ಮಳೆಗಾಲದ ಸಮಯದಲ್ಲಿ (Rainy Season Time) ಮೆಕ್ಕೆಜೋಳ (Corn) ಬೇಯಿಸಿ, ಸುಟ್ಟು ತಿನ್ನುವುದನ್ನು ನೀವು ನೋಡಿರಬಹುದು. ಅಥವಾ ಬೇಯಿಸಿದ ಮೆಕ್ಕೆಜೋಳಕ್ಕೆ ಉಪ್ಪು (Salt), ಲಿಂಬು (Lemon) ರಸ, ಖಾರ ಸವರಿ ನೀವೂ ಸೇವಿಸಿರಬಹುದು. ಹೆಚ್ಚಿನ ಜನರು ಮೆಕ್ಕೆಜೋಳ ತಿನ್ನಲು ತುಂಬಾ ಇಷ್ಟ ಪಡುತ್ತಾರೆ. ನೀವು ಸಹ ಸುಟ್ಟಿರುವ ಮೆಕ್ಕೆಜೋಳ ಅಥವಾ ಬೇಯಿಸಿರುವ ಮೆಕ್ಕೆಜೋಳ ತಿಂದು ಖುಷಿ ಪಟ್ಟಿರಬಹುದು. ಆದರೆ ಮೆಕ್ಕೆಜೋಳವನ್ನು ಮಳೆಗಾಲದಲ್ಲಿ ಸೇವನೆ ಮಾಡುವುದು ಕೇವಲ ಬೆಚ್ಚಗಾಗಲು ಮಾತ್ರವಲ್ಲ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಪ್ರಯೋಜನ ಪಡೆಯಲು ತಿನ್ನಬೇಕು. ಮೆಕ್ಕೆಜೋಳ ಸಾಕಷ್ಟು ಆರೋಗ್ಯ ಲಾಭ ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
ಮೆಕ್ಕೆಜೋಳ ಪ್ರಪಂಚದ ಅತ್ಯಂತ ಜನಪ್ರಿಯ ಧಾನ್ಯ
ಮೆಕ್ಕೆಜೋಳವು ಪ್ರಪಂಚದ ಅತ್ಯಂತ ಜನಪ್ರಿಯ ಧಾನ್ಯಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ಹಳದಿ ಬಣ್ಣದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಜೊತೆಗೆ ಕೆಂಪು, ಕಿತ್ತಳೆ, ನೇರಳೆ, ನೀಲಿ, ಬಿಳಿ ಮತ್ತು ಕಪ್ಪು ಮುಂತಾದ ಅನೇಕ ಬಣ್ಣಗಳ ಮೆಕ್ಕೆಜೋಳ ಬೆಳೆಯುತ್ತಾರೆ. ಮೆಕ್ಕೆಜೋಳವು ಅನೇಕ ಪೌಷ್ಟಿಕಾಂಶದ ಗುಣ ಹೊಂದಿದೆ. ಹಾಗಾಗಿ ಪೌಷ್ಟಿಕ ತಜ್ಞರು ಮೆಕ್ಕೆಜೋಳ ತಿನ್ನಲು ಶಿಫಾರಸು ಮಾಡುತ್ತಾರೆ.
ಇತ್ತೀಚೆಗೆ ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಮೆಕ್ಕೆಜೋಳ ಸೂಪರ್ಫುಡ್ ಎಂದು ಹೇಳಿದ್ದಾರೆ. ಅವರು ತಮ್ಮ Instagram ಪೋಸ್ಟ್ನಲ್ಲಿ ಮೆಕ್ಕೆಜೋಳದ ಆರೋಗ್ಯ ಪ್ರಯೋಜನಗಳನ್ನು ಅದರ ಸೇವನೆಯ ವಿಧಾನದ ಜೊತೆ ಶೇರ್ ಮಾಡಿದ್ದಾರೆ. ಮೆಕ್ಕೆಜೋಳ ನಿಮ್ಮ ಆರೋಗ್ಯ ಕಾಪಾಡುತ್ತದೆ. ಜೊತೆಗೆ ಮುಖ ಮತ್ತು ಕೂದಲಿನ ಸೌಂದರ್ಯ ಕಾಪಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!
ಮೆಕ್ಕೆಜೋಳವನ್ನು ಸೂಪರ್ ಫುಡ್ ಎಂದು ಕರೆದಿದ್ದೇಕೆ?
ಮೆಕ್ಕೆಜೋಳವು ಕೊಬ್ಬು, ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಫೈಬರ್ ಜೊತೆಗೆ ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದರ ಸಹಾಯದಿಂದ ದೇಹಕ್ಕೆ ವಿವಿಧ ಪೋಷಕಾಂಶ ಪೂರೈಸಲು ಸಾಧ್ಯ ಆಗುತ್ತದೆ. ಇದು ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳ ನಿವಾರಣೆಗೆ ಬೇಕಾದ ಅಗತ್ಯ ಸಹಾಯ ಒದಗಿಸುವ ಕೆಲಸ ಮಾಡುತ್ತದೆ. ಹಾಗಾಗಿ ಮೆಕ್ಕೆಜೋಳವನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ.
ಯಾವ ರೋಗಗಳ ತಡೆಗೆ ಮೆಕ್ಕೆಜೋಳ ಪ್ರಯೋಜನಕಾರಿ?
ಮಧುಮೇಹ
ಕಣ್ಣುಗಳಿಗೆ ಪ್ರಯೋಜನಕಾರಿ
ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ
ಕಬ್ಬಿಣದ ಕೊರತೆ ಪೂರ್ಣಗೊಳಿಸುತ್ತದೆ
ರಕ್ತಹೀನತೆ ತಡೆಗೆ ಸಹಾಯ ಮಾಡುತ್ತದೆ
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ
ಜೀರ್ಣಕ್ರಿಯೆ ಸರಿಯಾಗಿ ನಿರ್ವಹಿಸಲು ಸಹಕಾರಿ
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ
ಮೂಳೆಗಳನ್ನು ಗಟ್ಟಿಗೊಳಿಸುತ್ತದೆ
ಆಲ್ಝೈಮರ್ಸ್ನಲ್ಲಿ ಸಹಾಯಕವಾಗಿದೆ
ಮೆಕ್ಕೆಜೋಳ ತಿನ್ನಲು ಸಲಹೆ ನೀಡಿದ ಸೆಲೆಬ್ರಿಟಿ ಪೌಷ್ಟಿಕ ತಜ್ಞೆ
ಮೆಕ್ಕೆಜೋಳ ಕಾಳುಗಳಲ್ಲಿ ವಿಟಮಿನ್ ಬಿ ಮತ್ತು ಫೋಲಿಕ್ ಆಮ್ಲವು ಇದೆ. ಇದು ನಿಮ್ಮ ಕೂದಲ ಸಮಸ್ಯೆ ಸರಿಪಡಿಸುತ್ತದೆ. ಮತ್ತು ಕೂದಲು ಬಿಳಿಯಾಗುವಿಕೆ ತಡೆಯುತ್ತದೆ ಎಂದು ಹೇಳುತ್ತಾರೆ. ಅಲ್ಲದೆ ಇದರಲ್ಲಿರುವ ನಾರಿನ ಸಹಾಯದಿಂದ ನಿಮಗೆ ಮಲಬದ್ಧತೆ ಸಮಸ್ಯೆ ಇರುವುದಿಲ್ಲ. ಜೊತೆಗೆ ಈ ಧಾನ್ಯದ ಸೇವನೆ ನಿಮ್ಮ ರುಚಿ ಹಾಳು ಮಾಡಲ್ಲ. ನಿಮ್ಮ ರಕ್ತದ ಸಕ್ಕರೆ ನಿಯಂತ್ರಿಸುತ್ತದೆ.
ಮೆಕ್ಕೆಜೋಳ ಹೇಗೆ ಸೇವಿಸಬೇಕು?
ನಿಮ್ಮ ಅನುಕೂಲಕ್ಕೆ ಮತ್ತು ಆಯ್ಕೆಗೆ ಅನುಗುಣವಾಗಿ ಮೆಕ್ಕೆಜೋಳವನ್ನು ಹುರಿದು, ಕುದಿಸಿ ತಿನ್ನಬಹುದು ಎನ್ನುತ್ತಾರೆ ಪೌಷ್ಟಿಕ ತಜ್ಞರು. ಹಿಟ್ಟಿನಿಂದ ಮಾಡಿದ ಬ್ರೆಡ್ ಅಥವಾ ರೊಟ್ಟಿಯನ್ನು ಜೋಳದ ಕಾಳುಗಳನ್ನು ತುಂಬಿ ಮಾಡಿ ಸವಿಯಿರಿ.
ಇದನ್ನೂ ಓದಿ: ಕೂದಲು ಸಮಸ್ಯೆ ಹೆಚ್ಚಿದ್ರೆ ಇದು ಅಧಿಕ ಕೊಲೆಸ್ಟ್ರಾಲ್ ಸಂಕೇತವಾಗಿರಬಹುದು!
ಯಾವ ಮೆಕ್ಕೆಜೋಳ ಆರೋಗ್ಯಕರ?
ನೀವು ಅಮೇರಿಕನ್ ಕಾರ್ನ್, ಪಾಪ್ ಕಾರ್ನ್ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನ ಹುಡುಕುತ್ತಿದ್ದರೆ ಅದು ಆಗದ ವಿಷಯ. ಯಾಕೆಂದರೆ ಅಮೇರಿಕನ್ ಕಾರ್ನ್, ಪಾಪ್ ಕಾರ್ನ್ ಮತ್ತು ಇತರ ಕಾರ್ನ್ ಬದಲಿ ದೇಸಿ ಕಾರ್ನ್ ಸೇವನೆ ಹೆಚ್ಚು ಆರೋಗ್ಯಕರ ಎನ್ನುತ್ತಾರೆ ರುಜುತಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ