ಸಾಮಾನ್ಯ ಸಮಸ್ಯೆಗೂ ಮಾತ್ರೆಯ ಮೊರೆ ಹೋಗುತ್ತೀರಾ? ಹಾಗಿದ್ರೆ ಇಲ್ಲಿದೆ ಆಘಾತಕಾರಿ ಸುದ್ದಿ

ಆ್ಯಂಟಿ ಬಯೋಟಿಕ್ ಎಂಬದು ಮ್ಯಾಜಿಕ್ ಮಾತ್ರೆ ಆಗಿದೆ. ಇದು ಸ್ವಲ್ಪ ಸಮಯದವರೆಗೆ ವಿಶ್ರಾಂತಿ ನೀಡುತ್ತದೆ. ಇದೇ ಮಾತ್ರೆಯ  ಅಡ್ಡ ಪರಿಣಾಮಗಳು ಮುಂದಿನ ದಿನಗಳಲ್ಲಿ ಆವರಿಸಿಕೊಳ್ಳುತ್ತದೆ .

zahir | news18-kannada
Updated:September 16, 2019, 3:34 PM IST
ಸಾಮಾನ್ಯ ಸಮಸ್ಯೆಗೂ ಮಾತ್ರೆಯ ಮೊರೆ ಹೋಗುತ್ತೀರಾ? ಹಾಗಿದ್ರೆ ಇಲ್ಲಿದೆ ಆಘಾತಕಾರಿ ಸುದ್ದಿ
Pills
zahir | news18-kannada
Updated: September 16, 2019, 3:34 PM IST
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆನೋವು, ಜ್ವರ, ಹೊಟ್ಟೆ ನೋವಿನಂತಹ ಸಣ್ಣ ಸಮಸ್ಯೆಗಳಿಗೂ ಆ್ಯಂಟಿ ಬಯೋಟಿಕ್ ಮಾತ್ರೆಗಳ ಮೊರೆ ಹೋಗುವವರೇ ಹೆಚ್ಚು. ಇನ್ನು ವೈದ್ಯರನ್ನು ಸಂದರ್ಶಿಸಿದರೂ ಅನೇಕ ಔಷಧಿಗಳ ಪಟ್ಟಿಯನ್ನೇ ಮುಂದಿಡುತ್ತಾರೆ. ಆ್ಯಂಟಿ ಬಯೋಟಿಕ್ ಮಾತ್ರೆಗಳನ್ನು ಸೇವಿಸಿದರೆ ರೋಗವೇನು ಗುಣಮುಖವಾಗುತ್ತದೆ. ಹೀಗಾಗಿಯೇ ಹೆಚ್ಚಿನ ಜನರು ಸಣ್ಣ ತೊಂದರೆಗಳಿಗೂ ಇಂದು ಮಾತ್ರೆಗಳನ್ನೇ ನೆಚ್ಚಿಕೊಂಡಿರುವುದು. ಆದರೆ ಇದೇ ಆ್ಯಂಟಿ ಬಯೋಟಿಕ್ ಸೇವನೆಯಿಂದ ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಸಂಶೋಧಕರ ತಂಡವೊಂದು ಎಚ್ಚರಿಸಿದೆ.

ರೋಗಿಗಳು ಆ್ಯಂಟಿ ಬಯೋಟಿಕ್ ಮಾತ್ರೆಗಳನ್ನು ಸೇವಿಸಿದಷ್ಟು ಅನಾರೋಗ್ಯದ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಅಧ್ಯಯನದಲ್ಲಿ ಆ್ಯಂಟಿ ಬಯೋಟಿಕ್ ಮಾತ್ರೆಗಳ ಸೇವನೆಯಿಂದ ಎರಡು ರೀತಿಯ ಹೃದಯದ ಸಮಸ್ಯೆಗಳು ಉಂಟಾಗುತ್ತಿರುವುದು ಪತ್ತೆಯಾಗಿದೆ. ಸಾಮಾನ್ಯವಾಗಿ ಸಿಪ್ರೊಫ್ಲೋಕ್ಸಾಸಿನ್ ಅಥವಾ ಸಿಪ್ರೊ ಎಂದೂ ಕರೆಯಲ್ಪಡುವ ಫ್ಲೋರೋಕ್ವಿನೋಲೋನ್ ಎಂಬ ಆ್ಯಂಟಿ ಬಯೋಟಿಕ್ ಅಂಶ ಹೊಂದಿರುವ ಮಾತ್ರೆಗಳು  ಮಹಿಟ್ರಲ್ ರಿಗರ್ಜಿಟೇಶನ್ ಎಂಬ ಹೃದಯ ಸಮಸ್ಯೆಗಳ ಅಪಾಯವನ್ನು 2.4 ಪಟ್ಟು ಹೆಚ್ಚಿಸುತ್ತದೆ.

ಇಂತಹ ಆ್ಯಂಟಿ ಬಯೋಟಿಕ್ ಮಾತ್ರೆಗಳ  ಸೇವನೆಯಿಂದಾಗಿ, ದೇಹದ ರಕ್ತವು ಹೃದಯದಿಂದ ಇಡೀ ದೇಹಕ್ಕೆ ಚಲನೆಗೊಳ್ಳುವ ಬದಲು ಹೃದಯಕ್ಕೆ ಮರುಪಂಪ್ ಆಗುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಪೋರ್ನ್​ ವೀಕ್ಷಕರೇ ಎಚ್ಚರ: ನಿಮ್ಮ ವಿಡಿಯೋ ಕೂಡ ರೆಕಾರ್ಡ್​ ಆಗುತ್ತಿದೆ..!

"ಆ್ಯಂಟಿ ಬಯೋಟಿಕ್ ಎಂಬದು ಮ್ಯಾಜಿಕ್ ಮಾತ್ರೆ ಆಗಿದೆ. ಇದು ಸ್ವಲ್ಪ ಸಮಯದವರೆಗೆ ವಿಶ್ರಾಂತಿ ನೀಡುತ್ತದೆ. ಇದೇ ಮಾತ್ರೆಯ  ಅಡ್ಡ ಪರಿಣಾಮಗಳು ಮುಂದಿನ ದಿನಗಳಲ್ಲಿ ಆವರಿಸಿಕೊಳ್ಳುತ್ತದೆ ಎಂದು ದಿ ಇಂಡಿಯನ್ ಹಾಸ್ಪಿಟಲ್ ಫಾರ್ಮಸಿಸ್ಟ್ಸ್ ಅಸೋಸಿಯೇಶನ್‌ನ 54 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಹೈನ್ ಎಕಾಡೆಮಿಕ್ಸ್ ತಿಳಿಸಿದ್ದರು. ಇದೀಗ ಅಮೆರಿಕನ್ ಸಂಶೋಧಕರ ಹೊಸ ಅಧ್ಯಯನ ಕೂಡ ಆ್ಯಂಟಿ ಬಯೋಟಿಕ್​ನ ಮಾತ್ರೆಯು ಹೃದಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿರುವುದು ಆಘಾತಕಾರಿ.

ಇದನ್ನೂ ಕ್ಲಿಕ್ ಮಾಡಿ: ಸಾಧನೆ ಮೆರೆದ ಸಿಂಧುಗೆ ಐಷಾರಾಮಿ ಕಾರು ಗಿಫ್ಟ್​ ನೀಡಿದ ಟಾಲಿವುಡ್ ಸ್ಟಾರ್ ನಟ..!

ಹೀಗಾಗಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಆ್ಯಂಟಿ ಬಯೋಟಿಕ್ ಮಾತ್ರೆಗಳ ಮೊರೆ ಹೋಗದೆ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಉತ್ತಮ.
Loading...

First published:September 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...