್ತಡ ಅಥವಾ ಯಾವುದೇ ಕಾಯಿಲೆ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನು ಮಟ್ಟವು ಅಧಿಕ ಆಗಿದ್ದರೆ, ನಿಮ್ಮ ದೇಹದಲ್ಲಿ ಅನೇಕ ಅಪಾಯಕಾರಿ ಕಾಯಿಲೆ ಉಂಟಾಗುವ ಸಾಧ್ಯತೆ ಹೆಚ್ಚು. ಹೊಟ್ಟೆ ಮತ್ತು ಬಾಯಿಯ ಕೊಬ್ಬು ಹೆಚ್ಚುತ್ತದೆ.


    ಸ್ನಾಯು ದೌರ್ಬಲ್ಯ ಉಂಟಾಗುತ್ತದೆ. ಹೆಚ್ಚಿದ ರಕ್ತದೊತ್ತಡ ಸಮಸ್ಯೆ, ಅಧಿಕ ರಕ್ತದೊತ್ತಡ ಸಮಸ್ಯೆ, ಮೂಡ್ ಸ್ವಿಂಗ್ ಸಮಸ್ಯೆ, ಮೂಳೆ ದೌರ್ಬಲ್ಯ ಮತ್ತು ಮರೆವು ಉಂಟಾಗುತ್ತದೆ.


    ಕಾರ್ಟಿಸೋಲ್ ಹಾರ್ಮೋನು ಮಟ್ಟ ಕಡಿಮೆ ಮಾಡುವ ವಿಧಾನಗಳು


    ಒಳ್ಳೆಯ ನಿದ್ರೆ ಮಾಡುವುದು, ದಿನವೂ ವ್ಯಾಯಾಮ ಮಾಡುವುದು, ಒತ್ತಡ ಮತ್ತು ಆತಂಕ ಪರಿಹಾರ, ಆಳವಾದ ಉಸಿರಾಟದ ವ್ಯಾಯಾಮ ಅಭ್ಯಾಸ ಮಾಡುವುದು, ನಿಮ್ಮ ನೆಚ್ಚಿನ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹಾರ್ಮೋನು ಮಟ್ಟ ಕಡಿಮೆ ಮಾಡುತ್ತವೆ.


    ಕಾರ್ಟಿಸೋಲ್ ಮಟ್ಟದ ಸಾಮಾನ್ಯ ಶ್ರೇಣಿ


    ಬೆಳಿಗ್ಗೆ 6 ರಿಂದ 8 ರವರೆಗೆ: ಪ್ರತಿ ಡೆಸಿಲಿಟರ್‌ಗೆ 10 ರಿಂದ 20 ಮೈಕ್ರೋಗ್ರಾಂಗಳು.


    ಸುಮಾರು 4 ಗಂಟೆಗೆ: 3 ರಿಂದ 10 20 ಮೈಕ್ರೋಗ್ರಾಂಗಳು


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ದೇಹದಲ್ಲಿ ಹೆಚ್ಚಿದ ಕಾರ್ಟಿಸೋಲ್ ಮಟ್ಟ ಹೇಗೆ ತಿಳಿಯುವುದು?


    ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ದೇಹದ ಕಾರ್ಟಿಸೋಲ್ ಮಟ್ಟ ಮೂತ್ರ ಮತ್ತು ಕಫದ ಮೂಲಕ ಕಂಡು ಹಿಡಿಯಬಹುದು. ಇದಕ್ಕಾಗಿ ರೋಗ ಲಕ್ಷಣಗಳ ಪ್ರಕಾರ ವೈದ್ಯರು ನಿಮಗೆ ಪರೀಕ್ಷೆ ಮಾಡಿಸಲು ಸೂಚನೆ ನೀಡುತ್ತಾರೆ.

    Published by:renukadariyannavar
    First published: