Black Raisins: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ಸೇವನೆ ಮಾಡಿದ್ರೆ ಮೂಳೆಗಳು ಗಟ್ಟಿಯಾಗುತ್ತೆ

ಕಪ್ಪು ಒಣ ದ್ರಾಕ್ಷಿ ನೆನೆಸಿಟ್ಟು ನಂತರ ಸೇವನೆ ಮಾಡುವುದು ಹಲ್ಲುಗಳನ್ನು ಬಲಪಡಿಸುವುದು ಜೊತೆಗೆ ಮೂಳೆಯ ಆರೋಗ್ಯ ಉತ್ತೇಜಿಸುವುದು ಸೇರಿದಂತೆ ಸಾಕಷ್ಟು ಪ್ರಯೋಜನ ಹೊಂದಿದೆ. ಒಣ ಹಣ್ಣುಗಳು ಕೆಲ ಕಾಯಿಲೆಗಳ ನಿಯಂತ್ರಣಕ್ಕೆ ಕೊಡುಗೆ ನೀಡುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಒಣ ಹಣ್ಣುಗಳನ್ನು (Dry Fruits) ತಿನ್ನುವುದರಿಂದ (Eating) ಅನೇಕ ಆರೋಗ್ಯ ಪ್ರಯೋಜನ (Health Benefits) ಪಡೆಯಬಹುದು. ಇದು ದೇಹದ (Body) ಉತ್ತಮ ಕಾರ್ಯ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಹೊಂದಿದೆ. ಕೆಲವು ಒಣ ಹಣ್ಣುಗಳ ಸೇವನೆ ಮಾಡುವುದು ಅದರಲ್ಲೂ ಅದನ್ನು ನೆನೆಸಿಟ್ಟು ಸೇವನೆ ಮಾಡುವುದು ಸಾಕಷ್ಟು ಹೆಚ್ಚು ಪ್ರಯೋಜನ ನೀಡುತ್ತದೆ ಎಂದು ನಂಬಲಾಗಿದೆ. ಕಪ್ಪು ಒಣದ್ರಾಕ್ಷಿ ಆರೋಗ್ಯ ಪ್ರಯೋಜನ ನೀಡುವ ಅಂತಹ ಒಣ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ನೆನೆಸಿಟ್ಟು ನಂತರ ಸೇವನೆ ಮಾಡುವುದು ಹಲ್ಲುಗಳನ್ನು ಬಲಪಡಿಸುವುದು ಜೊತೆಗೆ ಮೂಳೆಯ ಆರೋಗ್ಯ ಉತ್ತೇಜಿಸುವುದು ಸೇರಿದಂತೆ ಸಾಕಷ್ಟು ಪ್ರಯೋಜನ ಹೊಂದಿದೆ. ಒಣ ಹಣ್ಣುಗಳು ಕೆಲ ಕಾಯಿಲೆಗಳ ನಿಯಂತ್ರಣಕ್ಕೆ ಕೊಡುಗೆ ನೀಡುತ್ತವೆ.

    ನೀವು ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬೇಕಾದರೆ ಕೇವಲ ಆರು ಕಪ್ಪು ಒಣದ್ರಾಕ್ಷಿಗಳನ್ನು ತೆಗೆದುಕೊಂಡು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಎಂದು ಫ್ಯಾಟ್ ಟು ಸ್ಲಿಮ್ ನಿರ್ದೇಶಕಿ ಮತ್ತು ಪೌಷ್ಟಿಕತಜ್ಞ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ ನಂಬುತ್ತಾರೆ.

    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ಸೇವಿಸುವುದು

    ಕಪ್ಪು ಒಣದ್ರಾಕ್ಷಿಗಳು ಕಬ್ಬಿಣದ ಅಂಶದಿಂದ ಸಮೃದ್ಧವಾಗಿವೆ. ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿವೆ. ಈ ಕಾರಣಕ್ಕಾಗಿ ಇದನ್ನು ನೆನೆಸುವುದು ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತಹೀನತೆ ದೂರವಿರಿಸುತ್ತದೆ. ಮತ್ತು ಇತರ ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ.

    ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

    ಮಲಬದ್ಧತೆ ಮತ್ತು ಹೆಮೊರೊಯಿಡ್ಸ್ ಚಿಕಿತ್ಸೆ

    ನೆನೆಸಿದ ಕಪ್ಪು ಒಣದ್ರಾಕ್ಷಿಗಳು ಹೆಚ್ಚಿನ ಫೈಬರ್ ಹೊಂದಿವೆ. ಮತ್ತು ವಿರೇಚಕವಾಗಿ ಕಾರ್ಯ ನಿರ್ವಹಿಸುತ್ತವೆ. ಇದರ ಹೆಚ್ಚಿನ ಫೈಬರ್ ಕರುಳಿನ ಚಲನೆ ಉತ್ತೇಜಿಸುತ್ತದೆ. ಮತ್ತು ನಿಮ್ಮ ಹೊಟ್ಟೆ ಆರೋಗ್ಯಕರ ಆಗಿಸುತ್ತದೆ. ಮತ್ತು ಮಲಬದ್ಧತೆ ಮತ್ತು ಪೈಲ್ಸ್ ನಂತಹ ಸಮಸ್ಯೆ ತಡೆಯುತ್ತದೆ.

    ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

    ನಾರಿನಂಶವಿರುವ ಯಾವುದೇ ವಸ್ತುವು ನಿಮ್ಮನ್ನು ದೀರ್ಘ ಕಾಲದವರೆಗೆ ಪೂರ್ಣವಾಗಿ ಇರಿಸುತ್ತದೆ. ಆದ್ದರಿಂದ ನೀವು ಹಣ್ಣು ಮತ್ತು ತರಕಾರಿ ಅಥವಾ ಫೈಬರ್ ಸಮೃದ್ಧ ಇತರ ಆಹಾರ ಸೇವಿಸಿದಾಗ, ನೀವು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಪಡೆಯುತ್ತೀರಿ. ಇದು ತೂಕ ನಿಯಂತ್ರಣಕ್ಕೆ ಸಹಕಾರಿ.

    ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣ ಅಂಶ ಹೇರಳವಾಗಿದೆ

    ನಮ್ಮ ದೇಶದಲ್ಲಿ ಸುಮಾರು 70 ಪ್ರತಿಶತ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಮತ್ತು ಇದು ಗಮನಾರ್ಹ ಕಾಳಜಿ ಆಗಿದೆ. ಅಂತಹ ಸ್ಥಿತಿಯಲ್ಲಿ ಕಪ್ಪು ಒಣದ್ರಾಕ್ಷಿ ದೇಹದ ಕಬ್ಬಿಣದ ಅಂಶದ ಅಗತ್ಯ ಪೂರೈಸುತ್ತದೆ.

    ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತವೆ

    ಕಪ್ಪು ಒಣದ್ರಾಕ್ಷಿ ಮೂಳೆಗಳ ಆರೋಗ್ಯಕ್ಕೆ ವಿಶೇಷವಾಗಿ ಆಸ್ಟಿಯೊಪೊರೋಸಿಸ್ನಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿ ಆಗಿದೆ. ಇದಲ್ಲದೇ ಕಪ್ಪು ಒಣ ದ್ರಾಕ್ಷಿಯಲ್ಲಿ ಬೋರಾನ್ ಪ್ರಮಾಣ ಅಧಿಕವಾಗಿದೆ. ಇದು ಹೆಚ್ಚಿನ ಕ್ಯಾಲ್ಸಿಯಂ ಅಂಶ ಹೊಂದಿರುವ ಖನಿಜವಾಗಿದೆ. ಮತ್ತು ಮೂಳೆಯ ಆರೋಗ್ಯ ಕಾಪಾಡಲು ಅವಶ್ಯಕವಾಗಿದೆ.

    ಅಧಿಕ ರಕ್ತದೊತ್ತಡದಲ್ಲಿ ಪ್ರಯೋಜನಕಾರಿ

    ಅಧಿಕ ರಕ್ತದೊತ್ತಡ ಇರುವವರು ಕಪ್ಪು ಒಣದ್ರಾಕ್ಷಿಯಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ಹೀಗಾಗಿ ಕಪ್ಪು ಒಣದ್ರಾಕ್ಷಿ ಸೇವಿಸಿ. ಅಧಿಕ ಕೊಲೆಸ್ಟ್ರಾಲ್, ಅಥವಾ ಹೆಚ್ಚಿನ ಟ್ರೈಗ್ಲಿಸರೈಡ್ ಮಟ್ಟಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಇದು ಪ್ರಯೋಜನಕಾರಿಯಾಗಿದೆ.

    ವಿಟಮಿನ್ ಬಿ ಮತ್ತು ಸಿ ಗಳ ಉಗ್ರಾಣ

    ಕಪ್ಪು ಒಣದ್ರಾಕ್ಷಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರವಾಗಿದೆ. ಮಧುಮೇಹ ರೋಗಿಗಳಿಗೂ ಇದು ಉತ್ತಮ ಆಹಾರ ಆಗಿದೆ. ಅಂತಹವರು ಇದನ್ನು ಅಕ್ರೋಟ್ ಮತ್ತು ಬಾದಾಮಿ ಜೊತೆ ಸೇವನೆ ಮಾಡಿ.

    ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

    ಕೆಟ್ಟ ಉಸಿರಾಟ

    ಬಾಯಿ ದುರ್ವಾಸನೆ ಹೊಂದಿದ್ದರೆ ಕಪ್ಪು ಒಣದ್ರಾಕ್ಷಿ ಅದನ್ನು ತೊಡೆದು ಹಾಕುತ್ತದೆ. ಇದು ಹೆಚ್ಚು ಜೀವ ವಿರೋಧಿ ಮತ್ತು ಬಾಯಿಯೊಳಗೆ ಇರುವ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾ ಕೊಲ್ಲುತ್ತದೆ.
    Published by:renukadariyannavar
    First published: