Diabetes Problem: ಊಟಕ್ಕೂ ಮೊದಲು ಹಾಲೊಡಕು ಪ್ರೊಟೀನ್ ಸೇವಿಸುವುದು ಮಧುಮೇಹಿಗಳಿಗೆ ಪ್ರಯೋಜನಕಾರಿ ಅಂತಿದೆ ಈ ಅಧ್ಯಯನ!

ಹಾಲೊಡಕು ಪ್ರೋಟೀನ್ ಸೇವನೆ ಮಾಡಿದ ನಂತರ ಏರುತ್ತಿರುವ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಬಹುದು ಎಂದು ಅಧ್ಯಯನ ಕಂಡು ಹಿಡಿದಿದೆ. ಊಟಕ್ಕೆ ಮೊದಲು ಹಾಲೊಡಕು ಪ್ರೋಟೀನ್‌ ಕುಡಿಯುವುದು ಹೈಪೊಗ್ಲಿಸಿಮಿಯಾ ಅಪಾಯ ಕಡಿಮೆ ಮಾಡುತ್ತದೆ. ಇದು ದೈನಂದಿನ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಧುಮೇಹ ಸಮಸ್ಯೆ (Diabetes Problem) ಜೀವನದುದ್ದಕ್ಕೂ (Lifelong) ಕಾಡುತ್ತದೆ. ಅದಾಗ್ಯೂ ಅದನ್ನು ಒಳ್ಳೆಯ ಆಹಾರ ಪದ್ಧತಿ (Food) ಮತ್ತು ಜೀವನಶೈಲಿ (Lifestyle) ಹಾಗೂ ಚಟುವಟಿಕೆಗಳ ಮೂಲಕ ನಿಯಂತ್ರಿಸಬಹುದು. ಮಧುಮೇಹ ರೋಗಿಗಳಲ್ಲಿ ದೇಹದ ರಕ್ತದ ಸಕ್ಕರೆಯ ಪ್ರಮಾಣವು ಬಹಳ ವೇಗವಾಗಿ ಹೆಚ್ಚಾಗುತ್ತದೆ. ಮಧುಮೇಹವನ್ನು ನಿಯಂತ್ರಿಸಲು ರಕ್ತದ ಸಕ್ಕರೆ ಮಟ್ಟ ಕಾಪಾಡಿಕೊಳ್ಳುವುದು ತುಂಬಾ ಅತ್ಯವಶ್ಯಕ. ಇತ್ತೀಚೆಗೆ ವಿಜ್ಞಾನಿಗಳು ಮಧುಮೇಹದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇದು ಟೈಪ್ 2 ಡಯಾಬಿಟಿಸ್ ಹೊಂದಿರುವ ರೋಗಿಗಳಿಗೆ ಸಂಬಂಧಪಟ್ಟಿದೆ. ಆಹಾರ ತಿನ್ನುವ 10 ನಿಮಿಷಗಳ ಮೊದಲು ಹಾಲೊಡಕು ಪ್ರೋಟೀನ್ ಸೇವನೆ ಮಾಡುವುದು ಮಧುಮೇಹಿಗಳಿಗೆ ಉತ್ತಮವಾಗಿದೆ ಎಂದು ಅಧ್ಯಯನ ತಿಳಿಸಿದೆ.

    ಹಾಲೊಡಕು ಪ್ರೋಟೀನ್ ಸೇವನೆ

    ಹಾಲೊಡಕು ಪ್ರೊಟೀನ್ ಸೇವನೆ ಮಾಡಿದ ನಂತರ ಏರುತ್ತಿರುವ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಬಹುದು ಎಂದು ಅಧ್ಯಯನ ಕಂಡು ಹಿಡಿದಿದೆ. ಊಟಕ್ಕೆ ಮೊದಲು ಹಾಲೊಡಕು ಪ್ರೊಟೀನ್‌ ಕುಡಿಯುವುದು ಹೈಪೊಗ್ಲಿಸಿಮಿಯಾ ಅಪಾಯ ಕಡಿಮೆ ಮಾಡುತ್ತದೆ. ಇದು ದೈನಂದಿನ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

    ಟೈಪ್ 2 ಡಯಾಬಿಟಿಸ್ ಹೊಂದಿರುವವರಿಗೆ ಹಾಲೊಡಕು ಪ್ರೊಟೀನ್

    ಈ ಅಧ್ಯಯನದಲ್ಲಿ ಟೈಪ್ 2 ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುವ 18 ಜನರು ಭಾಗಿಯಾಗಿದ್ದರು. ಈ ಎಲ್ಲಾ ಜನರಿಗೆ ಒಂದು ವಾರದವರೆಗೆ ತಿನ್ನುವ ಮೊದಲು ಹಾಲೊಡಕು ಪ್ರೊಟೀನ್ ನ್ನು ನೀಡಲಾಯಿತು. ಅಧ್ಯಯನದ ವೇಳೆ, ಊಟಕ್ಕೆ ಮೊದಲು ಹಾಲೊಡಕು ಪ್ರೊಟೀನ್ ಕುಡಿಯುವುದು ರಕ್ತದ ಸಕ್ಕರೆಯನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸುತ್ತದೆ ಎಂದು ಎಲ್ಲಾ ಜನರು ಅನುಭವ ಹೊಂದಿದ್ದಾರೆ.

    ಇದನ್ನೂ ಓದಿ: ಸಿಗರೇಟ್, ತಂಬಾಕು ಸೇವನೆ ಮಾಡುವವರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ! ತಜ್ಞರು ಹೇಳೋದೇನು?

    ಓಹಿಯೋದ ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಡಯಾನಾ ಐಸಾಕ್ಸ್ ಮೆಡಿಕಲ್ ನ್ಯೂಸ್ ಟುಡೇಗೆ ಹೇಳಿರುವ ಪ್ರಕಾರ, ಹಾಲೊಡಕು ಪ್ರೊಟೀನ್ ಸೇವಿಸುವ ಮೂಲಕ ಜನರ ರಕ್ತದ ಸಕ್ಕರೆ ಮಟ್ಟವನ್ನು ಏಳು ದಿನಗಳವರೆಗೆ ಆರೋಗ್ಯಕರ ಮಟ್ಟದಲ್ಲಿ ನಿರ್ವಹಿಸಿದರೆ, ಅದು ಮಧುಮೇಹಕ್ಕೆ ಸಂಬಂಧಿಸಿದ ಕಣ್ಣು, ಮೂತ್ರಪಿಂಡ ಮತ್ತು ನರಮಂಡಲದ ತೊಂದರೆಗೆ ಕಾರಣವಾಗಬಹುದು. ಸಮಸ್ಯೆಗಳ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಅದರ ಪ್ರಯೋಜನ ದೃಢೀಕರಿಸಲು ಇನ್ನೂ ಅನೇಕ ಪ್ರಯೋಗಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

    ಟೈಪ್ 2 ಮಧುಮೇಹ ಎಂದರೇನು?

    ಮಧುಮೇಹದಲ್ಲಿ ಎರಡು ವಿಧಗಳಿವೆ. ಟೈಪ್ 1 ಮತ್ತು ಟೈಪ್ 2. ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಿದಾಗ ಟೈಪ್ 2 ಮಧುಮೇಹ ಉಂಟಾಗುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದೆ. ಅದು ರಕ್ತದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಆದರೆ ಟೈಪ್ 1 ಮಧುಮೇಹದಲ್ಲಿ, ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ.

    ಟೈಪ್ 2 ಡಯಾಬಿಟಿಸ್‌ನಲ್ಲಿ, ಇನ್ಸುಲಿನ್ ಕಡಿಮೆ ಉತ್ಪಾದನೆ ಆಗುವುದರಿಂದ ರಕ್ತದ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಇದು ವ್ಯಕ್ತಿಯ ನರಗಳು, ಕಣ್ಣುಗಳು, ಹೃದಯ ಮತ್ತು ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುವ ಅಪಾಯವಿದೆ. ಟೈಪ್ 2 ಮಧುಮೇಹ ನಿಯಂತ್ರಿಸಬಹುದು ಎಂದು ಡಾ ಐಸಾಕ್ ಹೇಳಿದರು.

    ಆದಾಗ್ಯೂ ಇದಕ್ಕಾಗಿ ನಿಮಗೆ ಸಾಕಷ್ಟು ಶ್ರಮ ಮತ್ತು ದುಬಾರಿ ಔಷಧ ಅಗತ್ಯವಿದೆ. ಗ್ಲೂಕೋಸ್ ಮಟ್ಟ ನಿಯಂತ್ರಿಸಲು ಕೇವಲ ಮೌಖಿಕ ಔಷಧಿ ಸಾಕಾಗುವುದಿಲ್ಲ ಎಂದು ಅವರು ಹೇಳಿದರು.

    ನಿಜ ಜೀವನದಲ್ಲಿ, ಸೂಕ್ಷ್ಮ ಪೋಷಕಾಂಶಗಳನ್ನು ಪ್ರತ್ಯೇಕವಾಗಿ ತಿನ್ನುವುದು ತುಂಬಾ ಕಷ್ಟ. ಬುರ್ರಿಟೋ ತಿನ್ನುವಾಗ, ಅದರಲ್ಲಿ ಅನೇಕ ಪದಾರ್ಥಗಳನ್ನು ಬೆರೆಸುತ್ತಾರೆ. ಅದನ್ನು ತಿನ್ನುವ ಮೊದಲು ಪ್ರೊಟೀನ್ ಪಾನೀಯ ಸೇವಿಸಿದರೆ, ಅದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ   

    ಅಧ್ಯಯನದ ಸೂಚನೆ

    ಮಧುಮೇಹ ರೋಗಿಗಳ ಚಿಕಿತ್ಸಾ ಯೋಜನೆಯಲ್ಲಿ ಔಷಧ ಹೆಚ್ಚಿಸುವ ಬದಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಔಷಧಿಗಳ ಜೊತೆಗೆ ಅಡ್ಡ ಪರಿಣಾಮಗಳೂ ಇವೆ. ಹಾಗಾಗಿ ಜೀವನಶೈಲಿ ಬದಲಾಯಿಸುವ ಮೂಲಕ ಆರೋಗ್ಯ ಪ್ರಯೋಜನ ಪಡೆಯಬಹುದು. ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಉಪ್ಪು ಸೇವನೆ ಕಡಿಮೆ ಮಾಡಬೇಕು.
    Published by:renukadariyannavar
    First published: