ಓದಲು, ದುಡಿಯಲು, ನೆಲಸಲು Germany ದೇಶ ಸುರಕ್ಷಿತವಂತೆ.. ಆದರೆ ಈ ಷರತ್ತುಗಳನ್ನು ಪೂರೈಸಬೇಕು

ಜರ್ಮನಿಗೆ ಪ್ರವಾಸ ಹೋಗಿ ಬರುವುದು ಅಂತಹ ಕಷ್ಟದ ಕೆಲಸವೇನಲ್ಲ. ಆದರೆ ಪ್ರವಾಸ ಹೋಗುವುದಕ್ಕೂ, ಅಲ್ಲಿಯೇ ಖಾಯಂ ಆಗಿ ನೆಲೆ ನಿಲ್ಲುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ಅಲ್ಲಿ ಹೋಗಿ ನೆಲೆಸಬೇಕಾದರೆ ಕೆಲವೊಂದು ಷರತ್ತುಗಳನ್ನು ಪೂರೈಸುವುದು ಅಗತ್ಯ. ಯಾವುವು ಅವು ಎಂದು ಇಲ್ಲಿ ತಿಳಿಸಲಾಗಿದೆ.

ಜರ್ಮನಿ ದೇಶದ ಸೊಬಗು

ಜರ್ಮನಿ ದೇಶದ ಸೊಬಗು

 • Share this:
  ವಿದೇಶಗಳಲ್ಲಿ (Foreign Countries) ಹೋಗಿ ನೆಲೆಸಲು ಬಯಸುವ ಬಹಳಷ್ಟು ಮಂದಿಯನ್ನು ಆಕರ್ಷಿಸುವ ಕೆಲವು ಯುರೋಪಿಯನ್ ರಾಷ್ಟ್ರಗಳ (European Countries) ಪೈಕಿ ಜರ್ಮನಿಯೂ (Germany) ಒಂದು. ಈ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ (Developed Country) ಮೂಲ ಸೌಕರ್ಯಗಳಿಗೆ ಯಾವುದೇ ಕೊರತೆಯಿಲ್ಲ. ಜೊತೆಗೆ ಇಲ್ಲಿ ಅತ್ಯಂತ ಸಮರ್ಥವಾದ ಕಾನೂನು ವ್ಯವಸ್ಥೆ ಜಾರಿಯಲ್ಲಿದೆ. ಹಾಗಾಗಿ ಇದೊಂದು ವಾಸ ಮಾಡಲು ಸುರಕ್ಷಿತ ದೇಶವೆನ್ನುವುದು ಬಹಳಷ್ಟು ಮಂದಿಯ ಅಭಿಪ್ರಾಯವಾಗಿದೆ. ಜರ್ಮನಿ ಸುಮಾರು 1,000 ವರ್ಷಕ್ಕೂ ಹಳೆಯ ಅದ್ಭುತವಾದ ಕೋಟೆಗಳಿಗೆ ಪ್ರಖ್ಯಾತಿ ಪಡೆದಿದೆ. ಇನ್ನು ಜರ್ಮನಿಯಲ್ಲಿನ ಶಿಕ್ಷಣ ವ್ಯವಸ್ಥೆಯಂತೂ ಅತ್ಯಂತ ಸುಸಂಘಟಿತವಾಗಿದೆ. ಇದೇ ಕಾರಣಕ್ಕೆ ವರ್ಷ ವರ್ಷವು ನಮ್ಮ ದೇಶದ ಬಹಳಷ್ಟು ಮಂದಿ ಶಿಕ್ಷಣಾಕಾಂಕ್ಷಿಗಳು, ಜರ್ಮನಿಗೆ ಹೋಗಿ ಉನ್ನತ ಶಿಕ್ಷಣ ಪಡೆಯಬೇಕೆಂದು ಆಶಿಸುತ್ತಾರೆ ಮತ್ತು ಅದಕ್ಕಾಗಿ ಸರ್ವ ಪ್ರಯತ್ನಗಳನ್ನು ಮಾಡುತ್ತಾರೆ. ಇನ್ನು ಜರ್ಮನಿಯಲ್ಲಿನ ಪ್ರವಾಸಿ ತಾಣಗಳು ಮತ್ತು ಅವುಗಳ ಸೌಂದರ್ಯ ಅವರ್ಣನೀಯ. ಈ ದೇಶದ ಪ್ರಪಂಚದಾದ್ಯಂತದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

  ಇದನ್ನೂ ಓದಿ: Ukraine-Russia ಯುದ್ಧದಿಂದ ಭಾರತದಲ್ಲಿ ಈ ವಸ್ತುಗಳೆಲ್ಲಾ ಸಿಕ್ಕಾಪಟ್ಟೆ ದುಬಾರಿಯಾಗಲಿದೆ!

  ಜರ್ಮನಿಗೆ ಪ್ರವಾಸ ಹೋಗಿ ಬರುವುದು ಅಂತಹ ಕಷ್ಟದ ಕೆಲಸವೇನಲ್ಲ. ಆದರೆ ಪ್ರವಾಸ ಹೋಗುವುದಕ್ಕೂ , ಅಲ್ಲಿಯೇ ಖಾಯಂ ಆಗಿ ನೆಲೆ ನಿಲ್ಲುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ಅಲ್ಲಿ ಹೋಗಿ ನೆಲೆಸಬೇಕಾದರೆ ಕೆಲವೊಂದು ಷರತ್ತುಗಳನ್ನು ಪೂರೈಸುವುದು ಮತ್ತು ಮಹತ್ವದ ದಾಖಲೆಗಳನ್ನು ಪ್ರಸ್ತುತ ಪಡಿಸುವ ಆಗತ್ಯ ಇದೆ. ಒಂದು ವೇಳೆ ನೀವೇನಾದರೂ ಸದ್ಯದಲ್ಲೇ ಜರ್ಮನಿಗೆ ಹೋಗಿ ನೆಲೆಸುವ ಬಗ್ಗೆ ಆಲೋಚಿಸುತ್ತಿದ್ದರೆ, ಕೆಲವು ಮುಖ್ಯವಾದ ಅಂಶಗಳ ಬಗ್ಗೆ ಗಮನಹರಿಸಬೇಕಾಗುತ್ತದೆ.

  ಜರ್ಮನಿಗೆ ಹೋಗಲು ಕಾರಣ ಬೇಕು.. 

  ಜರ್ಮನಿಗೆ ಹೋಗಿ ನೆಲೆಸಲು ಮೊದಲು ನಿಮ್ಮಲ್ಲಿ ಒಂದು ಸೂಕ್ತವಾದ ಕಾರಣ ಇರಬೇಕಾಗುತ್ತದೆ. ಅಂದರೆ ಉದ್ಯೋಗ, ಶಿಕ್ಷಣ, ಉದ್ಯಮ, ಕುಟುಂಬ ಮಿಲನ ಅಥವಾ ಜರ್ಮನ್ ವಲಸೆ ಇತ್ಯಾದಿ. ಅದಕ್ಕೆ ಅನುಗುಣವಾಗಿ ನಿಮಗೆ ಪರವಾನಗಿ ಸಿಗುತ್ತದೆ. ಆ ದೇಶಕ್ಕೆ ಹೋಗುವ ಮುನ್ನ ಮತ್ತು ಪರವಾನಗಿ ಪಡೆಯಲು ನೀವು ಏನೆಲ್ಲಾ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ ಎಂಬುದರ ಕುರಿತು ಮಾಹಿತಿಗಳು ಇಲ್ಲಿವೆ:

  1) ಶಿಫ್ಟ್‌ ಆಗುವ ಉದ್ದೇಶ ಏನೇ ಇರಲಿ, ಅದನ್ನು ಲೆಕ್ಕಿಸದೆ, ಪ್ರತಿಯೊಬ್ಬ ಅರ್ಜಿದಾರರು ಜರ್ಮನಿಗೆ ಹೋಗುವ ಮುನ್ನ ತಮ್ಮ ಆರ್ಥಿಕ ಸ್ಥಿರತೆಯನ್ನು ಸಾಬೀತುಪಡಿಸಬೇಕು. ಒಂದು ಅರ್ಜಿದಾರನ ಉದ್ದೇಶ ಜರ್ಮನಿಗೆ ಹೋಗಿ ಕೆಲಸವನ್ನು ಪಡೆಯುವುದಾಗಿದ್ದರೂ, ಅವರು ಆ ಹೊಸ ದೇಶದಲ್ಲಿ ತಮ್ಮ ಆರಂಭಿಕ ವೆಚ್ಚವನ್ನು ಭರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ.

  2)ಜರ್ಮನಿಗೆ ಹೋಗುವ ಎಲ್ಲಾ ವಲಸಿಗರು ಮಾನ್ಯತೆ ಹೊಂದಿರುವ ಆರೋಗ್ಯ ವಿಮಾ ಯೋಜನೆಯನ್ನು ಹೊಂದಿರಬೇಕು. ಕೆಲವು ವಿದೇಶಿ ವಿಮೆಗಳು ಮಾನ್ಯತೆ ಹೊಂದಿರುವುದಿಲ್ಲ. ಹಾಗಾಗಿ ಹೆಚ್ಚಿನವರು ಜರ್ಮನ್ ಆರೋಗ್ಯ ವಿಮೆಯನ್ನು ಪಡೆಯಲು ಇಚ್ಚಿಸುತ್ತಾರೆ.

  ಇದನ್ನೂ ಓದಿ: Explained: ರಷ್ಯಾ-ಉಕ್ರೇನ್ ಬಿಕ್ಕಟ್ಟು; ಭಾರತದಲ್ಲಿ ಪೆಟ್ರೋಲ್​ ಬೆಲೆ ಇನ್ನಷ್ಟು ಏರಿಕೆ ಸಾಧ್ಯತೆ

  3)ಜರ್ಮನಿಯಲ್ಲಿ ನೆಲೆಸಬೇಕಾದರೆ ಜರ್ಮನ್ ಭಾಷೆ ಮಾತನಾಡಲು ಗೊತ್ತಿರಬೇಕು. ಜರ್ಮನ್ ಭಾಷಾ ಪ್ರಾವೀಣ್ಯತೆಯು ಎ, ಬಿ ಮತ್ತು ಸಿ ಹಂತಗಳನ್ನು ಹೊಂದಿದೆ. ಸಿ ಅಡ್ವಾನ್ಸ್ಡ್‌ ಹಂತವಾಗಿದೆ. ಜರ್ಮನ್‍ಗೆ ಹೋಗುವವರು ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಎ1 ಅಥವಾ ಬಿ1 ಹಂತಗಳನ್ನು ಪಾಸು ಮಾಡಬೇಕು. ಆದರೆ ಅಲ್ಲಿಯೇ ಶಾಶ್ವತವಾಗಿ ನೆಲೆಸುವುದು ನಿಮ್ಮ ಉದ್ದೇಶವಾಗಿದ್ದಲ್ಲಿ, ಅದರ ಪರವಾನಗಿ ಪಡೆಯಲು ಸಿ1 ಅಥವಾ ಸಿ2 ಹಂತಕ್ಕೆ ತಲುಪುವುದು ಅಗತ್ಯ.

  4)ಕೆಲವು ದೇಶಗಳ ಪ್ರಜೆಗಳು ಜರ್ಮನಿಯನ್ನು ಪ್ರವೇಶಿಸಬೇಕಾದರೆ ವೀಸಾ ಪಡೆಯಬೇಕಾಗುತ್ತದೆ. ಆದರೆ ಇತರ ದೇಶಗಳ ಪ್ರಜೆಗಳು ದೇಶವನ್ನು ಪ್ರವೇಶಿಸಬಹುದು ಮತ್ತು ಆ ಬಳಿಕ ನಿವಾಸದ ಪರವಾನಿಗೆಗಾಗಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಅರ್ಜಿದಾರರು, ಕೇವಲ ಅಲ್ಪಾವಧಿಗೆ ಜರ್ಮನಿಗೆ ಭೇಟಿ ನೀಡುವ ಆಶಯ ಹೊಂದಿದ್ದರೆ ಅವರು ಅಲ್ಪಾವಧಿ ವೀಸಾಗೆ ಅರ್ಜಿ ಸಲ್ಲಿಸಬೇಕು. ದಾಖಲೆಗಳನ್ನು ಸಂಗ್ರಹಿಸುವುದು, ಸಂದರ್ಶನಗಳಿಗೆ ಹಾಜರಾಗುವುದು, ವೀಸಾ ಶುಲ್ಕವನ್ನು ಪಾವತಿಸುವುದು, ಆ ಬಳಿಕ ಅರ್ಜಿಯ ಅಂಗೀಕಾರಕ್ಕೆ ಕಾಯುವುದು ಇತ್ಯಾದಿಗಳನ್ನು ವೀಸಾ ಪಡೆಯುವ ಪ್ರಕ್ರಿಯೆ ಒಳಗೊಂಡಿರುತ್ತದೆ.
  Published by:Kavya V
  First published: