ಎಚ್ಚರ! ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗಬೇಡಿ

Cold

Cold

ಮಳೆಗಾಲವಾದ್ದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಮುಂತಾದ ಜ್ವರಗಳಿಗೂ ಕಾರಣವಾಗಬಹುದು. ಹಾಗಾಗಿ ಸುರಕ್ಷಿತವಾಗಿರಲು ಹೆಚ್ಚು  ಪ್ರಯತ್ನಿಸಬೇಕು.

 • Share this:

  ಮಳೆಗಾಲದಲ್ಲಿ ಏಷ್ಟೇ ಎಚ್ಚರಿಕೆ ವಹಿಸಿದರು ಒಂದು ಬಾರಿಯಾದರು ಜ್ವರ, ಶೀತ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಜ್ವರ ಬಾರದಂತೆ ಜಾಗೃತಿ ವಹಿಸುವುದು ತುಂಬಾನೇ ಅಗತ್ಯ. ಮತ್ತೊಂದೆಡೆ ಮಳೆಗಾಲವಾದ್ದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಮುಂತಾದ ಜ್ವರಗಳಿಗೂ ಕಾರಣವಾಗಬಹುದು. ಹಾಗಾಗಿ ಸುರಕ್ಷಿತವಾಗಿರಲು ಹೆಚ್ಚು  ಪ್ರಯತ್ನಿಸಬೇಕು.


  ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆಗಳ ಬಗ್ಗೆ ಮಾಹಿತಿ ಇಲ್ಲಿದೆ


  ಶೀತ ಮತ್ತು ಜ್ವರ:


  ಮಳೆ ನೀರಿಗೆ ಒದ್ದೆಯಾಗುವುದು, ತಣ್ಣೀರಿನ ಸೇವನೆಯಿಂದ ಜ್ವರ ಮತ್ತು ಶೀತ ಕಾಣಿಸಿಕೊಳ್ಳಬಹುದು. ಬ್ಯಾಕ್ಟೀರಿಯಾ ಮತ್ತು ವೈರಸ್​ನಿಂದ ಜ್ವರ ಬರುತ್ತದೆ. ಈ ಸಮಯದಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸವಿಯಬೇಕು.


  ಸೊಳ್ಳೆಯಿಂದ ರೋಗ ಹರಡಬಹುದು:


  ಮಲೇರಿಯಾ:


  ಮಾನ್ಸೂನ್​ ಸಮಯದಲ್ಲಿ ಮಲೇರಿಯಾ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿಂತ ನೀರಿಗೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಮಲೇರಿಯಾ ರೋಗ ಬರುತ್ತದೆ. ಹಾಗಾಗಿ ಮನೆಯ ಸುತ್ತಮುತ್ತ ಇರುವ ಟೈರ್​, ಪ್ಲಾಸ್ಟಿಕ್​ ಬಾಟಲಿಯಲ್ಲಿ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳಿ.


  ಡೆಂಗ್ಯೂ


  ಡೆಂಗ್ಯೂ ಜ್ವರ ಮಾರಣಾಂತಿಕವಾಗಿದೆ. ಡೆಂಗ್ಯೂ ವೈರಸ್​ನಿಂದ ಈ ಜ್ವರ ಕಾಣಿಸುತ್ತದೆ. ಸೊಳ್ಳೆಯ ಮೂಲಕ ಈ ಕಾಯಿಲೆ ಮನುಷ್ಯರಲ್ಲಿ ಕಾಣಿಸುತ್ತದೆ. ಹಾಗಾಗಿ ಮಳೆಯ ಸಮಯ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು ಉತ್ತಮ


  ಕಾಲರಾ:


  ಇದು ನೀರಿನಿಂದ ಹರಡುವ ಸೋಂಕು, ವಿಬ್ರಿಯಾ ಕಾಲರಾ ಎಂಬ ಬ್ಯಾಕ್ಟೀರಿಯಾದಿಂದ ಅನೇಕ ತಳಿ ಉತ್ಪಾದಿಯಾಗಿ ಈ ಕಾಯಿಲೆ ಕಾಣಿಸಿಕೊಳುತ್ತದೆ. ಕಾಲರಾ ಜೀರ್ಣಾಂಗವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲದ ಸಮಯದಲ್ಲಿ ಕಾಯಿಸಿದ ಬಿಸಿನೀರು ಮತ್ತು ಬಿಸಿ ಆಹಾರವನ್ನು ಸೇವಿಸಿ.


  ಟೈಪಾಯಿಡ್​:


  ಕಲುಷಿತ ಆಹಾರ ಮತ್ತು ನೀರಿನಿಂದ ಟೈಫಾಯಿಡ್​ ಬರಬಹುದು. ಇದು ಸಾಲ್ಮೊನೆಲ್ಲಾ ಟೈಫಿಯಿಂದ ಉಂಟಾಗುವ ಸೋಂಕು. ಈ ಸಮಯದಲ್ಲಿ ಸುರಕ್ಷಿತವಾಗಿದ್ದುಕೊಂಡು ಬಿಸಿಯಾದ, ಕುದಿಸಿದ ನೀರು ಮತ್ತು ಆಹಾರ ಸೇವಿಸುವುದು ಉತ್ತಮ. ಜತೆಗೆ ಹೆಚ್ಚು ಪೌಷ್ಠಿಕಾಂಶವಿರುವ ಆಹಾರ ಸೇವಿಸಲು ಪ್ರಯತ್ನಿಸಿ.


  ಹೈಪಟೈಸಿಸ್​:


  ಕಲುಷಿತ ನೀರು ಆಹಾರದಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಇದು ಮುಖ್ಯವಾಗಿ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯ ಹೈಪಟೈಟಿಸ್​ ಜ್ವರ, ವಾಂತಿ ಮೂಲಕ ಗುಣಲಕ್ಷಣ ಗೋಚರಿಸುತ್ತದೆ.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು