Dates Health Benefits: ಗರ್ಭಿಣಿಯರು ಖರ್ಜೂರ ತಿನ್ನಬಹುದಾ? ಇದು ಮಗುವಿನ ಆರೋಗ್ಯ ಕಾಪಾಡುತ್ತಾ?

ಖರ್ಜೂರದಲ್ಲಿ ಅನೇಕ ರೀತಿಯ ಪೋಷಕಾಂಶಗಳು ಅಡಗಿವೆ. ಇದು ಆಹಾರದ ಫೈಬರ್ ಮತ್ತು ಫ್ಲೇವನಾಯ್ಡ್‌ಗಳಲ್ಲಿ ಅಧಿಕ ಆಗಿದೆ. ಇದು ಕಡಿಮೆ ಗ್ಲೈಸೆಮಿಕ್ ಆಹಾರ ಆಗಿದೆ. ಇದು ಮಧುಮೇಹ ಹೊಂದಿರುವ ಮಹಿಳೆಯರಿಗೂ ಪ್ರಯೋಜನಕಾರಿ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಖರ್ಜೂರ (Dates) ತಿನ್ನುವುದು ರುಚಿ (Sweet) ಹಾಗೂ ಮನಸ್ಸಿಗೆ ಖುಷಿ (Happy) ನೀಡುತ್ತದೆ. ಖರ್ಜೂರ ಸೇವನೆ ವ್ಯಕ್ತಿಯ ದೇಹಕ್ಕೆ (Body) ತುಂಬಾ ಪ್ರಯೋಜನಕಾರಿ (Benefits) ಆಗಿದೆ. ಜೊತೆಗೆ ಖರ್ಜೂರ ಸೇವನೆ ಮಹಿಳೆಯರ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನ ನೀಡುತ್ತದೆ. ನಿಮಗೆ ಆಶ್ಚರ್ಯವಾದ್ರೂ ಇದು ನಿಜ. ಖರ್ಜೂರವು ಪೌಷ್ಟಿಕಾಂಶಗಳಿಂದ ಸಮೃದ್ಧ ಆಗಿದೆ. ಮತ್ತು ಹೆಚ್ಚಿನ ಕ್ಯಾಲೋರಿ ಹೊಂದಿದೆ. ಜೊತೆಗೆ ಇದರ ವಿಶೇಷವೆಂದರೆ ಇದು ಕಡಿಮೆ ಗ್ಲೈಸೆಮಿಕ್ ಆಹಾರ ಆಗಿದೆ. ಇದು ಮಧುಮೇಹ ಹೊಂದಿರುವ ಮಹಿಳೆಯರಿಗೂ ಪ್ರಯೋಜನಕಾರಿ ಆಗಿದೆ. ಖರ್ಜೂರದ ಬಗ್ಗೆ ಡಯೆಟಿಷಿಯನ್ ಜ್ಯೋತಿ ಮಿನರಾಲೊ ಅವರು ಕೆಲವು ವಿಷಯಗಳನ್ನು ಹೇಳಿದ್ದಾರೆ.

    ಖರ್ಜೂರದಲ್ಲಿ ಅನೇಕ ರೀತಿಯ ಪೋಷಕಾಂಶಗಳು ಅಡಗಿವೆ. ಇದು ಆಹಾರದ ಫೈಬರ್ ಮತ್ತು ಫ್ಲೇವನಾಯ್ಡ್‌ಗಳಲ್ಲಿ ಅಧಿಕ ಆಗಿದೆ. ಕ್ಯಾರೊಟಿನಾಯ್ಡ್‌ಗಳು ಮತ್ತು ಫೀನಾಲಿಕ್ ಆಮ್ಲಗಳಂತಹ ರೋಗದ ವಿರುದ್ಧದ ಹೋರಾಟದ ಉತ್ಕರ್ಷಣ ನಿರೋಧಕಗಳು ಮತ್ತು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಲ್ಲಿ ಸಮೃದ್ಧವಾಗಿರುವ ವಿಟಮಿನ್ B6 ಒಳಗೊಂಡಿದೆ.

    ಮಹಿಳೆಯರಲ್ಲಿ ಖರ್ಜೂರ ಸೇವನೆಯ ಪ್ರಯೋಜನಗಳು

    ಫೋಲಿಕ್ ಆಸಿಡ್ ಕೊರತೆ ತೆಗೆದು ಹಾಕುತ್ತದೆ

    ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲದ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಗರ್ಭಿಣಿಯರಿಗೆ ತಜ್ಞರು ಖರ್ಜೂರ ತಿನ್ನಲು ಸಲಹೆ ನೀಡುತ್ತಾರೆ. ಇದು ಉತ್ತಮ ಪ್ರಮಾಣದ ಅಮೈನೋ ಆಮ್ಲಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ಕ್ಯಾಲ್ಸಿಯಂ ನ್ನು ಹೊಂದಿದೆ. ಇದು ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಜೊತೆಗೆ ಇದು ವಿಟಮಿನ್ ಬಿ 16 ನಲ್ಲಿ ಸಮೃದ್ಧ ಆಗಿದೆ. ಅಂದರೆ ಫೋಲಿಕ್ ಆಮ್ಲ ಇದು ಜನ್ಮ ದೋಷಗಳ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ. ಮತ್ತು ತಾಯಿ ಮತ್ತು ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    ಮೂಳೆಗಳಿಗೆ ಖರ್ಜೂರ ಸೇವನೆ ಬಲ ನೀಡುತ್ತದೆ

    ಖರ್ಜೂರದಲ್ಲಿ ತಾಮ್ರ, ಸೆಲೆನಿಯಮ್ ಮತ್ತು ಮೆಗ್ನೀಸಿಯಮ್ ನಲ್ಲಿ ಸಮೃದ್ಧ ಆಗಿದೆ. ಇದು ಮೂಳೆಗಳನ್ನು ಆರೋಗ್ಯವಾಗಿಡಲು ಮತ್ತು ಮೂಳೆ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.

    ಅದರಂತೆ ಆಸ್ಟಿಯೊಪೊರೋಸಿಸ್ ನಿಂದ ಬಳಲುತ್ತಿರುವವರು ಮೂಳೆ ಮುರಿತದಿಂದ ಬಳಲುವ ಸಾಧ್ಯತೆ ಹೆಚ್ಚು. ಖರ್ಜೂರ ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸಬಲ್ಲದು. ಮೂಳೆ ನೋವಿನ ಸಮಸ್ಯೆ ಇರುವವರಿಗೆ ಇದು ಪ್ರಯೋಜನಕಾರಿ ಆಗಿದೆ.

    ತೂಕ ನಷ್ಟಕ್ಕೆ ಖರ್ಜೂರ ಸೇವನೆ ಸಹಕಾರಿ

    ತೂಕ ಕಡಿಮೆ ಮಾಡಲು ಖರ್ಜೂರ ಸೇವನೆ ತುಂಬಾ ಸಹಕಾರಿ. ಇದು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಇದು ದೊಡ್ಡ ಕರುಳಿನಲ್ಲಿ ಹೀರಿಕೊಳ್ಳುವಿಕೆ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

    ಇದರಿಂದ ಹೆಚ್ಚು ಹಸಿವಾಗಲ್ಲ. ಇದು ಚಯಾಪಚಯ ವೇಗಗೊಳಿಸುತ್ತದೆ. ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಕಡುಬಯಕೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟಕ್ಕೆ ಬಹಳ ಮುಖ್ಯ.

    ಹೃದಯದ ಆರೋಗ್ಯ ಸುಧಾರಿಸುತ್ತದೆ

    ದಿನಕ್ಕೆ ಎರಡು ಖರ್ಜೂರಗಳು ನಿಮ್ಮ ಹೃದಯದ ಆರೋಗ್ಯ ಸುಧಾರಿಸಬಹುದು. ಖರ್ಜೂರ ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಅದು ಅಪಧಮನಿಕಾಠಿಣ್ಯದ ರಚನೆ ತಡೆಯಲು ಮತ್ತು ಹೃದಯ ಕಾಯಿಲೆ ತಡೆಯಲು ಸಹಾಯ ಮಾಡುತ್ತದೆ.

    ಪ್ರತಿದಿನ ಎರಡು ಖರ್ಜೂರ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಕಾರಿ.

    ಅನಿಯಮಿತ ಅವಧಿಗಳಲ್ಲಿ ಲಾಭಕಾರಿ

    ಅನಿಯಮಿತ ಮುಟ್ಟಿನ ಸಮಸ್ಯೆ ಹೊಂದಿರುವ ಮಹಿಳೆಯರಿಗೆ ಖರ್ಜೂರದ ಸೇವನೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಮತ್ತು ರಕ್ತದ ಕಲ್ಮಶ ಹೊರ ಹಾಕುತ್ತದೆ.

    ಅವಧಿ ಮತ್ತು ರಕ್ತಹೀನತೆಗೆ ಸಂಬಂಧಿಸಿದ ಸಮಸ್ಯೆ ಹೋಗಲಾಡಿಸುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಮತ್ತು ಅನಿಯಮಿತ ಅವಧಿ ಸಮತೋಲನಗೊಳಿಸಲು ಸಹಕಾರಿ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ಖರ್ಜೂರವನ್ನು ಹೇಗೆ ಸೇವಿಸಬಹುದು?

    ಖರ್ಜೂರಗಳು ಒಣ ಮತ್ತು ತಾಜಾ ರೂಪದಲ್ಲಿ ಲಭ್ಯ ಇವೆ. ನೇರವಾಗಿ ಸೇವಿಸಬಹುದು. ಇದನ್ನು ಬೆಲ್ಲದ ಬದಲಿಗೆ ತಿನ್ನಬಹುದು ಅಥವಾ ಸಿಹಿತಿಂಡಿಗಳ ಜೊತೆ ಸೇವಿಸಬಹುದು. ಖರ್ಜೂರವು ಗ್ಲೂಕೋಸ್, ಸುಕ್ರೋಸ್ ಮತ್ತು ಫ್ರಕ್ಟೋಸ್ ಅಂಶದಿಂದಾಗಿ ಉತ್ತಮ ನೈಸರ್ಗಿಕ ಸಿಹಿಕಾರಕ ಹೊಂದಿದೆ.  ಪ್ರತಿದಿನ ಹಾಲಿನೊಂದಿಗೆ ಸೇವಿಸಬಹುದು. ಸ್ಮೂಥಿ, ಸಲಾಡ್‌ ಜೊತೆ ಸೇರಿಸಬಹುದು.
    Published by:renukadariyannavar
    First published: