• Home
  • »
  • News
  • »
  • lifestyle
  • »
  • Cholesterol Problem: ಕೊಲೆಸ್ಟ್ರಾಲ್ ಸಮಸ್ಯೆ ನಿಯಂತ್ರಿಬೇಕಾ? ಹಾಗಿದ್ರೆ ಈ ಸಲಹೆ ಪಾಲಿಸಿ

Cholesterol Problem: ಕೊಲೆಸ್ಟ್ರಾಲ್ ಸಮಸ್ಯೆ ನಿಯಂತ್ರಿಬೇಕಾ? ಹಾಗಿದ್ರೆ ಈ ಸಲಹೆ ಪಾಲಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದ ಕೊಲೆಸ್ಟ್ರಾಲ್ ಹೆಚ್ಚಳದಿಂದ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹ ಆಗಲು ಶುರುವಾದಾಗ ಇದು ರಕ್ತದ ಹರಿವಿನ ಅಡಚಣೆಗೆ ಕಾರಣ ಆಗುತ್ತದೆ. ಇದರ ಪರಿಣಾಮ ಹೃದಯದ ರಕ್ತ ಪಂಪ್ ಮಾಡಲು ಹೆಚ್ಚು ಶ್ರಮಿಸಲು ಕಾರಣ ಆಗುತ್ತದೆ. ಜೊತೆಗೆ ಕೆಲವೊಮ್ಮೆ ದೇಹದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ.

  • News18 Kannada
  • Last Updated :
  • Karnataka, India
  • Share this:

    ಕೊಲೆಸ್ಟ್ರಾಲ್ (Cholesterol) ಎಂದರೇನು ಎಂಬುದು ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೇ ಇರಬಹುದು. ಕೊಲೆಸ್ಟ್ರಾಲ್ ಇದು ರಕ್ತದಲ್ಲಿ (Blood) ಕಂಡು ಬರುವ ಮೇಣದಂಥ ವಸ್ತು (Thing) ಆಗಿದೆ. ಇದು ಆರೋಗ್ಯಕರ (Healthy) ಜೀವಕೋಶಗಳ (Cells) ರಚನೆಗೆ ಸಹಾಯ ಮಾಡುತ್ತದೆ. ಆದರೆ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಹಲವು ಆರೋಗ್ಯ ಸಮಸ್ಯೆ (Problem) ಹೆಚ್ಚಿಸಲು ಕಾರಣ ಆಗುತ್ತದೆ. ನಿಮ್ಮ ಹೃದಯ ಕಾಯಿಲೆ ಅಪಾಯ ಹೆಚ್ಚಿಸುತ್ತದೆ. ದೇಹದ ಕೊಲೆಸ್ಟ್ರಾಲ್ ಹೆಚ್ಚಳದಿಂದ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹ ಆಗಲು ಶುರುವಾದಾಗ ಇದು ರಕ್ತದ ಹರಿವಿನ ಅಡಚಣೆಗೆ ಕಾರಣ ಆಗುತ್ತದೆ. ಇದರ ಪರಿಣಾಮ ಹೃದಯದ ರಕ್ತ ಪಂಪ್ ಮಾಡಲು ಹೆಚ್ಚು ಶ್ರಮಿಸಲು ಕಾರಣ ಆಗುತ್ತದೆ.


    ಅಧಿಕ ಕೊಲೆಸ್ಟ್ರಾಲ್‌ಗೆ ಮುಖ್ಯ ಕಾರಣಗಳು ಯಾವವು?


    ಜೊತೆಗೆ ಕೆಲವೊಮ್ಮೆ ದೇಹದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಇದು ಕಾರಣ ಆಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಅನ್ನು ಆನುವಂಶಿಕವಾಗಿ ಪಡೆಯಬಹುದು. ಆದರೆ ಇದು ಸಾಮಾನ್ಯವಾಗಿ ಅನಾರೋಗ್ಯಕರ ಜೀವನಶೈಲಿ ಆಯ್ಕೆಯ ಮುಖ್ಯ ಪರಿಣಾಮವಾಗಿದೆ.


    ಇದನ್ನು ತಡೆಯಬಹುದು. ಮತ್ತು ಚಿಕಿತ್ಸೆ ನೀಡಬಹುದು. ಅಂತಹ ವೇಳೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಇದು ಸಹಾಯಕ. ಅಂತಹ ಕೆಲವು ಕ್ರಮಗಳ ಬಗ್ಗೆ ನಾವು ಇಲ್ಲಿ ನೋಡೋಣ.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬು ಸೇವನೆ ತಪ್ಪಿಸಿ


    ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬು ದೇಹದಲ್ಲಿ ಕೆಟ್ಟ LDL ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ. ಈ ವೇಳೆ ಅದನ್ನು ತಪ್ಪಿಸುವುದು ಸಹಾಯ ಮಾಡುತ್ತದೆ. ಈ ಕೊಬ್ಬು ದೇಹದ ಮೇಲೆ ಬಹಳ ಋಣಾತ್ಮಕ ಪರಿಣಾಮ ಬೀರುತ್ತದೆ.


    ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವುದು ಮಾತ್ರವಲ್ಲದೆ, ದೇಹದಲ್ಲಿ ಉರಿಯೂತ ಹೆಚ್ಚಿಸುತ್ತದೆ. ಇದು ಹೃದಯಾಘಾತಕ್ಕೆ ಅಪಾಯಕಾರಿ ಅಂಶ. ಅಂತಹ ಪರಿಸ್ಥಿತಿಯಲ್ಲಿ ನಿಮಗೆ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ನಂತರ ಕೆಂಪು ಮಾಂಸ, ಡೈರಿ ಉತ್ಪನ್ನ, ಬೇಯಿಸಿದ ಮತ್ತು ಕರಿದ ಆಹಾರ ಸೇವಿಸಬೇಡಿ.


    ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಮೂಲಕ ಕೊಲೆಸ್ಟ್ರಾಲ್ ನಿಯಂತ್ರಿಸುವುದು


    ಹಾರ್ವರ್ಡ್ ಪ್ರಕಾರ ಹೊಟ್ಟೆಯ ಕೊಬ್ಬು ಹೆಚ್ಚಿನ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಕಡಿಮೆ ಮಟ್ಟದ ಉತ್ತಮ ಕೊಲೆಸ್ಟ್ರಾಲ್ ಗೆ ಸಂಬಂಧಿಸಿದೆ. ಇದು ಮುಂದೆ ಹೃದಯ ಸಂಬಂಧಿ ಕಾಯಿಲೆಗೂ ಕಾರಣವಾಗುತ್ತದೆ. ನಿಮ್ಮ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ನೀವು ಬಯಸಿದರೆ ನಂತರ ನಿಮ್ಮ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಿ.


    ತೂಕ ನಷ್ಟದಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ


    ನಿಮ್ಮ ವಯಸ್ಸು, ಎತ್ತರ ಮತ್ತು ಲಿಂಗಕ್ಕೆ ಅನುಗುಣವಾಗಿ ನಿಮ್ಮ ತೂಕ ಇಲ್ಲದಿದ್ದಾಗ ನಿಮ್ಮ ದೇಹವು ಹೆಚ್ಚಿನ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ನ್ನು ಹೊಂದುವ ಸಾಧ್ಯತೆ ಹೆಚ್ಚು. ಈ ವೇಳೆ ತೂಕ ಕಳೆದುಕೊಳ್ಳುವುದು ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.


    ನೀವು ಸ್ವಲ್ಪ ತೂಕ ಹೆಚ್ಚಿಸಿದರೂ ಮತ್ತೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸುತ್ತದೆ. ಮತ್ತು ತೂಕ ಇಳಿಸಿದರೂ ಮತ್ತೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಐದರಿಂದ ಹತ್ತು ಪೌಂಡ್‌ ಅಂದ್ರೆ ಕೆಜಿ ಇಳಿಸುವುದು ಒಟ್ಟು ಕೊಲೆಸ್ಟ್ರಾಲ್ ಅನ್ನು 5 ಪ್ರತಿಶತ ದಿಂದ 10 ಪ್ರತಿಶತ ದಷ್ಟು ಕಡಿಮೆ ಮಾಡಬಹುದು.


    ಧೂಮಪಾನ LDL ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ


    ಧೂಮಪಾನ ಮಾಡದವರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆ. ನಿಮ್ಮ ಕೊಲೆಸ್ಟ್ರಾಲ್ ಹೆಚ್ಚಾದರೆ ಧೂಮಪಾನ ತ್ಯಜಿಸುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಧೂಮಪಾನವು ನಿಮ್ಮ ರಕ್ತನಾಳಗಳಿಗೆ ಉರಿಯೂತ ಮತ್ತು ಹಾನಿ ಉಂಟು ಮಾಡುತ್ತದೆ ಎಂದು ತಜ್ಞರು ಹೇಳ್ತಾರೆ.


    ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


    ದಿನವೂ ವ್ಯಾಯಾಮ ಮಾಡುವುದು


    ನಿಯಮಿತ ವ್ಯಾಯಾಮ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಮತ್ತು ಅದನ್ನು ಕಡಿಮೆ ಮಾಡಲು ಉತ್ತಮ ಮಾರ್ಗ ಆಗಿದೆ. ನೀವು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ವ್ಯಾಯಾಮ ಮಾಡಿ. ಆರೋಗ್ಯಕರ ಆಹಾರ ಮತ್ತು ಜೀವನಶೈಲಿ ಆಯ್ಕೆ ಮತ್ತು ವ್ಯಾಯಾಮ ಮಾಡಿ ಕೊಲೆಸ್ಟ್ರಾಲ್ ಕಡಿಮೆ ಮಾಡಿ.

    Published by:renukadariyannavar
    First published: