• Home
  • »
  • News
  • »
  • lifestyle
  • »
  • Constipation Problem: ಮಲಬದ್ಧತೆ ಆರೋಗ್ಯ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ಈ ಟಿಪ್ಸ್​ಗಳನ್ನು ಪಾಲಿಸಿ

Constipation Problem: ಮಲಬದ್ಧತೆ ಆರೋಗ್ಯ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ಈ ಟಿಪ್ಸ್​ಗಳನ್ನು ಪಾಲಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಲಬದ್ಧತೆ ಸಮಸ್ಯೆ ಮೂಲವ್ಯಾಧಿ ಗಾಳಿ ಕರುಳು ಮತ್ತು ಹೊಟ್ಟೆಯ ಅನೇಕ ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣ. ಮಲಬದ್ಧತೆಗೆ ಹಲವು ರೀತಿಯ ಔಷಧಿಗಳು ಮತ್ತು ಚಿಕಿತ್ಸೆ ಲಭ್ಯವಿವೆ. ಕೆಲವು ಮನೆಮದ್ದುಗಳ ಮೂಲಕವೂ ನೀವು ಪರಿಹಾರ ಪಡೆಯಬಹುದು. ಮಲಬದ್ಧತೆಗೆ ಕೆಲವು ಆಯುರ್ವೇದ ಪರಿಹಾರ ಇದೆ.

  • Share this:

    ಮಲಬದ್ಧತೆ (Constipation) ಒಂದು ಗಂಭೀರ ಆರೋಗ್ಯ ಸಮಸ್ಯೆ (Serious Health Problem) ಆಗಿದೆ. ಆದರೆ ಜನರು (People) ಅದನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಇದು ನಿಮಗೆ ಅನಾನುಕೂಲ ಉಂಟು ಮಾಡುತ್ತದೆ. ಮಲಬದ್ಧತೆ ಹೊಟ್ಟೆ ನೋವಿನ (Stomach Pain) ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಸಹ ಉಂಟು ಮಾಡುವ ಸಾಧ್ಯತೆ ಹೆಚ್ಚು. ಮಲಬದ್ಧತೆಗೆ ಮುಖ್ಯ ಕಾರಣವೆಂದರೆ ಅದು ಅನಿಯಮಿತ ಜೀವನಶೈಲಿ ಮತ್ತು ಕಳಪೆ ಆಹಾರ ಸೇವನೆ ಮಾಡುವುದು. ಹಾಗಾಗಿ ಮಲಬದ್ಧತೆ ಸಮಸ್ಯೆಗೆ ಸರಿಯಾಗಿ ಚಿಕಿತ್ಸೆ ನೀಡುವುದು ಅವಶ್ಯಕ. ಮಲಬದ್ಧತೆಗೆ ಚಿಕಿತ್ಸೆ ನೀಡದೇ ಹೋದರೆ ಅದು ನಂತರ ದೀರ್ಘಕಾಲದ ಸಮಸ್ಯೆಯಾಗಿ ಪರಿಣಮಿಸಬಹುದು.


    ಮಲಬದ್ಧತೆ ಸಮಸ್ಯೆಗೆ ಮನೆಮದ್ದು ಯಾವುದು?


    ಮಲಬದ್ಧತೆ ಸಮಸ್ಯೆ ಮೂಲವ್ಯಾಧಿ, ಗಾಳಿ ಕರುಳು ಮತ್ತು ಹೊಟ್ಟೆಯ ಅನೇಕ ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣ. ಮಲಬದ್ಧತೆಗೆ ಮನೆಮದ್ದು ಯಾವುದೆಂದರೆ ಮಲಬದ್ಧತೆಗೆ ಹಲವು ರೀತಿಯ ಔಷಧಿಗಳು ಮತ್ತು ಚಿಕಿತ್ಸೆ ಲಭ್ಯವಿವೆ. ಕೆಲವು ಮನೆಮದ್ದುಗಳ ಮೂಲಕವೂ ನೀವು ಪರಿಹಾರ ಪಡೆಯಬಹುದು.


    ಮಲಬದ್ಧತೆಗೆ ಕೆಲವು ಆಯುರ್ವೇದ ಪರಿಹಾರ ಇದೆ. ಇದನ್ನು ವರ್ಷಗಳಿಂದ ಬಳಸುತ್ತಾ ಬರಲಾಗಿದೆ. ಅವು ಯಾವುದೇ ಅಡ್ಡ ಪರಿಣಾಮ ಉಂಟು ಮಾಡಲ್ಲ.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ಮಲಬದ್ಧತೆಯ ಕಾರಣ ಮತ್ತು ಲಕ್ಷಣಗಳು ಯಾವುವು?


    ಉತ್ತರ ಪ್ರದೇಶದ ನೋಯ್ಡಾದ ಕಪಿಲ್ ಆಯುರ್ವೇದ ಕ್ಲಿನಿಕ್‌ನ ಮುಖ್ಯ ವೈದ್ಯ ಕಪಿಲ್ ತ್ಯಾಗಿ ಅವರ ಪ್ರಕಾರ, ಇಂದಿನ ದಿನಗಳಲ್ಲಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಮಲಬದ್ಧತೆ ಸಮಸ್ಯೆ ಉಂಟು ಮಾಡುತ್ತದೆ.


    ಮಲಬದ್ಧತೆಯ ಲಕ್ಷಣಗಳು ವಾರದಲ್ಲಿ ಮೂರು ಬಾರಿ ಕಡಿಮೆ ಮಲವಿಸರ್ಜನೆ, ಗಡ್ಡೆ ಅಥವಾ ಗಟ್ಟಿಯಾದ ಮಲ ಹೊಂದಿರುವುದು, ಕರುಳಿನ ಚಲನೆ ಮಾಡಲು ಪ್ರಯಾಸ ಪಡುವುದು, ಕರುಳಿನ ಚಲನೆ ತಡೆಯುವ, ಗುದನಾಳದಲ್ಲಿ ಅಡಚಣೆ ಹೊಂದಿರುವ ಭಾವನೆ, ಮಲ ಹಾದುಹೋಗುವಾಗ ಪ್ರಯಾಸ, ಗುದನಾಳದಿಂದ ಮಲವನ್ನು ಸಂಪೂರ್ಣವಾಗಿ ಖಾಲಿ ಮಾಡಲು ಸಾಧ್ಯವಾಗದ ಸ್ಥಿತಿ ಆಗಿದೆ.


    ಮಲಬದ್ಧತೆ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ


    ಮಲಬದ್ಧತೆ ಸಮಸ್ಯೆ ಎದುರಿಸುತ್ತಿದ್ದರೆ ಪರಿಹಾರ ಪಡೆಯಲು ಬೆಚ್ಚಗಿನ ನೀರು ಮತ್ತು ತುಪ್ಪ ಸೇವನೆ ಮಾಡಬಹುದು. ಉತ್ತರ ಪ್ರದೇಶದ ನೋಯ್ಡಾದ ಕಪಿಲ್ ಆಯುರ್ವೇದ ಚಿಕಿತ್ಸಾಲಯದ ಮುಖ್ಯ ವೈದ್ಯ ಕಪಿಲ್ ತ್ಯಾಗಿ ಅವರು ಮಲಬದ್ಧತೆ ಗಂಭೀರ ಸಮಸ್ಯೆ ತೊಡೆದು ಹಾಕಲು ತುಪ್ಪ ಮತ್ತು ಬಿಸಿನೀರನ್ನು ಹೇಗೆ ಬಳಸಬಹುದು ಎಂದು ಹೇಳಲಾಗಿದೆ.


    ಮಲಬದ್ಧತೆ ಸಮಸ್ಯೆಗೆ ತುಪ್ಪ ಮತ್ತು ಬಿಸಿ ನೀರು ಸೇವನೆ


    ವೈದ್ಯರ ಪ್ರಕಾರ ತುಪ್ಪವು ನಮ್ಮ ಜೀರ್ಣಾಂಗ ವ್ಯವಸ್ಥೆ ನಯವಾಗಿಸುತ್ತದೆ. ಇದು ಕರುಳಿನ ಚಲನೆಯನ್ನು ಸುಲಭ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಬೆರೆಸಿದಾಗ, ಅದು ನಿಮ್ಮ ಘನ ಮಲವನ್ನು ಮೃದುವಾಗಿಸುತ್ತದೆ. ಬಿಸಿ ನೀರು ದೇಹದಿಂದ ತ್ಯಾಜ್ಯ ಹೊರ ಹಾಕಲು ಸಹಾಯ ಮಾಡುತ್ತದೆ. ಇದು ನಿಮಗೆ ತುಂಬಾ ಪರಿಣಾಮಕಾರಿ.


    ಮಲಬದ್ಧತೆ ಹೋಗಲಾಡಿಸಲು ತುಪ್ಪ ಮತ್ತು ಬಿಸಿ ನೀರಿನ ಪ್ರಯೋಜನಗಳು


    ತುಪ್ಪವು ನಮ್ಮ ದೇಹವನ್ನು ನಯಗೊಳಿಸಲು ಮತ್ತು ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಇದು ತ್ಯಾಜ್ಯದ ಪರಿಚಲನೆ ಸುಧಾರಿಸುತ್ತದೆ. ಮತ್ತು ಮಲಬದ್ಧತೆ ಅಪಾಯ ಕಡಿಮೆ ಮಾಡುತ್ತದೆ. ತುಪ್ಪವು ಬ್ಯುಟರಿಕ್ ಆಮ್ಲದ ಉತ್ತಮ ಮೂಲ.


    ಬ್ಯುಟರಿಕ್ ಆಮ್ಲದ ಸೇವನೆ ಕರುಳಿನ ಚಯಾಪಚಯ ಸುಧಾರಿಸುತ್ತದೆ ಮತ್ತು ಮಲ ಚಲನೆಗೆ ಸಹಾಯ ಮಾಡುತ್ತದೆ.


    ತುಪ್ಪದ ಇತರೆ ಪ್ರಯೋಜನಗಳು


    ತುಪ್ಪ ಅತ್ಯುತ್ತಮ ನೈಸರ್ಗಿಕ ವಿರೇಚಕ. ಇದು ತೂಕ ನಷ್ಟ, ಉತ್ತಮ ನಿದ್ರೆ ಸೇರಿದಂತೆ ಮೂಳೆಗಳ ಬಲ ಹೆಚ್ಚಿಸುತ್ತದೆ. ಅನೇಕ ವಿಷಯಗಳಲ್ಲಿ ಇದು ಸಹಕಾರಿ. ಹೊಟ್ಟೆ ನೋವು, ಉಬ್ಬುವುದು ಮತ್ತು ಮಲಬದ್ಧತೆ ಲಕ್ಷಣ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


    ತುಪ್ಪ ಮತ್ತು ಬಿಸಿನೀರನ್ನು ಹೇಗೆ ಬಳಸುವುದು?


    ಮೊದಲು ಒಂದು ಲೋಟ ಸ್ವಲ್ಪ ಬೆಚ್ಚಗಿನ ನೀರನ್ನು ಬಿಸಿ ಮಾಡಿ. ಮತ್ತು ಅದರಲ್ಲಿ ಒಂದು ಚಮಚ ತುಪ್ಪ ಬೆರೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಪ್ರತಿದಿನ ಕುಡಿಯಬಹುದು. ಜೀರ್ಣಾಂಗ ವ್ಯವಸ್ಥೆ, ಕರುಳು ಮತ್ತು ಕೊಲೊನ್ ಗಟ್ಟಿಯಾದ ಮತ್ತು ಒಣಗಿದಾಗ ಮಲಬದ್ಧತೆ ಉಂಟಾಗುತ್ತದೆ.

    Published by:renukadariyannavar
    First published: