• Home
  • »
  • News
  • »
  • lifestyle
  • »
  • Diabetes Problem: ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಆಯುರ್ವೇದ ಪರಿಹಾರ ಹೀಗಿದೆ!

Diabetes Problem: ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಆಯುರ್ವೇದ ಪರಿಹಾರ ಹೀಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಕ್ಕರೆ ಕಾಯಿಲೆ ನಿಯಂತ್ರಿಸಲು ಆಯುರ್ವೇದದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾದ ಗಿಡಮೂಲಿಕೆಗಳು ಇವೆ. ಅವುಗಳು ಅಡುಗೆ ಮನೆಯಲ್ಲಿ ಲಭ್ಯ ಇವೆ. ರಕ್ತದ ಸಕ್ಕರೆ ನಿಯಂತ್ರಣಕ್ಕಾಗಿ ಈ ಆಯುರ್ವೇದ ಪರಿಹಾರ ಹೇಗೆ ಬಳಸಬೇಕೆಂದು ನೋಡೋಣ.

  • Share this:

    ಬಿಡುವಿಲ್ಲದ ಜೀವನಶೈಲಿ (Lifestyle) ಮತ್ತು ಬದಲಾಗುತ್ತಿರುವ ಆಹಾರ (Food) ಕ್ರಮದಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರು (People) ರೋಗಗಳಿಗೆ (Disease) ತುತ್ತಾಗುತ್ತಿದ್ದಾರೆ. ಕೆಲವು ರೋಗಗಳು ತುಂಬಾ ಸಾಮಾನ್ಯ ಆಗಿವೆ. ಅದರಲ್ಲಿ ಒಂದು ಮಧುಮೇಹ (Diabetes). ಮಧುಮೇಹ ಕಾಯಿಲೆಯನ್ನು ಸರಿಯಾದ ಆಹಾರ ಕ್ರಮದಿಂದ ನಿಯಂತ್ರಿಸಬಹುದು ಎಂದು ಹೇಳಲಾಗಿದೆ. ಆದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಇದರ ಲಕ್ಷಣಗಳನ್ನು ಸಮಯೋಚಿತವಾಗಿ ಗಮನಿಸಿದರೆ ಈ ಮಾರಣಾಂತಿಕ ರೋಗ ತಪ್ಪಿಸಬಹುದು. ಸಕ್ಕರೆ ಕಾಯಿಲೆ ನಿಯಂತ್ರಿಸಲು ಆಯುರ್ವೇದದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾದ ಗಿಡಮೂಲಿಕೆಗಳು ಇವೆ. ಅವುಗಳು ಅಡುಗೆ ಮನೆಯಲ್ಲಿ ಲಭ್ಯ ಇವೆ. ರಕ್ತದ ಸಕ್ಕರೆ ನಿಯಂತ್ರಣಕ್ಕಾಗಿ ಈ ಆಯುರ್ವೇದ ಪರಿಹಾರ ಹೇಗೆ ಬಳಸಬೇಕೆಂದು ನೋಡೋಣ.


    ರಕ್ತದ ಸಕ್ಕರೆಯ ಸಮಸ್ಯೆ ತಿಳಿಯಿರಿ


    ರಕ್ತದಲ್ಲಿ ಸಕ್ಕರೆಯ ಪ್ರಮಾಣ ವಿಪರೀತ ಹೆಚ್ಚಾದರೆ ಅದನ್ನು ಮಧುಮೇಹ ಎನ್ನುತ್ತಾರೆ. ಇನ್ಸುಲಿನ್ ಕಾರ್ಯ ಅಡ್ಡಿಪಡಿಸಿದಾಗ ಈ ಸಮಸ್ಯೆ ಉಂಟಾಗುತ್ತದೆ. ಇನ್ಸುಲಿನ್ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಒಂದು ರೀತಿಯ ಹಾರ್ಮೋನ್ ಆಗಿದೆ. ಈ ಹಾರ್ಮೋನು ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.


    ಡಾ ದಿಕ್ಸಾ ಭಾವಸರ್ ಸವಾಲಿಯಾ ಅವರು, ಪ್ರಿಡಿಯಾಬಿಟಿಸ್‌ ಮತ್ತು ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಕೆಲವು ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ತಿಳಿಸಿದ್ದಾರೆ.


    ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುವ ಆಯುರ್ವೇದ ಗಿಡಮೂಲಿಕೆಗಳು


    ಮೆಂತ್ಯ ಬೀಜಗಳು


    ಮಧುಮೇಹ ರೋಗಿಗಳು ಆಹಾರದಲ್ಲಿ ಮೆಂತ್ಯ ಬೀಜ ಸೇರಿಸಿದರೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಟೈಪ್ -2 ರೋಗಿಗಳಲ್ಲಿ ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡುತ್ತದೆ.


    ಒಂದು ಟೀಚಮಚ ಮೆಂತ್ಯ ಪುಡಿಯನ್ನು ಬೆಚ್ಚಗಿನ ನೀರಿನಿಂದ ಖಾಲಿ ಹೊಟ್ಟೆಯಲ್ಲಿ ಅಥವಾ ಮಲಗುವ ಸಮಯದಲ್ಲಿ ಸೇವಿಸಿ. ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿ, ಈ ನೀರನ್ನು ಮತ್ತು ಬೀಜಗಳನ್ನು ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.


    ಕಪ್ಪು ಮೆಣಸು


    ಮಧುಮೇಹ ಮತ್ತು ರಕ್ತದ ಸಕ್ಕರೆ ನಿಯಂತ್ರಣದಲ್ಲಿಡಲು ಕರಿಮೆಣಸು ಸಹಕಾರಿ. ಕರಿಮೆಣಸು ಆಂಟಿಹೈಪರ್ಗ್ಲೈಸೆಮಿಕ್ ಏಜೆಂಟ್‌ ಹೊಂದಿದೆ. ಇದು ರಕ್ತದ ಗ್ಲೂಕೋಸ್ ಮಟ್ಟ ಕಡಿಮೆ ಮಾಡುತ್ತದೆ ಮತ್ತು ಮಧುಮೇಹ ನಿಯಂತ್ರಿಸುತ್ತದೆ. ಒಂದು ಚಮಚ ಅರಿಶಿನ, ಖಾಲಿ ಹೊಟ್ಟೆ ಅಥವಾ ಊಟಕ್ಕೆ ಒಂದು ಗಂಟೆ ಮೊದಲು ಒಂದು ಕರಿಮೆಣಸು ನುಣ್ಣಗೆ ಪುಡಿಮಾಡಿ ಸೇವಿಸಿ.


    ದಾಲ್ಚಿನ್ನಿ


    ಮಧುಮೇಹ ನಿಯಂತ್ರಣದಲ್ಲಿಡುತ್ತದೆ. ಮಧುಮೇಹಿಗಳು ದಾಲ್ಚಿನ್ನಿಯನ್ನು ತಮ್ಮ ಆಹಾರದಲ್ಲಿ ಸೇರಿಸಿ. ಇದು ಮಧುಮೇಹ ವಿರೋಧಿ ಗುಣ ಹೊಂದಿದೆ. ಚಮಚ ದಾಲ್ಚಿನ್ನಿ ಪುಡಿ, ಅರ್ಧ ಚಮಚ ಅರಿಶಿನ ಮತ್ತು ಅರ್ಧ ಚಮಚ ಮೆಂತ್ಯ ಪುಡಿ ಮಿಶ್ರಣ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಗಿಡಮೂಲಿಕೆ ಚಹಾಕ್ಕೆ ಸಣ್ಣ ತುಂಡು ದಾಲ್ಚಿನ್ನಿ ಸೇರಿಸಿ ಕುಡಿಯಿರಿ.


    ನಿಶಾ-ಅಮಲಕಿ


    ನಿಶಾ ಅಂದ್ರೆ ಅರಿಶಿನ ಮತ್ತು ಅಮಲಕಿ ಆಮ್ಲಾ ಸಂಯೋಜನೆಯನ್ನು ಮಧುಮೇಹದ ಚಿಕಿತ್ಸೆಗಾಗಿ ಆಯುರ್ವೇದ ವೈದ್ಯರು ನೀಡುತ್ತಾರೆ. ಇದು ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಶಕ್ತಿ ನೀಡುತ್ತದೆ. ಕಫವನ್ನು ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮತ್ತು ಮಧುಮೇಹದ ತೊಡಕು ತಡೆಯುತ್ತದೆ. ಸಮಾನ ಪ್ರಮಾಣದಲ್ಲಿ ಅರಿಶಿನ ಮತ್ತು ಆಮ್ಲಾ ಪುಡಿ ಮಿಶ್ರಣ ಮಾಡಿ. ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸಿ.


    ಇದನ್ನೂ ಓದಿ: ಪೇರಳೆ ಹಣ್ಣಿನ ಪಾನಿಪುರಿ ತಿಂದಿದ್ದೀರಾ? ಇಲ್ಲಿದೆ ರೆಸಿಪಿ ಟ್ರೈ ಮಾಡಿ!


    ಶುಂಠಿ


    ಶುಂಠಿ ಹೆಚ್ಚಿದ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇನ್ಸುಲಿನ್ ಚಟುವಟಿಕೆ ಹೆಚ್ಚಿಸುತ್ತದೆ. ಮಧುಮೇಹ ವಿರೋಧಿ, ಹೈಪೋಲಿಪಿಡೆಮಿಕ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಊಟಕ್ಕೆ ಒಂದು ಗಂಟೆ ಮೊದಲು ಅಥವಾ ನಂತರ ಶುಂಠಿ ಚಹಾದ ರೂಪದಲ್ಲಿ ಸೇವಿಸಿ. ಮೆಂತ್ಯ ಪುಡಿ, ಕರಿಮೆಣಸು ಪುಡಿ, ದಾಲ್ಚಿನ್ನಿ ಮತ್ತು ಒಣ ಶುಂಠಿ, ನಿಶಾ-ಅಮಲಕಿ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

    Published by:renukadariyannavar
    First published: