ನಾವೆಲ್ಲರೂ ಮಾರುಕಟ್ಟೆಗೆ (Market) ಹೋದ್ರೆ ವಿವಿಧ ರೀತಿಯ ತಾಜಾ ತರಕಾರಿಗಳನ್ನ (Fresh Vegetables) ಹುಡುಕುತ್ತೇವೆ. ತಾಜಾ ತರಕಾರಿ ಇರದೇ ಹೋದ್ರೆ, ತುಂಬಾ ಚೌಕಾಸಿ ಮಾಡಿ, ತರಕಾರಿಯವರ ಹತ್ತಿರ ಯಾಕೆ ಫ್ರೆಶ್ ತರಕಾರಿ ತಂದಿಲ್ಲ ಅಂತಾ ಕೇಳ್ತೀವಿ. ಇದೆಲ್ಲಾ ಜನಸಾಮಾನ್ಯರ ಬದುಕಿನಲ್ಲಿ ದಿನವೂ (Daily) ನಡೆಯುವ ಪ್ರಕ್ರಿಯೆ. ಅದಾಗ್ಯೂ ಫ್ರೆಶ್ ತರಕಾರಿಗಳನ್ನು ತಂದು ಆರೋಗ್ಯಕರ (Healthy) ರೀತಿಯಲ್ಲಿ ಅಡುಗೆ ಮಾಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಘನೀಕರಿಸಿ ಅಂದ್ರೆ ಪ್ಲಾಸ್ಟಿಕ್ ನಲ್ಲಿ ಹಾಕಿಟ್ಟು ಫ್ರೀಜರ್ ಹೆಪ್ಪುಗಟ್ಟಿಸಿದ್ದನ್ನು ನೋಡಿರಬಹುದು. ಅವುಗಳನ್ನ ಮನೆಗೆ ತಂದು ತಿಂದಿರಬಹುದು.
ಹೆಪ್ಪುಗಟ್ಟಿದ ಆಹಾರ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
ಆದರೆ ಹೀಗೆ ಪ್ಯಾಕ್ ಮಾಡಿದ ಹೆಪ್ಪುಗಟ್ಟಿದ ಆಹಾರ ಸೇವನೆ ಮಾಡುವುದು ತುಂಬಾ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ತುಂಬಾ ದಿನಗಳಿಂದ ಪ್ಯಾಕ್ ಮಾಡಿ, ಫ್ರೀಜರ್ ನಲ್ಲಿರಿಸಿದ ಫುಡ್ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಇವುಗಳ ದೀರ್ಘಕಾಲದ ಬಳಕೆ ಆರೋಗ್ಯ ಹದಗೆಡಿಸುತ್ತದೆ.
ಘನೀಕೃತ ಆಹಾರಗಳು ಈಗ ಎಲ್ಲ ಕಡೆ ಕಂಡು ಬರುತ್ತವೆ. ಇವುಗಳನ್ನು ಫ್ರೋಜನ್ ಫುಡ್ ಎಂದು ಕರೆಯುತ್ತಾರೆ. ಹೆಪ್ಪುಗಟ್ಟಿದ ಆಹಾರಗಳು ವಿವಿಧ ರೀತಿಯಲ್ಲಿ ಲಭ್ಯ ಇವೆ. ಬೇಯಿಸಿದ ಕಾರ್ನ್, ಪನೀರ್, ಸೂಪ್, ಕ್ಯಾರೆಟ್, ಮಾಂಸ, ಮೀನು, ಕರಿದ ತಿಂಡಿಗಳು ಹೀಗೆ ಹಲವು ಪದಾರ್ಥಗಳನ್ನು ತಿನ್ನಲು ರೆಡಿ ಮಾಡಿ ಪ್ಯಾಕ್ ಮಾಡಿ ಇಟ್ಟಿರುತ್ತಾರೆ.
ಫ್ರೋಜನ್ ಫುಡ್ಸ್ ಆರೋಗ್ಯಕ್ಕೆ ವಿಷ
ಫ್ರೋಜನ್ ಫುಡ್ಸ್ ಯಾವುದೇ ಕಾರಣದಿಂದಲೂ ಆರೋಗ್ಯಕ್ಕೆ ಉತ್ತಮವಲ್ಲ ಎಂಬುದು ತಜ್ಞರ ಸೂಚನೆಯಾಗಿದೆ. ಹೊಸದಾಗಿ, ಮನೆಯಲ್ಲೇ ಫ್ರೆಶ್ ತರಕಾರಿಗಳು, ಮಾಂಸ, ಮೀನು ತಂದು ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಆದರೆ ಈ ಫ್ರೋಜನ್ ಫುಡ್ಸ್ ಸೇವನೆ ಹಲವು ಕಾಯಿಲೆಗಳು ಬೇಗ ದೇಹ ಸೇರಲು ಕಾರಣವಾಗುತ್ತವೆ.
ಕೆಲವರು ಮನೆಗೆ ಹೋಗಿ ಆಹಾರ ಬೇಯಿಸಿ ತಿನ್ನಲು ಬೇಸರ ಮಾಡಿಕೊಳ್ತಾರೆ. ಹೀಗಾಗಿ ಮನೆಗೆ ಹೋಗುವಾಗ ಹೆಪ್ಪುಗಟ್ಟಿದ ತಮಗಿಷ್ಟದ ರೆಡಿ ಮೇಡ್ ಫುಡ್ ನ್ನು ತೆಗೆದುಕೊಂಡು ಹೋಗಿ ಸೇವಿಸುತ್ತಾರೆ. ಹೀಗೆ ಫ್ರೋಜನ್ ಫುಡ್ಸ್ ನ್ನು ಸೇವಿಸುವುದು ವಿಷ ಸೇವಿಸಿದಂತೆ ಅಂತಾರೆ ತಜ್ಞರು.
ದೇಹದ ಪ್ರತಿ ರಕ್ತನಾಳಕ್ಕೆ ಹಾನಿ ಮಾಡುತ್ತದೆ ಫ್ರೋಜನ್ ಫುಡ್
ಎಷ್ಟೋ ಜನರು ಮಾರುಕಟ್ಟೆಯಿಂದ ತಂದು ಫ್ರೋಜನ್ ಫುಡ್ ಎಂಬ ವಿಷವನ್ನು ನೇರವಾಗಿ ಮನೆಯಲ್ಲಿ ಫ್ರಿಡ್ಜ್ ನಲ್ಲಿಟ್ಟು ನಂತರ ನಿರ್ಭಯವಾಗಿ ತಿನ್ನುತ್ತಾರೆ. ಆದರೆ ಈ ವಿಷವು ದೇಹದ ಪ್ರತಿಯೊಂದು ರಕ್ತನಾಳವನ್ನು ನಿಧಾನವಾಗಿ ಹಾಳು ಮಾಡುತ್ತದೆ.
ಫ್ರಿಡ್ಜ್ ನಲ್ಲಿರುವ ಫ್ರೋಜನ್ ಫುಡ್ ವಿಷ ಅಂತಾರೆ ಆರೋಗ್ಯ ತಜ್ಞರು. ಫ್ರಿಡ್ಜ್ ನಲ್ಲಿ ಫ್ರೋಜನ್ ಮಾಂಸ, ಹೆಪ್ಪುಗಟ್ಟಿದ ಅವರೆಕಾಳು ಅಥವಾ ಹೆಪ್ಪುಗಟ್ಟಿದ ತರಕಾರಿ ಇದ್ದರೆ ಮೊದಲು ಮನೆಯಿಂದ ಹೊರಹಾಕಿ.
ಅಧಿಕ ರಕ್ತದೊತ್ತಡ ಸಮಸ್ಯೆ
ಸುಮಾರು 70 ಪ್ರತಿಶತ ಸೋಡಿಯಂ ಹೊಂದಿರುವ ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಿದ ಹೆಪ್ಪುಗಟ್ಟಿದ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕರ. ಇವುಗಳ ಅಧಿಕ ಪ್ರಮಾಣದ ಸೇವನೆ ರಕ್ತದೊತ್ತಡ ಅಪಾಯ ಮತ್ತು ಪಾರ್ಶ್ವವಾಯು ಮತ್ತು ಹೃದ್ರೋಗ ಹೆಚ್ಚಿಸುತ್ತದೆ.
ನರಗಳಿಗೆ ಹಾನಿ ಉಂಟು ಮಾಡುತ್ತದೆ
ಘನೀಕೃತ ಪಿಜ್ಜಾ, ಬರ್ಗರ್ ನಲ್ಲಿ ಹೈಡ್ರೋಜನೀಕರಿಸಿದ ತೈಲವಿರುತ್ತದೆ. ಇದು ಪ್ರತಿ ನರವನ್ನು ಹಾನಿ ಮಾಡುತ್ತದೆ. ಹೆಪ್ಪುಗಟ್ಟಿದ ಆಹಾರವನ್ನು ಘನ ಮತ್ತು ಗಟ್ಟಿಯಾಗಿ ಮಾಡಲು ಈ ಎಣ್ಣೆ ಬಳಸ್ತಾರೆ. ಈ ತೈಲವು ಟ್ರಾನ್ಸ್ ಕೊಬ್ಬು ಹೊಂದಿರುತ್ತದೆ. ರಕ್ತನಾಳಕ್ಕೆ ಹಾನಿ ಮಾಡುತ್ತದೆ.
ಆಗಾಗ್ಗೆ ತಲೆನೋವು ಬರುತ್ತದೆ
ಫ್ರೋಜನ್ ಫುಡ್ ನಲ್ಲಿ ಎಂಎಸ್ ಜಿ ಎನ್ನುವ ಮೊನೊಸೋಡಿಯಂ ಗ್ಲುಟಮೇಟ್ ಇದೆ. ಇದು ಚೈನೀಸ್ ಆಹಾರದಲ್ಲಿ ಇರುತ್ತದೆ. ಎಂಎಸ್ಜಿ ಸೇವನೆ ತಲೆನೋವು, ಬೆವರು, ಹೊಟ್ಟೆ ನೋವಿನ ಸಮಸ್ಯೆ ಉಂಟು ಮಾಡುತ್ತದೆ.
ಇದನ್ನೂ ಓದಿ: ತೂಕ ನಷ್ಟಕ್ಕೆ ಇವುಗಳ ಜ್ಯೂಸ್ ಮಾಡಿ ಸೇವಿಸಿ!
ಸ್ನಾಯುಗಳಿಗೆ ಹಾನಿ
ಫ್ರೋಜನ್ ಫುಡ್ ಯಾವುದೇ ಜೀವಸತ್ವ ಮತ್ತು ಖನಿಜ ಹೊಂದಿರುವುದಿಲ್ಲ. ಇದು ಸ್ನಾಯುಗಳ ಹಾನಿಗೆ ಕಾರಣವಾಗುತ್ತದೆ. ಮಾನಸಿಕವಾಗಿ ವ್ಯಕ್ತಿಯ ಮನಸ್ಥಿತಿ ಹಾಳು ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ