• Home
  • »
  • News
  • »
  • lifestyle
  • »
  • Constipation Problem: ಮಲಬದ್ಧತೆ ಸಮಸ್ಯೆ ಕಡಿಮೆ ಆಗ್ಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಲೇಬೇಡಿ

Constipation Problem: ಮಲಬದ್ಧತೆ ಸಮಸ್ಯೆ ಕಡಿಮೆ ಆಗ್ಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಲೇಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಸಾಬ್ಗೋಲ್ ಒಂದು ಸಸ್ಯ ಆಗಿದೆ. ಇಸಾಬ್ಗೊಲ್ನ ಸಿಪ್ಪೆಯಿಂದ ಅದರ ಎಲೆಗಳು ಮತ್ತು ಹೂವುಗಳವರೆಗೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆ ನಿವಾರಣೆಗೆ ಅವುಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ ಇದು ಅನಾನೂಕೂಲತೆ ಉಂಟು ಮಾಡುತ್ತದೆ. ಇಸಾಬ್ಗೋಲ್ ಯಾವೆಲ್ಲಾ ಆರೋಗ್ಯ ಸಂಬಂಧಿತ ಅಡ್ಡ ಪರಿಣಾಮ ಉಂಟು ಮಾಡುತ್ತದೆ ಎಂದು ನೋಡೋಣ.

ಮುಂದೆ ಓದಿ ...
  • Share this:

    ಮಲಬದ್ಧತೆ (Constipation) ಹೊಟ್ಟೆಯ (Stomach) ಒಂದು ಗಂಭೀರ ಸಮಸ್ಯೆ (Serious Disease) ಆಗಿದೆ. ಪ್ರತಿಯೊಬ್ಬ ವ್ಯಕ್ತಿಯು (Person) ತನ್ನ ಜೀವನದಲ್ಲಿ (Life) ಒಮ್ಮೆಯಾದರೂ ಮಲಬದ್ಧತೆ ಸಮಸ್ಯೆಗೆ (Problem) ತುತ್ತಾಗಿರುತ್ತಾನೆ. ಅದೇ ವೇಳೆ ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಹುರಿದ ಮತ್ತು ಕರಿದ ಪದಾರ್ಥ ಅತಿಯಾದ ಸೇವನೆಯಿಂದ ತುಂಬಾ ಜನರು ದೀರ್ಘ ಕಾಲದ ಮಲಬದ್ಧತೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜನರು ವೈದ್ಯಕೀಯ ಔಷಧಿಗಳಿಗಿಂತ ಮಲಬದ್ಧತೆಗೆ ಹೆಚ್ಚಾಗಿ ಮನೆಮದ್ದು ಮತ್ತು ಆಯುರ್ವೇದ ಔಷಧ ಸೇವನೆಗೆ ಹೆಚ್ಚಿನ ಒತ್ತು ಕೊಡುತ್ತಾರೆ ಮತ್ತು ನಂಬಿದ್ದಾರೆ. ಮಲಬದ್ಧತೆ ನಿವಾರಣೆಗೆ ಬಳಸುವ ಒಂದು ಔಷಧ, ಮನೆಮದ್ದು ಅಂದ್ರೆ ಇಸಾಬ್ಗೋಲ್.


    ಮಲಬದ್ಧತೆ ನಿಯಂತ್ರಣಕ್ಕೆ ಬಳಸುವ ಇಸಾಬ್ಗೋಲ್ ಮನೆಮದ್ದು ಎಷ್ಟು ಹಿತ?


    ಇಸಾಬ್ಗೋಲ್ ಒಂದು ಸಸ್ಯ ಆಗಿದೆ. ಇದರ ತುದಿಗಳಲ್ಲಿ ಗೋಧಿಯಂತಹ ಕಿವಿಯೋಲೆ ಹೋಲುವ ಕಾಳುಗಳಿವೆ. ಇಸಾಬ್ಗೊಲ್ನ ಸಿಪ್ಪೆಯಿಂದ ಅದರ ಎಲೆಗಳು ಮತ್ತು ಹೂವುಗಳವರೆಗೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆ ನಿವಾರಣೆಗೆ ಅವುಗಳನ್ನು ಬಳಕೆ ಮಾಡಲಾಗುತ್ತದೆ.


    ಆದರೆ ಅದರ ಅನುಕೂಲಗಳ ಜೊತೆಗೆ ಕೆಲವು ಅನಾನುಕೂಲತೆಗಳೂ ಇವೆ. ಇಸಾಬ್ಗೋಲ್ ಯಾವೆಲ್ಲಾ ಆರೋಗ್ಯ ಸಂಬಂಧಿತ ಅಡ್ಡ ಪರಿಣಾಮ ಉಂಟು ಮಾಡುತ್ತದೆ ಎಂದು ನಾವು ಇಲ್ಲಿ ನೋಡೋಣ.


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಇಸಾಬ್ಗೋಲ್ ತಿನ್ನುವ ಅನಾನುಕೂಲತೆಗಳ ಬಗ್ಗೆ ತಜ್ಞರ ಅಭಿಪ್ರಾಯ


    ಪ್ರಮಾಣೀಕೃತ ಡಯೆಟಿಷಿಯನ್ ನಿತಿಕಾ ತನ್ವಾರ್ ಅವರು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಗ್ಯ ಮತ್ತು ಆಹಾರಕ್ಕೆ ಸಂಬಂಧಿಸಿದ ಮಾಹಿತಿ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಇತ್ತೀಚೆಗೆ ಇಸಾಬ್ಗೋಲ್ ಸೇವನೆಯ ಅನಾನುಕೂಲಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಹೆಚ್ಚು ಇಸಾಬ್ಗೋಲ್ ತಿನ್ನುವುದು ಯಾವ ರೀತಿಯಲ್ಲಿ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.


    ಇಸಾಬ್ಗೋಲ್ ಕರುಳಿನ ಅಡಚಣೆ ಉಂಟು ಮಾಡುವ ಸಾಧ್ಯತೆ ಹೆ್ಚು


    ಇಸಾಬ್ಗೋಲ್ ಒಂದು ಬೃಹತ್ ವಿರೇಚಕ ಆಗಿದೆ. ಅಂದರೆ ಇದು ಮಲವನ್ನು ಮೃದುಗೊಳಿಸುತ್ತದೆ. ಹಾಗಾಗಿ ಸೈಲಿಯಮ್ ಬೋಲಸ್ ಊದಿಕೊಂಡಾಗ ಅದು ಕರುಳನ್ನು ವಿಸ್ತರಿಸುತ್ತದೆ. ಸ್ವಲ್ಪ ಸಮಯದ ನಂತರ ಕರುಳು ಎಷ್ಟು ಹಿಗ್ಗುತ್ತದೆ ಅಂದ್ರೆ ಅದು ಬೋಲಸ್ ಅಥವಾ ಆಹಾರದ ತುಂಡುಗಳನ್ನು ರವಾನಿಸಲು ವಿಫಲ ಆಗುತ್ತದೆ. ಇದು ಕರುಳಿನಲ್ಲಿ ಅಡಚಣೆ ಉಂಟು ಮಾಡುತ್ತದೆ. ಮತ್ತು ಕರುಳಿನ ಛಿದ್ರತೆ ಸೇರಿ ಇತರೆ ಸಮಸ್ಯೆ ಉಂಟು ಮಾಡುತ್ತದೆ.


    ಇಸಾಬ್ಗೋಲ್ ಮಲಬದ್ಧತೆ ಸಮಸ್ಯೆ ಉಲ್ಬಣಗೊಳಿಸಬಹುದು


    ತಜ್ಞರ ಪ್ರಕಾರ, ಇಸಾಬ್ಗೋಲ್ನೊಂದಿಗೆ ಹೆಚ್ಚು ನೀರು ಸೇವನೆ ಮಾಡದೇ ಹೋದ್ರೆ ಅದು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ಗಂಭೀರ ಆಗಿಸುತ್ತದೆ. ಯಾಕಂದ್ರೆ ವಯಸ್ಸಾದವರಲ್ಲಿ ಮಲಬದ್ಧತೆ ಸಮಸ್ಯೆ ತುಂಬಾ ಸಾಮಾನ್ಯ. ಹಾಗಾಗಿ ಅವರು ಇಸಾಬ್ಗೋಲ್ ನ್ನು ಬಳಸುತ್ತಿದ್ದರೆ ಈ ವಿಷಯ ನೆನಪಿಡಬೇಕು.


    ಇಸಾಬ್ಗೋಲ್ ಸರಿಯಾದ ಪೋಷಕಾಂಶ ಹೀರಿಕೊಳ್ಳುವಿಕೆ ತಡೆಯುತ್ತದೆ.


    ಲಿಪಿಡ್ ಹೀರಿಕೊಳ್ಳುವಿಕೆ ವಿಳಂಬಗೊಳಿಸಲು ಇಸಾಬ್ಗೋಲ್ ಕಾರಣ ಆಗಿದೆ. ಕೆ, ಎ, ಡಿ, ಇ ನಂತಹ ಕೊಬ್ಬು ಕರಗುವ ವಿಟಮಿನ್‌ ಗಳು ಕರುಳಿನಿಂದ ಹೀರಲು ಇದು ಅವಶ್ಯಕವಾಗಿದೆ.


    ಇದನ್ನೂ ಓದಿ: ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ಈ ಹಣ್ಣು ಪ್ರಯೋಜನಕಾರಿ


    ಇಸಾಬ್ಗೋಲ್ ಯಾವ ಪ್ರಮಾಣದಲ್ಲಿ ಸೇವನೆ ಹಾನಿ ಉಂಟು ಮಾಡುತ್ತದೆ?


    ಹೊಟ್ಟೆಯನ್ನು ಸ್ವಚ್ಛಗೊಳಿಸಲು ನೀವು ಪ್ರತಿದಿನ ಇಸಾಬ್ಗೋಲ್ ಸೇವನೆ ಮಾಡಿದರೆ ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದು ತಜ್ಞರು ಹೇಳುತ್ತಾರೆ. ಇಸಾಬ್ಗೋಲ್ ಅನ್ನು ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಅಪಾಯ ಹೆಚ್ಚಿಸುತ್ತದೆ. ಇದು ನಿಮ್ಮ ದೇಹವು ಶೀಘ್ರದಲ್ಲೇ ಗಂಭೀರ ಕಾಯಿಲೆಗೆ ತುತ್ತಾಗುವಂತೆ ಮಾಡುತ್ತದೆ.

    Published by:renukadariyannavar
    First published: