contraception: ಮಹಿಳಾ ಕಾಂಡೋಮ್​ ಸುರಕ್ಷಿತವೇ; ಬಳಕೆಯ ವಿಧಾನಗಳೇನು?

ಹಾರ್ಮೋನ್ ರಹಿತ (ಹಾರ್ಮೋನ್ ಅಲ್ಲದ) ಗರ್ಭ ನಿರೋಧಕವಾದ ಕಾಂಡೋಮ್‍ಗಳು ಎಲ್ಲೆಡೆ ಹೆಚ್ಚು ಬಳಕೆಯಲ್ಲಿ ಇವೆ. ಪುರುಷ ಮತ್ತು ಮಹಿಳೆಯರಿಬ್ಬರೂ ಬಳಸುವ ಕಾಂಡೋಮ್‍ಗಳು ಇವೆ. ಮಹಿಳಾ ಕಾಂಡೋಮ್‍ಗಳನ್ನು ಸರಿಯಾಗಿ ಬಳಸಿದರೆ ಪುರುಷ ಕಾಂಡೋಮ್‍ನಷ್ಟೇ ಪರಿಣಾಮಕಾರಿಯಾಗಿವೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕುಟುಂಬ ಯೋಜನೆ ಎಲ್ಲರ ಜೀವನದಲ್ಲಿ ಅತ್ಯಂತ ಪ್ರಮುಖ ಸಂಗತಿ.ಹಾಗಾಗಿ ಪರಿಣಾಮಕಾರಿ ಮತ್ತು ಅನುಕೂಲಕಾರಿ ಗರ್ಭನಿರೋಧಕಗಳನ್ನು (contraception) ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾರ್ಮೋನಲ್ ಗರ್ಭನಿರೋಧಕಗಳು ( Hormonal contraceptives protect) ಶೇಕಡಾ 98 ರಷ್ಟು ಅನಗತ್ಯ ಗರ್ಭಧಾರಣೆಯನ್ನು ತಡೆಯಬಲ್ಲವು ಮತ್ತು ಬಳಸಲು ಅನುಕೂಲಕಾರಿ ಕೂಡ. ಆದರೆ ಅದರಿಂದ ಅಡ್ಡ ಪರಿಣಾಮಗಳು ಕೂಡ ಇವೆ. ಆದ್ದರಿಂದ ಹೆಚ್ಚಾಗಿ ಹಾರ್ಮೋನ್ ರಹಿತ (ಹಾರ್ಮೋನ್ ಅಲ್ಲದ) ಗರ್ಭ ನಿರೋಧಕವಾದ ಕಾಂಡೋಮ್‍ಗಳು ( ಎಲ್ಲೆಡೆ ಹೆಚ್ಚು ಬಳಕೆಯಲ್ಲಿ ಇವೆ.

    ಪುರುಷ ಮತ್ತು ಮಹಿಳೆಯರಿಬ್ಬರೂ ಬಳಸುವ ಕಾಂಡೋಮ್‍ಗಳು ಇವೆ. ಆದರೆ ಅವುಗಳ ಬಳಕೆಯ ಕುರಿತು ಹಲವಾರು ತಪ್ಪು ಕಲ್ಪನೆಗಳು ಕೂಡ ಇವೆ. ಹೆಚ್ಚಿನ ಜನರು ಅವುಗಳ ಬಳಕೆಯ ಬಗ್ಗೆ ಮಾತನಾಡಲು ಕೂಡ ಸಂಕೋಚ ಪಡುತ್ತಾರೆ. ಮಹಿಳಾ ಕಾಂಡೋಮ್‍ಗಳ ಬಗ್ಗೆ ಬಹಳಷ್ಟು ಮಂದಿಗೆ ತಿಳಿದೇ ಇಲ್ಲ ಎನ್ನಬಹುದು. ಅದರ ಜಾಗೃತಿ ಮೂಡಿಸುವ ಅಗತ್ಯ ಇದೆ.  ಮಹಿಳಾ ಕಾಂಡೋಮ್‍ಗಳನ್ನು ಸರಿಯಾಗಿ ಬಳಸಿದರೆ ಪುರುಷ ಕಾಂಡೋಮ್‍ನಷ್ಟೇ ಪರಿಣಾಮಕಾರಿಯಾಗಿದೆ.

    ಮಹಿಳಾ ಕಾಂಡೋಮ್ ಬಳಕೆಯ ಅನುಕೂಲಗಳು : 

    •  ಅನಗತ್ಯ ಗರ್ಭಧಾರಣೆಯನ್ನು ತಡೆಯುತ್ತದೆ.  ಸ್ತ್ರೀ ಮತ್ತು ಪುರುಷರಿಬ್ಬರನ್ನು ಲೈಂಗಿಕ ರೋಗಗಳಿಂದ ರಕ್ಷಿಸುತ್ತದೆ.

    • ಕಡಿಮೆ ಮತ್ತು ಗಂಭೀರವಲ್ಲದ ಅಡ್ಡ ಪರಿಣಾಮಗಳು

    • ಮಹಿಳಾ ಕಾಂಡೋಮ್‍ಗಳನ್ನು ಗುದ ಸಂಭೋಗಕ್ಕೂ ಬಳಸಬಹುದು.

    • ಬಾಹ್ಯ ಉಂಗುರನ್ನು ತೃಪ್ತಿಯನ್ನು ಹೆಚ್ಚಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿರುತ್ತದೆ.    ಸಂಗಾತಿ ನಿಮಿರುವಿಕೆಯನ್ನು ಕಳೆದುಕೊಂಡರೂ ಕಾಂಡೋಮ್ ಅದರ ಸ್ಥಳದಲ್ಲಿಯೇ ಇರುತ್ತದೆ•

    • ಮಹಿಳಾ ಕಾಂಡೋಮ್‍ಗಳನ್ನು ಸಂಭೋಗದ ಕೆಲವು ಗಂಟೆಗಳ ಮೊದಲು ಸುಲಭವಾಗಿ ಹಾಕಿಕೊಳ್ಳಬಹುದು

    • ಇದು ಮಹಿಳೆಯರಿಗೆ ಆಯ್ಕೆ ನೀಡುತ್ತದೆ ಮತ್ತು ಅವರು ಸಂಗಾತಿಗಳ ಮೇಲೆ ಅವಲಂಬಿತರಾಗಬೇಕಿಲ್ಲ

    • ಮಹಿಳಾ ಕಾಂಡೋಮ್‍ಗೆ ಮೃದು ಪ್ಲಾಸ್ಟಿಕ್ ಬಳಸಲಾಗಿರುತ್ತದೆ , ಅದು ಸೂಕ್ಷ್ಮ ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದಿಲ್ಲ


    ಅನಾನುಕೂಲತೆಗಳು:

    • ಬಾಳಿಕೆಯ ಖಾತರಿ ಇರುವುದಿಲ್ಲ

    • ಸಂಭೋಗದ ಸಮಯದಲ್ಲಿ ಯೋನಿಯ ಒಳಗೆ ಜಾರುವ ಸಾಧ್ಯತೆ ಇದೆ•

    • ಮಹಿಳಾ ಕಾಂಡೋಮ್‍ಗಳ ಸಾಮಾನ್ಯವಾಗಿ ಲಭ್ಯವಿರುವುದು ಬಹಳ ಕಡಿಮೆ ಮತ್ತು ದುಬಾರಿ

    •  ಆಂತರಿಕ ಕಾಂಡೋಮ್‍ನಿಂದಾಗಿ ಸಂಭೋಗದ ಸಮಯದಲ್ಲಿ ಹೆಚ್ಚು ಸದ್ದಾಗಬಹುದು
      ಮಾಡಬೇಡಿ :

    • ಪುರುಷ ಮತ್ತು ಮಹಿಳಾ ಕಾಂಡೋಮ್‍ಗಳೆರಡನ್ನು ಒಟ್ಟಿಗೆ ಬಳಸಬಾರದು

    • ಮಹಿಳಾ ಕಾಂಡೋಮ್‍ಗಳನ್ನು ಮರುಬಳಕೆ ಮಾಡಬಾರದು



    • ಬಳಕೆಯ ವಿಧಾನ :  ಖರೀದಿ ಸಿದ ನಂತರ ಪ್ಯಾಕ್ ತೆರೆಯಿರಿ ಮತ್ತು ಕಾಂಡೋಮನ್ನು ಹೊರ ತೆಗೆಯಿರಿ. ಅದರಲ್ಲಿ ಒಂದು ಚಿಕ್ಕ ಉಂಗುರ ಮತ್ತು ಇನ್ನೊಂದು ಸ್ವಲ್ಪ ದೊಡ್ಡ ಉಂಗುರ ಇರುತ್ತದೆ. ಚಿಕ್ಕ ಉಂಗುರವನ್ನು ಯೋನಿಯ ಒಳಗೆ ಸೇರಿಸಬೇಕು, ದೊಡ್ಡ ಉಂಗುರವು ಯೋನಿ ತೆರೆಯುವ ಪ್ರದೇಶವನ್ನು ಆವರಿಸುತ್ತದೆ. ಸಂಭೋಗದ ಸಮಯದಲ್ಲಿ ಶಿಶ್ನವು ಬದಿಯಲ್ಲಿ ಹೋಗದೆ ಕಾಂಡೋಮ್ ಒಳಗೆ ಹೋಗುವಂತೆ ಖಾತರಿಪಡಿಸಿಕೊಳ್ಳಬೇಕು. ಸಂಭೋಗದ ಬಳಿಕ, ದೊಡ್ಡ ಉಂಗುರವನ್ನು ತಿರುಚಿ, ಅದನ್ನು ಎಳೆದು ಕಾಂಡೋಮ್ ಅನ್ನು ಹೊರ ತೆಗೆದು, ಗಂಟು ಹಾಕಿ ಕಸದ ಬುಟ್ಟಿಗೆ ಎಸೆಯಿರಿ.ಪುರುಷ ಮತ್ತು ಮಹಿಳಾ ಕಾಂಡೋಮ್‍ಗಳೆರಡು ಕೂಡ ಸಮಾನ ಪರಿಣಾಮಕಾರಿ ಗರ್ಭನಿರೋಧಕಗಳು.  ಯಾವುದೇ ಗರ್ಭ ನಿರೋಧಕಗಳು ಶೇಕಡಾ 100 ರಷ್ಟು ಪರಿಣಾಮಕಾರಿ ಆಗಿರುವುದಿಲ್ಲ ಎಂಬ ಕುರಿತು ಅಧ್ಯಯನಗಳು ನಡೆದಿವೆ. ಪುರುಷ ಮತ್ತು ಮಹಿಳಾ ಕಾಂಡೋಮ್‍ಗಳೆರಡನ್ನು ಒಟ್ಟಿಗೆ ಬಳಸಬಾರದು ಎಂಬುದನ್ನು ನೆನಪಿಡಿ.


    ಇತರ ಹಾರ್ಮೋನ್ ರಹಿತ ಗರ್ಭ ನಿರೋಧಕ ವಿಧಾನಗಳು :ಐಯುಸಿಡಿ : ಇದು ಪ್ಲಾಸ್ಟಿಕ್ ಮತ್ತು ತಾಮ್ರದಿಂದ ತಯಾರಿಸಿದ ಗರ್ಭಾಶಯದ ಗರ್ಭ ನಿರೋಧಕ ಸಾಧನವಾಗಿದೆ. ಅನಗತ್ಯ ಗರ್ಭಧಾರಣೆ ತಡೆಯಲು ಇದನ್ನು ಗರ್ಭದೊಳಗೆ ಇರಿಸಲಾಗುತ್ತದೆ. ಈ ಸಾಧನದಲ್ಲಿರುವ ತಾಮ್ರವು ವೀರ್ಯಕ್ಕ ಮೊಟ್ಟೆಯನ್ನು ಫಲವತ್ತನಾಗಿಸುವುದು ಕಷ್ಟವಾಗಿಸುತ್ತದೆ. ಇದು ಗರ್ಭಾಶಯದ ಒಳಗಿನ ಲೋಳೆಯನ್ನು ವೀರ್ಯ ಮತ್ತು ಮೊಟ್ಟೆಗೆ ಪ್ರತಿಕೂಲವಾಗಿಸುತ್ತದೆ. ಆಧುನಿಕ ಐಯುಸಿಡಿಗಳು ಪರಿಣಾಮಕಾರಿ ಆಗಿದ್ದರೂ ಕೂಡ, ಐಯುಸಿಡಿಗಳನ್ನು ಗರ್ಭ ನಿರೋಧಕವಾಗಿ ಬಳಸುತ್ತಿರುವ 100 ಮಹಿಳೆಯರಲ್ಲಿ ಸರಿಸುಮಾರು 2 ಮಹಿಳೆಯರು 5 ವರ್ಷಗಳ ಬಳಕೆಯ ಬಳಿಕ ಗರ್ಭಿಣಿಯರಾಗುತ್ತಾರೆ. ಹೆಚ್ಚಿನ ಐಯುಸಿಡಿಗಳು 5 ವರ್ಷಗಳ ವರಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ, ಹೆಚ್ಚಿನವು 10 ವರ್ಷಗಳ ವರೆಗೆ ಕೂಡ ಕೆಲಸ ಮಾಡುತ್ತವೆ.

    ಇದನ್ನು ಓದಿ: ಕೈಯಲ್ಲಿ ದುಡ್ಡೇ ನಿಲ್ಲುತ್ತಿಲ್ವಾ? ಹಾಗಾದ್ರೆ ಈ ಚೀನೀ ವಾಸ್ತು ಅನುಸರಿಸಿ ಸಾಕು

    ತಾಮ್ರದ ಐಯುಸಿಡಿ 380 ಎ ಯ ಅನುಕೂಲತೆಗಳು :•

    •  ಗರ್ಭಾವಸ್ಥೆಯ ವಿರುದ್ಧ ದೀರ್ಘಾವಧಿಯ ಮತ್ತು ಅತ್ಯಂತ ಪರಿಣಾಮಕಾರಿ ರಕ್ಷಣೆ ನೀಡುತ್ತದೆ.

    •  ಬಳಕೆದಾರರಿಂದ ನಿತ್ಯದ ಗಮನ ಅಥವಾ ಸಂಭೋಗಕ್ಕೆ ಮುನ್ನ ವಿಶೇಷ ಗಮನದ ಅಗತ್ಯ ಇಲ್ಲ

    •   ಒಂದು ಬಾರಿಯ ಪ್ರಕ್ರಿಯೆ ಮತ್ತು ವೆಚ್ಚ ಪರಿಣಾಮಕಾರಿ

    •  ಐಯುಡಿಸಿ ಸೆಕ್ಸ್ ಅಥವಾ ಸೆಕ್ಸ್ ಡ್ರೈವ್‍ನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.

    • ಇದು ಹಾರ್ಮೋನ್ ವಿಧಾನವಲ್ಲದ ಕಾರಣ ನಿಮ್ಮ  ಮನಸ್ಥಿತಿ, ತೂಕ ಮತ್ತು ಕಾಮಾಸಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ.

    • ಹಾಲುಣಿಸುವ ಮಹಿಳೆಯರು ಬಳಸಬಹುದು

    • ಯಾವುದೇ ಔಷಧಿಗಳೊಂದಿಗೆ ಪರಸ್ಪರ ಪ್ರಭಾವ ಬೀರುವುದಿಲ್ಲ

    • ಅದನ್ನು ತೆಗೆದ ತಕ್ಷಣವೇ ಫಲವತ್ತತೆ ಮರಳುತ್ತದೆ


    ಇದನ್ನು ಓದಿ: ಪಶ್ಚಿಮ ದಿಕ್ಕಿನಲ್ಲಿ ತಲೆ ಇಟ್ಟರೆ ಅಶುಭ; ಹಾಗಾದ್ರೆ ಮಲಗಲು ಯಾವ ದಿಕ್ಕು ಉತ್ತಮ

    ಅಡ್ಡ ಪರಿಣಾಮಗಳು: ಅಳವಡಿಸಿದ ಆರಂಭದ ದಿನಗಳಲ್ಲಿ ಅಥವಾ ತಿಂಗಳುಗಳಲ್ಲಿ ಮುಟ್ಟಿನ ರಕ್ತ ಸ್ರಾವ ಹೆಚ್ಚಬಹುದು ಅಥವಾ ಲಘು ರಕ್ತ ಸ್ರಾವ ಆಗಬಹುದುಐಯುಸಿಡಿ ಅಳವಡಿಕೆಯ ಸಮಯದಲ್ಲಿ ಅಸ್ವಸ್ಥತೆ ಅಥವಾ ಸೆಳೆತ ಕಾಣಿಸಿಕೊಳ್ಳಬಹುದು, ಮುಂದಿನ ದಿನಗಳಲ್ಲಿ ಅದು ಕಡಿಮೆ ಆಗುತ್ತದೆ.

    ಸಂಭಾವ್ಯ ಆರೋಗ್ಯ ಅಪಾಯಗಳು:

    •  ಅಳವಡಿಕೆಯ ಸಂದರ್ಭದಲ್ಲಿ ಗರ್ಭದಲ್ಲಿನ ರಂಧ್ರದ ತೊಂದರೆ ಆಗಬಹುದು. ಆದರೆ ಅದು ಅಪರೂಪವಾಗಿದ್ದು, 1000 ಕ್ಕೆ 0.5 ನಿಂದ 1.5 ನಷ್ಟು ಮಾತ್ರ ಸಾಧ್ಯತೆ ಇದೆ

    •  2-8 ಶೇಕಡಾ ಮಹಿಳೆಯರಲ್ಲಿ ಇದು ತಾನಾಗಿಯೇ ಹೊರ ಬರಬಹುದು. ಅಳವಡಿಸಿದ ಆರಂಭದ ಮೂರು ತಿಂಗಳಲ್ಲಿ ಮತ್ತು ಮುಟ್ಟಿನ ಸಂದರ್ಭದಲ್ಲಿ ಹಾಗಾಗುವ ಸಾಧ್ಯತೆ ಇದೆ.

    •  ಅಳವಡಿಕೆಯ ನಂತರ ಸೋಂಕಿನ ಸಾಧ್ಯತೆ ಶೇಕಡಾ 1 ಕ್ಕಿಂತ ಕಡಿಮೆ ಇರುತ್ತದೆ.

    • ಕಾಪರ್ ಟಿ ಹಾಕಿದ ನಂತರ ಗರ್ಭಧಾರಣೆ ಆದರೆ , ತನ್ನಷ್ಟಕ್ಕೆ ಗರ್ಭಪಾತ, ಸೋಂಕು ಮತ್ತು ಅಪಸ್ಥಾನೀಯ ಗರ್ಭಧಾರಣೆ ಅಪಾಯ ಇರುತ್ತದೆ

    Published by:Seema R
    First published: