Memory Power: ಜ್ಞಾಪಕ ಶಕ್ತಿ ಹೆಚ್ಚಳಕ್ಕೆ ಈ ಪದಾರ್ಥಗಳ ಸೇವನೆ ಬೆಸ್ಟ್ ಎನ್ನುತ್ತಾರೆ ತಜ್ಞರು

ಜಪಾನ್‌ನ ಸಂಶೋಧಕರು ಹೆಚ್ಚಿನ ಫೈಬರ್ ಆಹಾರ ಸೇವನೆ ಮಾಡುವುದರಿಂದ ಬುದ್ಧಿಮಾಂದ್ಯತೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ತೋರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಆಹಾರ (Food) ಕ್ರಮವು ನಿಮ್ಮ ದೈಹಿಕ ಯೋಗಕ್ಷೇಮವನ್ನು ವ್ಯಾಖ್ಯಾನಿಸುತ್ತದೆ. ಆದರೆ ನಿಮ್ಮ ಮಾನಸಿಕ (Mental) ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತಿದೆ..? ನಿಮ್ಮ ಮಾನಸಿಕ ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ! ಇತ್ತೀಚಿನ ಅಧ್ಯಯನದ ಪ್ರಕಾರ, ನಿಮ್ಮ ಆಹಾರದಲ್ಲಿ ಫೈಬರ್ ಭರಿತ ಆಹಾರಗಳನ್ನು ಸೇರಿಸುವುದರಿಂದ ನಿಮ್ಮ ಸ್ಮರಣೆ ಅಂದರೆ ಜ್ಞಾಪಕ ಶಕ್ತಿಯನ್ನು (Memory Power) ಹೆಚ್ಚಿಸಲು ಮತ್ತು ಸುಧಾರಿಸಲು, ಬುದ್ಧಿಮಾಂದ್ಯತೆಯಂತಹ ಭಯಾನಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ನ್ಯೂಟ್ರಿಷನಲ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಜಪಾನ್‌ನ ಸಂಶೋಧಕರು ಹೆಚ್ಚಿನ ಫೈಬರ್ (Fibre) ಆಹಾರ ಸೇವನೆ ಮಾಡುವುದರಿಂದ ಬುದ್ಧಿಮಾಂದ್ಯತೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ತೋರಿಸಿದೆ.

ನ್ಯೂಟ್ರಿಷನಲ್ ನ್ಯೂರೋಸೈನ್ಸ್ ಜರ್ನಲ್‌ ಅಧ್ಯಯನ

"ಬುದ್ಧಿಮಾಂದ್ಯತೆಯು ಸಾಮಾನ್ಯವಾಗಿ ದೀರ್ಘಾವಧಿಯ ಆರೈಕೆಯ ಅಗತ್ಯವಿರುವ ವಿನಾಶಕಾರಿ ಕಾಯಿಲೆಯಾಗಿದೆ" ಎಂದು ಅಧ್ಯಯನದ ಪ್ರಮುಖ ಲೇಖಕ ಪ್ರೊಫೆಸರ್ ಕಜುಮಾಸಾ ಯಮಗಿಶಿ ಹೇಳುತ್ತಾರೆ. "ನಾವು ಫೈಬರ್ ಆಹಾರದಿಂದ ಬುದ್ಧಿಮಾಂದ್ಯತೆ ತಡೆಯುವ ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸುವ ಸಂಶೋಧನೆಗಳಲ್ಲಿ ನಾವು ಆಸಕ್ತಿ ಹೊಂದಿದ್ದೆವು. 1980 ರ ದಶಕದಲ್ಲಿ ಪ್ರಾರಂಭವಾದ ದೊಡ್ಡ ಅಧ್ಯಯನಕ್ಕಾಗಿ ಜಪಾನ್‌ನಲ್ಲಿ ಸಾವಿರಾರು ವಯಸ್ಕರಿಂದ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಂಡು ನಾವು ಇದನ್ನು ತನಿಖೆ ಮಾಡಿದ್ದೇವೆ" ಎಂದಿದ್ದಾರೆ.

1985 ಮತ್ತು 1999 ರ ನಡುವೆ ತಮ್ಮ ಆಹಾರ ಸೇವನೆಯನ್ನು ನಿರ್ಣಯಿಸುವ ಸಮೀಕ್ಷೆಗಳನ್ನು ಪೂರ್ಣಗೊಳಿಸಿದ್ದಾಗಿ ತಿಳಿಸಿದ್ದಾರೆ. ಆರೋಗ್ಯವಂತರು ಮತ್ತು 40 ರಿಂದ 64 ವರ್ಷ ವಯಸ್ಸಿನವರಾಗಿದ್ದರು. ನಂತರ ಅವರನ್ನು 1999 ರಿಂದ 2020 ರವರೆಗೆ ನೋಡಿಕೊಂಡಾಗ ಆರೈಕೆಯ ಅಗತ್ಯ ಮತ್ತು ಬುದ್ಧಿಮಾಂದ್ಯತೆಯ ಹೆಚ್ಚಿದೆಯೇ ಎಂದು ಗಮನಿಸಲಾಯಿತು ಎಂದಿದ್ದಾರೆ.

ಇದನ್ನೂ ಓದಿ: ದೇಹದಲ್ಲಿ ಪ್ರೊಟೀನ್ ಕೊರತೆ ಉಂಟಾದ್ರೆ ಏನಾಗುತ್ತೆ ಗೊತ್ತಾ? ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತೆ

ಕರಗಬಲ್ಲ ಮತ್ತು ಕರಗದ ಫೈಬರ್‌ಗಳು

ಸಂಶೋಧಕರು ಒಟ್ಟು 3739 ವಯಸ್ಕರರ ಡೇಟಾವನ್ನು ಆಹಾರದಲ್ಲಿನ ಫೈಬರ್ ಪ್ರಮಾಣಕ್ಕೆ ಅನುಗುಣವಾಗಿ ನಾಲ್ಕು ಗುಂಪುಗಳಾಗಿ ವಿಭಜಿಸಿದ್ದಾರೆ. ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಸೇವಿಸುವ ಗುಂಪುಗಳು ಬುದ್ಧಿಮಾಂದ್ಯತೆಯನ್ನು ಅಭಿವೃದ್ಧಿಪಡಿಸುವ ಕಡಿಮೆ ಅಪಾಯವನ್ನು ಹೊಂದಿವೆ. ಎರಡು ಮುಖ್ಯ ವಿಧದ ಫೈಬರ್‌ಗಳ ನಡುವೆ ವ್ಯತ್ಯಾಸಗಳಿವೆಯೇ ಎಂದು ತಂಡ ಪರಿಶೀಲಿಸಿತು.

ಮುಖ್ಯ ವಿಧದ ಫೈಬರ್‌ಗಳೆಂದರೆ ಕರಗಬಲ್ಲ ಮತ್ತು ಕರಗದ ಫೈಬರ್‌ಗಳು. ಓಟ್ಸ್ ಮತ್ತು ದ್ವಿದಳ ಧಾನ್ಯಗಳಂತಹ ಆಹಾರಗಳಲ್ಲಿ ಕಂಡು ಬರುವ ಕರಗುವ ನಾರುಗಳು ಕರುಳಿನಲ್ಲಿ ವಾಸಿಸುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿಗೆ ಮತ್ತು ಇತರ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.

ಧಾನ್ಯಗಳು, ತರಕಾರಿಗಳು ಮತ್ತು ಇತರ ಕೆಲವು ಆಹಾರಗಳಲ್ಲಿ ಕಂಡುಬರುವ ಕರಗದ ನಾರುಗಳು ಕರುಳಿನ ಆರೋಗ್ಯಕ್ಕೆ ಮುಖ್ಯವೆಂದು ತಿಳಿದು ಬಂದಿದೆ. ಫೈಬರ್ ಸೇವನೆ ಮತ್ತು ಬುದ್ಧಿಮಾಂದ್ಯತೆಯ ನಡುವಿನ ಸಂಪರ್ಕವು ಕರಗುವ ಫೈಬರ್ಗಳಿಗೆ ಹೆಚ್ಚು ಸೂಕ್ತವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಆಹಾರದಲ್ಲಿನ ಫೈಬರ್ ಅಂಶ

"ಒಂದು ಸಾಧ್ಯತೆಯೆಂದರೆ ಕರಗುವ ಫೈಬರ್ ಕರುಳಿನ ಬ್ಯಾಕ್ಟೀರಿಯಾದ ಸಂಯೋಜನೆಯನ್ನು ನಿಯಂತ್ರಿಸುತ್ತದೆ. ಈ ಸಂಯೋಜನೆಯು ನ್ಯೂರೋಇನ್ಫ್ಲಾಮೇಶನ್ ಮೇಲೆ ಪರಿಣಾಮ ಬೀರಬಹುದು. ಇದು ಬುದ್ಧಿಮಾಂದ್ಯತೆಯ ಆಕ್ರಮಣದಲ್ಲಿ ಪಾತ್ರವನ್ನು ವಹಿಸುತ್ತದೆ. ಆಹಾರದಲ್ಲಿನ ಫೈಬರ್ ಅಂಶ ದೇಹದ ತೂಕ, ರಕ್ತದಂತಹ ಬುದ್ಧಿಮಾಂದ್ಯತೆಯ ಇತರ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ದಪ್ಪ ಆಗಿದ್ರೆ ಚಿಂತೆ ಬಿಡಿ, ಲವಂಗ ಚಹಾ ಟ್ರೈ ಮಾಡಿ

ಒತ್ತಡ, ಲಿಪಿಡ್‌ಗಳು ಮತ್ತು ಗ್ಲೂಕೋಸ್ ಮಟ್ಟಗಳ ಕೆಲಸವು ಇನ್ನೂ ಆರಂಭಿಕ ಹಂತದಲ್ಲಿದೆ. ಅನೇಕ ದೇಶಗಳಲ್ಲಿ, ಉದಾಹರಣೆಗೆ US ಮತ್ತು ಆಸ್ಟ್ರೇಲಿಯಾದಲ್ಲಿ, ಅನೇಕ ಜನರು ಪೌಷ್ಟಿಕತಜ್ಞರು ಶಿಫಾರಸು ಮಾಡುವುದಕ್ಕಿಂತ ಕಡಿಮೆ ಫೈಬರ್ ಅನ್ನು ಸೇವಿಸುತ್ತಾರೆ. ಹೆಚ್ಚಿನ ಫೈಬರ್‌ ಆಹಾರದ ಸೇವನೆ, ಆರೋಗ್ಯಕರ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸುವ ಮೂಲಕ, ಬುದ್ಧಿಮಾಂದ್ಯತೆ ಕಡಿಮೆ ಮಾಡುವ ಅಥವಾ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಬಹುದು.
Published by:renukadariyannavar
First published: