• Home
  • »
  • News
  • »
  • lifestyle
  • »
  • Stomach Disease: ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ಹೋಗಲಾಡಿಸಲು ಹಲಸಿನ ಹಣ್ಣು ಹೀಗೆ ಸೇವಿಸಿ!

Stomach Disease: ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ಹೋಗಲಾಡಿಸಲು ಹಲಸಿನ ಹಣ್ಣು ಹೀಗೆ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲಸು ದೇಹಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಮಧುಮೇಹ ರಕ್ತದೊತ್ತಡ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಅಲ್ಸರ್ ತಡೆಗೆ ಇದು ಪ್ರಯೋಜನಕಾರಿ ಆಗಿದೆ. ಅಷ್ಟೇ ಅಲ್ಲದೇ ಹಲಸಿನ ಹಣ್ಣಿನ ಬೀಜಗಳೂ ಸಹ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತವೆ.

  • Share this:

    ಹಲಸನ್ನು (Jack Fruit) ಹಣ್ಣು ಮತ್ತು ತರಕಾರಿ (Fruit And Vegetable) ಎರಡರ ವರ್ಗಕ್ಕೂ ಸೇರಿಸಲಾಗಿದೆ. ಯಾಕೆಂದರೆ ಹಲಸು ಮಾಗಿದಾಗ ಹಣ್ಣಿನಂತೆ ತಿನ್ನಲಾಗುತ್ತದೆ. ಕಾಯಿ ಇದ್ದಾಗ ಅದನ್ನು ತರಕಾರಿಯಾಗಿ ಅನೇಕ ಪಾಕ ವಿಧಾನಗಳಲ್ಲಿ (Recipe) ಬಳಕೆ ಮಾಡಲಾಗುತ್ತದೆ. ಹಲಸಿನ ಇಡ್ಲಿ, ಚಿಪ್ಸ್, ಪಲ್ಯ, ಹಲಸಿನ ಹುಳಿ, ಹಲಸಿನ ಹಪ್ಪಳವನ್ನು ಮಾಡಿ ಸವಿಯಲಾಗುತ್ತದೆ. ಆದರೆ ಇದು ಹಣ್ಣು ಅಥವಾ ತರಕಾರಿ ಎರಡರಲ್ಲೂ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಅನೇಕ ವರ್ಷಗಳಿಂದ ಹಲಸಿನ ಹಣ್ಣಿನ ತರಕಾರಿಯಾಗಿ ಹಲವು ರೆಸಿಪಿಗಳಲ್ಲಿ ಸೇವನೆ ಮಾಡಲಾಗುತ್ತಿದೆ. ಹಲಸಿನ ಹಣ್ಣಿನಲ್ಲಿ ಅನೇಕ ಪ್ರಮುಖ ಪೋಷಕಾಂಶಗಳಿವೆ.


    ಹಲಸು ದೇಹಕ್ಕೆ ತುಂಬಾ ಪ್ರಯೋಜನಕಾರಿ


    ಹಲಸು ದೇಹಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಮಧುಮೇಹ, ರಕ್ತದೊತ್ತಡ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಅಲ್ಸರ್ ತಡೆಗೆ ಇದು ಪ್ರಯೋಜನಕಾರಿ ಆಗಿದೆ. ಅಷ್ಟೇ ಅಲ್ಲದೇ, ಹಲಸಿನ ಹಣ್ಣಿನ ಬೀಜಗಳನ್ನು ತೆಗೆದು ಎಸೆಯುತ್ತಾರೆ. ಅದೇ ವೇಳೆ ಹಲಸಿನ ಬೀಜಗಳನ್ನು ತಿನ್ನಬೇಕೇ ಅಥವಾ ತಿನ್ನಬಾರದೇ ಎಂಬ ಪ್ರಶ್ನೆ ಮೂಡುತ್ತದೆ.


    ಹಲಸಿನ ಬೀಜಗಳನ್ನು ಹೇಗೆ ತಿನ್ನಬೇಕು ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಉಂಟಾಗುತ್ತದೆ. ಹಲಸಿನ ಹಣ್ಣಿನ ಜೊತೆಗೆ ಅದರ ಬೀಜಗಳು ತಮ್ಮದೇ ಆದ ಅನೇಕ ಆರೋಗ್ಯ ಪ್ರಯೋಜನ ಹೊಂದಿವೆ. ಹಾಗಾದರೆ ಹಲಸಿನ ಹಣ್ಣಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಮತ್ತು ಅದನ್ನು ಆಹಾರದಲ್ಲಿ ಸೇರಿಸಿಕೊಳ್ಳುವ ಸರಿಯಾದ ಮಾರ್ಗ ಯಾವುದೆಂದು ನೋಡೋಣ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು


    2019 ರಲ್ಲಿ ಹಲಸಿನ ಹಣ್ಣಿನ ಮೇಲೆ ನಡೆಸಿದ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಅಧ್ಯಯನದ ಪ್ರಕಾರ, ಇದು ಪ್ರೋಟೀನ್, ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ಅದೇ ವೇಳೆ ಇದು ರಿಬೋಫ್ಲಾವಿನ್ ಮತ್ತು ಥಯಾಮಿನ್‌ನಂತಹ ಬಿ ವಿಟಮಿನ್‌ಗಳ ಉತ್ತಮ ಮೂಲ ಆಗಿದೆ.


    ಅದೇ ವೇಳೆ ಹಲಸಿನ ಹಣ್ಣಿನಲ್ಲಿರುವ ಫೈಬರ್ ಮತ್ತು ನಿರೋಧಕ ಪಿಷ್ಟವು  ದೇಹಕ್ಕೆ ಹೋಗುತ್ತದೆ. ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿಗೆ ಆಹಾರದ ಮೂಲವಾಗಿದೆ. ಇದು ಸರಿಯಾಗಿ ಕಾರ್ಯ ನಿರ್ವಹಿಸಲು ಉತ್ತೇಜಿಸುತ್ತದೆ. ರಂಜಕ ಮತ್ತು ಮೆಗ್ನೀಸಿಯಮ್‌ ಉತ್ತಮ ಮೂಲವಾಗಿದೆ.


    ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ


    ಹಲಸಿನ ಹಣ್ಣು ಹುಣ್ಣುಗಳಿಂದ ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಐಸೊಫ್ಲಾವೊನ್ಸ್, ಲಿಗ್ನಾನ್ಸ್ ಮತ್ತು ಸಪೋನಿನ್‌ ವಿವಿಧ ಫೈಟೊನ್ಯೂಟ್ರಿಯೆಂಟ್‌ ಹೊಂದಿದೆ. ಇದು ಆಂಟಿಕ್ಯಾನ್ಸರ್, ಆಂಟಿಹೈಪರ್ಟೆನ್ಸಿವ್, ಆಂಟಿಲ್ಸರ್ ಮತ್ತು ಆಂಟಿಏಜಿಂಗ್ ಗುಣಲಕ್ಷಣ ಹೊಂದಿದೆ.


    ದೇಹದಲ್ಲಿ ಕ್ಯಾನ್ಸರ್ ಕೋಶಗಳ ರಚನೆ ತಡೆಯುತ್ತದೆ. ಕರಗುವ ಮತ್ತು ಕರಗದ ನಾರು ಎರಡೂ ಹಲಸಿನ ಹಣ್ಣಿನಲ್ಲಿ ಮತ್ತು ಬೀಜದಲ್ಲಿ ಇದೆ. ಇದು ಜೀರ್ಣಕಾರಿ ಸಮಸ್ಯೆಗಳಲ್ಲಿ ಬಹಳ ಪ್ರಯೋಜನಕಾರಿ. ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಇದು ತುಂಬಾ ಪ್ರಯೋಜನಕಾರಿ.


    ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವು ಜೀರ್ಣಕಾರಿ ಆರೋಗ್ಯ ಸಮತೋಲನಗೊಳಿಸುತ್ತದೆ. ರೋಗ ನಿರೋಧಕ ಕಾರ್ಯ ಹೆಚ್ಚಿಸುತ್ತದೆ. ಹಲಸಿನ ಹಣ್ಣು ಮಲಬದ್ಧತೆ, ಅಜೀರ್ಣ ಇತ್ಯಾದಿ ಸಮಸ್ಯೆ ನಿವಾರಿಸುತ್ತದೆ.


    ಹಲಸಿನ ಹಣ್ಣನ್ನು ಆಹಾರದಲ್ಲಿ ಹೀಗೆ ಸೇರಿಸಿ


    ಕುದಿಸುವುದು: ಹಲಸಿನ ಹಣ್ಣನ್ನು ಉಪ್ಪು ಹಾಕಿ ಬೇಯಿಸಿ ತಿನ್ನಬಹುದು. ಆಗ ಅದರ ಪೋಷಕಾಂಶಗಳು ದೇಹದಲ್ಲಿ ಚೆನ್ನಾಗಿ ಹೀರಲ್ಪಡುತ್ತವೆ.


    ಮೇಲೋಗರವಾಗಿ: ಹಲಸಿನ ಹಣ್ಣನ್ನು ಸಣ್ಣ ತುಂಡುಗಳಾಗಿ, ಆಹಾರದಲ್ಲಿ ಮೇಲೋಗರವಾಗಿ ಸೇವಿಸಿ.


    ತಿಂಡಿಯಾಗಿ: ಹಲಸಿನ ಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ತುಪ್ಪ ಅಥವಾ ಬೆಣ್ಣೆ, ಕರಿಮೆಣಸು, ಉಪ್ಪು, ಚಾಟ್ ಮಸಾಲಾ ಇತ್ಯಾದಿ ಜೊತೆ ಹುರಿದು, ತಿಂಡಿಯಾಗಿ ಸೇವಿಸಿ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಚಿಪ್ಸ್: ಹಲಸಿನ ಹಣ್ಣಿನ ಚಿಪ್ಸ್ ತಯಾರಿಸಿ. ಅದರಲ್ಲಿ ತೆಳುವಾದ ಹೋಳುಗಳನ್ನು ಮಾಡಿ. ಅವುಗಳನ್ನು ತುಪ್ಪ ಅಥವಾ ಆಲಿವ್ ಎಣ್ಣೆ ಹುರಿಯಿರಿ. ಕರಿಮೆಣಸು, ಚಾಟ್ ಮಸಾಲಾ ಮತ್ತು ಉಪ್ಪನ್ನು ಸಿಂಪಡಿಸಿ ಸೇವಿಸಿ. ಸಲಾಡ್ ನಲ್ಲೂ ಬಳಸಬಹುದು.

    Published by:renukadariyannavar
    First published: