• Home
  • »
  • News
  • »
  • lifestyle
  • »
  • Health Tips: ಹಬ್ಬದ ದಿನ ಕರಿದ ಮತ್ತು ಸಿಹಿ ತಿಂಡಿಗಳನ್ನು ತಿನ್ನುವಾಗ ಕೊಲೆಸ್ಟ್ರಾಲ್ ಬಗ್ಗೆ ಗಮನವಿರಲಿ

Health Tips: ಹಬ್ಬದ ದಿನ ಕರಿದ ಮತ್ತು ಸಿಹಿ ತಿಂಡಿಗಳನ್ನು ತಿನ್ನುವಾಗ ಕೊಲೆಸ್ಟ್ರಾಲ್ ಬಗ್ಗೆ ಗಮನವಿರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಣ್ಣೆ ಹಿಟ್ಟು ಮತ್ತು ಸಕ್ಕರೆಯಿಂದ ಮಾಡಿದ ಈ ಭಕ್ಷ್ಯಗಳು ತಿನ್ನಲು ಸಂಪೂರ್ಣ ಮಜ ನೀಡುತ್ತವೆ. ಆರೋಗ್ಯಕ್ಕೆ ಅಷ್ಟೇ ಅಪಾಯಕಾರಿ ಆಗಿದೆ. ಈ ಭಕ್ಷ್ಯಗಳು ವಿಶೇಷವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಅಪಾಯ ಹೊಂದಿವೆ. ನೀವು ಈಗಾಗಲೇ ಹೃದ್ರೋಗಿ ಆಗಿದ್ದರೆ ಅದು ನಿಮಗೆ ಹೆಚ್ಚು ಅಪಾಯಕಾರಿ.

ಮುಂದೆ ಓದಿ ...
  • Share this:

    ಕೆಲವೇ ದಿನಗಳಲ್ಲಿ ದೀಪಾವಳಿ (Diwali) ಹಬ್ಬ ಬರಲಿದೆ. ಬೆಳಕಿನ ಹಬ್ಬಕ್ಕೆ (Festival) ಸಾಕಷ್ಟು ತಯಾರಿ ನಡೆಯುತ್ತಾ ಇದೆ. ಇನ್ನು ಕೆಲವೇ ದಿನಗಳ ಹಬ್ಬಕ್ಕೆ ಮನೆ ಮನೆಗಳಲ್ಲಿ (Home) ಸಡಗರದ ತಯಾರಿ ಜೋರಿದೆ. ಈ ಬಾರಿ ಅಂದರೆ 2022 ರಲ್ಲಿ ದೀಪಾವಳಿ ಹಬ್ಬವನ್ನು ಅಕ್ಟೋಬರ್ 24 ರಂದು ಆಚರಿಸಲಾಗುವುದು. ಈ ದಿನ ಜನರು (People) ಮನೆಯಲ್ಲಿ ವಿವಿಧ ರೀತಿಯ ಭಕ್ಷ್ಯ, ಸಿಹಿ ತಿಂಡಿಗಳನ್ನು ಮಾಡುತ್ತಾರೆ ಮತ್ತು ಸೇವನೆ ಮಾಡುತ್ತಾರೆ. ಮತ್ತು ಸಿಹಿ ತಿಂಡಿಗಳನ್ನು (Sweet Food) ವಿನಿಮಯ ಮಾಡಿ, ಸೇವಿಸುತ್ತಾರೆ. ಈ ದಿನಗಳಲ್ಲಿ ಡಯಟ್ ಫಾಲೋ ಮಾಡುವುದು ತುಂಬಾ ಕಷ್ಟ. ಎಣ್ಣೆ, ಹಿಟ್ಟು ಮತ್ತು ಸಕ್ಕರೆಯಿಂದ ಮಾಡಿದ ಈ ಭಕ್ಷ್ಯಗಳು ತಿನ್ನಲು ಸಂಪೂರ್ಣ ಮಜ ನೀಡುತ್ತವೆ.


    ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಅಪಾಯ


    ಆದರೆ ಆರೋಗ್ಯಕ್ಕೆ ಅಷ್ಟೇ ಅಪಾಯಕಾರಿ ಆಗಿದೆ. ಈ ಭಕ್ಷ್ಯಗಳು ವಿಶೇಷವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಅಪಾಯ ಹೊಂದಿವೆ. ನೀವು ಈಗಾಗಲೇ ಹೃದ್ರೋಗಿ ಆಗಿದ್ದರೆ ಅದು ನಿಮಗೆ ಹೆಚ್ಚು ಅಪಾಯಕಾರಿ. ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಕಂಡು ಬರುವ ಮೇಣದಂಥ ತ್ಯಾಜ್ಯ ವಸ್ತು ಆಗಿದೆ.


    ಇದು ಯಕೃತ್ತಿನಿಂದ ಕೂಡ ಉತ್ಪತ್ತಿ ಆಗುತ್ತದೆ. ಆದರೆ ನೀವು ತಿನ್ನುವ ಆಹಾರದಿಂದ ಕೂಡ ತಯಾರಿಸಲಾಗುತ್ತದೆ. ಮತ್ತು ರಕ್ತನಾಳಗಳಲ್ಲಿ ಸಂಗ್ರಹ ಆಗುತ್ತದೆ. ಕೊಲೆಸ್ಟ್ರಾಲ್ ರಕ್ತದಲ್ಲಿ ಸೇರಿ ಪರಿಚಲನೆ ಆಗುತ್ತದೆ. ಮತ್ತು ಅದರ ಅತಿಯಾದ ಪ್ರಮಾಣವು ನಿಮ್ಮ ದೇಹಕ್ಕೆ ವಿಶೇಷವಾಗಿ ನಿಮ್ಮ ಹೃದಯಕ್ಕೆ ಮಾರಕ ಆಗಿದೆ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಕೆಟ್ಟ ಕೊಲೆಸ್ಟ್ರಾಲ್ ಅನಾನುಕೂಲಗಳು ಯಾವುವು?


    ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ, ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ. ಆರೋಗ್ಯಕರ ದೀಪಾವಳಿ ಆಚರಣೆ ಮಾಡಲು ಕೊಲೆಸ್ಟ್ರಾಲ್ ಅನ್ನು ತ್ವರಿತವಾಗಿ ಹೆಚ್ಚಿಸುವ ಕೆಲವು ಆಹಾರಗಳ ಬಗ್ಗೆ ಇಲ್ಲಿ ನಾವು ನೋಡೋಣ.


    ಮೊಟ್ಟೆ


    ಮೊಟ್ಟೆ ಪೌಷ್ಟಿಕಾಂಶದ ಆಹಾರ. ಆದರೆ ಇದರಲ್ಲಿ ಕೊಲೆಸ್ಟ್ರಾಲ್ ಕೂಡ ಅಧಿಕವಾಗಿದೆ. ಒಂದು ಸಂಶೋಧನೆ ಪ್ರಕಾರ, ದೊಡ್ಡ ಮೊಟ್ಟೆಯಲ್ಲಿ ಸುಮಾರು 207 ಮಿಗ್ರಾಂ ಕೊಲೆಸ್ಟ್ರಾಲ್ ಇದೆ. ನೀವು ದೀಪಾವಳಿಯಂದು ಯಾವುದೇ ಮೊಟ್ಟೆಯ ಪಾಕವಿಧಾನ ತಯಾರಿಸುತ್ತಿದ್ದರೆ ಅದನ್ನು ತಪ್ಪಿಸುವುದು ಉತ್ತಮ.


    ಚೀಸ್


    ದೀಪಾವಳಿಯಂದು ವಿವಿಧ ರೀತಿಯ ಭಕ್ಷ್ಯ ತಯಾರಿಸಲು ಚೀಸ್ ಅನ್ನು ವ್ಯಾಪಕವಾಗಿ ಬಳಸ್ತಾರೆ. ಒಂದು ತುಂಡು ಚೀಸ್ ಸುಮಾರು 20 ಮಿಲಿಗ್ರಾಂ ಕೊಲೆಸ್ಟ್ರಾಲ್ ಹೊಂದಿದೆ. 162 ಜನರ ಮೇಲೆ 12 ವಾರಗಳ ಅಧ್ಯಯನವು ದಿನಕ್ಕೆ 80 ಗ್ರಾಂ ಪೂರ್ಣ ಕೊಬ್ಬಿನ ಚೀಸ್ ತಿನ್ನುವುದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗಿದೆ.


    ಪೂರ್ಣ ಕೊಬ್ಬಿನ ಮೊಸರು


    ಪೂರ್ಣ ಕೊಬ್ಬಿನ ಮೊಸರು ಕೊಲೆಸ್ಟ್ರಾಲ್ ಆಹಾರ. ಇದು ಪ್ರೋಟೀನ್, ಕ್ಯಾಲ್ಸಿಯಂ, ರಂಜಕ, ಬಿ ಜೀವಸತ್ವಗಳು, ಮೆಗ್ನೀಸಿಯಮ್, ಸತು ಮತ್ತು ಪೊಟ್ಯಾಸಿಯಂ ಪೋಷಕಾಂಶ ಹೊಂದಿದೆ. ಆದರೆ ಒಂದು ಕಪ್ ಮೊಸರು 245 ಗ್ರಾಂ, ಪೂರ್ಣ ಕೊಬ್ಬಿನ ಮೊಸರು 31.8 ಮಿಲಿಗ್ರಾಂ ಕೊಲೆಸ್ಟ್ರಾಲ್  ಹೊಂದಿದೆ.


    ಹುರಿದ ಆಹಾರ


    ಹಬ್ಬದ ದಿನಗಳಲ್ಲಿ ಕರಿದ ಆಹಾರ ಸೇವಗನೆ ಹೆಚ್ಚು. ಹುರಿದ ಮತ್ತು ಕರಿದ ವಸ್ತುಗಳು ಕೊಲೆಸ್ಟ್ರಾಲ್‌ನ ನಿಜವಾದ ಮೂಲ. ಹೆಚ್ಚಿನ ಕ್ಯಾಲೋರಿ ಹೊಂದಿವೆ. ಇದು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ. ಮತ್ತು ಆರೋಗ್ಯಕ್ಕೆ ಹಾನಿಕರ.


    ತ್ವರಿತ ಆಹಾರ


    ತ್ವರಿತ ಆಹಾರ ಅಂದರೆ ಫಾಸ್ಟ್ ಫುಡ್  ಹೃದ್ರೋಗ, ಮಧುಮೇಹ ಮತ್ತು ಬೊಜ್ಜು ಸೇರಿದಂತೆ ಅನೇಕ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ನಿಯಮಿತ ಹಾಗೂ ಆಗಾಗ್ಗೆ ತ್ವರಿತ ಆಹಾರ ಸೇವಿಸುವ ಜನರು ಕೊಲೆಸ್ಟ್ರಾಲ್ ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಸಿಹಿ ಭಕ್ಷ್ಯ


    ಹಬ್ಬಗಳಲ್ಲಿ ಕುಕೀಸ್, ಕೇಕ್, ಐಸ್ ಕ್ರೀಮ್, ಪೇಸ್ಟ್ರಿ ಮತ್ತು ಇತರ ಸಿಹಿತಿಂಡಿಗಳು ಕೊಲೆಸ್ಟ್ರಾಲ್ ಜೊತೆಗೆ ರಕ್ತದ ಸಕ್ಕರೆ ಹೆಚ್ಚಿಸುತ್ತದೆ. ಒಂದು ಅಧ್ಯಯನದ ಪ್ರಕಾರ, ಸಕ್ಕರೆ ಸೇವನೆ ಬೊಜ್ಜು, ಮಧುಮೇಹ, ಹೃದ್ರೋಗ, ಮಾನಸಿಕ ಕುಸಿತ ಮತ್ತು ಕೆಲವು ಕ್ಯಾನ್ಸರ್‌ ಉಂಟು ಮಾಡುತ್ತದೆ.

    Published by:renukadariyannavar
    First published: