• Home
  • »
  • News
  • »
  • lifestyle
  • »
  • Constipation Yoga: ಮಲಬದ್ಧತೆ ಸಮಸ್ಯೆ ನಿವಾರಣೆಗೆ ಮಾತ್ರೆ ಬೇಡ, ದಿನವೂ ಈ ಯೋಗ ಮಾಡಿ!

Constipation Yoga: ಮಲಬದ್ಧತೆ ಸಮಸ್ಯೆ ನಿವಾರಣೆಗೆ ಮಾತ್ರೆ ಬೇಡ, ದಿನವೂ ಈ ಯೋಗ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಲಬದ್ಧತೆ ತೆಗೆದು ಹಾಕಲು ಮನೆಮದ್ದು ಬಳಕೆ ಮಾಡಲಾಗುತ್ತದೆ. ಹೆಚ್ಚಿನ ಜನರು ಇದಕ್ಕಾಗಿ ಔಷಧಿ ಸೇವನೆ ಕೂಡ ಮಾಡ್ತಾರೆ. ಆದರೆ ಯೋಗದಿಂದ ಮಲಬದ್ಧತೆ ಸಮಸ್ಯೆ ಹೋಗಲಾಡಿಸಬಹುದು ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ. ಭುಜಂಗಾಸನದಿಂದ ಮಲಬದ್ಧತೆ ಸಮಸ್ಯೆ ತೆಗೆದು ಹಾಕುವ ಮೂಲಕ ಕರುಳಿನ ಚಲನೆಯನ್ನು ಸಹ ಸರಿಪಡಿಸಬಹುದು ಆಗಿದೆ.

ಮುಂದೆ ಓದಿ ...
  • Share this:

    ಉತ್ತಮ ಆರೋಗ್ಯಕ್ಕೆ (Good Health) ಒಳ್ಳೆಯ ಆರೋಗ್ಯಕರ ಆಹಾರ (Good Food) ಸೇವನೆ ಮಾಡುವುದು ಎಷ್ಟು ಅಗತ್ಯವೋ ಹಾಗೆಯೇ ಸರಿಯಾದ ಕರುಳಿನ ಚಲನೆ (Bowel Movement) ಸಹ ತುಂಬಾ ಅಗತ್ಯವಾಗಿದೆ (Important). ಬೆಳಿಗ್ಗೆ ಟಾಯ್ಲೆಟ್ ಹೋದಾಗ ಮಲ ವಿಸರ್ಜನೆ ಸರಿಯಾಗಿ ಹೋದರೆ, ಹೊಟ್ಟೆ ಸ್ವಚ್ಛವಾದರೆ, ಯಾವುದೇ ಸಮಸ್ಯೆ ಆಗಲ್ಲ. ಜೊತೆಗೆ ದಿನವಿಡೀ ಮನಸ್ಸಿನಲ್ಲಿ ತಾಜಾತನ ಮತ್ತು ದೇಹದಲ್ಲಿ ಶಕ್ತಿ ಇರುತ್ತದೆ. ಜೊತೆಗೆ ತೂಕ ಕೂಡ ನಿಯಂತ್ರಣಕ್ಕೆ ಬರುತ್ತದೆ. ಹಾಗೂ ದೇಹವು ಆರೋಗ್ಯ ಸಮಸ್ಯೆಯಿಂದ ದೂರವಿರಲು ಇದು ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆ, ಮನಸ್ಸು, ದೇಹ ಸಮಸ್ಯೆಗಳು ಮತ್ತು ರೋಗಗಳಿಂದ ಸುತ್ತುವರಿಯಲು ಕಾರಣ ಆಗುತ್ತದೆ.


    ಮಲಬದ್ಧತೆ ಸಮಸ್ಯೆ ನಿವಾರಣೆಗೆ ಯೋಗ


    ಮಲಬದ್ಧತೆ ತೆಗೆದು ಹಾಕಲು ಮನೆಮದ್ದು ಬಳಕೆ ಮಾಡಲಾಗುತ್ತದೆ. ಹೆಚ್ಚಿನ ಜನರು ಇದಕ್ಕಾಗಿ ಔಷಧಿ ಸೇವನೆ ಕೂಡ ಮಾಡ್ತಾರೆ. ಆದರೆ ಯೋಗದಿಂದ ಮಲಬದ್ಧತೆ ಸಮಸ್ಯೆ ಹೋಗಲಾಡಿಸಬಹುದು ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ. ಭುಜಂಗಾಸನದಿಂದ ಮಲಬದ್ಧತೆ ಸಮಸ್ಯೆ ತೆಗೆದು ಹಾಕುವ ಮೂಲಕ ಕರುಳಿನ ಚಲನೆಯನ್ನು ಸಹ ಸರಿಪಡಿಸಬಹುದು ಆಗಿದೆ.


    ಹಾಗಾದ್ರೆ ಇಲ್ಲಿ ನಾವು ಭುಜಂಗಾಸನ ಮಾಡುವುದರಿಂದ ಸಿಗುವ ಪ್ರಯೋಜನಗಳು ಮತ್ತು ಅದನ್ನು ಮಾಡುವ ಸರಿಯಾದ ವಿಧಾನ ಯಾವುದು ಅಂತಾ ಯೋಗ ತಜ್ಞ ಅಮಿತ್ ಖನ್ನಾ ಅವ್ರು ಹೇಳಿದ್ದಾರೆ. ಅನ್ನೋದನ್ನ ತಿಳಿಯೋಣ.




    ಭುಜಂಗಾಸನದ ವಿಶೇಷತೆ  


    ಅಮಿತ್ ಖನ್ನಾ ಪ್ರಕಾರ, ಭುಜಂಗಾಸನ ಎಂಬುದು ಭುಜಂಗ್ ಎಂಬ ಪದದಿಂದ ಬಂದಿದೆ. ಇದರ ಅರ್ಥ ಭಂಗಿ ಅಥವಾ ಹಾವಿನ ಭಂಗಿ. ನಾಗರ ಹಾವು ತನ್ನ ಹೆಡೆ ಎತ್ತುವುದನ್ನು ನೀವು ನೋಡಿರಬೇಕು. ಹಾಗಾಗಿ ಇದನ್ನು ನಾಗರ ಹಾವು  ಸ್ಟ್ರೆಚ್ ಎಂದೂ ಕರೆಯುತ್ತಾರೆ. ಸೂರ್ಯ ನಮಸ್ಕಾರದಲ್ಲಿ ಈ ಆಸನ ಅಥವಾ ಭಂಗಿ ಸೇರಿದೆ.


    ತುಂಬಾ ದಣಿವು ಮತ್ತು ಒತ್ತಡದಲ್ಲಿರುವವರು ಭುಜಂಗಾಸನ ಭಂಗಿ ನಿಯಮಿತವಾಗಿ ಮಾಡಿದರೆ, ದೇಹ ಮತ್ತು ಮನಸ್ಸು ಹಗುರವಾಗುತ್ತದೆ. ಹೊಟ್ಟೆ ಮೇಲೆ ಮಲಗಿಯೇ ಮಾಡಬೇಕು. ಇದು ಇಡೀ ದೇಹವನ್ನು ಹಿಗ್ಗಿಸುತ್ತದೆ.


    ಹಾಗಾಗಿ ಇದು ಆಯಾಸ ತೆಗೆದು ಹಾಕಉತ್ತದೆ. ಭುಜಂಗಾಸನ ಮಾಡಲು ಬಹಳ ಕಡಿಮೆ ಸಮಯ ಸಾಕು. ಇದನ್ನು ಖಾಲಿ ಹೊಟ್ಟೆಯಲ್ಲಿ ಯಾವಾಗ ಬೇಕಾದರೂ ಮಾಡಬಹುದು.


    ಭುಜಂಗಾಸನ ಮಾಡುವ ಸರಿಯಾದ ವಿಧಾನ ಹೀಗಿದೆ


    ಮೊದಲು ಹೊಟ್ಟೆಯ ಮೇಲೆ ಮಲಗಿ. ನಂತರ ಕಾಲುಗಳನ್ನು ನೇರವಾಗಿ ಮತ್ತು ಉದ್ದವಾಗಿ ಹರಡಿ. ಅಂಗೈಗಳನ್ನು ಭುಜದ ಕೆಳಗೆ ನೆಲದ ಮೇಲೆ ಇರಿಸಿ. ಈಗ ಉಸಿರಾಡುತ್ತಾ ಭುಜಗಳನ್ನು ನೆಲದಿಂದ ಮೇಲಕ್ಕೆತ್ತಿ. ಸಾಧ್ಯವಾದಷ್ಟು ದೇಹವನ್ನು ಹಿಗ್ಗಿಸಿ,


    ತಲೆಯನ್ನು ಹಿಂದಕ್ಕೆ ಚಾಚಿ. ಸಾಧ್ಯವಾದಷ್ಟು ತಲೆ ಹಿಂದಕ್ಕೆ ಬಾಗಿಸಿ. ಮೊಣಕೈ ನೇರವಾಗಿರಿಸಿ. ನಂತರ ಉಸಿರಾಡುತ್ತಾ ಸಾಮಾನ್ಯ ಸ್ಥಿತಿಗೆ ಮರಳಿ. ಈ ಆಸನವನ್ನು 5 ಬಾರಿ ಪುನರಾವರ್ತಿಸಿ.


    ಭುಜಂಗಾಸನದ ಪ್ರಯೋಜನಗಳು


    ಭುಜಂಗಾಸನವು ದೇಹವನ್ನು ಹಿಗ್ಗಿಸಲು ಸಹಾಯಕ. ಈ ಆಸನವು ಎಲ್ಲಾ ಕಿಬ್ಬೊಟ್ಟೆಯ ಅಂಗಗಳಿಗೆ ವಿಶೇಷವಾಗಿ ಕರುಳು, ಯಕೃತ್ತು, ಮೂತ್ರಪಿಂಡಕ್ಕೆ ಆರೋಗ್ಯಕ್ಕೆ ಪ್ರಯೋಜನಕಾರಿ. ಪಿರಿಯಡ್ಸ್ ಅಥವಾ ಅನಿಯಮಿತ ಅವಧಿಗಳಲ್ಲಿ ತೀವ್ರವಾದ ನೋವು ಇದ್ದರೆ, ಈ ಆಸನವು ಪರಿಹಾರ ನೀಡುತ್ತದೆ. ಈ ಭಂಗಿಯು ಸಾಮಾನ್ಯ ಬೆನ್ನುನೋವಿನ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.


    ಇದನ್ನೂ ಓದಿ: ಕ್ಷಣ ಮಾತ್ರದಲ್ಲಿ ಒತ್ತಡ ನಿವಾರಣೆ ಮಾಡಲು ಈ ಕ್ರಮಗಳನ್ನು ಅನುಸರಿಸಿ


    ಇದನ್ನು ನಿಯಮಿತವಾಗಿ ಮಾಡಿದರೆ ಕರುಳಿನ ಚಲನೆ ಸರಿಯಾಗಿರುತ್ತದೆ. ಮಲಬದ್ಧತೆ ನಿವಾರಿಸುತ್ತದೆ. ಕೆಲವು ಕಾರಣಗಳಿಂದ ಭುಜಂಗಾಸನ ಮಾಡಲು ಸಾಧ್ಯವಾಗದಿದ್ದರೆ ಮೊದಲು ಕೆಲವು ಬೇರೆ ಆಸನಗಳನ್ನು ಮಾಡುವುದು ರೂಢಿ ಮಾಡಿಕೊಳ್ಳಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು