• Home
 • »
 • News
 • »
 • lifestyle
 • »
 • Kraken Variant: ನಿಲ್ಲುತ್ತಿಲ್ಲ ಕೊರೊನಾ, ಈಗ ಮತ್ತೊಂದು ಆತಂಕ, ಏನಿದು ಕ್ರಾಕನ್?

Kraken Variant: ನಿಲ್ಲುತ್ತಿಲ್ಲ ಕೊರೊನಾ, ಈಗ ಮತ್ತೊಂದು ಆತಂಕ, ಏನಿದು ಕ್ರಾಕನ್?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಮಿಕ್ರಾನ್ ಹಾಗೂ ಇತರೆ ರೂಪಾಂತರಗಳ ನಂತರ ಈಗ ಅತ್ಯಂತ ಅಪಾಯಕಾರಿ ರೂಪಾಂತರವೊಂದು ಕಾಣಿಸಿಕೊಂಡಿದೆ. ಆ ರೂಪಾಂತರ ಯಾವುದು ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಈಗ ಆ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆಯು ಕ್ರಾಕನ್ ರೂಪಾಂತರ ಎಂದು ಕರೆದಿದೆ.

 • Share this:

  ಜಗತ್ತಿನಾದ್ಯಂತ (World) ಮರಣ ಮೃದಂಗ ಬಾರಿಸಿರುವ ಕೊರೊನಾ (Corona) ಹಾವಳಿ ಇನ್ನೂ ತಗ್ಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಕೊರನಾದ ಹಲವು ರೂಪಾಂತರಗಳು (Variants) ಜಗತ್ತಿನಾದ್ಯಂತ ಆತಂಕ ಸೃಷ್ಟಿ ಮಾಡಿವೆ. ಕೊರೊನಾ ನಂತರ ದಿನಗಳಲ್ಲಿ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಈಗಲೂ ಕೊರೊನಾದ ಹಲವು ರೂಪಾಂತರಕಗಳ ಅಪಾಯ (Danger) ಜನರನ್ನು (People) ಕಾಡುತ್ತಲೇ ಇದೆ. ಕೊರೊನಾ ವೈರಸ್ ಮತ್ತು ಓಮಿಕ್ರಾನ್‌ ನ (Omicron) ಹಲವು ರೂಪಾಂತರಗಳು ಈಗಾಗಲೇ ಕಾಣಿಸಿಕೊಂಡಿವೆ. ಹಲವು ಜನರು ಈ ವೈರಸ್ ಗೆ ತುತ್ತಾಗಿದ್ದಾರೆ. ಕೆಲವರು ಗುಣಮುಖರಾಗಿ ಮನೆ ಸೇರಿದ್ರೆ ಇನ್ನು ಕೆಲವರು ವೈರಸ್ ನಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.


  ಕ್ರಾಕನ್ ರೂಪಾಂತರ ಹಾವಳಿ


  ಈಗ ಯಾಕೆ ಇದನ್ನ ಹೇಳ್ತಿದಿವಿ ಅಂದ್ರೆ, ಒಮಿಕ್ರಾನ್ ಹಾಗೂ ಇತರೆ ರೂಪಾಂತರಗಳ ನಂತರ ಈಗ ಅತ್ಯಂತ ಅಪಾಯಕಾರಿ ರೂಪಾಂತರವೊಂದು ಕಾಣಿಸಿಕೊಂಡಿದೆ. ಆ ರೂಪಾಂತರ ಯಾವುದು ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಈಗ ಆ ರೂಪಾಂತರ ಯಾವುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗಿದೆ.


  ಆ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆಯು, ವಿಶ್ವದ ಅತ್ಯಂತ ಅಪಾಯಕಾರಿ ರೂಪಾಂತರ ಎಂದು ಹೇಳಿದೆ. ಅದನ್ನು ವಿಶ್ವ ಆರೋಗ್ಯ ಸಂಸ್ಥೆಯು ಕ್ರಾಕನ್ ರೂಪಾಂತರ ಎಂದು ಕರೆದಿದೆ. ಕ್ರಾಕನ್ ರೂಪಾಂತರವು ಎಲ್ಲ ಕಡೆಯೂ ಇದೆ. ಭಾರತದಲ್ಲಿಯೂ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
  ಸೋಮವಾರ ಆರೋಗ್ಯ ಸಚಿವಾಲಯವು ಒಮಿಕ್ರಾನ್ ನ ಎಲ್ಲಾ ರೂಪಾಂತರಗಳು ಗಾಳಿಯಲ್ಲಿವೆ ಎಂದು ಹೇಳಿದೆ. ಆದರೆ ಇದುವರೆಗೆ ಗಂಭೀರವಾದ ಸೋಂಕುಗಳು ಕಾಣಿಸಿಕೊಂಡಿಲ್ಲ. ಆದರೆ ಈಗ ಕಾಣಿಸಿಕೊಂಡಿರು ರೂಪಾಂತರವಾದ ಕ್ರಾಕನ್ ಕೊರೊನಾ ಅಲೆಯನ್ನು ಮತ್ತಷ್ಟು ಅಪಾಯಕಾರಿ ಆಗಿಸುತ್ತದೆ ಎಂದು ಹೇಳಿದೆ.


  ಕ್ರಾಕನ್ ರೂಪಾಂತರವು ಕೊರೊನಾ ಅಲೆಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಹೇಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕ್ರಾಕನ್ ರೂಪಾಂತರದ ಬಗ್ಗೆ ವಿವರವಾದ ಮಾಹಿತಿ ನೀಡಿದೆ. ಕ್ರಾಕನ್ ರೂಪಾಂತರದ ಲಕ್ಷಣಗಳು ಹೀಗಿವೆ.


  ಕ್ರಾಕನ್ ರೂಪಾಂತರದ ಲಕ್ಷಣಗಳು ಹೀಗಿವೆ


  ಒಮಿಕ್ರಾನ್ XBB.1.5 ನ ವೈಶಿಷ್ಟ್ಯವು ಹಳೆಯ ರೂಪಾಂತರದಂತೆ ಇವೆ. ಅವು ಹೀಗಾಗಿ ಕೊರೊನಾದ ಹೊಸ ಅಲೆ ಕ್ರಾಕನ್ ರೂಪಾಂತರ ಬಂದರೆ ಈ ಕೆಳಗಿನ ಲಕ್ಷಣಗಳು ಹಾನಿ ಮಾಡುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.


  ಸೋರುವ ಮೂಗು, ಕೆಮ್ಮು ಬರುವುದು, ಗಂಟಲು ಕೆರತ ಉಂಟಾಗುವುದು, ಜ್ವರ, ತಲೆನೋವು, ದೇಹದ ನೋವು ಮತ್ತು ಆಯಾಸ ಸಮಸ್ಯೆ ಕಾಡುತ್ತದೆ.


  ಸಾಂದರ್ಭಿಕ ಚಿತ್ರ


  XBB.1.5 ಇದು ಮಾತ್ರ ಕ್ರಾಕನ್ ರೂಪಾಂತರ


  ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ನೀಡಿರುವ ಮಾಹಿತಿ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯು Omicron ನ XBB.1.5 ರೂಪಾಂತರವನ್ನು ಕ್ರಾಕನ್ ಎಂದು ಹೆಸರಿಸಿದೆ. ಇದು Omicron ನ XBB ​​ರೂಪಾಂತರದ ಭಾಗವೂ ಸಹ ಆಗಿದೆ.


  ಕ್ರಾಕನ್ ರೂಪಾಂತರವು ಪ್ರಪಂಚದಾದ್ಯಂತದ ಎಲ್ಲಾ ಆರೋಗ್ಯ ತಜ್ಞರಿಗೆ ದೊಡ್ಡ ತಲೆನೋವು ತಂದಿಟ್ಟಿದೆ. ಯಾಕಂದ್ರೆ ಕ್ರಾಕನ್ ರೂಪಾಂತರವು ಹೆಚ್ಚು ಅಪಾಯಕಾರಿ ಆಗಿದೆ.


  ಶ್ವೇತಭವನದ ಕೋವಿಡ್-19 ಸಂಯೋಜಕ ಡಾ. ಆಶಿಶ್ ಕೆ. ಟ್ವೀಟ್ ಮೂಲಕ ಒಮಿಕ್ರಾನ್ XBB.1.5 ಬಗ್ಗೆ ತುಂಬಾ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ. ಕ್ರಾಕನ್ ರೂಪಾಂತರವು ಅತ್ಯಂತ ವೇಗವಾಗಿ ಹರಡುತ್ತಿದೆ. ಕೆಲ ವಾರಗಳಲ್ಲಿ ಇದು ಶೇ. 40 ರಿಂದ 40 ರಷ್ಟು ತಲುಪಿದೆ ಎಂದು ತಿಳಿಸಿದ್ದಾರೆ.


  ಓಮಿಕ್ರಾನ್ XBB. 1.5 ರೂಪಾಂತರ ಅತ್ಯಂತ ಅಪಾಯಕಾರಿ ರೂಪಾಂತರವಾಗಿದೆ. ಇತರೆ ರೂಪಾಂತರಗಳಿಗಿಂತ ವೇಗವಾಗಿ ಹರಡುತ್ತದೆ. ಅದು ಆಕ್ರಮಣಕಾರಿಯಾಗಿದೆ.


  ಇದನ್ನೂ ಓದಿ: ಚಳಿಗಾಲದಲ್ಲಿ ಅನಾರೋಗ್ಯ ಪ್ರಕರಣಗಳಲ್ಲಿ ಇಳಿಕೆ, ಡಾಕ್ಟರ್​ ಹೇಳೋದೇನು?


  ಒಮಿಕ್ರಾನ್ XBB.1.5 ಸೋಂಕು ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇಲ್ಲ. ಇದರ ನಿಯಂತ್ರಣಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

  Published by:renukadariyannavar
  First published: