ನೀರೆಯರ ಅಂದಕ್ಕೆ ತರಹೇವಾರಿ ಲಿಪ್ ಸ್ಟಿಕ್

news18
Updated:June 8, 2018, 3:35 PM IST
ನೀರೆಯರ ಅಂದಕ್ಕೆ ತರಹೇವಾರಿ ಲಿಪ್ ಸ್ಟಿಕ್
news18
Updated: June 8, 2018, 3:35 PM IST
ನ್ಯೂಸ್ 18 ಕನ್ನಡ

ಮಹಿಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಲಿಪ್​ಸ್ಟಿಕ್ ಪಾತ್ರ ಮಹತ್ವದ್ದು. ಹಿಂದೆಲ್ಲ ಒಂದೇ ರೀತಿಯ ಬಣ್ಣಗಳ ಲಿಪ್​ಸ್ಟಿಕ್​  ಬಳಸಿಕೊಳ್ಳಲಾಗುತಿತ್ತು. ಆದರೆ, ಈಗ ಫ್ಯಾಷನ್ ಲೋಕದ ಮೇಲೂ ಬದಲಾವಣೆ ಗಾಳಿ ಬೀಸಿದ್ದು ತರಹೇವಅರಿ ಲಿಪ್ ಸ್ಟಿಕ್​ಗಳು ಮಾರುಕಟ್ಟೆಗೆ ಬಂದಿವೆ.

ಕೆಂಪು, ನೇರಳೆ ಸೇರಿದಂತೆ ಹಲವು ಬಣ್ಣದ  ಲಿಪ್ ಸ್ಟಿಕ್​ಗಳು ನೀರೆಯರ ತುಟಿಯ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.  ನೈಕಾ ಬ್ಯೂಟಿಯ ಸಿಇಒ ರೀನಾ ಛಾಬ್ರಾ ಮತ್ತು ವೂನಿಕ್ ಕಂಪನಿಯ ಸ್ಟೈಲಿಸ್ಟ್​ ಮುಖ್ಯಸ್ಥೆ ಭವ್ಯ ಚಾವ್ಲಾ ಹೊಸ ಬಗೆಯ ಲಿಪ್​ಸ್ಟಿಕ್​ಗಳ ಬಗೆ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

* ನ್ಯೂಡ್ ಲಿಪ್​ಸ್ಟಿಕ್​ : ನ್ಯೂಡ್​ ಲಿಪ್​​ಸ್ಟಿಕ್​ ಅನ್ನು ತ್ವಚೆಯ ಬಣ್ಣವನ್ನು ಸರಿದೂಗಿಸಿ ಆಯ್ಕೆ ಮಾಡಿಕೊಳ್ಳಿ. ಈ ಸೌಂದರ್ಯ ಉತ್ಪನ್ನದಲ್ಲಿ ಚರ್ಮಕ್ಕೆ ಸರಿ ಹೊಂದುವ ಹಲವಾರು ಬಣ್ಣಗಳ ಆಯ್ಕೆಗಳಿವೆ. ಸಾಮಾನ್ಯವಾಗಿ ನ್ಯೂಡ್​ ಲಿಪ್​ಸ್ಟಿಕ್​ಗಳು ಎಲ್ಲ ವರ್ಣದ ತುಟಿಗಳಿಗೆ ಸರಿ ಹೊಂದುತ್ತದೆ.

* ಪಿಂಕ್ :  ಸಾಮಾನ್ಯ ಸೌಂದರ್ಯಕ್ಕಾಗಿ ತಿಳಿ ಬಣ್ಣದ ಪಿಂಕ್ ಲಿಪ್​ಸ್ಟಿಕನ್ನು ಹಚ್ಚುವುದು ಉತ್ತಮ. ಹಾಗೆಯೇ ಕಡು ಪಿಂಕ್ ಬಣ್ಣದ ಲಿಪ್​ಸ್ಟಿಕ್​ ಅನ್ನು ಬಳಸಿದರೆ ಮುಖವು ಆಕರ್ಷಕವಾಗಿ ಕಾಣುತ್ತದೆ.

* ಕೋರಲ್ಸ್ : ಕೆಂಪು ಬಣ್ಣದ ತುಟಿಯ ಸೌಂದರ್ಯಕ್ಕೆ ಕೋರಲ್ಸ್​ ಲಿಪ್​ಸ್ಟಿಕ್​ ಬಳಸಬಹುದು. ಗಾಢವಾದ ಮತ್ತು ಕಂದು ಬಣ್ಣದ ತುಟಿಗಳಿಗೆ ಕೋರಲ್ಸ್​ ಬಣ್ಣಗಳು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕೋರಲ್ಸ್​ನ ಗಾಢವಾದ ಬಣ್ಣಗಳು ತುಟಿಯ ಅಂದವನ್ನು ಹೆಚ್ಚಿಸುತ್ತದೆ. ಆದರೆ ಭಾರತೀಯರ ಚರ್ಮಗಳಿಗೆ ಕಂದು ಬಣ್ಣದ ಲಿಪ್​ಸ್ಟಿಕ್​ ಉತ್ತಮ.

* ಪ್ಲಮ್: ಪ್ಲಮ್ ಅಥವಾ ನೇರಳೆ ಬಣ್ಣದ ಈ ಲಿಪ್​ಸ್ಟಿಕ್​ ಪಾರ್ಟಿ ಸ್ಟೈಲಿಗೆ ಹೇಳಿ ಮಾಡಿಸಿದಂತಿದೆ. ಇತ್ತೀಚಿನ ದಿನಗಳಲ್ಲಿ ಈ ಬಣ್ಣವು ಹೆಚ್ಚು ಜನಪ್ರಿಯವಾಗಿದ್ದು, ಇದರಲ್ಲಿ ಹಲವಾರು ಬಣ್ಣಗಳ ಆಯ್ಕೆಗಳಿವೆ.
Loading...

* ಕೆಂಪು: ನೀವು ಬೋಲ್ಡ್​ ವ್ಯಕ್ತಿತ್ವವನ್ನು ಹೊಂದಿದ್ದರೆ ಕೆಂಪು ಬಣ್ಣದ ಲಿಪ್​ಸ್ಟಿಕ್​ ಸೂಕ್ತ ಆಯ್ಕೆ. ಇದು ಎಲ್ಲಾ ವರ್ಣದ ಚರ್ಮದವರಿಗೂ ಹೊಂದಿಕೊಳ್ಳತ್ತದೆ.
First published:June 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ