Weight Loss Tips: ಮೆಕ್ಕೆಜೋಳ ತಿಂದ್ರೆ ತೂಕ ಇಳಿಸೋದು ಬಹಳ ಸುಲಭವಂತೆ

ಪ್ರತಿಯೊಬ್ಬರೂ ಬೇಯಿಸಿದ ಮೆಕ್ಕೆಜೋಳ ತಿನ್ನಲು ಇಷ್ಟ ಪಡುತ್ತಾರೆ. ನೆಚ್ಚಿನ ಮೆಕ್ಕೆಜೋಳವು ತೂಕ ಇಳಿಸುವಲ್ಲಿ ನಿಮಗೆ ಸಹಾಯಕ ಆಗಿದೆ. ತೂಕ ಇಳಿಸುವುದು ನಿಮ್ಮ ಗುರಿ ಆಗಿದ್ದರೆ ಆಹಾರದಲ್ಲಿ ದೇಸಿ ಕಾರ್ನ್ ಉತ್ತಮ ಆಯ್ಕೆ ಆಗಿದೆ. ಮೆಕ್ಕೆಜೋಳವನ್ನು ಮಿತವಾಗಿ ಸೇವಿಸುವುದು ತೂಕ ನಷ್ಟ ಸ್ನೇಹಿ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮೆಕ್ಕೆಜೋಳವನ್ನು (Corn) ಭಾರತದಲ್ಲಿ (India) ಹೆಚ್ಚು ಬೆಳೆಯಲಾಗುತ್ತದೆ. ಭಾರತದಲ್ಲಿ ವ್ಯಾಪಕವಾಗಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಇದು ಲಭ್ಯವಿದ್ದು, ಮತ್ತು ಜನಪ್ರಿಯ (Famous) ಬೆಳೆಯಾಗಿದೆ. ಇದು ಏಕದಳ ರೂಪದಲ್ಲಿ ಬ್ರೆಡ್ (Bread) ತಯಾರಿಸುವುರಿಂದ ಹಿಡಿದು ಬಾರ್ಬೆಕ್ಯೂ ಸ್ನ್ಯಾಕ್ ಆಗಿಯೂ ತಯಾರು ಮಾಡಲು ಬಳಕೆಯಾಗುತ್ತದೆ.  ಇದನ್ನು ಸಾಗ್, ಪಕೋಡಾ, ಸೂಪ್ ಮತ್ತು ಚಾಟ್‌ (Chat) ಅನೇಕ ಭಕ್ಷ್ಯಗಳಲ್ಲಿ ಸೇರಿಸಬಹುದು. ಅನೇಕ ವಿಧಗಳು ಮತ್ತು ರುಚಿಗಳು ಲಭ್ಯ ಇವೆ. ಪ್ರತಿಯೊಬ್ಬರೂ ಇದನ್ನು ತಿನ್ನಲು ಇಷ್ಟ ಪಡುತ್ತಾರೆ. ಆದರೆ ನಿಮ್ಮ ನೆಚ್ಚಿನ ಜೋಳವು ತೂಕ ಇಳಿಸುವಲ್ಲಿ ನಿಮಗೆ ಸಹಾಯಕ ಆಗಿದೆ. ಇದು ಹೇಗೆ ಎಂದು ನಾವು ಇಲ್ಲಿ ತಿಳಿಯೋಣ.

    ಹೆಚ್ಚಿನ ಕಾರ್ನ್ ನ್ನು ಸಿರಪ್, ಮತ್ತು ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಹೆಚ್ಚಿನ ಕ್ಯಾಲೋರಿ ಹೆಚ್ಚಿನ ಆಹಾರ ಸಂಯೋಜನೆಗಳ ಜೊತೆ ಸೇವಿಸುತ್ತಾರೆ. ಜನರು ಸಾಮಾನ್ಯವಾಗಿ ಕಾರ್ನ್ ಹೆಚ್ಚಿನ ಕ್ಯಾಲೋರಿ ಮತ್ತು ಆರೋಗ್ಯಕ್ಕೆ ಕೆಟ್ಟದ್ದು ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪಾದ ಗ್ರಹಿಕೆ.

    ತೂಕ ಇಳಿಸುವುದು ನಿಮ್ಮ ಗುರಿ ಆಗಿದ್ದರೆ ಆಹಾರದಲ್ಲಿ ದೇಸಿ ಕಾರ್ನ್ ಉತ್ತಮ ಆಯ್ಕೆ ಆಗಿದೆ. ಮೆಕ್ಕೆಜೋಳವನ್ನು ಮಿತವಾಗಿ ಸೇವಿಸುವುದು ತೂಕ ನಷ್ಟ ಸ್ನೇಹಿ ಆಗಿದೆ. ಆದರೆ ನಿಮಗೆ ಮಧುಮೇಹ ಅಥವಾ ಯಾವುದೇ ಕಾಯಿಲೆ ಇದ್ದರೆ ಯಾವುದೇ ರೂಪದಲ್ಲಿ ಜೋಳವನ್ನು ತಿನ್ನುವ ಮೊದಲು ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ.

    ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ ಇದು

    ಕಾರ್ನ್ ತೂಕ ನಷ್ಟಕ್ಕೆ ಹೇಗೆ ಸಹಾಯಕವಾಗಿದೆ?

    ಕಾರ್ನ್ ಪ್ರೋಟೀನ್‌ ನಲ್ಲಿ ಸಮೃದ್ಧವಾಗಿದೆ

    ಸಂಪೂರ್ಣ ಗೋಧಿ ಮತ್ತು ಬಿಳಿ ಅಕ್ಕಿ ಎರಡಕ್ಕಿಂತ 100 ಗ್ರಾಂ ಕಾರ್ನ್‌ಗೆ ಕಡಿಮೆ ಕ್ಯಾಲೊರಿ ಹೊಂದುವುದರ ಜೊತೆಗೆ ಇದು ಹೆಚ್ಚಿನ ಪ್ರೋಟೀನ್ ನ್ನು ಹೊಂದಿದೆ. ನೀವು ತೂಕ ಇಳಿಸಲು ಬಯಸಿದರೆ ಪ್ರೋಟೀನ್ ನ್ನು ಬಳಸುವುದು ನಿಮ್ಮ ಆಹಾರದಲ್ಲಿ ಉತ್ತಮ ಆಯ್ಕೆ ಆಗಿದೆ. ಪ್ರೋಟೀನ್ ಚಯಾಪಚಯ ಹೆಚ್ಚಿಸುತ್ತದೆ. ಮತ್ತು ದೇಹದ ತೂಕ ಸುಲಭವಾಗಿ ಇಳಿಸಲು ಸಹಾಯ ಮಾಡುತ್ತದೆ.

    ಇದು ಕಡಿಮೆ ಕ್ಯಾಲೋರಿ ಆಹಾರ ಆಗಿದೆ

    ಮೆಕ್ಕೆಜೋಳದಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಜೋಳದಲ್ಲಿ ಸೇಬಿನಷ್ಟೇ ಕ್ಯಾಲೋರಿಗಳಿವೆ. ಆದರೆ ನಾವು ಅದರ ಡಂಪ್ಲಿಂಗ್‌ ಮಾಡಿದಾಗ ಅಥವಾ ಅದಕ್ಕೆ ಬೆಣ್ಣೆ ಸೇರಿಸಿದಾಗ ಅದು ಕೊಬ್ಬಿನ ರೂಪದಲ್ಲಿ ನಮ್ಮ ಸೊಂಟ ಮತ್ತು ಹೊಟ್ಟೆಯ ಮೇಲೆ ಹೆಪ್ಪುಗಟ್ಟುತ್ತದೆ.

    ಹೆಚ್ಚಿನ ಫೈಬರ್ ಆಹಾರ ಮೆಕ್ಕೆಜೋಳ ಆಗಿದೆ

    ಮೆಕ್ಕೆಜೋಳದಲ್ಲಿ ನಾರಿನಂಶ ಬಹಳ ಹೆಚ್ಚಾಗಿದೆ. ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗುವುದನ್ನು ತಡೆಯಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಹೆಚ್ಚಿನ ಫೈಬರ್ ಆಹಾರ ತೋರಿಸುವ ಅನೇಕ ಅಧ್ಯಯನಗಳು ಇವೆ.

    ನಾರಿನಂಶವು ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದು ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ಸಹ ನಿಮಗೆ ಸಹಾಯ ಮಾಡುತ್ತದೆ.

    ಮೆಕ್ಕೆಜೋಳ ಜೀವಸತ್ವ ಮತ್ತು ಖನಿಜಗಳ ನಿಧಿ

    ತೂಕ ನಷ್ಟಕ್ಕೆ ನೀವು ಜೀವಸತ್ವ ಮತ್ತು ಖನಿಜ ಒದಗಿಸುವ ಸಾಮರ್ಥ್ಯ ಹೊಂದಿರುವ ಆಹಾರ ಮಾತ್ರ ಸೇವಿಸಬೇಕು. ಇದರಿಂದ ನೀವು ತೆಳ್ಳಗಾಗಲು ನಿಮ್ಮ ಆರೋಗ್ಯದಲ್ಲಿ ರಾಜಿ ಬೇಡ. ಇವೆಲ್ಲದರಲ್ಲೂ ಇದು ವಿಶೇಷ. ಇದು ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಮ್‌ ನಂತಹ ಖನಿಜಗಳಲ್ಲಿ ಅಧಿಕವಾಗಿದೆ. ಮತ್ತು ವಿಟಮಿನ್ ಸಿ, ವಿಟಮಿನ್ ಬಿ 1 ಮತ್ತು ವಿಟಮಿನ್ ಬಿ 9 ನಂತಹ ವಿಟಮಿನ್‌ಗಳ ಮೂಲ.

    ತೂಕ ನಷ್ಟಕ್ಕೆ ಮೆಕ್ಕೆಜೋಳ ತಿನ್ನಬೇಕು. ಮೆಕ್ಕೆಜೋಳ ಸುಲಭವಾಗಿ ಲಭ್ಯವಿದೆ. ಸಮಂಜಸವಾದ ಮತ್ತು  ತಯಾರಿಸಲು ಸುಲಭ. ಇದು ಕಾರ್ನ್ ಅನ್ನು ನಿಯಮಿತವಾಗಿ ಸೇವಿಸುವವರಿಗೆ ಸುಸ್ಥಿರ ಪರ್ಯಾಯ ಪದಾರ್ಥವಾಗಿದೆ.

    ಇದನ್ನೂ ಓದಿ: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣವಂತೆ

    ಬೇಯಿಸಿ ತಿನ್ನಬಹುದು

    ಮೆಕ್ಕೆಜೋಳವನ್ನು ವಿವಿಧ ರೀತಿಯಲ್ಲಿ ಬೇಯಿಸಿ ತಿನ್ನಬಹುದು. ಜೋಳದ ಕಿಚಡಿ, ಜೋಳದ ಗಂಜಿ, ಕಾರ್ನ್ ಫ್ಲೋರ್ ರೊಟ್ಟಿ, ಕಾರ್ನ್ ಸಬ್ಜಿ ಮತ್ತು ಕಾರ್ನ್ ಸಲಾಡ್ ನಂತೆ ಸೇವಿಸಬಹುದು.
    Published by:renukadariyannavar
    First published: