ಉದ್ದ, ದಟ್ಟವಾದ ಕೂದಲು(Hair) ಎಲ್ಲರ ಕನಸು. ಈ ಕನಸು ಈಡೇರಬೇಕಾದರೆ ಶ್ರಮವೂ ಬೇಕಾಗುತ್ತದೆ. ಕೂದಲನ್ನು ಕೂಡ ಮಗುವಿನಂತೆಯೇ ಆರೈಕೆ ಮಾಡಬೇಕಾಗುತ್ತದೆ. ಕೂದಲ ಆರೈಕೆಯಲ್ಲಿ ತಲೆಸ್ನಾನವೂ ಕೂಡ ಮುಖ್ಯವಾಗುತ್ತದೆ. ದಿನಕ್ಕೆ ಎರಡು ಬಾರಿಯಾದರೂ ತಲೆಸ್ನಾನ ಮಾಡುವಂತೆ ಸಲಹೆ ನೀಡಲಾಗುತ್ತದೆ. ಇದರ ಜೊತೆಗೆ ತಲೆಸ್ನಾನದ(Head Bath) ನಂತರ ಪ್ರಕ್ರಿಯೆಗಳು ಕೂಡ ಕೂದಲ ಬೆಳವಣಿಗೆಯಲ್ಲಿ(Hair Growth) ಪ್ರಮುಖ ಪಾತ್ರ ವಹಿಸುತ್ತದೆ. ಹಸಿಯಾದ ಕೂದಲನ್ನು ಕಟ್ಟುವುದು, ಒದ್ದೆ ಕೂದಲನ್ನು ಬಾಚುವುದು, ಒದ್ದೆ ಕೂದಲಿನಲ್ಲಿಯೇ ಮಲಗುವುದು, ಹೀಗೆ ಹತ್ತು ಹಲವಾರು ಕೆಟ್ಟ ಅಭ್ಯಾಸಗಳು ಕೂದಲ ಬೆಳವಣಿಗೆಯ ಮೇಲೆ ಅಡ್ಡಪರಿಣಾಮ ಬೀರುತ್ತದೆ.
ಈ ಕುರಿತಂತೆ ಲ್ಯಾಕ್ಮಿ ಸಲೂನ್‍ನಲ್ಲಿ ಕೂದಲಿನ ಪ್ರಮುಖ ಶಿಕ್ಷಣತಜ್ಞರಾದ ಆಡ್ರೆ ಡಿಸೋಜಾ ಅವರು ಒದ್ದೆ ಕೂದಲಿಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ ಎಂದು ನಂಬುತ್ತಾರೆ. ಏಕೆಂದರೆ ಅದರ ರಚನೆಯು ಬದಲಾಗುತ್ತದೆ ಮತ್ತು ಕೂದಲು ನೀರಿನೊಂದಿಗೆ ಸಂಪರ್ಕಕ್ಕೆ ಬಂದಾಗ, ಕೂದಲಿನ ಶಾಫ್ಟ್ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಊದಿಕೊಳ್ಳುತ್ತದೆ, ಇದು ಹಾನಿಗೆ ಹೆಚ್ಚು ಗುರಿಯಾಗುತ್ತದೆ. ಅದಕ್ಕಾಗಿಯೇ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೇವಲ ಸ್ನಾನ ಮಾಡಿದ ಎಳೆಗಳನ್ನು ಒಣಗಿಸುವುದಕ್ಕಿಂತ ಮೃದುವಾಗಿ ಪರಿಗಣಿಸಬೇಕು. ಹಾಗಾಗಿ ಕೂದಲಿನ ವಿಚಾರದಲ್ಲಿ ಯಾವ ಅಂಶಗಳನ್ನು ಅನುಸರಿಸಬಾರದು ಎಂದು ತಜ್ಞರು ಹೇಳಿದ್ದಾರೆ.
1. ಒದ್ದೆ ಕೂದಲನ್ನು ಬಾಚಬಾರದು
ಕೆಲವರು ಒದ್ದೆ ಕೂದಲನ್ನು ಬಾಚುವ ರೂಢಿ ಬೆಳೆಸಿಕೊಂಡಿರುತ್ತಾರೆ. ಮೊದಲು ಈ ಅಭ್ಯಾಸವನ್ನು ಬಿಡಬೇಕು. ಈ ರೀತಿ ಮಾಡುವುದರಿಂದ ಕೂದಲು ದುರ್ಬಲವಾಗುತ್ತದೆ. ಕೂದಲಿನಲ್ಲಿ ಸೀಳುವಿಕೆ ಉಂಟಾಗುತ್ತದೆ. ಹಾನಿಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಕೂದಲು ದೀರ್ಘಕಾಲದವರೆಗೆ ಉತ್ತಮವಾಗಿರಬೇಕೆಂದರೆ ಒಣಗಿದ ನಮತರ ಕೂದಲು ಬಾಚುವುದು ಉತ್ತಮ.
ಇದನ್ನೂ ಓದಿ: ಕಣ್ಣೀರು ಬರದಂತೆ ಈರುಳ್ಳಿ ಕಟ್ ಮಾಡಲು ಇಲ್ಲಿದೆ ಸೂಪರ್ ಐಡಿಯಾ
2. ಬಿಸಿ ಉಪಕರಣಗಳ ಬಳಸದಿರಿ
ಕೂದಲು ಒಣಗಿಸಲು ಒದ್ದೆ ಕೂದಲಿನ ಮೇಲೆ ಬಿಸಿ ಉಪಕರಣಗಳನ್ನಿರಿಸಿದರೆ ಆ ಶಾಖಕ್ಕೆ ಕೂದಲು ಸುಟ್ಟಂತಾಗುತ್ತದೆ. ಇದರಿಂದ ಆದ ಹಾನಿಯನ್ನು ಮತ್ತೆ ಮರುಕಳಿಸುವುದು ಕಷ್ಟ. ಆದ್ದರಿಂದ ಕೂದಲು ಒಣಗಿದ ನಂತರ ನಿಮ್ಮ ಬಿಸಿ ಉಪಕರಣಗಳನ್ನು ಬಳಸಿ ಹೇರ್‍ಸ್ಟೈಲ್ ಮಾಡಬಹುದು.
3. ಒದ್ದೆ ಕೂದಲು ಕಟ್ಟದಿರಿ
ಕೆಲಸಕ್ಕೆ ಹೋಗುವ ಒತ್ತಡದಲ್ಲಿ ಕೆಲವರು ಒದ್ದೆ ಕೂದಲನ್ನು ಕಟ್ಟುವುದುಂಟು. ಕೂದಲಿನ ಎಳೆಗಳು ಒದ್ದೆಯಾಗಿರುವಾಗ ದುರ್ಬಲವಾಗಿರುತ್ತವೆ ಮತ್ತು ಕಟ್ಟುವುದರಿಂದ ಇನ್ನು ಹೆಚ್ಚು ದುರ್ಬಲವಾಗುತ್ತದೆ. ಒದ್ದೆಯಾಗಿ ತೊಟ್ಟಿಕ್ಕುತ್ತಿರುವಾಗ ಕೂದಲನ್ನು ಬಿಗಿಯಾಗಿ ಕಟ್ಟಿದರೆ ಅಥವಾ ಹೆಣೆದರೆ, ಅದು ಒಣಗಿದಂತೆ ಒತ್ತಡ ಹೆಚ್ಚಾಗುತ್ತದೆ. ಕೂದಲು ತೇವವಾಗಿದ್ದರೆ ಒಣ ಪೆÇೀನಿಟೇಲ್‍ನಲ್ಲಿ ಸಂಭವಿಸಬಹುದಾದ ಸಾಮಾನ್ಯ ಡೆಂಟ್‍ಗಳು ಮತ್ತು ಸ್ನ್ಯಾಗ್‍ಗಳು ಹದಗೆಡುತ್ತವೆ. ಕಟ್ಟುವ ಮೊದಲು ನಿಮ್ಮ ಕೂದಲನ್ನು ಸಂಪೂರ್ಣವಾಗಿ ಒಣಗಿಸುವುದು ಉತ್ತಮ.
4. ತೊಟ್ಟಿಕ್ಕುವ ಒದ್ದೆಕೂದಲಿಗೆ ಬ್ಲೋ ಡ್ರೈಯರ್ ಬಳಸದಿರಿ
ನಿಮ್ಮ ಕೂದಲಿನಿಂದ ನೀರು ತೊಟ್ಟಿಕ್ಕುತ್ತಿರುವಾಗಲೇ ಒಣಗಿಸಲು ಹೋಗಬಾರದು. ತಲೆಸ್ನಾನ ಮಾಡಿ ಬರುತ್ತಿದ್ದಂತೆ ಬ್ಲೋ ಡ್ರೈಯರ್ ಬಳಸುವುದು ಕೂದಲ ಬೆಲವಣಿಗೆಗೆ ಹಾನಿಕಾರ. ಕೂದಲು ಸ್ವಲ್ಪ ಒಣಗಿದ ನಂತರ ಒಣಗಿಸುವುದು ಉತ್ತಮ. ಅದುವೇ ಮಧ್ಯಮ ಶಾಖದಲ್ಲಿರಲಿ. ನಿಮ್ಮ ಕೂದಲನ್ನು ಬಯಸಿದಂತೆ ವಿನ್ಯಾಸಗೊಳಿಸಲು ಹೆಚ್ಚಿನ ಮಟ್ಟದ ಶಾಖ ಬಳಸುವುದು ಕೂಡ ಹಾನಿಕಾರವೇ.
5. ಗಾಳಿಯಲ್ಲಿ ಒಣಗಿಸಬೇಡಿ
ಸ್ನಾನದ ನಂತರ ಕೆಲವರಿಗೆ ಕೂದಲನ್ನು ಗಾಲಿಯಲ್ಲಿ ಒಣಗಿಸುವ ಅಭ್ಯಾಸವಿರುತ್ತದೆ. ಇದು ಕೂಡ ತಪ್ಪು. ಕೂದಲನ್ನು ಒಣಗಿಸಲು ಮೈಕ್ರೋಫೈಬರ್ ಟವೆಲ್ ಅನ್ನು ಆರಿಸಿ ಮತ್ತು ನಿಮ್ಮ ಎಳೆಗಳಿಂದ ನೀರನ್ನು ನಿಧಾನವಾಗಿ ಹಿಸುಕು ಹಾಕಿ ಮತ್ತು ನಂತರ ಅದನ್ನು ನೈಸರ್ಗಿಕವಾಗಿ ಒಣಗಲು ಬಿಡುವುದು ಸರಿಯಾದ ಕ್ರಮವಾಗಿದೆ.
6. ಒದ್ದೆ ಕೂದಲಿನಲ್ಲಿ ಮಲಗುವುದು
ಇದನ್ನು ಎಂದಿಗೂ ಮಾಡಬಾರದು. ಈ ರೀತಿ ಮಾಡುವುದರಿಂದ ದಿಂಬಿನಲ್ಲಿನ ಕೊಳೆಯು ಕೂದಲೆಳೆಗಳಿಗೆ ಸೇರುತ್ತದೆ. ಇದರಿಂದ ಕೂದಲಿನ ಕೋಶಕಗಳು ಹಾಳಾಗುತ್ತದೆ. ಇದು ಕೂದಲ ಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಮಲಗುವ ಮುನ್ನ ತಲೆಸ್ನಾನ ಮಾಡಿದರೆ ನೈಸರ್ಗಿಕವಾಗಿ ಒಣಗುವವರೆಗೆ ಅಥವಾ ತೇವ ಕಡಿಮೆಯಾಗುವವರೆಗೆ ತಡೆದು ಮಲಗುವುದು ಉತ್ತಮ.
7. ಒದ್ದೆಯಾದ ಕೂದಲಿನ ಮೇಲೆ ಹೇರ್ ಸ್ಪ್ರೇ ಅನ್ವಯಿಸುವುದು
ಇದನ್ನೂ ಓದಿ: ತೂಕ ಇಳಿಸಲು ಇಲ್ಲಿದೆ ಹೊಸ ವಿಧಾನ- ಐಸ್ ಥೆರಪಿ ಎಷ್ಟು ಪ್ರಯೋಜನಕಾರಿ ನೋಡಿ.
ನಿಮ್ಮ ಹೇರ್‍ಸ್ಟೈಲ್ ಲಾಕ್ ಆಗಲು ಸಿದ್ಧವಾದಾಗ ಹೇರ್ ಸ್ಪ್ರೇ ಅನ್ನು ಉತ್ತಮವಾಗಿ ಬಳಸಲಾಗುತ್ತದೆ, ಅಂದರೆ ಕೂದಲು ಶುಷ್ಕವಾಗಿರಬೇಕು. ನಿಮ್ಮ ಕೂದಲಿನ ಆಕಾರವು ಒಣಗಿದಂತೆ ಬದಲಾಗುತ್ತದೆ ಮತ್ತು ಶೈಲಿಯು ಸಹ ಬದಲಾಗುತ್ತದೆ, ಆದ್ದರಿಂದ ನಿಮ್ಮ ಕೂದಲು ದೀರ್ಘಾವಧಿಯ ಹಿಡಿತಕ್ಕಾಗಿ ಒಣಗಿದಾಗ ಹೇರ್ ಸ್ಪ್ರೇ ಅನ್ನು ಬಳಸುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ