ಜ್ವರ, ಕೆಮ್ಮು, ನೆಗಡಿ ಕಾಯಿಲೆ (Disease) ತುಂಬಾ ಸಾಮಾನ್ಯ. ಆದರೆ ಪದೇ ಪದೇ ಕಾಡುವ ಈ ಕಾಯಿಲೆಗಳಿಂದ ಹಿಡಿದು ದೊಡ್ಡ ರೋಗಗಳು ಅಂಟಿಕೊಳ್ಳಲು ಮುಖ್ಯವಾಗಿ ದೇಹದಲ್ಲಿ (Body) ರೋಗ ನಿರೋಧಕ ಶಕ್ತಿ (Immunity system) ಕಡಿಮೆ ಇರುವುದು ಕಾರಣವಾಗಿದೆ. ತುಂಬಾ ಜನರು ಚಿಕ್ಕ ಪುಟ್ಟ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದ್ರೆ ಕೆಮ್ಮು ಮತ್ತು ಶೀತ (Cough And Cold) ಸಮಸ್ಯೆ ಬೇರೆ ಕಾಯಿಲೆಯ ಸಂಕೇತವೂ ಆಗಿರಬಹುದು. ಹಾಗಾಗಿ ಈ ಏಳು ಸಾಮಾನ್ಯ ಕಾಯಿಲೆಗಳನ್ನು ಯಾವತ್ತಿಗೂ ಲಘುವಾಗಿ ತೆಗೆದುಕೊಳ್ಳದೇ, ನಿರ್ಲಕ್ಷ್ಯ ಮಾಡದೇ ಸರಿಯಾಗಿ ಚಿಕಿತ್ಸೆ ಪಡೆಯಿರಿ. ಯಾವವು ಈ ಕಾಯಿಲೆಗಳು ಅಂದುಕೊಳ್ತಿದಿರಾ? ಇದು ನಿಮಗೂ ಗೊತ್ತಿದೆ.
ಪದೇ ಪದೇ ವ್ಯಕ್ತಿಯನ್ನು ಕಾಡುವ ಕಾಯಿಲೆಗಳು ಯಾವವು?
ಸಾಮಾನ್ಯವಾಗಿ ವ್ಯಕ್ತಿಯನ್ನು ಕಾಡುವ ಕಾಯಿಲೆಗಳು ಅಂದ್ರೆ ಅಲರ್ಜಿ, ಶೀತ ಮತ್ತು ಜ್ವರ, ಕಾಂಜಂಕ್ಟಿವಿಟಿಸ್, ಅತಿಸಾರ, ತಲೆನೋವು, ಮೊನೊ ಡಿಸೀಸ್ ಮತ್ತು ಹೊಟ್ಟೆ ನೋವು. ಇವುಗಳು ನೋಡೋಕೆ ಮಾತ್ರ ತುಂಬಾ ಸಾಮಾನ್ಯವಾದ ರೋಗಗಳು ಆದ್ರೆ ಹೆಚ್ಚು ಅಪಾಯ ಹಾಗೂ ಅಡ್ಡ ಪರಿಣಾಮ ಉಂಟು ಮಾಡುತ್ತವೆ.
ಹಾಗಾಗಿ ಈ ಕಾಯಿಲೆಗಳನ್ನು ತಡೆಯಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ತುಂಬಾ ಮುಖ್ಯ. ಅದಕ್ಕಾಗಿ ನೀವು ಕೆಲವು ಪದಾರ್ಥಗಳನ್ನು ನಿಮ್ಮ ದಿನಚರಿ ಹಾಗೂ ಊಟದಲ್ಲಿ ಸೇರಿಸಿ. ಈ ಆಹಾರ ಪದಾರ್ಥಗಳನ್ನು ಯಾವುದೇ ರೋಗ ಪ್ರಾರಂಭವಾದ ತಕ್ಷಣ ಪ್ರಾರಂಭ ಮಾಡಬೇಕು.
ಶುಂಠಿ
ದೇಹದಲ್ಲಿ ಉರಿಯೂತ ಸಮಸ್ಯೆಯಿಂದ ಸಾಕಷ್ಟು ಹೆಚ್ಚಿನ ರೋಗಗಳು ಉಂಟಾಗುತ್ತವೆ. ಅವುಗಳ ಚಿಕಿತ್ಸೆಗೆ ನೀವು ಶುಂಠಿ ಪದಾರ್ಥವನ್ನು ದಿನವೂ ಸೇವಿಸಿ. ಯಾಕಂದ್ರೆ ಇದು ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ ಮತ್ತು ನಿಮ್ಮನ್ನು ರೋಗದಿಂದ ದೂರವಿಡುತ್ತದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯು ಬ್ಯಾಕ್ಟೀರಿಯಾ ಮತ್ತು ಆಂಟಿವೈರಲ್ ಗುಣಲಕ್ಷಣ ಹೊಂದಿದೆ. ಇದು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕನ್ನು ತಡೆಯುತ್ತದೆ. ಜ್ವರ, ಕೆಮ್ಮು, ನೆಗಡಿ ಹೋಗಲಾಡಿಸಲು ಇದು ರಾಮಬಾಣ.
ಅನಾರೋಗ್ಯವಿದ್ದಾಗ ಹಸಿರು ಚಹಾ ಸೇವಿಸಿ
ಕಾಯಿಲೆಯ ಲಕ್ಷಣಗಳು ಕಂಡು ಬರುತ್ತಿದ್ದಂತೆ ಹಸಿರು ಚಹಾ ಸೇವಿಸಿ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಮತ್ತು ಪಾಲಿಫಿನಾಲ್ ಗಳು ಇವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ನಿಮ್ಮನ್ನು ಇವು ಆರೋಗ್ಯವಂತರನ್ನಾಗಿ ಇರಿಸುತ್ತವೆ.
ರೋಗ ನಿರೋಧಕ ಶಕ್ತಿ ಈ ಹಣ್ಣುಗಳಲ್ಲಿ ಸಮೃದ್ಧವಾಗಿದೆ
ಕಿತ್ತಳೆ, ನಿಂಬೆ, ದ್ರಾಕ್ಷಿ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಹೊಂದಿದ್ದು ಇವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಹೀಗಾಗಿ ಈ ಹಣ್ಣುಗಳನ್ನು ಸೇವಿಸಿ ರೋಗದಿಂದ ಮುಕ್ತರಾಗಿ.
ಸೂಪ್
ಜಲಸಂಚಯನ ಕಾಪಾಡಿಕೊಳ್ಳಿ. ರೋಗದ ವಿರುದ್ಧ ಹೋರಾಡಲು ದೇಹಕ್ಕೆ ಪೌಷ್ಟಿಕಾಂಶ ಬೇಕು. ತರಕಾರಿ, ಕೋಳಿ ಅಥವಾ ಮೀನು ಪದಾರ್ಥಗಳಿಂದ ತಯಾರಿಸಿದ ಬಿಸಿ ಸೂಪ್ ಕುಡಿದರೆ ದೇಹವು ಸಾಕಷ್ಟು ಪ್ರಮಾಣದ ದ್ರವ ಮತ್ತು ಪೌಷ್ಟಿಕಾಂಶ ಪಡೆಯುತ್ತದೆ.
ಆರೋಗ್ಯಕರ, ಪೌಷ್ಟಿಕ ಆಹಾರವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೂಕ್ಷ್ಮ ಪೋಷಕಾಂಶ ಹೊಂದಿವೆ. ಸತು, ಸೆಲೆನಿಯಮ್, ಕಬ್ಬಿಣ, ತಾಮ್ರ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಎ, ಬಿ 6, ಸಿ ಮತ್ತು ಇ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ.
ಇದನ್ನೂ ಓದಿ: ಹೊಟ್ಟೆಯಲ್ಲಿ ಇಲಿ ಓಡಾಡಿದಂತೆ ಅನಿಸುತ್ತಾ? ಹಾಗಾದ್ರೆ ಈ ಹೆಲ್ದೀ ಡ್ರಿಂಕ್ ಕುಡಿಯಿರಿ
ಬಾಳೆಹಣ್ಣು
ಬಾಳೆಹಣ್ಣು ಅತ್ಯುತ್ತಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥ. ಇದು ವಿಟಮಿನ್ ಬಿ 6 ಅನ್ನು ಹೊಂದಿದೆ. ವಿಟಮಿನ್ ಬಿ 6 ಕೊರತೆ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ