• Home
  • »
  • News
  • »
  • lifestyle
  • »
  • Sabudana Side Effects: ಸಬ್ಬಕ್ಕಿ ಸೇವನೆಯ ಅನಾನುಕೂಲತೆ ನಿಮಗೆ ಗೊತ್ತೇ? ಈ ಬಗ್ಗೆ ಇಲ್ಲಿದೆ ಮಾಹಿತಿ

Sabudana Side Effects: ಸಬ್ಬಕ್ಕಿ ಸೇವನೆಯ ಅನಾನುಕೂಲತೆ ನಿಮಗೆ ಗೊತ್ತೇ? ಈ ಬಗ್ಗೆ ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಬ್ಬಕ್ಕಿ ಅಥವನಾ ಸಾಬುದಾನ ಸೇವನೆ ಮಾಡಿದರೆ ಅನೇಕ ಪ್ರಯೋಜನಗಳಿವೆ. ಜೊತೆಗೆ ಸಾಬುದಾನ ಪದಾರ್ಥ ಸೇವನೆಯಿಂದ ಹಲವು ಅನಾನುಕೂಲತೆಗಳು ಇವೆ. ಸಾಬುದಾನದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ತುಂಬಾ ಹೆಚ್ಚಾಗಿದೆ. ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸಲು ಕಾರಣವಾಗುತ್ತದೆ!

ಮುಂದೆ ಓದಿ ...
  • Share this:

    ಸಾಬುದಾನ (Sabu dana) ಒಂದು ದುಂಡನೆಯ ಆಕಾರದ ಸಣ್ಣ ಬಿಳಿ ಬಣ್ಣದ (White Color) ಆಹಾರ ಪದಾರ್ಥ (Food Ingredients) ಆಗಿದೆ. ಸಾಬುದಾನ ಪದಾರ್ಥವನ್ನು ಹೆಚ್ಚಾಗಿ ಉಪವಾಸದ (Fasting) ಸಮಯದಲ್ಲಿ (Time) ಬಳಕೆ ಮಾಡಲಾಗುತ್ತದೆ. ಸಾಬುದಾನ ಆಹಾರ ಪದಾರ್ಥವು ಸಾಕಷ್ಟು ಆರೋಗ್ಯ ಪ್ರಯೋಜನ (Health Benefits) ನೀಡುತ್ತದೆ. ನವರಾತ್ರಿಯ ಸಮಯದಲ್ಲಿ ಇದರ ಬೇಡಿಕೆಯು ಇನ್ನಷ್ಟು ಹೆಚ್ಚಾಗಿದೆ. ಇಂಟರ್ನೆಟ್‌ನಲ್ಲಿಯೂ ಜನರು ಸಾಬುದಾನ ಪಾಕವಿಧಾನಗಳ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಿದ್ದಾರೆ. ಸಾಬುದಾನ ಸೇವನೆ ಮಾಡಿದರೆ ಅನೇಕ ಪ್ರಯೋಜನಗಳಿವೆ. ಜೊತೆಗೆ ಸಾಬುದಾನ ಪದಾರ್ಥ ಸೇವನೆಯಿಂದ ಹಲವು ಅನಾನುಕೂಲತೆಗಳು ಇವೆ. ಯುಎಸ್ ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ಒಂದು ಕಪ್ ಸಾಬುದಾನ ಏನೆಲ್ಲಾ ಪೋಷಕಾಂಶ ಹೊಂದಿದೆ ನೋಡೋಣ.


    ಒಂದು ಕಪ್ ಸಾಬುದಾನ ಕ್ಯಾಲೋರಿ 544 , ಕಾರ್ಬೋಹೈಡ್ರೇಟ್ಗಳು 135 ಗ್ರಾಂ, ಫೈಬರ್ 1.37 ಗ್ರಾಂ, ಪ್ರೋಟೀನ್ 0.29 ಗ್ರಾಂ, ಕೊಬ್ಬು 0.03 ಗ್ರಾಂ, ಕ್ಯಾಲ್ಸಿಯಂ 30.4 ಮಿಗ್ರಾಂ, ಕಬ್ಬಿಣ 2.4 ಮಿಗ್ರಾಂ, ಮೆಗ್ನೀಸಿಯಮ್ 1.52 ಮಿಗ್ರಾಂ, ಪೊಟ್ಯಾಸಿಯಮ್ 16.7 ಮಿಗ್ರಾಂ ಹೊಂದಿದೆ.


    ಸಾಬುದಾನ ಪದಾರ್ಥ ಸೇವನೆಯ ಹಲವು ಅನಾನುಕೂಲತೆಗಳು


    ಸಾಬುದಾನ ರಕ್ತದ ಸಕ್ಕರೆ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ


    ಸಾಬುದಾನದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ತುಂಬಾ ಹೆಚ್ಚಾಗಿದೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ, ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸಲು ಕೆಲಸ ಮಾಡುತ್ತವೆ. ಹಾಗಾಗಿ ನೀವು ಮಧುಮೇಹದಿಂದ ಬಳಲುತ್ತಿದ್ದರೆ ಅದರ ಸೇವನೆ ತಪ್ಪಿಸಿ. ಅಥವಾ ಅದನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.


    ಇದನ್ನೂ ಓದಿ: ಪ್ಲಮ್ ಹಣ್ಣು ಸೇವನೆಯಿಂದ ಲಾಭವೇನು ಗೊತ್ತಾ? ನಟಿ ಭಾಗ್ಯಶ್ರೀ ತಿಳಿಸಿಕೊಡುತ್ತಾರೆ ಓದಿ


    ಸಾಬುದಾನ ಸೇವನೆ ತೂಕ ಹೆಚ್ಚಿಸುತ್ತದೆ


    ಸಾಬುದಾನದಲ್ಲಿ ಬಹಳಷ್ಟು ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಇವೆ. ಇದು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಂತಹ ವೇಳೆ ನೀವು ನಿಮ್ಮ ಸ್ಥೂಲಕಾಯ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರೆ ಅಥವಾ ತೂಕ ನಿಯಂತ್ರಿಸಲು ಬಯಸಿದರೆ ಸಾಬುದಾನ ಸೇವನೆ ತಪ್ಪಿಸಿ. ಇಲ್ಲವೇ ಅದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಿ.


    ಕಡಿಮೆ ಬಿಪಿ ಇದ್ದವರು ಸಾಬುದಾನ ಸೇವನೆ ತಪ್ಪಿಸಿ


    ಸಾಬುದಾನದಲ್ಲಿರುವ ಪೊಟ್ಯಾಸಿಯಮ್ ಪ್ರಮಾಣ ದೇಹದ ರಕ್ತದೊತ್ತಡ ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಹಾಗಾಗಿ ಕಡಿಮೆ ಬಿಪಿ ರೋಗಿಗಳು ಅದರ ಅತಿಯಾದ ಸೇವನೆ ನಿಮ್ಮ ಹೃದಯಕ್ಕೆ ಮಾರಕವಾಗಬಹುದು.


    ಹೃದ್ರೋಗಿಗಳು ಸಾಬುದಾನಿ ಸೇವನೆ ತಪ್ಪಿಸಿ


    ಸಣ್ಣ ಪ್ರಮಾಣದ ಸೈನೈಡ್ ಸಾಬುದಾನದಲ್ಲಿ ಕಂಡು ಬರುತ್ತದೆ. ಅದರ ಹೆಚ್ಚಿನ ಸೇವನೆ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ. ಅತಿಯಾದ ಸೇವನೆ ಮಿದುಳಿನ ಕಾಯಿಲೆ, ಹೃದ್ರೋಗದ ಜೊತೆಗೆ ಕೋಮಾ ಮತ್ತು ಸಾವಿಗೆ ಕಾರಣವಾಗುತ್ತದೆ.


    ಥೈರಾಯ್ಡ್ ಕಾಯಿಲೆಯಿದ್ದವರು ಸಾಬುದಾನಿ ಸೇವಿಸಬೇಡಿ


    ಸಾಬುದಾನ ಸೇವನೆ ತೂಕ ಹೆಚ್ಚಿಸುವ ಕೆಲಸ ಮಾಡುತ್ತದೆ. ಇದು ದೀರ್ಘಾವಧಿಯಲ್ಲಿ ಥೈರಾಯ್ಡ್ ಕಾಯಿಲೆಗೆ ಕಾರಣವಾಗುತ್ತದೆ. ಈಗಾಗಲೇ ಥೈರಾಯ್ಡ್ ಕಾಯಿಲೆ ಹೊಂದಿದ್ದರೆ ಸಾಬುದಾನಿ ಸೇವನೆಯಿಂದ ದೂರವಿರಿ.


    ಸಾಬುದಾನದಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್‌ಗಳು ಇವೆ. ಇದು ಸ್ವಲ್ಪ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಹೊಂದಿದೆ. ಸಾಬುದಾನ ನಿಯಮಿತ ಸೇವನೆ ಕೀಲು ಮತ್ತು ಮೂಳೆ ನೋವು ಗುಣವಾಗುತ್ತದೆ.


    ಸಾಬುದಾನದಲ್ಲಿ ಏನಿದೆ?


    ಸಾಬುದಾನವು ಅನೇಕ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಸಮತೋಲಿತ ಆಹಾರ. ಇದು ವಿಟಮಿನ್ಗಳು, ಪ್ರೋಟೀನ್ಗಳು, ಖನಿಜಗಳು, ಕಾರ್ಬೋಹೈಡ್ರೇಟ್ಗಳು, ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯ.


    ಇದನ್ನೂ ಓದಿ: ನೋಟದಲ್ಲೇ ಹೃದಯಕ್ಕೆ ಲಗ್ಗೆಯಿಡುವ ಹೂಗಳು, ಹೃದಯದ ಆರೋಗ್ಯವನ್ನೂ ಕಾಪಾಡುತ್ತವಂತೆ!


    ಮೂಳೆಗಳನ್ನು ಗಟ್ಟಿಗೊಳಿಸುತ್ತದೆ


    ಇದು ದುರ್ಬಲ ಮೂಳೆ ಬಲಪಡಿಸುತ್ತದೆ. ಮೂಳೆಗಳನ್ನು ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ನಮಗೆ ಕ್ಯಾಲ್ಸಿಯಂ ಅಗತ್ಯವಿದೆ. ಸಾಬುದಾನಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಇದೆ. ಮೂಳೆಗಳನ್ನು ಒಡೆಯದಂತೆ ರಕ್ಷಿಸುತ್ತದೆ.

    Published by:renukadariyannavar
    First published: