Dry Ginger Benefits: ಕೆಮ್ಮು, ನೆಗಡಿಗೆ ರಾಮಬಾಣ! ಆಹಾರದಲ್ಲಿ ಒಣ ಶುಂಠಿ ಮಿಸ್ ಮಾಡಬೇಡಿ

ಒಣ ಶುಂಠಿಯನ್ನು ಎಲ್ಲರೂ ಇಷ್ಟ ಪಡಲ್ಲ. ಇದು ತುಂಬಾ ಒಗರು. ಆದರೆ ಇದು ಎಲ್ಲಾ ರೋಗಿಗಳಿಗೆ ಪರಿಹಾರ ನೀಡುವ ಪದಾರ್ಥವಾಗಿದೆ. ಇಲ್ಲಿ ಒಣ ಶುಂಠಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ಹಾಗೂ ತಿನ್ನುವ ವಿಧಾನ ಹೇಳಿದ್ದಾರೆ ತಜ್ಞರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಒಣಗಿದ ಶುಂಠಿಯನ್ನು (Dry Ginger) ಹಲವು ಆಹಾರದಲ್ಲಿ (Food) ಬಳಕೆ ಮಾಡುತ್ತಾರೆ. ಆಯುರ್ವೇದದಲ್ಲಿ (Ayurveda) ಶುಂಠಿ ಪಾತ್ರ ಸಾಕಷ್ಟಿದೆ. ಕೆಲವರು ಚಹಾ (Tea) ಹಾಗೂ ಅನೇಕ ಔಷಧವಾಗಿ (Medicine) ಬಳಕೆ ಮಾಡುತ್ತಾರೆ. ಭಕ್ಷ್ಯಗಳಲ್ಲಿ ರುಚಿ ಹೆಚ್ಚಿಸಲು ಜೊತೆಗೆ ಇದು ಅನೇಕ ರೋಗಗಳಿಂದ ಮುಕ್ತಿ ನೀಡುತ್ತದೆ. ಇದರಲ್ಲಿ ನೆಗಡಿ, ಕೆಮ್ಮು, ಜೀರ್ಣಕ್ರಿಯೆ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ತಾಜಾ ಶುಂಠಿಗಿಂತ ಒಣ ಶುಂಠಿ ಜೀರ್ಣಿಸಿಕೊಳ್ಳಲು ಹಗುರವಾಗಿರುತ್ತದೆ. ಅದಕ್ಕಾಗಿಯೇ ತಜ್ಞರು ತಾಜಾ ಶುಂಠಿಗಿಂತ ಒಣಗಿದ ಶುಂಠಿ ಉತ್ತಮ ಎಂದು ಪರಿಗಣಿಸುತ್ತಾರೆ. ಆಯುರ್ವೇದ ವೈದ್ಯೆ ರೇಖಾ ರಾಧಾಮಣಿ ಅವರು ಒಣಗಿದ ಶುಂಠಿಯ ಸೇವನೆಯಿಂದ ಆಗುವ ಲಾಭಗಳ ಬಗ್ಗೆ ಹೇಳಿದ್ದಾರೆ.

  ಒಣ ಶುಂಠಿ ಸೇವನೆಯ ಲಾಭಗಳು

  ಆಯುರ್ವೇದ ವೈದ್ಯೆ ರೇಖಾ ರಾಧಾಮಣಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಅಲ್ಲಿ ಅವರು ಒಣಗಿದ ಶುಂಠಿ ಕೆಮ್ಮು, ನೆಗಡಿ ಸೇರಿದಂತೆ ಹಲವು ಕಾಯಿಲೆಗಳನ್ನು ಹೋಗಲಾಡಿಸಲು ರಾಮಬಾಣ ಆಗಿದೆ.

  ಒಣ ಶುಂಠಿಯನ್ನು ಎಲ್ಲರೂ ಇಷ್ಟ ಪಡಲ್ಲ. ಇದು ತುಂಬಾ ಒಗರು. ಆದರೆ ಇದು ಎಲ್ಲಾ ರೋಗಿಗಳಿಗೆ ಪರಿಹಾರ ನೀಡುವ ಪದಾರ್ಥವಾಗಿದೆ. ಇಲ್ಲಿ ಒಣ ಶುಂಠಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ಹಾಗೂ ತಿನ್ನುವ ವಿಧಾನ ಹೇಳಿದ್ದಾರೆ ತಜ್ಞರು.

  ಇದನ್ನೂ ಓದಿ: ನೆನೆಸಿದ ಬಾದಾಮಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳಿವೆ! ತಿಳಿದರೆ ನೀವೂ ಫಾಲೋ ಮಾಡ್ತೀರಿ

  ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆ ತಡೆಯಲು ಒಣ ಶುಂಠಿ ನೀರು ಕುಡಿಯಿರಿ

  ತಾಜಾ ಶುಂಠಿ ವಾತವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಒಣಗಿದ ಶುಂಠಿ ವಾತವನ್ನು ಸಮತೋಲನ ಮಾಡುತ್ತದೆ. ಅಂತಹ ಸ್ಥಿತಿಯಲ್ಲಿ ನೀವು ತಾಜಾ ಶುಂಠಿಯನ್ನು ಅಗಿಯುತ್ತಿದ್ದರೆ ಅಥವಾ ಅದರ ಚಹಾವನ್ನು ಕುಡಿಯುತ್ತಿದ್ದರೆ ಗ್ಯಾಸ್ ಅಥವಾ ಉಬ್ಬುವಿಕೆ ತೊಡೆದು ಹಾಕಲು ಒಣ ಶುಂಠಿ ನೀರನ್ನು ಕುಡಿಯುವುದು ಉತ್ತಮ.

  ಒಣ ಶುಂಠಿ ಮಲಬದ್ಧತೆ ನಿವಾರಿಸಲು ಉತ್ತಮವಾಗಿದೆ

  ಒಣ ಶುಂಠಿ ಸೇವನೆಯು ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ವಾಸ್ತವದಲ್ಲಿ ಒಣ ಶುಂಠಿ ಫೈಬರ್ನಲ್ಲಿ ಸಮೃದ್ಧವಾಗಿದ. ಇದು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆ ಜೀರ್ಣಕಾರಿ ಸಮಸ್ಯೆ ನಿವಾರಿಸಲು ಕೆಲಸ ಮಾಡುತ್ತದೆ. ಬೆಳಿಗ್ಗೆ ತಾಜಾ ಆಗಲು ನಿಮಗೆ ತೊಂದರೆ ಇದ್ದರೆ, ಒಣ ಶುಂಠಿ ನೀರನ್ನು ಸೇವಿಸುವುದು ಉತ್ತಮ.

  ಶೀತ ಮತ್ತು ಕೆಮ್ಮು ಮತ್ತು ಜ್ವರ ತಡೆಗಟ್ಟಲು ಒಣ ಶುಂಠಿ ಬಳಸಿ

  ಒಣ ಶುಂಠಿ ಕಫ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕೆ ವಿರುದ್ಧವಾಗಿ ತಾಜಾ ಶುಂಠಿ ಕಫ ಹೆಚ್ಚಿಸಲು ಕೆಲಸ ಮಾಡುತ್ತದೆ. ಹಾಗಾಗಿ ಕಾಲೋಚಿತ ಶೀತ, ಕೆಮ್ಮು ಮತ್ತು ಜ್ವರ ವಿರುದ್ಧ ಹೋರಾಡಲು ಒಣ ಶುಂಠಿ ಸೇವಿಸಲು ತಜ್ಞರು ಶಿಫಾರಸು ಮಾಡುತ್ತಾರೆ.

  ಒಣ ಶುಂಠಿ ಕಷಾಯ ರೋಗ ನಿರೋಧಕ ಶಕ್ತಿ ನೀಡುತ್ತದೆ

  ಶುಂಠಿ ಶೀತ ಮತ್ತು ಕೆಮ್ಮಿನ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ಸೋಂಕುಗಳ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಶುಂಠಿ ಉರಿಯೂತ ನಿವಾರಕ ಗುಣ ಹೊಂದಿದೆ. ದೇಹದ ಉರಿಯೂತ ಕಡಿಮೆ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

  ಇದನ್ನೂ ಓದಿ: ಹೀಗೆ ಎಣ್ಣೆ ಮಸಾಜ್ ಮಾಡಿದ್ರೆ ನಿಮ್ಮ ಮುಖ ಕಾಂತಿಯುತವಾಗಿರುತ್ತೆ

  ಒಣಗಿದ ಶುಂಠಿ ಬಳಸುವುದು ಹೇಗೆ?

  ಒಣಗಿದ ಶುಂಠಿ ಹೆಚ್ಚಿನ ಪ್ರಯೋಜನ ಪಡೆಯಲು ಕಷಾಯ ಮಾಡಿ ಸೇವಿಸಿ. ಇದನ್ನು ತಯಾರಿಸುವುದು ತುಂಬಾ ಸುಲಭ. ಇದನ್ನು ಮಾಡಲು ಒಂದು ಪಿಂಚ್ ಒಣ ಶುಂಠಿ ಪುಡಿಯ ಜೊತೆ 2 ಗ್ಲಾಸ್ ನೀರನ್ನು ಕುದಿಸಿ. ಮತ್ತು ಒಂದು ಗ್ಲಾಸ್ ನೀರು ಬರುತ್ತಿದ್ದಂತೆ ಮಿಶ್ರಣವು ಬಳಕೆಗೆ ಸಿದ್ಧವಾಗಿದೆ.
  Published by:renukadariyannavar
  First published: