World Chocolate Day 2022: ಡಾರ್ಕ್ ಚಾಕೊಲೇಟ್ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಕೋಕೋ ಬೀಜಗಳಿಂದ ಚಾಕೊಲೇಟ್ ತಯಾರು ಮಾಡಲಾಗುತ್ತದೆ. ಇದು ರಕ್ತದ ಹರಿವು ಮತ್ತು ರಕ್ತದೊತ್ತಡ ಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ. ಇದು ರಕ್ತದ ಹರಿವಿನ ಪ್ರತಿರೋಧ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚಾಕೊಲೇಟ್‌ (Chocolate) ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ (Like) ಹೇಳಿ.. ಚಿಕ್ಕ ಮಕ್ಕಳಿಂದ (Children’s) ಹಿಡಿದು ವೃದ್ಧರವರೆಗೆ ಎಲ್ಲರೂ ಚಾಕೊಲೇಟ್ ತಿನ್ನೋಕೆ ಇಷ್ಟ ಪಡ್ತಾರೆ. ಜಗತ್ತಿನಲ್ಲಿ (World) ಸಾಕಷ್ಟು ರೀತಿಯ ಚಾಕೋಲೇಟ್ ಗಳನ್ನು ನಾವು ಕಾಣಬಹುದು. ಚಾಕೋಲೇಟ್ ಸಾಕಷ್ಟು ರುಚಿಯಾಗಿರುತ್ತದೆ (Sweet). ಸಹಿಯಾದ ಚಾಕೋಲೇಟ್ ತಿನ್ನೋ ಮಜವೇ ಬೇರೆ. ಇಂದು ವಿಶ್ವ ಚಾಕೊಲೇಟ್ ದಿನ. ಪ್ರತಿ ವರ್ಷ ಜುಲೈ 7 ಅನ್ನು ವಿಶ್ವ ಚಾಕೊಲೇಟ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಆಚರಿಸುವ ಉದ್ದೇಶವು ಚಾಕೊಲೇಟ್‌ನ ಮಹತ್ವದ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವುದು ಆಗಿದೆ. ಪ್ರಪಂಚದಾದ್ಯಂತ ಜನರು ಚಾಕೊಲೇಟ್ ತಿನ್ನಲು ಇಷ್ಟ ಪಡುತ್ತಾರೆ.

    ವಿಶ್ವ ಚಾಕೊಲೇಟ್ ದಿನ

    ಅದೇ ವೇಳೆ ಚಾಕೊಲೇಟ್ ಅನ್ನು ಪ್ರೇಮಿಗಳು ತಮ್ಮ ಸಂಗಾತಿಗೆ ವಿಶೇಷವಾಗಿ ನೀಡಲು ಇಷ್ಟ ಪಡುತ್ತಾರೆ. ಪ್ರೇಮಿಗಳ ವಾರದ ಮೂರನೇ ದಿನ ಅಂದರೆ ಫೆಬ್ರವರಿ 9 ರಂದು ಚಾಕೊಲೇಟ್ ದಿನ ಆಚರಣೆ ಮಾಡಲಾಗುತ್ತದೆ. ಇದು ಪ್ರೇಮಿಗಳಿಗೆ ವಿಶೇಷ ಸಂದರ್ಭ ಆಗಿದೆ.

    ಆದರೆ ಅದೇನೇ ಇರಲಿ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲು ಕಾರಣವೆಂದರೆ ಸಂಬಂಧಗಳಲ್ಲಿ ಹೆಚ್ಚಿನ ಮಾಧುರ್ಯ ಮತ್ತು ಪ್ರೀತಿಯನ್ನು ಸೇರಿಸಲು ಮತ್ತು ಆರೋಗ್ಯದ ವಿಚಾರದಲ್ಲಿ ಚಾಕೊಲೇಟ್‌ ಎಷ್ಟು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಲು ಚಾಕೊಲೇಟ್ ಡೇ ಆಚರಣೆ ಮಾಡಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.

    ಇದನ್ನೂ ಓದಿ: ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಲು ಮುಖ್ಯ ಕಾರಣಗಳು ಮತ್ತು ಸಮಸ್ಯೆಗಳು ಯಾವವು?

    ಡಾರ್ಕ್ ಚಾಕೊಲೇಟ್ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧ ಆಗಿದೆ. ಚಾಕೊಲೇಟ್ ತಯಾರಿಸಲು ಬಳಸುವ ಕೋಕೋ ಬೀಜಗಳು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲ ಆಗಿದೆ. ವಿಶ್ವ ಚಾಕೊಲೇಟ್ ದಿನದ ವೇಳೆ ಈಗ ಇಲ್ಲಿ ಡಾರ್ಕ್ ಚಾಕೊಲೇಟ್‌ನ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯೋಣ.

    ಡಾರ್ಕ್ ಚಾಕೊಲೇಟ್ ಪ್ರಯೋಜನಗಳು ಯಾವವು?

    ಒಂದು ಅಧ್ಯಯನದ ಪ್ರಕಾರ, ಹಾಲು ಮತ್ತು ಚಾಕೊಲೇಟ್‌ಗಿಂತ, ಡಾರ್ಕ್ ಚಾಕೊಲೇಟ್ ಹೆಚ್ಚು ಪರಿಣಾಮಕಾರಿ ಆಗಿದೆ. ಡಾರ್ಕ್ ಚಾಕೊಲೇಟ್ ಸೇವನೆ ಮಾಡುವುದರಿಂದ ಹೃದ್ರೋಗದ ಅಪಾಯ  ಕಡಿಮೆ ಮಾಡಬಹುದು.

    ನಯವಾದ ಮತ್ತು ಹೊಳೆಯುವ ಚರ್ಮಕ್ಕಾಗಿ ಡಾರ್ಕ್ ಚಾಕೊಲೇಟ್ ತುಂಬಾ ಪ್ರಯೋಜನಕಾರಿ ಆಗಿದೆ. ಚಾಕೊಲೇಟ್ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಡಾರ್ಕ್ ಚಾಕೊಲೇಟ್ ಹೃದಯ ಮತ್ತು ತ್ವಚೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಿಳಿಯೋಣ.

    ಡಾರ್ಕ್ ಚಾಕೊಲೇಟ್‌ನಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ

    ಕೋಕೋ ಬೀಜಗಳಿಂದ ಚಾಕೊಲೇಟ್ ತಯಾರು ಮಾಡಲಾಗುತ್ತದೆ. ಇದು ರಕ್ತದ ಹರಿವು ಮತ್ತು ರಕ್ತದೊತ್ತಡ ಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲೇವನಾಯ್ಡ್ ಗಳು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆ ಹೆಚ್ಚಿಸಲು ಅಪಧಮನಿಗಳ ಒಳಪದರ ಉತ್ತೇಜಿಸುತ್ತದೆ.

    ನೈಟ್ರಿಕ್ ಆಕ್ಸೈಡ್ ಅಪಧಮನಿಗಳನ್ನು ವಿಶ್ರಾಂತಿ ಮಾಡುವ ಕೆಲಸ ಮಾಡುತ್ತದೆ. ಇದು ರಕ್ತದ ಹರಿವಿನ ಪ್ರತಿರೋಧ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ.

    ಚರ್ಮದ ಮೇಲೆ ಚಾಕೊಲೇಟ್ ಯಾವ ರೀತಿ ಪರಿಣಾಮ ಬೀರುತ್ತದೆ?

    ಡಾರ್ಕ್ ಚಾಕೊಲೇಟ್ ಚರ್ಮಕ್ಕೆ ಪ್ರಯೋಜನಕಾರಿ ಆಗಿದೆ. ಚಾಕೊಲೇಟ್‌ನ ಜೈವಿಕ ಸಕ್ರಿಯ ಸಂಯುಕ್ತಗಳು ಚರ್ಮದ ಆರೋಗ್ಯ ಕಾಪಾಡುತ್ತದೆ. ಅದೇ ವೇಳೆ, ಡಾರ್ಕ್ ಚಾಕೊಲೇಟ್ ನಲ್ಲಿ ಕಂಡು ಬರುವ ಫ್ಲೇವನಾಯ್ಡ್ ಗಳು ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಣೆ ಮಾಡುತ್ತದೆ.

    ಸುಧಾರಿತ ರಕ್ತದ ಹರಿವು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಮತ್ತು ನಯವಾಗಿ ಇರುತ್ತದೆ. ಇದರೊಂದಿಗೆ ಡಾರ್ಕ್ ಚಾಕೊಲೇಟ್ ಕೂಡ ತ್ವಚೆಯನ್ನು ಹೈಡ್ರೇಟ್ ಆಗಿ ಇಡಲು ಪ್ರಯೋಜನಕಾರಿ ಆಗಿದೆ. ಚರ್ಮದ ಆಂತರಿಕ ಪೋಷಣೆಗಾಗಿ ಡಾರ್ಕ್ ಚಾಕೊಲೇಟ್ ಸೇವನೆ ಮಾಡುವುದು ಉತ್ತಮ.

    ಇದನ್ನೂ ಓದಿ: ಹೊಟ್ಟೆಯ ಆಮ್ಲ ಸಮಸ್ಯೆಯ ಲಕ್ಷಣಗಳು ಮತ್ತು ನಿವಾರಣೆಗೆ ಮನೆಮದ್ದು ಯಾವವು?

    ಮಾನಸಿಕ ಆರೋಗ್ಯಕ್ಕೆ ಚಾಕೊಲೇಟ್ ಪ್ರಯೋಜನಕಾರಿ

    ಡಾರ್ಕ್ ಚಾಕೊಲೇಟ್ ಸೇವನೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಡಾರ್ಕ್ ಚಾಕೊಲೇಟ್ ಮೆದುಳಿನ ಕಾರ್ಯ ನಿರ್ವಹಣೆ ಸುಧಾರಿಸಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ, ಸುಮಾರು 5 ದಿನಗಳ ಕಾಲ ಡಾರ್ಕ್ ಚಾಕೊಲೇಟ್ ಸೇವನೆಯು ಮೆದುಳಿಗೆ ರಕ್ತದ ಹರಿವು ಸುಧಾರಿಸುತ್ತದೆ.
    Published by:renukadariyannavar
    First published: