Electric Current To Brain: ಮೆದುಳಿಗೆ ಎಲೆಕ್ಟ್ರಿಕ್ ಕರೆಂಟ್ ಪ್ರವಹಿಸುವುದರಿಂದ ವಯಸ್ಕರ ಸ್ಮರಣೆ ಹೆಚ್ಚಾಗುತ್ತಂತೆ! ಇದು ಸಂಶೋಧನೆಯಿಂದ ಹೊರಬಿದ್ದ ಸಂಗತಿ

ನಮಗೆ ವಯಸ್ಸಾದಂತೆ ನಮ್ಮ ಸ್ಮರಣೆಯು ಕ್ಷೀಣವಾಗುತ್ತಾ ಹೋಗುತ್ತದೆ ಅದರಲ್ಲೂ ಜಾಗತಿಕ ಜನಸಂಖ್ಯೆಯು ಹೆಚ್ಚು ವೇಗವಾಗಿ ವಯಸ್ಸಾದ ಕಡೆಗೆ ವಾಲುತ್ತಿದ್ದು ವಿಜ್ಞಾನಿಗಳು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿದ್ದಾರೆ. ದೀರ್ಘಕಾಲದವರೆಗೆ ಮೆದುಳು ಕಾರ್ಯನಿರ್ವಹಿಸುವಂತೆ ಮಾಡಲು ಅಂತೆಯೇ ಬುದ್ಧಿಮಾಂದ್ಯತೆ ಹಾಗೂ ಆಲ್ಝೈಮರ್ನಂತಹ ಕಾಯಿಲೆಗಳನ್ನು ದೂರವಿಡಲು ಸಂಶೋಧಕರು ಅನೇಕ ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದಾರೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮಗೆ ವಯಸ್ಸಾದಂತೆ ನಮ್ಮ ಸ್ಮರಣೆಯು ಕ್ಷೀಣವಾಗುತ್ತಾ ಹೋಗುತ್ತದೆ ಅದರಲ್ಲೂ ಜಾಗತಿಕ ಜನಸಂಖ್ಯೆಯು (Global population) ಹೆಚ್ಚು ವೇಗವಾಗಿ ವಯಸ್ಸಾದ ಕಡೆಗೆ ವಾಲುತ್ತಿದ್ದು ವಿಜ್ಞಾನಿಗಳು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿದ್ದಾರೆ. ದೀರ್ಘಕಾಲದವರೆಗೆ ಮೆದುಳು ಕಾರ್ಯನಿರ್ವಹಿಸುವಂತೆ ಮಾಡಲು ಅಂತೆಯೇ ಬುದ್ಧಿಮಾಂದ್ಯತೆ ಹಾಗೂ ಆಲ್ಝೈಮರ್ನಂತಹ (Alzheimer's) ಕಾಯಿಲೆಗಳನ್ನು ದೂರವಿಡಲು ಸಂಶೋಧಕರು ಅನೇಕ ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದಾರೆ. ವಿದ್ಯುದ್ವಾರಗಳನ್ನು (Electrode) ಲಗತ್ತಿಸಲಾದ ಕ್ಯಾಪ್ ಮೂಲಕ ಅನ್ವಯಿಸಲಾದ ಸೌಮ್ಯವಾದ, ಆಕ್ರಮಣಶೀಲವಲ್ಲದ ವಿದ್ಯುತ್ ಪ್ರಚೋದನೆಯು (Electrical stimulation) ವಯಸ್ಸಾಗುವುದರ ಪರಿಣಾಮಗಳನ್ನು ಎದುರಿಸಲು ಮತ್ತು ನಮ್ಮ ಸ್ಮರಣೆ ಪರಿಧಿಗಳನ್ನು ಉತ್ತಮವಾಗಿಸಲು ಮತ್ತು ಹೆಚ್ಚು ದೃಢವಾದ ಆಕಾರದಲ್ಲಿಡಲು ಸಾಕಾಗುತ್ತದೆ ಎಂದು ಹೊಸ ಅಧ್ಯಯನವು ಸೂಚಿಸುತ್ತದೆ.

ಸೌಮ್ಯವಾದ, ಆಕ್ರಮಣಶೀಲವಲ್ಲದ ವಿದ್ಯುತ್ ಪ್ರಚೋದನೆ:
ತಾಂತ್ರಿಕವಾಗಿ, ಇದನ್ನು ಟ್ರಾನ್ಸ್‌ಕ್ರಾನಿಯಲ್ ಆಲ್ಟರ್ನೇಟಿಂಗ್ ಕರೆಂಟ್ ಸ್ಟಿಮ್ಯುಲೇಶನ್ ಅಥವಾ tACS ಎಂದು ಕರೆಯಲಾಗುತ್ತದೆ ಮತ್ತು ಇದು ನಮ್ಮ ಮೆದುಳಿನ ಅಲೆಗಳನ್ನು ಸಿಂಕ್ರೊನೈಸ್ ಮಾಡುವ ಮೂಲಕ ಕೆಲಸ ಮಾಡುತ್ತದೆ ಎಂದು ಊಹಿಸಲಾಗಿದೆ.

ಒಂದು ತಿಂಗಳವರೆಗೆ ಜ್ಞಾಪಕ ಶಕ್ತಿ:
20 ನಿಮಿಷಗಳ ಕಾಲ ಮೆದುಳಿನ ಮೂಲಕ ವಿದ್ಯುತ್ ಪ್ರವಾಹವನ್ನು ಪ್ರವಹಿಸುವುದರಿಂದ ವಯಸ್ಕರಲ್ಲಿ ಸುಮಾರು ಒಂದು ತಿಂಗಳವರೆಗೆ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ಬಹಿರಂಗಪಡಿಸುತ್ತದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?
ಸ್ವಿಮ್ – ಕ್ಯಾಪ್ ಮಾದರಿಯ ಸಾಧನದ ಮೂಲಕ ಮೆದುಳಿನ ಪ್ರಚೋದನೆಯನ್ನುಂಟು ಮಾಡಿದ್ದು ನಿರ್ದಿಷ್ಟ ಸ್ಥಾನಗಳಲ್ಲಿ ವಿದ್ಯುದ್ವಾರಗಳನ್ನು ಹೊಂದಿರುತ್ತದೆ ಇದು ಮೆದುಳಿನ ಸ್ಥಳಗಳಿಗೆ ವಿದ್ಯುತ್ ಪ್ರವಾಹವನ್ನು ತಲುಪಿಸುತ್ತದೆ.

ಒಂದು ಕಾರ್ಯನಿರ್ವಹಿಸುವ ವಿಭಾಗ ಇನ್ನೊಂದು ದೀರ್ಘ ಅವಧಿಯ ಸ್ಮರಣೆ ಹೀಗೆ ಮೆದುಳಿನ ಎರಡು ಸ್ಥಳಗಳ ಕಡೆ ಸಂಶೋಧಕರು ಗಮನಿಸುತ್ತಿದ್ದು ಒಂದಕ್ಕೊಂದು ಸಂಪರ್ಕ ಹೊಂದಿದೆ. 65 ರಿಂದ 88 ವಯಸ್ಸಿನ 60 ಭಾಗವಹಿಸುವವರನ್ನು ಈ ಅಧ್ಯಯನದಲ್ಲಿ 60 ಜನರನ್ನು 65 ರಿಂದ 88 ವಯಸ್ಸಿನ ಮೂರು ಗುಂಪುಗಳಾಗಿ ವಿಭಾಜಿಸಿ ಬಳಸಿಕೊಳ್ಳಲಾಯಿತು.

ಒಂದು ಗುಂಪು ಸಾಧನವನ್ನು ಧರಿಸಿದ್ದರೂ ಯಾವುದೇ ವಿದ್ಯುತ್ ಪ್ರಚೋದನೆಯನ್ನು ಪಡೆಯಲಿಲ್ಲ ಇನ್ನೊಂದು ಕೆಲಸದ ಸ್ಮರಣೆಯೊಂದಿಗೆ ಲಿಂಕ್ ಮಾಡಿದ ಸ್ಥಳದಲ್ಲಿ ಪ್ರಚೋದನೆಯನ್ನು ಪಡೆದುಕೊಂಡಿತು ಇನ್ನು ಮೂರನೇ ಗುಂಪು ದೀರ್ಘಾವಧಿಯ ಸ್ಮರಣೆ ಹೊಂದಿರುವ ಸ್ಥಳದಲ್ಲಿ ಪ್ರಚೋದನೆಯನ್ನು ಪಡೆದುಕೊಂಡಿತು.

ಮೆದುಳು ಪ್ಲಾಸ್ಟಿಕ್‌ನಂತೆ:
ಮೆದುಳಿನ ರಸಾಯನಶಾಸ್ತ್ರವನ್ನು ಗುರಿಯಾಗಿಸುವ ಔಷಧಗಳು ಹಾಗೂ ಔಷಧೋಪಚಾರಗಳಂತಿಲ್ಲದ ಈ ರೀತಿಯ ವಿಧಾನವು ಮೆದುಳಿನ ವ್ಯವಸ್ಥೆಗಳನ್ನು ಗುರಿಯಾಗಿಸುತ್ತದೆ. ನಮ್ಮ ಮೆದುಳು ಪ್ಲಾಸ್ಟಿಕ್‌ನಂತೆ ಹಾಗೂ ನಾವು ತಿಳಿದುಕೊಂಡಂತೆ ಅವುಗಳನ್ನು ಬದಲಾಯಿಸಬಹುದು ಎಂಬುದು ಬೋಸ್ಟನ್ ವಿಶ್ವವಿದ್ಯಾನಿಲಯದ ಅರಿವಿನ ನರವಿಜ್ಞಾನ ಸಂಶೋಧಕರಾದ ಅಧ್ಯಯನ ಲೇಖಕ ಶ್ರೇಯ್ ಗ್ರೋವರ್ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Eyes Problem: ಕಣ್ಣಿನ ಸಮಸ್ಯೆಗೆ ಯಾವೆಲ್ಲಾ ಕಾಯಿಲೆಗಳು ಕಾರಣ? ಯಾವ ಯೋಗಾಸನಗಳು ದೃಷ್ಟಿ ಸುಧಾರಿಸುತ್ತವೆ?

ನಾಲ್ಕು ದಿನಗಳ ಅಧ್ಯಯನ ಕೋರ್ಸ್‌ನಲ್ಲಿ ಸಂಶೋಧಕರು ದೀರ್ಘಾವಧಿಯ ಸ್ಮರಣೆ ಹಾಗೂ ಕೆಲಸದ ಸ್ಮರಣೆ ಸ್ಥಳದಲ್ಲಿ ಸುಧಾರಣೆಗಳನ್ನು ಕಂಡುಕೊಂಡಿದ್ದಾರೆ. ಪ್ರಚೋದನೆಯ ಚಿಕಿತ್ಸೆಯ ಮೊದಲು ಅರಿವಿನ ಕಾರ್ಯಕ್ಷಮತೆಯ ಕೆಟ್ಟ ಮಟ್ಟವನ್ನು ತೋರಿಸಿದವರು ಮೆಮೊರಿ ಮರುಸ್ಥಾಪನೆಯಲ್ಲಿ ಹೆಚ್ಚಿನ ಮತ್ತು ದೀರ್ಘ ಸುಧಾರಣೆಗಳನ್ನು ಹೊಂದಿದ್ದರು.

ಚಿಕಿತ್ಸೆ ಸುರಕ್ಷಿತವಾಗಿದ್ದರೂ ಸೌಮ್ಯ ಲಕ್ಷಣವನ್ನು ಪ್ರದರ್ಶಿಸಿದೆ:
ಶ್ರೇಯ್ ಗ್ರೋವರ್ ಅವರ ಪ್ರಕಾರ, ವಿದ್ಯುತ್ ಪ್ರಚೋದನೆಯು ಸ್ಮರಣೆಯ ನಿರ್ಣಾಯಕ ಪ್ರದೇಶಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಚಿಕಿತ್ಸೆಯು ಸುರಕ್ಷಿತವಾಗಿದ್ದರೂ, ಇದು ತುರಿಕೆ ಮತ್ತು ಗುಯ್‌ಗುಟ್ಟಿಸುವಂತಹ ಕೆಲವು ಸೌಮ್ಯ ಅಡ್ಡ ಪರಿಣಾಮಗಳನ್ನು ಹೊಂದಿದೆ. ಆದಾಗ್ಯೂ, ಆಲ್ಝೈಮರ್ ಹೊಂದಿರುವವರಿಗೆ ಇದು ಸಹಾಯಕವಾಗಿದೆಯೇ ಎಂದು ಸಂಶೋಧಕರು ನಿಜವಾಗಿಯೂ ನಿರ್ದಿಷ್ಟಪಡಿಸಿಲ್ಲ. ಸ್ಕಿಜೋಫ್ರೇನಿಯಾ ಅಥವಾ OCD ಯಂತಹ ಅರಿವಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಇತರ ರೀತಿಯ ಪರಿಸ್ಥಿತಿಗಳನ್ನು ಅನ್ವೇಷಿಸಲು ಇದನ್ನು ಇನ್ನೂ ಪರಿಶೀಲಿಸಲಾಗುತ್ತಿದೆ.

ಮೆದುಳಿನ ಕಾರ್ಯನಿರ್ವಹಣೆ:
ಪ್ರಯೋಗವು ಭರವಸೆಯ ಆರಂಭವಾಗಿದೆ: ತಂತ್ರಜ್ಞಾನವು ಆಕ್ರಮಣಶೀಲವಲ್ಲ, ತ್ವರಿತವಾಗಿ ಅನ್ವಯಿಸಬಹುದು ಮತ್ತು ಇದರ ಪರಿಣಾಮ ಕನಿಷ್ಠ ಒಂದು ತಿಂಗಳವರೆಗೆ ಇರುತ್ತದೆ, ಜೊತೆಗೆ ಅಲ್ಪಾವಧಿಯ ಮತ್ತು ದೀರ್ಘಕಾಲೀನ ರೀತಿಯ ಸ್ಮರಣೆ ಮರುಸ್ಥಾಪನೆಯಲ್ಲಿ ಕೆಲಸ ಮಾಡುತ್ತದೆ.

ಇದನ್ನೂ ಓದಿ:  Heart Attack: ಈ ರಕ್ತದ ಗುಂಪಿನವರಿಗೆ ಹಾರ್ಟ್ ಅಟ್ಯಾಕ್ ಆಗೋ ಚಾನ್ಸ್ ಹೆಚ್ಚು!

ನಾವು ಈ ಕೆಲಸವನ್ನು ಅರ್ಥಪೂರ್ಣ ರೀತಿಯಲ್ಲಿ ವಿಸ್ತರಿಸಬಹುದು ಮತ್ತು ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಬಹುದು ಎಂದು ನಾವು ಭಾವಿಸುತ್ತೇವೆ ಎಂಬುದು ಶ್ರೇ ಗ್ರೋವರ್ ಅಭಿಪ್ರಾಯವಾಗಿದೆ.
Published by:Ashwini Prabhu
First published: