ಮರೆಯದಿರಿ! ಅಡುಗೆ ಮಾಡುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳಿವು

ಖನಿಜಾಂಶ, ವಿಟಮಿನ್​ ಜೊತೆ ರುಚಿಕರ ಆಹಾರ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಕೆಲವೊಮ್ಮೆ ಆಹಾರ ಬೇಯಿಸುವ ಸಂದರ್ಭದಲ್ಲಿ ಪೋಷಕಾಂಶಗಳ ನಷ್ಟ ಉಂಟಾಗುತ್ತದೆ. ಅದನ್ನು ತಡೆಯಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಪೌಷ್ಟಿಕಾಂಶದ ಮೌಲ್ಯ, ರುಚಿ ಮತ್ತು ಪರಿಮಳ ಉತ್ತಮ ಅಡುಗೆಯ ಗುಣಗಳಾಗಿವೆ. ಖನಿಜಾಂಶ, ವಿಟಮಿನ್​ ಜೊತೆ ರುಚಿಕರ ಆಹಾರ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಕೆಲವೊಮ್ಮೆ ಆಹಾರ ಬೇಯಿಸುವ ಸಂದರ್ಭದಲ್ಲಿ ಪೋಷಕಾಂಶಗಳ ನಷ್ಟ ಉಂಟಾಗುತ್ತದೆ. ಅದನ್ನು ತಡೆಯಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿ.


ಅಡುಗೆ ಮಾಡುವಾಗ ಕಡಿಮೆ ನೀರಿನ ಪ್ರಮಾಣವಿರಲಿ.


ಹೆಚ್ಚು ಬೇಯಿಸುವ ಅಗತ್ಯವಿಲ್ಲ.


ಬೇಯಿಸುವ ಪದ್ಧತಿ ಬಗ್ಗೆ ಅರಿವಿರಲಿ


ನೀರಿಲ್ಲದ ಅಡುಗೆ, ಪ್ರೆಷರ್ ಅಡುಗೆಗಳು, ಸ್ಟೀಮ್​ ಮಾಡುವ ಅಡುಗೆ ವಿಧಾನ, ಸಣ್ಣ ಉರಿಯಲ್ಲಿ ಹುರಿಯುವುದು ಮತ್ತು ಮೈಕ್ರೋವೇವ್​ನಿಂದ ಆಹಾರದಲ್ಲಿ ಪೋಷಕಾಂಶ ನಷ್ಟವಾಗುತ್ತದೆ. ಹೆಚ್ಚಿಗೆ ಹುರಿಯುವುದು ಅಥವಾ ಬೇಯಿಸುವುದರಿಂದ ನಿಮ್ಮ ಆಹಾರದಲ್ಲಿ ಹೆಚ್ಚಿನ ಕೊಬ್ಬಿನಾಂಶಕ್ಕೆ ಕಾರಣವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗುವುದಲ್ಲದೆ ಆರೋಗ್ಯಕ್ಕೂ ಹಾನಿ.


ಆದ್ದರಿಂದ ಆಹಾರ ತಯಾರಿಸುವ ಮುನ್ನ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಪ್ರಯೋಜನಕಾರಿಯಾಗಿದೆ. ತರಕಾರಿಗಳನ್ನು ತೊಳೆದು ನಂತರ ಸ್ವಚ್ಚಗೊಳಿಸಿ. ಕತ್ತರಿಸಿದ ನಂತರ ತೊಳೆಯವುದು ಪೋಷಕಾಂಶದ ನಷ್ಟಕ್ಕೆ ಕಾರಣವಾಗುತ್ತದೆ. ಶೀತಲೀಕರಿಸಿದ ತರಕಾರಿಗಳನ್ನು ಹಬೆಯಲ್ಲಿ ಬೇಯಿಸುವುದರಿಂದ ರೋಗ ನಿರೋಧಕ ಶಕ್ತಿ ಉಳಿಯುತ್ತದೆ. ಆಯಾ ತರಕಾರಿಗೆ ಅನುಗುಣವಾಗಿ ಬೇಯಿಸುವುದು ಬಹಳ ಮುಖ್ಯ.


ಪ್ರೆಷರ್​ ಕುಕ್ಕಿಂಗ್ :ಹೆಚ್ಚಿನ ಜೀವಸತ್ವಗಳು ಶಾಖ ಮತ್ತು ಗಾಳಿಯ ಸಂವೇದನಾಶೀಲವಾಗಿರುವುದರಿಂದ, ಅಡುಗೆ ಸಮಯ ಮತ್ತು ಹೆಚ್ಚಿನ ತಾಪಮಾನವು ಹೆಚ್ಚು ಪೋಷಕಾಂಶಗಳನ್ನು ತೆಗೆದುಹಾಕುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಅಕ್ಕಿ, ದಾಲ್, ತರಕಾರಿ ಸ್ಟ್ಯೂ, ಮೇಲೋಗರ ಮತ್ತು ಇತರ ಭಕ್ಷ್ಯಗಳನ್ನು ತಯಾರಿಸಲು ಈ ವಿಧಾನವನ್ನು ಹೆಚ್ಚಿನ ಭಾರತೀಯ ಕುಟುಂಬಗಳಲ್ಲಿ ಬಳಸಲಾಗುತ್ತದೆ. ಮೊದಲೇ ಬಿಸಿ ಮಾಡಿದ ಪ್ಯಾನ್, ಕುಕ್ಕರ್ ಅಥವಾ ನೀರಿನಲ್ಲಿ ಅಡುಗೆ ಸಿದ್ಧ ಮಾಡುವುದು ಉತ್ತಮ.


ತವಾ ಫ್ರೈ/ ಬಾಡಿಸುವ ಅಡುಗೆಗಳು:ಪ್ಯೂರಿಸ್ ಮತ್ತು ಫ್ರೆಂಚ್​ ಫ್ರೈಸ್​ ಖಾದ್ಯವನ್ನು ಹೆಚ್ಚು ಕರಿಯಬೇಕು. ಕಡಿಮೆ ಅವಧಿಯಲ್ಲಿ, ಅಲ್ಪ ಪ್ರಮಾಣದ ಎಣ್ಣೆಯಲ್ಲಿ ಹೆಚ್ಚಿನ ಉರಿಯಲ್ಲಿ ತರಕಾರಿಗಳು, ಮಾಂಸ, ಕೋಳಿ ಮತ್ತು ಟೋಫುವನ್ನು ಸಿದ್ಧಪಡಿಸಬಹುದು. ಆದರೆ ಉಪ್ಪು, ಖಾರವನ್ನು ಕಡಿಮೆ ಬಳಸಿ. ಇಲ್ಲದಿದ್ದರೆ ಅದು ಖಾದ್ಯದ ಪ್ರಮಾಣವನ್ನು ಕಡಿಮೆಗೊಳಿಸುವುದು. ತವಾದ ಮೇಲೆ ಫ್ರೈ ಮಾಡಬಹುದು. ಜೊತೆಗೆ ಬಹಳ ಬೇಯಿಸದೇ ಬಾಡಿಸಿಕೊಳ್ಳುವ ವಿಧಾನವಾಗಿದೆ.


ಹಬೆಯಲ್ಲಿ ಬೇಯಿಸುವುದು: ಹಬೆಯಲ್ಲಿ ಹೆಚ್ಚಿನ ತಾಪವಿರುವುದಿಲ್ಲ. ಇದರಿಂದ ಆಹಾರ ಹೆಚ್ಚು ಪೋಷಕಾಂಶ ಭರಿತವಾಗಿರುತ್ತವೆ. ಇಡ್ಲಿ, ತರಕಾರಿಗಳು, ಅಪ್ಪಮ್​, ಢೋಕ್ಲಾ ಉದಾಹರಣೆಯಾಗಿವೆ. ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿ ನಾಶವಾಗುತ್ತವೆ. ಹಬೆ ಬಳಸಿ ಅಡುಗೆ ಮಾಡುವುದು ಅಡುಗೆ ಎಣ್ಣೆ ಮತ್ತು ಉಪ್ಪಿನ ಬಳಕೆಯನ್ನು ಕಡಿಮೆ ಮಾಡುತ್ತದೆ. ಬದಲಾಗಿ, ಪರಿಮಳವನ್ನು ಹೆಚ್ಚಿಸಲು ಸ್ವಲ್ಪ ನೆಲದ ಮೆಣಸು, ಹುರಿದ-ಜೀರಾ ಪುಡಿ ಅಥವಾ ಇತರ ಮಸಾಲೆ ಸೇರಿಸಿಕೊಳ್ಳಬಹದು.


ಬೇಯಿಸಿದ ಮಾಂಸದ ಕೊಬ್ಬಿನಂಶವನ್ನು ಕಡಿಮೆ ಮಾಡಲು ಸ್ಟೀಮಿಂಗ್ ಸಹ ಸಹಾಯ ಮಾಡುತ್ತದೆ. ಬ್ರೊಕೋಲಿ, ಹೂಕೋಸು ಮತ್ತು ಎಲೆಕೋಸುಗಳಂತಹ ಅನೇಕ ತರಕಾರಿಗಳಲ್ಲಿ ಕಂಡುಬರುವ ಗ್ಲುಕೋಸಿನೊಲೇಟ್​ ಎನ್ನುವ ಅಂಶ ನಾಶವಾಗುವುದನ್ನು ಹಬೆ ಅಡುಗೆಗಳಲ್ಲಿ ತಪ್ಪಿಸಬಹುದು. ಇದರಿಂದ ಕ್ಯಾನ್ಸರ್ ಕಾಯಿಲೆ ದೂರ ಮಾಡಬಹುದು.


ಹುರಿಯುವುದು:ಎಣ್ಣೆ, ನೀರು ಇಲ್ಲದೇ ಆಹಾರ ಹುರಿಯುವ ಪ್ರಕ್ರಿಯೆಯಾಗಿದೆ. ಒಣ ಕಾಳು, ಬೀಜಗಳು, ಪನ್ನೀರ್, ಚಿಕನ್​ಗಳನ್ನು ಈ ವಿಧಾನದಲ್ಲಿ ಬೇಯಿಸಹುದು. ಇದು ಕೊಬ್ಬಿನಾಂಶ ಮತ್ತು ಪರಿಮಳವನ್ನು ಹೆಚ್ಚು ಹೀರಿಕೊಳ್ಳುತ್ತದೆ. ನಂತರ ಅಗತ್ಯವಿದ್ರೆ ಎಣ್ಣೆ ಸೇರಿಸಬಹುದು. ಹಿಂದೆ ಬೆಂಕಿಯಲ್ಲಿ ಬೇಯಿಸುತ್ತಿದ್ದರು ಈಗ ಓವನ್​, ಫ್ಯಾನ್ ಬಳಸಿ ಶಾಖ ಉತ್ಪತ್ತಿ ಮಾಡಿ ಬೇಯಿಸಬಹುದು.


ಕೆಂಡದ ಅಡುಗೆಗಳು :ಕಲ್ಲಿದ್ದಲಿನ ಅಡುಗೆ, ಗ್ಯಾಸ್​ ಬರ್ನರ್, ಎಲೆಕ್ಟ್ರಿಕ್​ ಕಾಯಿಲ್ ಗ್ರಿಲ್​ನಲ್ಲಿ ಮಾಡುವ ಅಡುಗೆಗಳಾಗಿವೆ. ಬ್ರೈಲಿಂಗ್, ಗ್ರಿಲ್ಲಿಂಗ್, ಹುರಿಯುವ ವಿಧಾನ ಬೇಯಿಸುವುದರಿಂದ ಭಿನ್ನವಾಗಿರುತ್ತದೆ. ಇದನ್ನು ಹೆಚ್ಚಾಗಿ ಒಲೆಯಲ್ಲಿ ಮಾಡಲಾಗುತ್ತದೆ. ತೆರೆದ ಒಲೆಯಲ್ಲಿ ಬೇಯಿಸುವುದಕ್ಕೂ ಮತ್ತು ಓವನ್​ನಲ್ಲಿ ಅಡುಗೆ ಮಾಡುವುದಕ್ಕೂ ಇರುವ ಒಂದು ವ್ಯತ್ಯಾಸವೆಂದರೆ ಓವನ್​​ನಲ್ಲಿ ತಾಪಮಾನ ನಿಯಂತ್ರಣ ಥರ್ಮೋಸ್ಟಾಟ್ ಇದೆ.


Published by:Seema R
First published: