• Home
  • »
  • News
  • »
  • lifestyle
  • »
  • Blood Pressure: ಈ ಹಣ್ಣುಗಳನ್ನು ತಿಂದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುತ್ತಂತೆ!

Blood Pressure: ಈ ಹಣ್ಣುಗಳನ್ನು ತಿಂದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುತ್ತಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Blood Pressure: ಕೆಲವು ಹಣ್ಣುಗಳು ನಿಮ್ಮ ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತವೆ. ಆದರೆ ಈ ಹಣ್ಣುಗಳಲ್ಲಿ ಅನೇಕವು ತುಂಬಾನೇ ರುಚಿಕರವಾಗಿರುತ್ತದೆ.

  • Share this:

ಈಗಂತೂ ರಕ್ತದಲ್ಲಿ ಸಕ್ಕರೆ ಮಟ್ಟ ಜಾಸ್ತಿಯಾಗುವುದು, ಅಧಿಕ ರಕ್ತದೊತ್ತಡ , ರಕ್ತದಲ್ಲಿ ಕೊಲೆಸ್ಟ್ರಾಲ್ (Blood Cholesterol )ಮಟ್ಟ ಹೆಚ್ಚಾಗುವುದು ಅಂತ ಕೇಳಿದರೆ ಸಾಕು ಅನೇಕರಿಗೆ ಒಂದು ರೀತಿಯ ಭಯ ಕಾಡಲು ಶುರುವಾಗುತ್ತದೆ. ಮೇಲೆ ಹೇಳಿದ ಎಲ್ಲಾ ಅಸ್ವಸ್ಥತೆಗಳನ್ನು ಹಾಗೆಯೇ ಬಿಟ್ಟರೆ ಜೀವಕ್ಕೆ ಮಾರಕವಾಗಬಹುದು, ಕೆಲವೊಂದು ನಿಧಾನವಾಗಿ ನಮ್ಮ ಜೀವವನ್ನು ತೆಗೆದರೆ, ಇನ್ನೂ ಕೆಲವು ಬಹು ಬೇಗನೆ ನಮ್ಮ ದೇಹವನ್ನು ನಾಶ ಮಾಡುತ್ತವೆ. ಆದರೆ ಈ ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್ ಜಾಸ್ತಿಯಾಗುವುದು ಮತ್ತು ಬಿಪಿ (Blood Pressure) ಜಾಸ್ತಿಯಾಗುವುದನ್ನು ನಾವು ಉತ್ತಮವಾದ ಪೌಷ್ಟಿಕವಾದ ಆಹಾರವನ್ನು ಸೇವಿಸುವುದರಿಂದ ಮತ್ತು ನಿಯಮಿತ ವ್ಯಾಯಾಮ ಮಾಡುವುದರಿಂದ ನಿಯಂತ್ರಣದಲ್ಲಿರಿಸಿಕೊಳ್ಳಬಹುದು.


ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಏಕೆ ಜಾಸ್ತಿಯಾಗುತ್ತದೆ?:


ಈಗ ಅಧಿಕ ಕೊಲೆಸ್ಟ್ರಾಲ್ ಬಗ್ಗೆ ನೋಡುವುದಾದರೆ ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ನಮ್ಮ ಪಿತ್ತಜನಕಾಂಗದಿಂದ ಉತ್ಪತ್ತಿಯಾಗುತ್ತದೆ ಮತ್ತು ಇನ್ನುಳಿದ ಭಾಗವು ನಾವು ತಿನ್ನುವ ಆಹಾರದಿಂದ ಬರುತ್ತದೆ ಎಂದು ಹೇಳಲಾಗುತ್ತದೆ. ಕೊಲೆಸ್ಟ್ರಾಲ್ ನ ಕೆಟ್ಟ ಮತ್ತು ಅಪಾಯಕಾರಿ ರೂಪವನ್ನು ಕಡಿಮೆ ಸಾಂದ್ರತೆಯ ಲಿಪೋಪ್ರೊಟೀನ್ (ಎಲ್‌ಡಿಎಲ್) ಎಂದು ಕರೆಯಲಾಗುತ್ತದೆ. ಎಲ್‌ಡಿಎಲ್ ಕೊಲೆಸ್ಟ್ರಾಲ್ ನಿಮ್ಮ ಅಪಧಮನಿಗಳಲ್ಲಿ ಸಂಗ್ರಹವಾಗಬಹುದು ಮತ್ತು ಕೊಬ್ಬಿನ, ಮೇಣದಂತಹ ನಿಕ್ಷೇಪಗಳಾಗಿರುವ ಪ್ಲೇಕ್ ಗಳನ್ನು ಸೃಷ್ಟಿಸಬಹುದು.


ಮದ್ಯ ಸೇವನೆ, ಕೊಬ್ಬಿನಾಂಶವಿರುವ ಆಹಾರಗಳು ತಿನ್ನುವುದು ಮತ್ತು ಜಡ ಜೀವನಶೈಲಿಯನ್ನು ಅನುಸರಿಸುವುದೆಲ್ಲವೂ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳಿಗೆ ಕೊಡುಗೆ ನೀಡುತ್ತವೆ. ಇದು ಬೊಜ್ಜು, ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯವನ್ನು ಸಹ ಹೆಚ್ಚಿಸುತ್ತದೆ.


ಇದನ್ನೂ ಓದಿ: Cold Problem: ಚಳಿಗಾಲದ ಶೀತ ಮತ್ತು ಗಂಟಲು ನೋವಿಗೆ ಮನೆಯಲ್ಲೇ ಮಾಡಿ ಆಯುರ್ವೇದ ಕಷಾಯ


ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತೆ ಈ ಹಣ್ಣುಗಳು:


ಕೆಲವು ಹಣ್ಣುಗಳು ನಿಮ್ಮ ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತವೆ. ಆದರೆ ಈ ಹಣ್ಣುಗಳಲ್ಲಿ ಅನೇಕವು ತುಂಬಾನೇ ರುಚಿಕರವಾಗಿರುತ್ತದೆ. ಆದರೆ ಈ ರುಚಿಯಾದ ಹಣ್ಣುಗಳನ್ನು ನಿಮ್ಮ ನಿಯಮಿತ ಆಹಾರದಲ್ಲಿ ಸೇರಿಸಲು ಸರಳವಾಗಿರುತ್ತವೆ ಎಂಬ ಅಂಶವು ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು.


1. ಸೇಬು ಹಣ್ಣು


ಸೇಬು ಹಣ್ಣಿನಲ್ಲಿ ಪೆಕ್ಟಿನ್ ಅಂಶವು ಹೆಚ್ಚಾಗಿರುತ್ತದೆ ಮತ್ತು ಆದ್ದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉತ್ತಮ ಪರಿಹಾರವಾಗಿದೆ. ಪೆಕ್ಟಿನ್ ಒಂದು ರೀತಿಯ ಫೈಬರ್ ಆಗಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೇಬುಗಳಲ್ಲಿ ಪಾಲಿಫಿನಾಲ್ ಸಹ ಇರುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.


2. ಪಿಯರ್ಸ್ ಹಣ್ಣು


ಸೇಬಿನಂತೆಯೇ ಪಿಯರ್ಸ್ ಹಣ್ಣು ಕೂಡ ಕರಗುವ ನಾರಿನಂಶವನ್ನು ಹೊಂದಿರುತ್ತದೆ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.


3. ಬೆರ್ರಿ ಹಣ್ಣುಗಳು


ಋತುಮಾನದ ಬೆರ್ರಿ ಹಣ್ಣುಗಳಲ್ಲಿ ನಾರಿನಂಶವು ಅಧಿಕವಾಗಿರುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ನ ಉತ್ಕರ್ಷಣವನ್ನು ತಡೆಯುತ್ತದೆ. ಕೊಲೆಸ್ಟ್ರಾಲ್ ನ ಉತ್ಕರ್ಷಣವು ಹೃದಯ ರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು.


4. ಕಿತ್ತಳೆ ಹಣ್ಣುಗಳು


ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳು ಸಹ ನಾರಿನಂಶದಿಂದ ಸಮೃದ್ಧವಾಗಿವೆ, ಇದು ಆರೋಗ್ಯಕರ ಹೃದಯ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಉತ್ತೇಜಿಸುತ್ತದೆ.


ಇದನ್ನೂ ಓದಿ: Kidney Health: ದೇಹದ ಆರೋಗ್ಯ ಕಾಪಾಡುವ ಕಿಡ್ನಿಗಳ ಆರೋಗ್ಯಕ್ಕೆ ಏನು ಮಾಡ್ಬೇಕು? ಈ ಪದಾರ್ಥಗಳ ಸೇವನೆ ಮಾಡಿ ಸಾಕು!


5. ಆವಕಾಡೊ


ಈ ಹಣ್ಣು ಭಾರತೀಯರಾದ ನಮಗೆ ಸಾಕಷ್ಟು ಉತ್ಕೃಷ್ಟವಾಗಿದೆ ಆದರೆ ಈ ಹಣ್ಣಿನಲ್ಲಿರುವ ಓಲಿಕ್ ಆಮ್ಲವು ನಮ್ಮ ರಕ್ತ ಪ್ರವಾಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆವಕಾಡೊ ಟೋಸ್ಟ್ ಗಳು ಯುವಕರ ಮತ್ತು ಆಹಾರ-ಪ್ರಜ್ಞೆಯುಳ್ಳ ಜನರ ಜನಪ್ರಿಯ ಆಯ್ಕೆಯಾಗಿದೆ.


ಕರಗುವ ನಾರಿನಂಶದಿಂದ ಸಮೃದ್ಧವಾಗಿರುವ ಹಣ್ಣುಗಳು ಹೃದಯಾಘಾತ, ಅಪಧಮನಿಯ ತಡೆ ಮತ್ತು ಪಾರ್ಶ್ವವಾಯುಗಳಂತಹ ಹೃದಯ ಪರಿಸ್ಥಿತಿಗಳಿಂದ ದೇಹವನ್ನು ತಡೆಯುತ್ತವೆ, ಆದ್ದರಿಂದ ನಿಮ್ಮ ಆಹಾರದಲ್ಲಿ ಈ ಫಲಪ್ರದ ಬದಲಾವಣೆಗಳನ್ನು ಮಾಡಿ ಮತ್ತು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿರಿ. ಇಷ್ಟೇ ಅಲ್ಲದೆ ಡ್ರೈ ಫ್ರೂಟ್ಸ್ ಗಳಾದ ವಾಲ್‌ನಟ್, ಪಿಸ್ತಾ ಮತ್ತು ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

Published by:shrikrishna bhat
First published: