Video: ಕೂರ್ಗ್​ ಶೈಲಿಯಲ್ಲಿ ಪೋರ್ಕ್ ಕರಿ ಮಾಡಲು ಇವಿಷ್ಟು ಸಾಮಾಗ್ರಿ ಇದ್ರೆ ಸಾಕು, ಆದ್ರೆ ಹೀಗೆ ಟ್ರೈ ಮಾಡಿ

ಕೊಡಗು ಶೈಲಿಯಲ್ಲಿ ಪೋರ್ಕ್​ ಮಾಡಿ, ಆ ವಾತಾವರಣವನ್ನು ನೆನೆಯುತ್ತಾ ಸವಿದರೆ ಮಾತ್ರ ತಿಂದದ್ದ ಪೂರ್ತಿಅನಿಸುತ್ತದೆ. ಆದರೆ ಪೋರ್ಕ್​ ಕರಿ ಮಾಡಲು ಬಹುತೇಕರಿಗೆ ತಿಳಿದಿಲ್ಲ. ಸುಲಭವಾಗಿ ಮತ್ತು ವೇಗವಾಗಿ ಪೋರ್ಕ್​ ಕರಿ ಮಾಡಬಹುದಾಗಿದೆ. ಅದಕ್ಕಾಗಿ ಈ ಲೇಖನದಲ್ಲಿ ಪೋರ್ಕ್​ ಕರಿ ಮಾಡಲು ಬೇಕಾಗುವ  ಸಾಮಾಗ್ರಿಯಿಂದ ಹಿಡಿದು, ಸರಿಯಾ ವಿಧಾನದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ

ಕೂರ್ಗ್​ ಶೈಲಿಯಲ್ಲಿ ಪೋರ್ಕ್ ಕರಿ

ಕೂರ್ಗ್​ ಶೈಲಿಯಲ್ಲಿ ಪೋರ್ಕ್ ಕರಿ

  • Share this:
    ಕೊಡಗು ಎಂದಾಗ ಅಲ್ಲಿನ ವಾತಾವರಣ ನೆನಪಿಗೆ ಬರುತ್ತದೆ. ಆದರೆ ಮಳೆಗಾಲದಲ್ಲಿ (Monsoon) ಮಾತ್ರ ನೆನೆಪಿಸಿಕೊಂಡಾಗ ಕೊಡಗಿನಲ್ಲಿ ಮಳೆಯ ಅವಾಂತರಕ್ಕೆ ಹಿಂದೆಲ್ಲಾ ಆದ ಭಯನಕ ಸನ್ನಿವೇಶಗಳು ಕಣ್ಣು ಕಟ್ಟುತ್ತವೆ. ಆದರೆ ಕೊಡಗು ಅಥವಾ ಕೂರ್ಗ್​ಗೆ (Coorg) ಪ್ರಯಾಣ ಬೆಳೆಸಿದರೆ ಅಲ್ಲಿನ ಪ್ರವಾಸಿ ತಾಣಗಳ ಜೊತೆಗೆ ಆಹಾರ (Food) ಪದ್ಧತಿಯೂ ಹೆಚ್ಚು ಇಷ್ಟವಾಗುತ್ತದೆ. ಸಾಮಾನ್ಯವಾಗಿ ಹಂದಿ (Pig) ಮಾಂಸದಿಂದ ತಯಾರಿಸುವ ಪೋರ್ಕ್​ ಕರಿ (Pork Curry) ಇಲ್ಲಿ ಭಾರೀ ಫೇಮಸ್​. ಸಾಮಾನ್ಯವಾಗಿ ಪ್ರವಾಸಿಗರು ಕೂರ್ಗ್​ ಕಡೆ ಮುಖ ಮಾಡಿದರೆ ಪೋರ್ಕ್​ ಕರಿ ಸವಿಯದೇ ಹಿಂತಿರುಗುವುದು ತೀರಾ ಕಡಿಮೆ. ಕೊಡಗು ಶೈಲಿಯಲ್ಲಿ ಪೋರ್ಕ್​ ಮಾಡಿ, ಆ ವಾತಾವರಣವನ್ನು ನೆನೆಯುತ್ತಾ ಸವಿದರೆ ಮಾತ್ರ ತಿಂದದ್ದ ಪೂರ್ತಿಅನಿಸುತ್ತದೆ. ಆದರೆ ಪೋರ್ಕ್​ ಕರಿ ಮಾಡಲು ಬಹುತೇಕರಿಗೆ ತಿಳಿದಿಲ್ಲ. ಸುಲಭವಾಗಿ ಮತ್ತು ವೇಗವಾಗಿ ಪೋರ್ಕ್​ ಕರಿ ಮಾಡಬಹುದಾಗಿದೆ. ಅದಕ್ಕಾಗಿ ಈ ಲೇಖನದಲ್ಲಿ ಪೋರ್ಕ್​ ಕರಿ ಮಾಡಲು ಬೇಕಾಗುವ  ಸಾಮಾಗ್ರಿಯಿಂದ ಹಿಡಿದು, ಸರಿಯಾ ವಿಧಾನದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

    ಬೇಕಾಗುವ ಸಾಮಗ್ರಿಗಳು

    10-12 ಸಣ್ಣ ಈರುಳ್ಳಿ, 7 ಎಸಳು ಬೆಳ್ಳುಳ್ಳಿ, ಶುಂಠಿ, 4 ಗಾಂಧಾರಿ ಮೆಣಸು, 3 ಹಸಿಮೆಣಸು, ಕರಿ ಬೇವಿನ ಸೊಪ್ಪು, 1 ಲವಂಗ, ಚಕ್ಕೆ, ಏಲಕ್ಕಿ, ಜೀರಿಗೆ , ಕಾಳು ಮೆಣಸು , 300 ಗ್ರಾಂ ಪೋರ್ಕ್, ಮೆಣಸಿನ ಪುಡಿ, ಅರಶಿನ ಪುಡಿ, ಉಪ್ಪು, ಕೋಕಂ ಜ್ಯೂಸ್ (ಲಿಂಬೆ ರಸ)

    ಮಾಡುವ ವಿಧಾನ :

    ಸಣ್ಣ ಈರುಳ್ಳಿ ಯನ್ನು ಜಜ್ಜಿ ಕೊಳ್ಳಿ. ನಂತರ ಬೆಳ್ಳುಳ್ಳಿ, ಶುಂಠಿ ಯನ್ನೂ ಜಾಜ್ಜಿಕೊಳ್ಳಿ. ನಂತರ ಹಸಿಮೆಣಸು,ಗಾಂಧಾರಿ ಮೆಣಸು,ಕರಿಬೇವಿನ ಎಲೆ,ಜೀರಿಗೆ ,ಲವಂಗ,ಚಕ್ಕೆ,ಏಲಕ್ಕಿ,ಜೀರಿಗೆ ,ಕಾಳು ಮೆಣಸು ಹಾಕಿ ಎಲ್ಲವನ್ನೂ ಚೆನ್ನಾಗಿ ಜಜ್ಜಿ ಕೊಳ್ಳಿ.

    ಬಳಿಕ ಒಂದು ಪಾತ್ರೆಗೆ ಪೋರ್ಕ್,ಮೆಣಸಿನ ಪುಡಿ, ಅರಶಿಣ ಪುಡಿ,ಉಪ್ಪು,ಕೋಕಂ ಜ್ಯೂಸ್ ಅಥವಾ ಲಿಂಬೆ ರಸ ಹಾಕಿ ಚೆನ್ನಾಗಿ ಕಲಸಿ ,ನೆನೆಯಲು 30 ನಿಮಿಷಗಳ ಕಾಲ ಇಡಿ.

    ಒಂದು ಪ್ಯಾನ್ ಗೆ ಕೊಬ್ಬು ಇರುವ ಪೋರ್ಕ್ ತುಂಡನ್ನು ಹಾಕಿ ಫ್ರೈ ಮಾಡಿ, ಸ್ವಲ್ಪ ನೀರು ಸೇರಿಸಿ ಬಳಿಕ ಎಲ್ಲಾ ಪೋರ್ಕ್ ತುಂಡನ್ನು ಹಾಕಿ ,ಅಗತ್ಯ ಇದ್ದಲ್ಲಿ ನೀರುನ್ನು ಹಾಕಿ,ಜಜ್ಜಿದ ಮಿಶ್ರಣ ವನ್ನೂ ಹಾಕಿ ,ಕರಿಬೇವಿನ ಸೊಪ್ಪು ಸೇರಿಸಿ,ಬೇಯಲು ಇಡಿ.

    ನಂತರ ಪೋರ್ಕ್ ಮಸಾಲೆ, ದನಿಯ ಪುಡಿ,ಕೋಕಂ ಜ್ಯೂಸ್,ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಲು ಬಿಡಿ.
    ಕೊಬ್ಬಿನಂಶ ಮಸಾಲೆ ಯಲ್ಲಿ ಬಿಟ್ಟ ನಂತರ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.

    ನಗರ ಪ್ರದೇಶದಲ್ಲಿವರಿಗೆ ಈ ವಿಧಾನದ ಮೂಲಕ ಪೋರ್ಕ್​ ಕರಿ ಮಾಡಬಹುದಾಗಿದೆ. ಸುಲಭವಾಗಿ ಮತ್ತು ವೇಗವಾಗಿ ಹಂದಿ ಮಾಂಸವನ್ನು ತರಿಸಿಕೊಂಡು ಪೋರ್ಕ್​ ಕರಿ ಮಾಡಬಹುದಾಗಿದೆ. ಬಹಳ ರುಚಿ ಎನಿಸುವ ಮತ್ತು ಕೂರ್ಗ್​ ಶೈಲಿಯ ಪೋರ್ಕ್​ಗೆ ಡಿಮ್ಯಾಂಡ್​ ಕೊಂಚ ಜಾಸ್ತಿ.



    ಇದನ್ನೂ ಓದಿ: Weight Loss: ಏನ್ಮಾಡಿದ್ರೂ ತೂಕ ಕಡಿಮೆ ಆಗ್ತಿಲ್ವಾ? ಈ 7 ಆಹಾರ ಸೇವಿಸಿ ನೋಡಿ

    ಹಂದಿ ಗಲೀಜು ಪ್ರಾಣಿಯೇ?

    ಹಂದಿ ಎಂದಾಗ ಹಿಂದೆ ಸರಿಯುವವರು ಹಂದಿ ಮಾಂಸದ ಅಡುಗೆ ಎಂದಾಗ ಹತ್ರ ಬರುತ್ತಾರೆ. ಹಾಗಂದ ಮಾತ್ರಕ್ಕೆ ಹಂದಿ ಗಲೀಜು ಪ್ರಾಣಿಯೇ ಎಂಬ ಪ್ರಶತ್ನೆ ಕಾಡಬಹುದು. ಹಂದಿ ಕೊಚ್ಚೆಯಲ್ಲಿ ಮಲಗುತ್ತದೆ, ಕೊಳೆತ ಆಹಾರವನ್ನು ತಿನ್ನುತ್ತದೆ ಎಂದು ಅನೇಕರು ಹೇಳುತ್ತಾರೆ. ಆದರೆ ಮನುಷ್ಯನೇ ಹಂದಿಗೆ ಅಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕೊಚ್ಚೆ ಪ್ರದೇಶವನ್ನು ನಿರ್ಮಿಸಿ ಅಲ್ಲಿ ಹಂದಿಯನ್ನು ವಾಸಿಸಲು ಬಿಡುತ್ತಾರೆ. ಆದರೆ ಚೀನಾ ದೇಶಗಳಿಗೆ ಹೋದಾಗ ಹಂದಿಗೆಂದೆ ಫಾರ್ಮ್​ ಕಟ್ಟಿಸಿ ಅದರಲ್ಲಿ ಸಾಕುವವರೂ ಇದ್ದಾರೆ.

    ಇದನ್ನೂ ಓದಿ: Momo ತಯಾರಿಸಲು ಬರೀ ಅರ್ಧ ಗಂಟೆ ಸಾಕು! ನೀವೂ ಟ್ರೈ ಮಾಡಿ ನೋಡಿ

    ಅಚ್ಚರಿಯ ಸಂಗತಿ ಎಂದರೆ ಚೀನಾದಲ್ಲಿ ಹಂದಿ ಮಾಂಸಕ್ಕೆ ವಿಶೇಷ ಬೇಡಿಕೆ ಇದೆ. ಅತಿ ಹೆಚ್ಚು ಹಂದಿ ಸಾಕುವ ದೇಶಗಳಲ್ಲಿ ಚೀನಾ ಕೂಡ ಮೊದಲಿದೆ ಎಂಬುದು ನೆನಪಿಸಬೇಕಿದೆ. ಹಂದಿ ಮಾಂಸದಿಂದ ಚೀನಾದಲ್ಲಿ ನಾನಾ ತರಹದ ರೆಸಿಪಿ ತಯಾರಿಸುತ್ತಾರೆ.
    Published by:Harshith AS
    First published: