• Home
 • »
 • News
 • »
 • lifestyle
 • »
 • Constipation Problem: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

Constipation Problem: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಜನರು ಮಲಬದ್ಧತೆ ಗಂಭೀರ ಸಮಸ್ಯೆಯನ್ನು ಲಘುವಾಗಿ ನೋಡುತ್ತಾರೆ. ನೀವು ಸಮಯಕ್ಕೆ ಸರಿಯಾಗಿ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ನೀವು ಪೈಲ್ಸ್ ಮತ್ತು ತೀವ್ರತರ ಪ್ರಕರಣಗಳಲ್ಲಿ ಗುದದ ಕ್ಯಾನ್ಸರ್ ಅಪಾಯ ಎದುರಿಸುತ್ತೀರಿ.

 • Share this:

  ಹದಗೆಡುತ್ತಿರುವ ಜೀವನಶೈಲಿ (Bad Lifestyle) ಮತ್ತು ಆಹಾರ (Food) ಪದ್ಧತಿಯಿಂದ ಜನರು ಹೆಚ್ಚು ಮಲಬದ್ಧತೆಯ ಸಮಸ್ಯೆ (Constipation Problem) ಎದುರಿಸುವಂತಾಗಿದೆ. ಮಲಬದ್ಧತೆ ಸಮಸ್ಯೆ ದೀರ್ಘ ಕಾಲದವರೆಗೆ ಇದ್ದರೆ, ಅದು ಆರೋಗ್ಯವನ್ನು ಅನೇಕ ರೀತಿಯಲ್ಲಿ ಹಾನಿ ಮಾಡುತ್ತದೆ. ವೈದ್ಯಕೀಯ ಸುದ್ದಿ ಪ್ರಕಾರ, ಜನರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದು ಮತ್ತು ಉತ್ತಮ ಆಹಾರ ಪದ್ಧತಿ ಫಾಲೋ ಮಾಡುವುದು, ಮಲಬದ್ಧತೆ ಸಮಸ್ಯೆ ನೈಸರ್ಗಿಕವಾಗಿ ಗುಣ ಪಡಿಸಬಹುದು. ಆದರೆ ಹೊಟ್ಟೆ ಶುದ್ಧವಾಗದ ಹಿನ್ನೆಲೆ ಜನರು ಔಷಧಿ ಸೇವನೆ ಮೊರೆ ಹೋಗುತ್ತಾರೆ. ಕಳಪೆ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಇದ್ರಿಂದ ಅನೇಕ ಜನರು ಮಲಬದ್ಧತೆಯಿಂದ ಬಳಲುತ್ತಿದ್ದಾರೆ.


  ಮಲಬದ್ಧತೆ ಸಮಸ್ಯೆಯನ್ನು ಲಘುವಾಗಿ ನೋಡದಿರಿ


  ಅನೇಕ ಜನರು ಈ ಗಂಭೀರ ಸಮಸ್ಯೆ ಅನ್ನು ಲಘುವಾಗಿ ನೋಡುತ್ತಾರೆ. ನೀವು ಸಮಯಕ್ಕೆ ಸರಿಯಾಗಿ ಇದಕ್ಕೆ ಚಿಕಿತ್ಸೆ ನೀಡದೇ ಇದ್ದರೆ, ನೀವು ಪೈಲ್ಸ್ ಮತ್ತು ತೀವ್ರತರ ಪ್ರಕರಣಗಳಲ್ಲಿ ಗುದದ ಕ್ಯಾನ್ಸರ್ ಅಪಾಯ ಎದುರಿಸುತ್ತೀರಿ. ಕರುಳಿನ ಚಲನೆಗಳು ವಿರಳವಾಗಿ ಅಥವಾ ಹಾದು ಹೋಗಲು ಕಷ್ಟವಾದಾಗ ಮಲಬದ್ಧತೆ ಉಂಟಾಗುತ್ತದೆ.


  ಕೆಟ್ಟ ಆಹಾರ ಪದ್ಧತಿ, ದಿನಚರಿಯ ಬದಲಾವಣೆ ಅಥವಾ ಫೈಬರ್ ಕಡಿಮೆ ಸೇವನೆ ಮಲಬದ್ಧತೆ ಹೆಚ್ಚು ಉಂಟಾಗುವಂತೆ ಮಾಡುತ್ತದೆ ಎಂದು ತಜ್ಞರು ಸೂಚನೆ ನೀಡುತ್ತಾರೆ. ನೀವು ತೀವ್ರ ನೋವು, ನಿಮ್ಮ ಮಲದಲ್ಲಿ ರಕ್ತ ಅಥವಾ ಮೂರು ವಾರಗಳಿಗಿಂತ ಹೆಚ್ಚು ವಾರ ಮಲಬದ್ಧತೆ ಸಮಸ್ಯೆ ಅನುಭವಿಸಿದರೆ, ನೀವು ಜಾಗ್ರತೆ ವಹಿಸಿ ಮತ್ತು ಕೂಡಲೇ ವೈದ್ಯರ ಸಂಪರ್ಕ ಮಾಡಿ.


  ಇದನ್ನೂ ಓದಿ: ರೂಟ್ ಟು ಸ್ಟೀಮ್ ಕುಕ್ಕಿಂಗ್ ಎಂದರೇನು? ಈರುಳ್ಳಿ ಸಿಪ್ಪೆಯ ಚಹಾ ಮಾಡುವುದು ಹೇಗೆ?


  ಮಲಬದ್ಧತೆ ಸಮಸ್ಯೆಯಿಂದ ದಿನವಿಡೀ ಚಡಪಡಿಕೆ


  ಪ್ರಶಸ್ತಿ ವಿಜೇತ ಪೌಷ್ಟಿಕ ತಜ್ಞ ಲವ್ನೀತ್ ಬಾತ್ರಾ ಪ್ರಕಾರ, ಐದು ಭಾರತೀಯರಲ್ಲಿ ಒಬ್ಬರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದಿನವಿಡೀ ಚಡಪಡಿಕೆಗೆ ಕಾರಣವಾಗುತ್ತದೆ. ಜೊತೆಗೆ ಅನೇಕ ದೀರ್ಘ ಕಾಲದ ಕಾಯಿಲೆಗೆ ಮೂಲ ಕಾರಣ. ಮಲಬದ್ಧತೆಗೆ ಚಿಕಿತ್ಸೆ ಏನು? ಔಷಧದಲ್ಲಿ ಮಲಬದ್ಧತೆಗೆ ಹಲವು ಪರಿಹಾರ ಇದೆ. ಆದರೆ ಕೆಲವು ಆಹಾರ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಹೆಚ್ಚಿಸುವ ಮೂಲಕ ನೀವು ಪರಿಹಾರ ಪಡೆಯಬಹುದು.


  ಒಣಗಿದ ಪ್ಲಮ್


  ಒಣಗಿದ ಪ್ಲಮ್ ಸೇವನೆ ಮಾಡುವುದು ಮಲಬದ್ಧತೆ ನಿವಾರಿಸಲು ಅತ್ಯುತ್ತಮ ಮತ್ತು ಅತ್ಯಂತ ಪರಿಣಾಮಕಾರಿ ಪರಿಹಾರ. ಇದು ನಿಮ್ಮ ದೇಹದಲ್ಲಿ ಆಹಾರ ಜೀರ್ಣಿಸಿಕೊಳ್ಳುವ ಸೋರ್ಬಿಟೋಲ್ ಅನ್ನು ಸಹ ಹೊಂದಿದೆ. ಇದು ಕರುಳಿನಲ್ಲಿ ನೀರನ್ನು ಸೆಳೆಯುವ ಮೂಲಕ ಮಲಬದ್ಧತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರುಳಿನ ಚಲನೆಗೆ ಉತ್ತೇಜನ ನೀಡುತ್ತದೆ.


  ತರಕಾರಿ ರಸ


  ಬೆಳಗಿನ ಉಪಾಹಾರದ ನಂತರ ಮತ್ತು ಊಟದ ಮೊದಲು ಅಥವಾ ಸಂಜೆ ನಿಮ್ಮ ನೆಚ್ಚಿನ ತರಕಾರಿಗಳಿಂದ ಮಾಡಿದ ತರಕಾರಿ ರಸ ಸೇವನೆ ಮಾಡುವುದು ನಿಮ್ಮ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಉತ್ತಮ. ಪಾಲಕ್ + ಟೊಮ್ಯಾಟೊ + ಬೀಟ್ರೂಟ್ + ನಿಂಬೆ ರಸ + ಶುಂಠಿ ಮಿಶ್ರಣ ಮಾಡುವ ಮೂಲಕ ನೀವು ತಾಜಾ ರಸ ತಯಾರಿಸಬಹುದು.


  ತ್ರಿಫಲ


  ತ್ರಿಫಲ ಒಂದು ಅದ್ಭುತ ಗಿಡಮೂಲಿಕೆ. ಇದು ಮೂರು ಪ್ರಮುಖ ಗಿಡಮೂಲಿಕೆಯಿಂದ ಮಾಡಲ್ಪಟ್ಟಿದೆ. ಅವುಗಳೆಂದರೆ ಅಮಲಕಿ (ಆಮ್ಲಾ), ಹರಿತಕಿ (ಹರಾದ್) ಮತ್ತು ಬಿಭಿಟಕಿ (ಬಹೇರಾ), ಇವೆಲ್ಲವೂ ಮಲಬದ್ಧತೆ ನಿವಾರಿಸಲು ಸಹಾಯ ಮಾಡುತ್ತದೆ. ಮಲಗುವ ಮೊದಲು ಒಂದು ಕಪ್ ಬೆಚ್ಚಗಿನ ಹಾಲು ಅಥವಾ ಬೆಚ್ಚಗಿನ ನೀರಿನಲ್ಲಿ ಅರ್ಧ ಟೀ ಚಮಚ ತ್ರಿಫಲ ಸೇವನೆ ಮಾಡಿ.


  ಓಟ್ಸ್


  ಓಟ್ಸ್ ಒಂದು ಧಾನ್ಯ. ಇದು ಬೀಟಾ-ಗ್ಲುಕಾನ್‌ಗಳಲ್ಲಿ ಸಮೃದ್ಧವಾಗಿದೆ. ಇದು ಕರಗಬಲ್ಲ ಫೈಬರ್, ಇದು ಹೊಟ್ಟೆಯ ಕಾರ್ಯ ನಿರ್ವಹಣೆ ಉತ್ತೇಜಿಸುತ್ತದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕರುಳಿನ ಕಾರ್ಯ ನಿರ್ವಹಣೆ ಉತ್ತೇಜಿಸಿ ಸುಧಾರಿಸುತ್ತದೆ.


  ಇದನ್ನೂ ಓದಿ: ದೇಹದ ವಿವಿಧ ಭಾಗಗಳಲ್ಲಿ ಸಂಭವಿಸುವ ಕಾಯಿಲೆಯು ಯಾವ ರೀತಿಯ ಉರಿಯೂತಕ್ಕೆ ಕಾರಣವಾಗುತ್ತದೆ?


  ತುಪ್ಪ


  ತುಪ್ಪದ ಬ್ಯುಟೈರೇಟ್ ಅಂಶ ಮಲಬದ್ಧತೆ ನಿವಾರಣೆಗೆ ಅದ್ಭುತವಾಗಿ ಕೆಲಸ ಮಾಡುತ್ತದೆ. ತುಪ್ಪದ ಎಣ್ಣೆಯುಕ್ತ ರಚನೆ ನಯಗೊಳಿಸುವ ಎಣ್ಣೆಯಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಕರುಳಿನ ಚಲನೆಯ ಗಡಸುತನ ಒಡೆಯುತ್ತದೆ. ತುಪ್ಪವು ಕರುಳಿನ ಚಲನೆಯನ್ನು ನಿಯಮಿತವಾಗಿ ಮತ್ತು ಸುಲಭವಾಗಿಸಲು ಸಹಾಯ ಮಾಡುತ್ತದೆ.

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು