ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಆಹಾರ ವಿಷಯದಲ್ಲಿ ಈ ತಪ್ಪು ಮಾಡಬೇಡಿ!

ಹಣ್ಣು-ತರಕಾರಿ

ಹಣ್ಣು-ತರಕಾರಿ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಶೇಕಡಾ 85ರಷ್ಟು ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ ಮತ್ತು ಪಾರ್ಶ್ವ ವಾಯುಗಳಿಂದ ಉಂಟಾಗುತ್ತದೆ

  • Share this:
    top videos

      ಶಸ್ತ್ರ ಚಿಕಿತ್ಸೆ ಆದ ಕೆಲವು ತಿಂಗಳ ವರೆಗೆ ನೀವು ಮನೆಯಲ್ಲಿಯೇ ಮಾಡಿದ ಆಹಾರ ಸೇವಿಸಬೇಕಾಗುತ್ತದೆ. ಕೆಲವೊಂದು ಆಹಾರಗಳನ್ನು ತಿನ್ನಲೇಬಾರದು, ಆದರೆ ಆ ಕುರಿತ ಕೆಲವು ಸುಳ್ಳು ಮಾಹಿತಿಗಳ ಬಗ್ಗೆ ನಾವು ಎಚ್ಚರವಹಿಸಬೇಕು.


      ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಶೇಕಡಾ 85ರಷ್ಟು ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ ಮತ್ತು ಪಾರ್ಶ್ವ ವಾಯುಗಳಿಂದ ಉಂಟಾಗುತ್ತದೆ. ಹೃದಯ ರಕ್ತನಾಳದ ಕಾಯಿಲೆಗಳು ಎಂದರೆ ಹೃದಯ ಮತ್ತು ರಕ್ತನಾಳಗಳ ಅಸ್ವಸ್ಥತೆಗಳು ಮತ್ತು ಅವು ಪರಿಧಮನಿಯ ಹೃದಯ ಕಾಯಿಲೆ, ಸೆರೆಬ್ರೋವ್ಯಾಸ್ಕುಲರ್ ಕಾಯಿಲೆ , ಸಂಧಿವಾತ ಹೃದ್ರೋಗ ಇತ್ಯಾದಿ ಪರಿಸ್ಥಿತಿಗಳನ್ನು ಒಳಗೊಂಡಿದೆ. ಹೃದಯದ ಕಾಯಿಲೆಗಳು ಹೆಚ್ಚಲು ಕಾರಣ, ಅಧಿಕ ರಕ್ತದೊತ್ತಡ, ಮಧುಮೇಹ ಮೆಲ್ಲಿಟಸ್, ಅಧಿಕ ಕೊಲೆಸ್ಟ್ರಾಲ್, ಅಧಿಕ ಕೊಲೆಸ್ಟ್ರಾಲ್, ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ, ಜಡ ಜೀವನ ಶೈಲಿ ಮತ್ತು ವ್ಯಾಯಾಮದ ಕೊರತೆ ಇತ್ಯಾದಿಗಳು.


      ಹೃದಯದ ಶಸ್ತ್ರ ಚಿಕಿತ್ಸೆಯ ನಂತರ ವೈದ್ಯರು ನಿಮಗೆ ಸಮತೋಲಿತ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುರಿಸಲು ಹೇಳುತ್ತಾರೆ. ನೀವು ಬೇಗ ಗುಣಮುಖವಾಗಲು ಮತ್ತು ಮುಂದೆ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಲು ಅದು ಅಗತ್ಯ. ಸೋಂಕು ಉಂಟಾಗದಂತೆ ತಡೆಯಲು ಶಸ್ತ್ರ ಚಿಕಿತ್ಸೆ ಆದ ಕೆಲವು ತಿಂಗಳ ವರೆಗೆ ನೀವು ಮನೆಯಲ್ಲಿಯೇ ಮಾಡಿದ ಆಹಾರ ಸೇವಿಸಬೇಕಾಗುತ್ತದೆ. ಕೆಲವೊಂದು ಆಹಾರಗಳನ್ನು ತಿನ್ನಲೇಬಾರದು, ಆದರೆ ಆ ಕುರಿತ ಕೆಲವು ಸುಳ್ಳು ಮಾಹಿತಿಗಳ ಬಗ್ಗೆ ನಾವು ಎಚ್ಚರವಹಿಸಬೇಕು.


      ಡಾ. ಬಿಪೀನ್‍ಚಂದ್ರ ಭಾಮ್ರೆ, ಹೃದಯದ ಶಸ್ತ್ರ ಚಿಕಿತ್ಸೆಯ ನಂತರದ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸಹಾಯ ಮಾಡುತ್ತಾರೆ:


      ತಪ್ಪು ಕಲ್ಪನೆ : ಕೆಲವೊಂದು ಸೂಪರ್​ ಫುಡ್​ಗಳನ್ನು ತಿನ್ನುವುದರಿಂದ ಹೃದಯದ ಕಾಯಿಲೆಗಳನ್ನು ದೂರ ಇಡಬಹುದು.


      ಸತ್ಯ: ಸೂಪರ್ ಫುಡ್ ಎಂಬುವುದಿಲ್ಲ. ಬ್ಲೂಬೆರಿ, ದಾಳಿಂಬೆ , ವಾಲ್‍ನಟ್ ಮತ್ತು ಮೀನನ್ನು ತಿಂದರೆ ಹೃದಯ ಕಾಯಿಲೆಗಳು ಬರುವುದಿಲ್ಲ ಎಂಬುವುದು ಸುಳ್ಳು. ಆದರೆ ಮೆಡಿಟೇರಿಯನ್ ಆಹಾರ ಪದ್ಧತಿಯಂತಹ ಕೆಲವು ಆಹಾರ ಪದ್ಧತಿಗಳು ಸಹಾಯಕವಾಗಬಲ್ಲವು. ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಮೊನೋಸ್ಯಾಚುರೇಟೆಡ್‍ಗಳು, ಆಲಿವ್ ಎಣ್ಣೆ, ವಾರಕ್ಕೊಮ್ಮೆ ಮೀನು ಅಥವಾ ಪೌಲ್ಟ್ರಿ ಕೋಳಿ ತಿನ್ನುವದರಿಂದ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ ಎನ್ನಬಹುದು. ಆದರೆ ಕೆಂಪು ಮಾಂಸದಲ್ಲಿ ಅಧಿಕ ಕೊಲೆಸ್ಟ್ರಾಲ್ ಇರುವುದರಿಂದ ಅದು ತುಂಬಾ ಅಪಾಯ.


      ಇದನ್ನು ಓದಿ: ವರ್ಷದ 300 ದಿನ ನಿದ್ದೆಯಲ್ಲಿಯೇ ಜೀವನ; ರಾಜಸ್ಥಾನದಲ್ಲೊಬ್ಬ ಕುಂಭಕರ್ಣ

      ತಪ್ಪು ಕಲ್ಪನೆ: ಕೊಬ್ಬು ಒಳ್ಳೆಯದಲ್ಲ
      ಸತ್ಯ : ನಮ್ಮ ದೇಹಕ್ಕೆ ನಿತ್ಯವೂ ನಿರ್ದಿಷ್ಟವಾದ ಕೊಲೆಸ್ಟ್ರಾಲ್ ಅಗತ್ಯವಿರುತ್ತದೆ. ನಮ್ಮ ಮೆದುಳು ಮತ್ತು ಕೆಲವು ಸ್ನಾಯುಗಳಿಗೆ ಕೊಲೆಸ್ಟ್ರಾಲ್ ಇಂಧನದಂತೆ ಕೆಲಸ ಮಾಡುತ್ತದೆ. ಅದೇನೆ ಇದ್ದರೂ ಪ್ರಮಾಣದ ಬಗ್ಗೆ ಗಮನ ಬಹಳ ಮುಖ್ಯ. ಕೃತಕ ಆಹಾರ, ಹೆಚ್ಚು ಸಕ್ಕರೆ ಉಳ್ಳ ಆಹಾರ, ಬೇಕ್ ಮಾಡಿದ ಆಹಾರ ಮತ್ತು ಸಂಸ್ಕರಿತ ಆಹಾರವನ್ನು ತಿನ್ನಲೇಬಾರದು. ರೆಡ್ ಮೀಟ್ ಮತ್ತು ಬೆಣ್ಣೆಯಂತಹ ಪ್ರಾಣಿ ಆಧಾರಿತ ಸ್ಯಾಚುರೇಟೆಡ್ ಕೊಬ್ಬುಗಳು ಎಲ್‍ಡಿಎಲ್ ಪ್ರಮಾಣವನ್ನು ಹೆಚ್ಚಿಸಬಲ್ಲವು. ಮೊನೋಅನ್ ಸ್ಯಾಚುರೇಟೆಡ್ ಮತ್ತು ಪಾಲಿಅನ್‍ಸ್ಯಾಚುರೇಟೆಡ್ ಕೊಬ್ಬುಗಳು ಎಲ್‍ಡಿಎಲ್ ಪ್ರಮಾಣವನ್ನು ಕಡಿಮೆ ಮಾಡಬಲ್ಲವು. ಸರಳವಾಗಿ ಹೇಳುವುದಾದರೆ, ಸಂಸ್ಕರಿಸದ ಅಥವಾ ನೈಸರ್ಗಿಕರ ಆಹಾರ ಸೇವೆನೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.


      ಇದನ್ನು ಓದಿ: ಬೆಂಡೆಕಾಯಿಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು!


      ತಪ್ಪು ಕಲ್ಪನೆ: ಉಪ್ಪು ನೈಸರ್ಗಿಕ ಉತ್ಪನ್ನ ಅದು ಅಪಾಯಕಾರಿ ಅಲ್ಲ
      ಸತ್ಯ:ಕೊಬ್ಬು ಮತ್ತು ಸಕ್ಕರೆಗಳಿಗಿಂತ ಅಧಿಕ ಉಪ್ಪು ಹೆಚ್ಚು ಅಪಾಯಕಾರಿ. ಅದು ನಿಮ್ಮ ರಕ್ತದೊತ್ತಡವನ್ನು ಏರಿಸುವುದು ಮಾತ್ರವಲ್ಲದೆ, ಕಿಡ್ನಿಗಳ ಮೇಲೆ ಕೂಡ ಒತ್ತಡ ಹಾಕುತ್ತದೆ.ನಾವು ತಿನ್ನುವ ಕೆಲವು ಆಹಾರಗಳಲ್ಲಿ ಉಪ್ಪು ನೈಸರ್ಗಿಕವಾಗಿ ಇರುತ್ತದೆ, ನಾವು ಉಪ್ಪು ಸೇರಿಸಬಾರದು ಎಂಬುದು ತಿಳಿದಿರಲಿ. ಅಧಿಕ ರಕ್ತದೊತ್ತಡ ನಿಮ್ಮ ಹೃದಯ, ಕಿಡ್ನಿಗಳು, ಅಪಧಮನಿಗಳು ಮತ್ತು ಮೆದುಳಿಗೆ ಕೂಡ ಅಪಾಯಕಾರಿ. ಹಾಗಾಗಿ ನೀವು ಎಷ್ಟು ಉಪ್ಪು ಸೇವಿಸುತ್ತಿದ್ದೀರಿ ಎಂಬುದರ ಬಗ್ಗೆ ಗಮನ ಇರಲಿ. ಈ ಕುರಿತು ತಜ್ಞರ ಅಭಿಪ್ರಾಯವನ್ನು ಕೂಡ ಪಡೆಯುವುದು ಒಳ್ಳೆಯದು.


      ಸರಿಯಾಗಿ ನಿದ್ರಿಸಿ, ವ್ಯಾಯಾಮ ಮಾಡಿ ಮತ್ತು ಒಳ್ಳೆಯ ಆಹಾರ ಸೇವಿಸಿ. ಆಹಾರದ ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ ಎಂಬುದು ನೆನಪಿರಲಿ.


      First published:

      ಸುದ್ದಿ 18ಕನ್ನಡ ಟ್ರೆಂಡಿಂಗ್

      ಮತ್ತಷ್ಟು ಓದು