• Home
  • »
  • News
  • »
  • lifestyle
  • »
  • Peanuts And Health: ಕಡಲೆಕಾಯಿ ಪ್ರತಿದಿನ ತಿಂದ್ರೆ ಪ್ರಯೋಜನಗಳ ಜೊತೆ ಸಮಸ್ಯೆ ಕೂಡ ಇದೆ

Peanuts And Health: ಕಡಲೆಕಾಯಿ ಪ್ರತಿದಿನ ತಿಂದ್ರೆ ಪ್ರಯೋಜನಗಳ ಜೊತೆ ಸಮಸ್ಯೆ ಕೂಡ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಡಲೆಕಾಯಿ ಇದು ಅಂತಹ ಒಂದು ಆರೋಗ್ಯಕರ ಆಹಾರ ಪದಾರ್ಥ ಆಗಿದೆ. ಕಡಲೆಕಾಯಿ ಸೇವನೆಯು ದೇಹಕ್ಕೆ ಶಕ್ತಿ ನೀಡುತ್ತದೆ. ಮತ್ತು ಇದು ಅನೇಕ ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ. ಅನೇಕ ಪ್ರಯೋಜನಗಳ ಹೊರತಾಗಿ ಕಡಲೆಕಾಯಿ ಅಷ್ಟೇ ಪ್ರಮಾಣದಲ್ಲಿ ಅಡ್ಡ ಪರಿಣಾಮಗಳನ್ನೂ ಸಹ ಹೊಂದಿದೆ.

ಮುಂದೆ ಓದಿ ...
  • Share this:

    ಕಡಲೆಕಾಯಿ ಅಂದ್ರೆ ಶೇಂಗಾವನ್ನು (Peanuts) ಬಡವರ ಬಾದಾಮಿ (Badami) ಎಂದು ಕರೆಯುತ್ತಾರೆ. ಇದು ದುಬಾರಿ (Expensive) ಬಾದಾಮಿಗಳಲ್ಲಿ ಕಂಡು ಬರುವ ಎಲ್ಲಾ ಅಂಶ ಮತ್ತು ಪೋಷಕಾಂಶ (Nutrients) ಹಾಗೂ ಗುಣಲಕ್ಷಣ ಹೊಂದಿದೆ. ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಕಡಲೆಕಾಯಿ ಅಂದ್ರೆ ಶೇಂಗಾವನ್ನು ಬೆಳೆಯುತ್ತಾರೆ. ಕಡಲೆಕಾಯಿಯನ್ನು ಎಲ್ಲರೂ ತಿನ್ನಲು (Eating) ಇಷ್ಟ ಪಡುತ್ತಾರೆ. ಚಳಿಗಾಲದಲ್ಲಿ ಕುರುಕಲು ಕಡಲೆಕಾಯಿ ತಿನ್ನದೇ ಇರಲು ಸಾಧ್ಯವೇ ಇಲ್ಲ. ಶೇಂಗಾ ಕಚ್ಚಾ, ಹುರಿದು, ಅಥವಾ ವಿವಿಧ ರೆಸಿಪಿಗಳ ಮೂಲಕವೂ ಸೇವನೆ ಮಾಡಲಾಗುತ್ತದೆ. ಶೇಂಗಾ ತನ್ನ ವಿಶಿಷ್ಟ ರುಚಿ ಹಾಗೂ ಪೋಷಕಾಂಶ ಗುಣಗಳಿಂದ ಆರೋಗ್ಯ ದ್ವಿಗುಣಗೊಳ್ಳುತ್ತದೆ.


    ಕಡಲೆಕಾಯಿ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳು


    ಕಡಲೆಕಾಯಿ ಇದು ಅಂತಹ ಒಂದು ಆರೋಗ್ಯಕರ ಆಹಾರ ಪದಾರ್ಥ ಆಗಿದೆ. ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದರೆ ಪ್ರೋಟೀನ್, ಕಾರ್ಬೋಹೈಡ್ರೇಟ್‌, ಆರೋಗ್ಯಕರ ಕೊಬ್ಬು, ಫೈಬರ್ ಮತ್ತು ಕೊಬ್ಬಿನಾಮ್ಲಗಳ ಉತ್ತಮ ಮೂಲ ಆಗಿದೆ.


    ಕಡಲೆಕಾಯಿ ಸೇವನೆಯು ದೇಹಕ್ಕೆ ಶಕ್ತಿ ನೀಡುತ್ತದೆ. ಮತ್ತು ಇದು ಅನೇಕ ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ. ಅನೇಕ ಪ್ರಯೋಜನಗಳ ಹೊರತಾಗಿ ಕಡಲೆಕಾಯಿ ಅಷ್ಟೇ ಪ್ರಮಾಣದಲ್ಲಿ ಅಡ್ಡ ಪರಿಣಾಮಗಳನ್ನೂ ಸಹ ಹೊಂದಿದೆ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಕಡಲೆಕಾಯಿ ಸೇವನೆಯಿಂದಾಗುವ ಅಡ್ಡ ಪರಿಣಾಮಗಳೂ ಇವೆ


    ಕಡಲೆಕಾಯಿ ಅಲರ್ಜಿ ಇರುವವರು ಅದನ್ನು ತಿನ್ನುವುದನ್ನು ಎಲ್ಲಾ ರೀತಿಯಿಂದ ತಿನ್ನುವುದನ್ನು ತಪ್ಪಿಸಬೇಕು. ಇದು ಅವರಿಗೆ ನೋಯುತ್ತಿರುವ ಗಂಟಲು, ಚರ್ಮದ ಸಮಸ್ಯೆ, ಜೀರ್ಣಕಾರಿ ಸಮಸ್ಯೆ, ಉಸಿರಾಟ ತೊಂದರೆ ಸಮಸ್ಯೆ ಉಂಟು ಮಾಡಬಹುದು. ಕಡಲೆಕಾಯಿ ಸೇವನೆಯ ಅನಾನುಕೂಲತೆಗಳ ಬಗ್ಗೆ ತಿಳಿಯೋಣ.



    ಕಡಲೆಕಾಯಿ ಸೇವನೆಯಿಂದಾಗುವ ಲಾಭಗಳು


    ಹೃದಯದ ಆರೋಗ್ಯ ಕಾಪಾಡುತ್ತದೆ


    AHA ಜರ್ನಲ್‌ ವರದಿ ಪ್ರಕಾರ, ಕಡಲೆಕಾಯಿಯನ್ನು ಮಿತವಾಗಿ ತಿನ್ನುವುದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮತ್ತು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ಹೃದಯದ ಆರೋಗ್ಯ ಸುಧಾರಿಸುತ್ತದೆ. ರಕ್ತದೊತ್ತಡ ಕಡಿಮೆ ಮಾಡುತ್ತದೆ. ಮೊನೊಸಾಚುರೇಟೆಡ್ ಕೊಬ್ಬು, ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ.


    ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ


    ಮಧುಮೇಹಿಗಳಿಗೆ ಕಡಲೆಕಾಯಿ ಆರೋಗ್ಯಕರ ತಿಂಡಿ ಆಗಿದೆ. ಇದು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಅನಾರೋಗ್ಯಕರ ಕೊಬ್ಬನ್ನು ಹೊಂದಿಲ್ಲ. ಇದು ರಕ್ತದ ಗ್ಲೂಕೋಸ್ ಮಟ್ಟ ನಿಯಂತ್ರಿಸುತ್ತದೆ. ಕಡಲೆಕಾಯಿಯಲ್ಲಿ ಮೆಗ್ನೀಸಿಯಂ ಇದೆ. ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ನಿಯಂತ್ರಿಸುತ್ತದೆ.


    ಉರಿಯೂತ ಕಡಿಮೆ ಮಾಡುತ್ತದೆ


    ಕಡಲೆಕಾಯಿ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲ. ಇದು ಒಲೀಕ್ ಆಮ್ಲದಿಂದ ಬರುತ್ತದೆ. ಆಲಿವ್ ಎಣ್ಣೆಯಲ್ಲಿ ಕಂಡು ಬರುವ ಅದೇ ಸಂಯುಕ್ತ ಆಗಿದೆ. ಕಡಲೆಕಾಯಿಯಲ್ಲಿರುವ ಈ ವಿಶೇಷ ಗುಣವು ಜೀವಕೋಶಗಳಲ್ಲಿನ ಉರಿಯೂತ ಮತ್ತು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ.


    ಕ್ಯಾನ್ಸರ್‌ ತಡೆಗೆ


    ಕಡಲೆಕಾಯಿ ತಿನ್ನುವುದರಿಂದ ಕೆಲವು ಕ್ಯಾನ್ಸರ್‌ ಅಪಾಯ ಕಡಿಮೆ ಮಾಡಬಹುದು. ಇದು ಹೆಚ್ಚಿನ ಪ್ರೋಟೀನ್, ವಿಟಮಿನ್ ಇ ಅಂಶ ಹೊಂದಿದೆ. ಮತ್ತು ರೆಸ್ವೆರಾಟ್ರೊಲ್ನ ಉತ್ತಮ ಮೂಲ. ಮತ್ತೊಂದು ಪಾಲಿಫಿನಾಲಿಕ್ ಆಂಟಿಆಕ್ಸಿಡೆಂಟ್, ಇದು ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.


    ತೂಕ ನಷ್ಟಕ್ಕೆ ಸಹಕಾರಿ


    ಶೇಂಗಾ ತೂಕ ಇಳಿಸಲು ಉತ್ತಮವಾಗಿದೆ. ಇದು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಹೊಂದಿದೆ. ಈ ಎರಡೂ ಪೋಷಕಾಂಶಗಳು ತೂಕ ನಿಯಂತ್ರಣಕ್ಕೆ ಪರಿಣಾಮಕಾರಿ. ಇದು ಶಕ್ತಿ ಹೆಚ್ಚಿಸುತ್ತದೆ. ಮತ್ತು ಹಸಿವನ್ನು ನಿಯಂತ್ರಿಸುತ್ತದೆ.


    ಕಡಲೆಕಾಯಿ ಸೇವನೆಯ ಅನಾನುಕೂಲತೆಗಳು


    NCBI ಯ ವರದಿ ಪ್ರಕಾರ, ಹೆಚ್ಚು ಕಡಲೆಕಾಯಿ ತಿನ್ನುವುದು ಕಬ್ಬಿಣ, ಸತು, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂನಂತಹ ಇತರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದು ಖನಿಜಗಳ ಪ್ರತಿಬಂಧಿತ ಹೀರಿಕೊಳ್ಳುವಿಕೆ ಉಂಟು ಮಾಡುತ್ತದೆ. ಕಡಲೆಕಾಯಿ ಹೆಚ್ಚು ಸೇವನೆ ತೂಕ ಇಳಿಕೆಗೆ ಅಡ್ಡಿ ಉಂಟು ಮಾಡುತ್ತದೆ.


    ಜೀರ್ಣಕಾರಿ ಸಮಸ್ಯೆ, ಅಲರ್ಜಿ, ಗಂಟಲು ನೋವು, ಸೋರುವ ಮೂಗು, ಚರ್ಮದ ತೊಂದರೆ, ಉಸಿರಾಟದ ತೊಂದರೆ ಉಂಟಾಗುತ್ತದೆ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಕಡಲೆಕಾಯಿ ತಿನ್ನಬೇಕು?


    ಪ್ರತಿದಿನ 42 ಗ್ರಾಂ ಅಥವಾ ಸುಮಾರು 16 ಕಡಲೆಕಾಯಿ ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ. ಒಂದು ಹಿಡಿ ಕಡಲೆಕಾಯಿ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು