ಮಲಬದ್ಧತೆ (Constipation) ಸಾಮಾನ್ಯವಾಗಿ ಬರುವ ಸಮಸ್ಯೆ (Problem). ಈ ಸಮಸ್ಯೆಗೆ ನಾವು ತಿನ್ನುವ ಆಹಾರ (Food) ಪದ್ಧತಿ ಮುಖ್ಯ ಕಾರಣವಾಗಿದೆ. ಮಲಬದ್ಧತೆ ಸಮಸ್ಯೆ ಹೆಚ್ಚಾದರೆ ಅದು ಪೈಲ್ಸ್ ಕಾಯಿಲೆ (Piles Disease) ಉಂಟು ಮಾಡುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ. ಮಲಬದ್ಧತೆ ತೊಡೆದು ಹಾಕಲು ನೀವು ಆಸ್ಪತ್ರೆಗೆ ಹೋಗಿ ಸಾಕಷ್ಟು ದುಡ್ಡು ಖರ್ಚು ಮಾಡುವ ಅನಿವಾರ್ಯತೆ ಇರಲ್ಲ. ನೀವು ಮನೆಯಲ್ಲಿಯೇ ಕೆಲವು ಮನೆಮದ್ದುಗಳನ್ನು ಫಾಲೋ ಮಾಡುವ ಮೂಲಕ ಮಲಬದ್ಧತೆ ಸಮಸ್ಯೆ ತೊಡೆದು ಹಾಕುವುದು ಉತ್ತಮ. ಮಲಬದ್ಧತೆ ಸಮಸ್ಯೆ ತೊಡೆದು ಹಾಕಲು ಅಂಜೂರದ ಹಣ್ಣು ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
ಅಂಜೂರದ ಹಣ್ಣು ಮತ್ತು ಮಲಬದ್ಧತೆ ಸಮಸ್ಯೆ
ಅಂಜೂರದ ಹಣ್ಣು ಇದನ್ನು ಇಂಗ್ಲಿಷ್‌ನಲ್ಲಿ ಫಿಗ್ ಎಂದು ಕರೆಯುತ್ತಾರೆ. ಇದು ಸಿಹಿ ಪದಾರ್ಥ. ತಿನ್ನಲು ರುಚಿಯಾಗಿರುತ್ತದೆ. ಫಿಕಸ್ ಮರದ ಮೇಲೆ ಬೆಳೆಯುವ ಅಂಜೂರದ ಹಣ್ಣುಗಳು ಆಂಟಿ ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ.
ಅಂಜೂರದ ಹಣ್ಣುಗಳನ್ನು ಡ್ರೈಫ್ರೂಟ್ ರೂಪದಲ್ಲಿ ತಿನ್ನಲಾಗುತ್ತದೆ. ಅಂಜೂರದ ಹಣ್ಣುಗಳು ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ಬೆಚ್ಚಗಿನ ಪರಿಣಾಮ ಹೊಂದಿದೆ. ಇದರ ಸೇವನೆಯು ಮಲಬದ್ಧತೆ, ಮಧುಮೇಹ, ಹೃದಯದ ತೊಂದರೆ ಮತ್ತು ಸಂಧಿವಾತ ಸಮಸ್ಯೆ ತಡೆಯುತ್ತದೆ ಎಂದು ಹೇಳಲಾಗಿದೆ.
ಮಲಬದ್ಧತೆ ಸಮಸ್ಯೆ ನಿವಾರಣೆಗೆ ಅಂಜೂರದ ಹಣ್ಣು ಹೇಗೆ ಪರಿಹಾರ ನೀಡುತ್ತದೆ?
ಅಂಜೂರವು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸತು, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ನೀರು, ಕಾರ್ಬೋಹೈಡ್ರೇಟ್ ಪೋಷಕಾಂಶ ಹೊಂದಿದೆ.
ನ್ಯೂಟ್ರಿಷನಿಸ್ಟ್ ಕೇಜಲ್ ಶಾ ಹೇಳುವ ಪ್ರಕಾರ, ರಾತ್ರಿ ಎರಡರಿಂದ ಮೂರು ಅಂಜೂರದ ಹಣ್ಣುಗಳನ್ನು ನೆನೆಸಿಟ್ಟು ಬೆಳಗ್ಗೆ ತಿಂದರೆ ಮಲಬದ್ಧತೆ ಸಮಸ್ಯೆ ಹೋಗಲಾಡಿಸಬಹುದು ಎಂದಿದ್ದಾರೆ.
ಅಂಜೂರದ ಹಣ್ಣುಗಳು ವಿರೇಚಕ ಗುಣ ಹೊಂದಿವೆ. ಇದು ಜೀರ್ಣಕ್ರಿಯೆ ಚೆನ್ನಾಗಿರಿಸುತ್ತದೆ. ಕರುಳಿನ ಚಲನೆ ಚೆನ್ನಾಗಿರುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆ ಬಲಪಡಿಸಲು ಅಂಜೂರದ ಹಣ್ಣುಗಳು ಸಹಕಾರಿ.
ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತವೆ
ಅಂಜೂರ ಸೇವನೆಯು ಜೀರ್ಣಕಾರಿ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಮಲಬದ್ಧತೆ ಮತ್ತು ಅತಿಸಾರ ಸಮಸ್ಯೆ ಪರಿಹಾರವಾಗುತ್ತದೆ. ಅಂಜೂರ ಹಣ್ಣು ಪ್ರಿಬಯಾಟಿಕ್ ಹೊಂದಿದೆ. ಇದು ಒಟ್ಟಾರೆ ಕರುಳಿನ ಆರೋಗ್ಯ ಬಲಪಡಿಸಲು ಸಹಾಯ ಮಾಡುತ್ತದೆ.
ಮೂಳೆ ಸಾಂದ್ರತೆ ಹೆಚ್ಚಿಸುತ್ತದೆ
ಒಂದು ಸಂಶೋಧನೆ ಪ್ರಕಾರ, ಅಂಜೂರದ ಹಣ್ಣುಗಳು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸಮೃದ್ಧ ಆಹಾರವಾಗಿದೆ. ಇದು ಮೂಳೆಯ ಸಾಂದ್ರತೆ ಸುಧಾರಿಸುತ್ತದೆ. ಆಸ್ಟಿಯೊಪೊರೋಸಿಸ್ ಸೇರಿದಂತೆ ಕೆಲವು ರೋಗಗಳನ್ನು ತಪ್ಪಿಸಲು ಇದು ಸಹಕಾರಿ.
ಪೊಟ್ಯಾಸಿಯಮ್ ಭರಿತ ಆಹಾರ ಮೂಳೆ ಸಂಬಂಧಿ ಸಮಸ್ಯೆ ತಡೆಗಟ್ಟಲು ಸಹಾಯ ಮಾಡುತ್ತದೆ.
ರಕ್ತದೊತ್ತಡ ನಿಯಂತ್ರಿಸುತ್ತದೆ
ಅಧಿಕ ರಕ್ತದೊತ್ತಡ ಸಮಸ್ಯೆಯು ಹೃದ್ರೋಗ ಮತ್ತು ಪಾರ್ಶ್ವವಾಯು ಸಮಸ್ಯೆ ಉಂಟು ಮಾಡುತ್ತದೆ. ದೇಹದ ಸೋಡಿಯಂ ಮತ್ತು ಪೊಟ್ಯಾಸಿಯಮ್ ಪ್ರಮಾಣದಲ್ಲಿ ಅಸಮತೋಲನದಿಂದ ಉಂಟಾಗುತ್ತದೆ. ಆಗ ದೇಹದಲ್ಲಿ ಸೋಡಿಯಂ ಹೆಚ್ಚಾಗಿ, ಪೊಟ್ಯಾಸಿಯಮ್ ಪ್ರಮಾಣ ಕಡಿಮೆಯಾಗುತ್ತದೆ.
ಅಂಜೂರದ ಹಣ್ಣನ್ನು ನೆನೆಸಿ ಮತ್ತು ಪ್ರತಿದಿನ ಬೆಳಿಗ್ಗೆ ತಿನ್ನಬಹುದು ಕೆಲವೊಮ್ಮೆ ಇದನ್ನು ರಾತ್ರಿಯ ಊಟದಲ್ಲಿ ಬೇಕಾದರೂ ಸೇರಿಸಿ ತಿನ್ನಬಹುದು.
ದೈನಂದಿನ ಆಹಾರ ಕ್ರಮದಲ್ಲಿ ಅಂಜೂರ ಹಣ್ಣು ಹೇಗೆ ಸೇರಿಸುವುದು?
ಅಂಜೂರದ ಹಣ್ಣುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಅದನ್ನು ಹಿಟ್ಟಿನಲ್ಲಿ ಬೆರೆಸಿ. ಹೀಗೆ ಅದರಿಂದ ಬ್ರೆಡ್, ಕುಕೀಸ್ ಅಥವಾ ಕೇಕ್ ತಯಾರಿಸಿ ತಿನ್ನಬಹುದು.
ಇದನ್ನೂ ಓದಿ: 'ಎದೆ ಬಡಿತ' ಜೋರಾಗಿದೆಯಾ? ಇದು ಪ್ರೀತಿಯೊಂದೇ ಅಲ್ಲ, ಹೃದಯದ ಕಾಯಿಲೆಯೂ ಆಗಿರಬಹುದು!
ಈ ಹಣ್ಣನ್ನು ಹೋಳುಗಳಾಗಿ ಕತ್ತರಿಸಿ ಫ್ರೂಟ್ ಚಾಟ್ ಮಾಡಿ ಸೇವನೆ ಮಾಡಬಹುದು. ಒಣದ್ರಾಕ್ಷಿಯ ಬದಲು ಅಂಜೂರವನ್ನು ಖೀರ್‌ನಲ್ಲಿ ಹಾಕಿ ಸೇವನೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ