• Home
  • »
  • News
  • »
  • lifestyle
  • »
  • Weight Loss: ತೂಕ ಇಳಿಕೆಗೆ ಡಾರ್ಕ್ ಚಾಕೊಲೇಟ್ ಸಹಕಾರಿಯೇ? ಇಲ್ಲಿದೆ ಮಾಹಿತಿ

Weight Loss: ತೂಕ ಇಳಿಕೆಗೆ ಡಾರ್ಕ್ ಚಾಕೊಲೇಟ್ ಸಹಕಾರಿಯೇ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಾರ್ಕ್ ಚಾಕೋಲೇಟ್ ತಿನ್ನುವುದು ತೂಕ ಇಳಿಕೆಗೆ ಸಹಾಯ ಮಾಡುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಡಾರ್ಕ್ ಚಾಕೊಲೇಟ್ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಫ್ಲೇವನಾಯ್ಡ್ ಹೊಂದಿದೆ. ಇದು ಉತ್ತಮ ಪ್ರಮಾಣದ ಫೈಬರ್ ಹೊಂದಿದೆ. ಹೀಗಾಗಿ ಹಸಿವು ಕಡಿಮೆ ಆಗುತ್ತದೆ.

  • Share this:

    ಮನುಷ್ಯನಿಗೆ (Human) ಸಾಮಾನ್ಯವಾಗಿ ಸಿಹಿ ಪದಾರ್ಥ (Sweet Ingredients) ತಿನ್ನುವ ಬಯಕೆ ಆಗಾಗ ಉಂಟಾಗುತ್ತದೆ. ಕೆಲವರು ದಿನವೂ (Daily) ಸಿಹಿ ಪದಾರ್ಥ ತಿನ್ನುತ್ತಾರೆ. ಇನ್ನು ಕೆಲವರಿಗೆ ಚಾಕೋಲೇಟ್ (Chocolate) ಅಂದ್ರೆ ತುಂಬಾ ಇಷ್ಟ. ಕೆಲಸ ಮಾಡುವಾಗ, ಖಾಲಿ ಕುಳಿತಾಗ ಹೀಗೆ ಚಾಕೋಲೇಟ್ ತಿನ್ನುತ್ತಲೇ ಇರುತ್ತಾರೆ. ಇನ್ನು ಕೆಲವರು ರಸಗುಲ್ಲಾ, ಗುಲಾಬ್ ಜಾಮೂನ್, ಪೇಡಾ, ಪೇಸ್ಟ್ರಿ ಇನ್ನು ಮನೆಯಲ್ಲಿ (Home) ಮಾಡಿದ ಪಾಯಸ, ಹೋಳಿಗೆ ತಿನ್ನುತ್ತಾರೆ. ಹೀಗೆ ಸಿಹಿ ಪದಾರ್ಥ ತಿನ್ನುವ ಕ್ರೇವಿಂಗ್ ನಿಮ್ಮ ತೂಕವನ್ನು ಹೆಚ್ಚಿಸಿರಬಹುದು ಅಥವಾ ಹೆಚ್ಚಿಸುತ್ತಾ ಇರಬಹುದು. ನಿಮಗೆ ಸಿಹಿ ತಿನ್ನುವುದನ್ನು ಬಿಡಲು ಮನಸ್ಸಿಲ್ಲ, ಜೊತೆಗೆ ತೂಕವನ್ನೂ ಇಳಿಸಬೇಕು (Weight Loss) ಎಂಬ ಇಕ್ಕಟ್ಟಿನ ಸ್ಥಿತಿ ನಿಮ್ಮದಾಗಿರುತ್ತದೆ.  


    ಡಾರ್ಕ್ ಚಾಕೋಲೇಟ್ ಮತ್ತು ತೂಕ ಇಳಿಕೆ


    ಅದಾಗ್ಯೂ ಡಾರ್ಕ್ ಚಾಕೋಲೇಟ್ ತಿನ್ನುವುದು ತೂಕ ಇಳಿಕೆಗೆ ಸಹಾಯ ಮಾಡುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಪಿರಿಯಡ್ಸ್ ಸಮಯದಲ್ಲಿ ಸಕ್ಕರೆ ಅಥವಾ ಸಿಹಿ ತಿನ್ನುವ ಬಯಕೆ ಆದಾಗ, ಮೂಡ್ ಸ್ವಿಂಗ್ ಇದ್ದಾಗ ಚಾಕೊಲೇಟ್ ತಿನ್ನಬೇಕು. ಅದರಲ್ಲೂ ಡಾರ್ಕ್ ಚಾಕೊಲೇಟ್ ತಿನ್ನಬೇಕು ಅನ್ನಿಸುತ್ತದೆ. ಅಂದ ಹಾಗೇ ಡಾರ್ಕ್ ಚಾಕೋಲೇಟ್ ಉತ್ತಮ ಭಾವನೆ ನೀಡುತ್ತದೆ ಎಂದು ಹೇಳಲಾಗುತ್ತದೆ.


    ಅದಾಗ್ಯೂ ನೀವು ತೂಕ ಇಳಿಸುವ ಯೋಜನೆ ಮತ್ತು ಡಯಟ್ ನಲ್ಲಿದ್ದರೆ ಡಾರ್ಕ್ ಚಾಕೋಲೇಟ್ ತಿನ್ನುವುದು ಸರಿಯೇ, ತೂಕ ಹೆಚ್ಚಾಗುತ್ತದೆಯೇ? ಅಥವಾ ತೂಕ ಇಳಿಸಲು ಸಹಕಾರಿಯೇ ಎಂಬ ಹಲವು ಪ್ರಶ್ನೆಗಳು ಮೂಡುತ್ತವೆ. ಹಾಗಾದ್ರೆ ತೂಕ ಇಳಿಕೆಗೆ ಮತ್ತು ಆರೋಗ್ಯಕ್ಕೆ ಡಾರ್ಕ್ ಚಾಕೋಲೇಟ್ ಹೇಗೆ ಸಹಕಾರಿ ಮತ್ತು ಒಂದು ದಿನದಲ್ಲಿ ಎಷ್ಟು ಡಾರ್ಕ್ ಚಾಕೊಲೇಟ್ ತಿನ್ನುವುದು ಸರಿ ಎಂದು ತಿಳಿಯೋಣ.


    ಡಾರ್ಕ್ ಚಾಕೊಲೇಟ್ ಸೇವನೆಯ ಪ್ರಯೋಜನಗಳು


    ಅಧಿಕ ಬಿಪಿ ರೋಗಿಗಳಿಗೆ ಪ್ರಯೋಜನಕಾರಿ


    ಎನ್ ಸಿಬಿಐ ನಡೆಸಿದ ಸಂಶೋಧನೆ ಪ್ರಕಾರ, ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲೇವನಾಯ್ಡ್‌ಗಳು ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ ಎಂದು ಹೇಳಲಾಗಿದೆ. ಡಾರ್ಕ್ ಚಾಕೊಲೇಟ್ ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


    ಹೃದಯದ ಆರೋಗ್ಯ ಕಾಪಾಡುತ್ತದೆ


    ಡಾರ್ಕ್ ಚಾಕೊಲೇಟ್ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟ್‌ ಹೊಂದಿದೆ. ಡಾರ್ಕ್ ಚಾಕೋಲೇಟ್ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಆಗಿದೆ. ಇದು ರಕ್ತದೊತ್ತಡ ನಿಯಂತ್ರಿಸುತ್ತದೆ. ಮೆಗ್ನೀಸಿಯಮ್, ಮ್ಯಾಂಗನೀಸ್, ತಾಮ್ರ, ಸತು ಮತ್ತು ಕಬ್ಬಿಣದಿಂದ ಕೂಡಿದ್ದು, ಪ್ರಯೋಜನ ನೀಡುತ್ತದೆ.


    ಒತ್ತಡ ಕಡಿಮೆ ಮಾಡುತ್ತದೆ


    ಡಾರ್ಕ್ ಚಾಕೊಲೇಟ್ ತಿಂದರೆ ಒತ್ತಡದ ಮಟ್ಟ ಕಡಿಮೆ ಆಗುತ್ತದೆ. ಮೆದುಳಿನ ಒಳಗೆ ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ನಿಮಗೆ ವಿಶ್ರಾಂತಿ ಮತ್ತು ಶಾಂತತೆ ಭಾವನೆ ನೀಡುತ್ತದೆ.


    ತೂಕ ಇಳಿಕೆಗೆ ಡಾರ್ಕ್ ಚಾಕೊಲೇಟ್ ಸಹಕಾರಿಯೇ?


    ಡಾರ್ಕ್ ಚಾಕೊಲೇಟ್ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಫ್ಲೇವನಾಯ್ಡ್ ಹೊಂದಿದೆ. ಇದು ಉತ್ತಮ ಪ್ರಮಾಣದ ಫೈಬರ್ ಹೊಂದಿದೆ. ಹೀಗಾಗಿ ಹಸಿವು ಕಡಿಮೆ ಆಗುತ್ತದೆ. ತಿನ್ನುವ ಬಯಕೆ ಕಡಿಮೆಯಾಗಿ, ದೀರ್ಘಕಾಲ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಹೆಚ್ಚುತ್ತಿರುವ ಒತ್ತಡದ ಮಟ್ಟಗಳು ಸಹ ತೂಕ ಹೆಚ್ಚಿಸುತ್ತವೆ. ಹಾಗಾಗಿ ದಿನವಿಡೀ ಸಿಕ್ಕಾಪಟ್ಟೆ ಡಾರ್ಕ್ ಚಾಕೋಲೇಟ್ ತಿನ್ನಬೇಡಿ. ಮಿತ ಪ್ರಮಾಣದಲ್ಲಿ ಸೇವಿಸಬೇಕು.


    ಡಾ. ಅಂಜಲಿ ಹೂಡಾ ಪ್ರಕಾರ, ಡಾರ್ಕ್ ಚಾಕೋಲೇಟ್ ಸೇವನೆ ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲಎನ್ನುತ್ತಾರೆ. ಹಾಗಾಗಿ ತೂಕ ನಷ್ಟ ಪ್ರಯಾಣದಲ್ಲಿ ನೀವು ಅದನ್ನು ಮಿತವಾಗಿ ಸೇವಿಸಿ. ತೂಕ ನಷ್ಟಕ್ಕೆ ನೀವು ಅದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾದರೆ ಹಾನಿ ಉಂಟಾಗುತ್ತದೆ.


    ಇದನ್ನೂ ಓದಿ: ಹೂಕೋಸು ತಿನ್ನೋ ಮುನ್ನ ಎಚ್ಚರ, ಈ ಸಮಸ್ಯೆಗಳಿದ್ರೆ ಇದನ್ನು ತಿನ್ನೋದು ಅಪಾಯಕಾರಿ


    ಒಂದು ದಿನದಲ್ಲಿ ಎಷ್ಟು ಡಾರ್ಕ್ ಚಾಕೊಲೇಟ್ ಸೇವಿಸಬೇಕು?


    ಡಾರ್ಕ್ ಚಾಕೊಲೇಟ್ ನ್ನು ಕನಿಷ್ಠ 70 ಪ್ರತಿಶತ ಮಿತವಾಗಿ ಸೇವಿಸಬೇಕು. ದಿನಕ್ಕೆ 20 ರಿಂದ 30 ಗ್ರಾಂ ಡಾರ್ಕ್ ಚಾಕೊಲೇಟ್ ಸೇವಿಸುವುದು ಉತ್ತಮ. ಕೆಫೀನ್ ತಲೆನೋವಿಗೆ ಕಾರಣವಾಗುತ್ತದೆ. ಮಿತವಾಗಿ ತಿನ್ನಿ.

    Published by:renukadariyannavar
    First published: