• Home
  • »
  • News
  • »
  • lifestyle
  • »
  • Health Tips: ವೃದ್ಧಾಪ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಿವು

Health Tips: ವೃದ್ಧಾಪ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Old Age Common Health Problems: ಸಾಕಷ್ಟು ಸೂರ್ಯನ ಬೆಳಕು ದೇಹಕ್ಕೆ ಸೋಕುವುದನ್ನು ಖಚಿತಪಡಿಸಿಕೊಳ್ಳುವುದು. ದೈನಂದಿನ ಆಹಾರದಲ್ಲಿ ವಿವಿಧ ವಿವಿಧ ಪೋಷಕಾಂಶಗಳಿಂದ, ಜೀವಸತ್ವಗಳಿಂದ ಸಮೃದ್ಧವಾಗಿರುವ ಪದಾರ್ಥಗಳನ್ನು ಸೇವಿಸುವುದು.

  • Share this:

ವೃದ್ಧಾಪ್ಯ (Old Age) ಎಂಬುದು ಪ್ರತಿಯೊಬ್ಬ ಮನುಷ್ಯ ಎದುರಿಸುವ ಒಂದು ಶಾರೀರಿಕ ಸ್ಥಿತಿ. ಸಾಮಾನ್ಯವಾಗಿ ಈ ಸ್ಥಿತಿಯಲ್ಲಿ ಮನುಷ್ಯ ತಾನು ವಯಸ್ಕನಾಗಿದ್ದಾಗ ಹೊಂದಿದ್ದಂತಹ ದೈಹಿಕ (Physical) ಅಥವಾ ಮಾನಸಿಕ ಶಕ್ತಿಯನ್ನಾಗಿ (Mental Strength) ಹೊಂದಿರುವುದಿಲ್ಲ. ಅದರಲ್ಲೂ ವಿಶೇಷವಾಗಿ ಶಾರೀರಿಕ ಸದೃಢತೆ ಎಂಬುದು ಕುಗ್ಗಿರುತ್ತದೆ. ಹೇಗೆ ಯಾವುದೇ ಒಂದು ವಸ್ತುವನ್ನು ಉತ್ಪಾದಿಸಿದ ಮೇಲೆ ಸಮಯ ಕಳೆದಂತೆ ಅದರ ಮೊದಲಿನಂತಹ್ ಗುಣಾತ್ಮಕತೆ ಸವೆದು ಹೋಗುವುದೋ ಅದೇ ರೀತಿ ಮನುಷ್ಯನೂ ಸಹ ತನ್ನ ವೃದ್ಧಾಪ್ಯದಲ್ಲಿ ಬಹುತೇಕ ಶಕ್ತಿಯನ್ನು ಕಳೆದುಕೊಳ್ಳುತ್ತ ಹೋಗುತ್ತಾನೆ.  ವೈಜ್ಞಾನಿಕವಾಗಿ ವಿವರಿಸಿದರೆ ವೃದ್ಧಾಪ್ಯ ಅಥವಾ ವಯಸ್ಸಾಗುವಿಕೆ ಎಂಬುದು ಕಾಲಾನಂತರದಲ್ಲಿ ಶರೀರದೊಳಗಾಗುವ ವಿವಿಧ ರೀತಿಯ ಆಣ್ವಿಕ ಪ್ರಕ್ರಿಯೆ ಮತ್ತು ಜೀವಕೋಶಗಳ ಹಾನಿಯಾಗುವಿಕೆ ವೃದ್ಧಿಸುವ ಪ್ರಭಾವದಿಂದ ಉಂಟಾಗುತ್ತದೆ.


ವೃದ್ಧಾಪ್ಯದಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದಲ್ಲಿ ಕ್ರಮೇಣ ಇಳಿಕೆಯಾಗುತ್ತದೆ, ರೋಗ ಬೆಳವಣಿಗೆಯ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ವಯಸ್ಸಾದವರು ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ. ವೃದ್ಧಾಪ್ಯದಲ್ಲಿ ಸಾಮಾನ್ಯವಾಗಿ ಅನುಭವಿಸುವ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಯಾವುವು ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. 


ಹೃದ್ರೋಗ: ಹೃದಯವು ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಪಂಪ್ ಮಾಡುವ ಪ್ರಮುಖ ದೇಹದ ಅಂಗಗಳ ಪೈಕಿ ಒಂದಾಗಿದೆ. ವಯಸ್ಸಾದಂತೆ ಹೃದಯ ಮತ್ತು ರಕ್ತನಾಳಗಳಲ್ಲಿ ಹಲವು ಬದಲಾವಣೆಗಳುಂಟಾಗಬಹುದು. ಇದು ಅನೇಕ ರೀತಿಯ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗಬಹುದಾದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದೋಮ್ದು ದೀರ್ಘಕಾಲದ ಸ್ಥಿತಿಯಾಗಿದ್ದು, ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮೂರನೇ ಎರಡರಷ್ಟು ಸಾವುಗಳುಂಟಾಗಲು ಕಾರಣವಾಗಿದೆ ಎಂದು ಕಂಡುಕೊಳ್ಳಲಾಗಿದೆ.


ಇಲ್ಲಿ ಗಮನಿಸಬೇಕಾದುದೇನೆಂದರೆ ಹೃದ್ರೋಗದ ಲಕ್ಷಣಗಳು ಯಾವಾಗಲೂ ಸ್ಪಷ್ಟವಾಗಿ ಕಂಡುಬರುವುದಿಲ್ಲ ಹಾಗಾಗಿ ಬಹು ಪ್ರಕರಣಗಳಲ್ಲಿ ಇವುಗಳನ್ನು ನಿರ್ಲಕ್ಷಿಸುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಹಾಗಾದರೆ ವಯಸ್ಸಾದವರು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಲು ಅಥವಾ ತಡೆಗಟ್ಟಲು ಏನು ಮಾಡಬಹುದು ಎಂಬ ಪ್ರಶ್ನೆ ಏಳುತ್ತದೆ. ವೈದ್ಯರ ಪ್ರಕಾರ, ವೃದ್ಧಾಪ್ಯದಲ್ಲಿರುವವರು ಕೆಲವು ಕ್ರಮಗಳನ್ನು ಶಿಸ್ತುಬದ್ಧವಾಗಿ ಪಾಲಿಸುವುದರ ಮೂಲಕ ಹೃದ್ರೋಗಗಳಿಂದ ದೂರವಿರಬಹುದು ಎನ್ನುತ್ತಾರೆ. ಅವುಗಳೆಂದರೆ:


* ವಯಸ್ಸಾದವರು ಕೆಟ್ಟ ಕೊನಂಶವಿರುವ ಪದಾರ್ಥಗಳ ಸೇವನೆಯನ್ನು ನಿಯಂತ್ರಿಸಬೇಕು ಅಥವಾ ತ್ಯಜಿಸಬೇಕು. 


* ಆಲ್ಕೋಹಾಲ್ ಸೇವನೆಯನ್ನು ಅತ್ಯಂತ ಕಡಿಮೆ ಮಾಡಬೇಕು ಅವಕಾಶವಿದ್ದಲ್ಲಿ ಸಂಪೂರ್ಣವಾಗಿ ತ್ಯಜಿಸುವುದು ಇನ್ನೂ ಉತ್ತಮ. ಜೊತೆಗೆ ಧೂಮಪಾನವನ್ನು ಸಹ ತ್ಯಜಿಸುವುದು ಬಹಳಷ್ಟು ಸಹಕಾರಿಯಾಗುತ್ತದೆ.
* * ಪ್ರತಿದಿನ ಕನಿಷ್ಠ 20-30 ನಿಮಿಷ ವ್ಯಾಯಾಮ ಮಾಡುವುದು, 


ಸೋಡಿಯಂ ಸೇವನೆಯನ್ನು ಕಡಿಮೆ ಮಾಡಲು ದೈನಂದಿನ ತಿನ್ನುವ ಪದಾರ್ಥಗಳಲ್ಲಿ ಅತಿ ಕಡಿಮೆ ಉಪ್ಪಿನ ಸೇವನೆ ಮಾಡಬೇಕು.  


ಇದನ್ನೂ ಓದಿ: ಬೆಂಗಳೂರಲ್ಲಿ ದೊನ್ನೆ ಬಿರಿಯಾನಿ ಬೇಕು ಅಂದ್ರೆ ಅಲ್ಲಿ ಇಲ್ಲಿ ಯಾಕ್ ಹುಡುಕಾಡ್ತೀರಿ? ಇಲ್ಲಿಗೆ ಬಂದ್ರೆ ಸಾಕು ಟೇಸ್ಟಿಯಾಗಿರೋದು ಸಿಗುತ್ತೆ!


ಮಧುಮೇಹ: ವಯಸ್ಸಾದವರು ಎದುರಿಸುವ ಇನ್ನೊಂದು ಸಾಮಾನ್ಯ ಸಮಸ್ಯೆಯೆಂದರೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ. ಹಿಂದೊಮ್ಮೆ ಸಕ್ಕರೆ ಕಾಯಿಲೆಯನ್ನು ಸಿರಿವಂತರ ಕಾಯಿಲೆ ಎಂದು ಹೇಳಲಾಗುತ್ತಿತ್ತು. ಆದರೆ ಆ ದಿನಮಾನಗಳು ಇಂದಿಲ್ಲ. ಎಂತಹವರಿಗೂ ಈ ಕಾಯಿಲೆ ಬರುತ್ತದೆಯಾದರೂ ಸಾಮಾನ್ಯವಾಗಿ ವೃದ್ಧರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಇದು ಮುಖ್ಯವಾಗಿ ಜೀವನಶೈಲಿ-ಸಂಬಂಧಿತ ಸ್ಥಿತಿಯಾಗಿದ್ದು ಅದು ನಿಮ್ಮ ದೇಹದಿಂದ ಸಕ್ಕರೆಯ ಮಟ್ಟವನ್ನು ನಿರ್ವಹಿಸುವಲ್ಲಿ ಅಸಮರ್ಥತೆ ತೋರಿಸುವ ಸ್ಥಿತಿಯಾಗಿದೆ. ಅಧಿಕ ರಕ್ತದ ಸಕ್ಕರೆಯು ಆರೋಗ್ಯದ ಮೇಲೆ ಗಂಭೀರವಾದ ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಮೂತ್ರಪಿಂಡದ ಕಾಯಿಲೆ, ಹೃದ್ರೋಗ ಇತ್ಯಾದಿಗಳಿಗೆ ಕಾರಣವಾಗಬಹುದು. ವಯಸ್ಸಾದಂತೆ ಮಧುಮೇಹ ಬರುವ ಅಪಾಯವು ಹೆಚ್ಚಾಗುತ್ತದೆ. ವಾಸ್ತವವಾಗಿ, 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಮಧುಮೇಹಿಗಳಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆಂದು ಕೆಲ ಅಧ್ಯಯನಗಳಿಂದ ತಿಳಿದುಬಂದಿದೆ. 


ಆದಾಗ್ಯೂ ಕೆಲವು ಆಚರಣೆಗಳ ಮೂಲಕ ಸಕಾರೆಯ ಮಟ್ಟವನ್ನು ನಿಯಂತ್ರಣದಲ್ಲಿ ಹಿರಿಯರೂ ಸಹ ಇಡಬಹುದಾಗಿದೆ ಅವುಗಳೆಂದರೆ :


ಜಡತ್ವದಿಂದ ಕೂಡಿದ ಜೀವನಶೈಲಿಯನ್ನು ತ್ಯಜಿಸುವುದು ಮತ್ತು ಸಾಧ್ಯವಾದಷ್ಟು ದಿನನಿತ್ಯದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.


* ಸೇವಿಸುವ ಆಹಾರದಲ್ಲಿ ಕಾರ್ಬ್ ಮತ್ತು ಅನಾರೋಗ್ಯಕರ ಕೊಬ್ಬನ್ನು ಕಡಿಮೆ ಇರುವಂತೆ ನೋಡಿಕೊಳ್ಳುವುದು. 


* ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು


 ಮತ್ತು ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದು (ಯಾವುದೇ ಡೋಸ್ ಅನ್ನು ಬಿಟ್ಟುಬಿಡುವುದಲ್ಲ).


ನಿರ್ಜಲೀಕರಣ: ಆಂಗ್ಲದಲ್ಲಿ ಇದನ್ನು ಡಿಹೈಡ್ರೇಷನ್ ಎಂದು ಕರೆಯುತ್ತಾರೆ. ಅಂದರೆ ದೇಹದಲ್ಲಿ ಅವಶ್ಯಕವಾಗಿರುವ ನೀರಿನ ಪ್ರಮಾಣ ಇಲ್ಲದೆ ಇರುವುದು. ದೇಹದಲ್ಲಿ ಅವಶ್ಯಕ ಪ್ರಮಾಣದ ನೀರಿನ ಕೊರತೆ ಉಂಟಾದಾಗ ಅದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ವಿಶೇಷವಾಗಿ ವೃದ್ಧಾಪ್ಯದಲ್ಲಿ, ಏಕೆಂದರೆ ಇದು ಮೂತ್ರದ ಸೋಂಕುಗಳು, ಎಲೆಕ್ಟ್ರೋಲೈಟ್ ಗಳ ಅಸಮತೋಲನ ಇತ್ಯಾದಿ ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ 


ವಯಸ್ಸಾದವರು ಕೆಲವು ಕ್ರಮಗಳ ಮೂಲಕ ತಮ್ಮ ದೇಹದಲ್ಲಿರುವ ನೀರಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಬಹುದಾಗಿದೆ ಹಾಗೂ ಆ ಕ್ರಮಗಳೆಂದರೆ: 


* ಪ್ರತಿದಿನ ಕನಿಷ್ಠ 3 ಲೀಟರ್ ನೀರು ಕುಡಿಯುವುದು. ಆದರೆ, ಹೃದಯಾಘಾತದಿಂದ ಬಳಲುತ್ತಿರುವ ಜನರು ಹೆಚ್ಚುವರಿ ನೀರಿನ ಸೇವನೆಯ ಬಗ್ಗೆ ಸ್ವಲ್ಪ ಎಚ್ಚರದಿಂದಿರಬೇಕು. ಏಕೆಂದರೆ ಇದರಿಂದ ಎದೆಯಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಂಥವರು ವೈದ್ಯರ ಸಲಹೆ ಮೆರೆಗೆ ನೀರಿನ ಕನಿಷ್ಠ ಸೇವನೆ ಮಾಡುವುದು ಉತ್ತಮ. 


* ಆಲ್ಕೋಹಾಲ್ ಮತ್ತು ಕೆಫೀನ್ ಯುಕ್ತ ಪಾನೀಯಗ ಸೇವನೆಯನ್ನು ಮಿತಗೊಳಿಸುವುದು ಅಥವಾ ತ್ಯಜಿಸುವುದು. ಏಕೆಂದರೆ ಇಂತಹ ಪಾನೀಯಗಳು ದೇಹವು ಬೇಗನೆ ನಿರ್ಜಲೀಕರಣಗೊಳ್ಳುವಂತೆ ಮಾಡುತ್ತವೆ.


* ಹಣ್ಣುಗಳು, ಗಿಡಮೂಲಿಕೆಯ ಚಹಾಗಳು ಇತ್ಯಾದಿಗಳನ್ನು ಹೆಚ್ಚು ತೆಗೆದುಕೊಳ್ಳುವುದು. 


 ಮಲಬದ್ಧತೆ: ವಯಸ್ಸಾದವರಲ್ಲಿ ಸರಿಯಾಗಿ ಮಲವಿಸರ್ಜನೆ ಮಾಡಲು ಸಾಧ್ಯವಾಗದಿರುವುದು ಮತ್ತು ಹೊಟ್ಟೆ ತುಂಬಿದ ಭಾವನೆಯು ಸಾಕಷ್ಟು ಸಾಮಾನ್ಯ ಸಮಸ್ಯೆಯಾಗಿದೆ. ಇದು ಯಾವುದೇ ತಕ್ಷಣದ ಗಂಭೀರ ಪರಿಣಾಮಗಳನ್ನು ಹೊಂದಿಲ್ಲದಿರಬಹುದಾದರೂ ಆಗಾಗ್ಗೆ ಈ ಸಮಸ್ಯೆಯು ತೀವ್ರವಾಗಿ, ಹೊಟ್ಟೆ ಉಬ್ಬುವುದು, ಅಜೀರ್ಣ, ವಾಕರಿಕೆ ಮತ್ತು ಹೊಟ್ಟೆ ನೋವಿನಂತಹ ತೊಂದರೆದಾಯಕ ಸಮಸ್ಯೆಗಳಿಗೆ ಕಾರಣವಾಗಬಹುದು. ಮಲಬದ್ಧತೆಗೆ ಪ್ರಮುಖ ಕಾರಣವೆಂದರೆ ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಹಾರದಲ್ಲಿ ನಾರಿನಂಶದ ಕೊರತೆ. ವಯಸ್ಸಾದವರಲ್ಲಿ ಮಲಬದ್ಧತೆಯನ್ನು ತಡೆಗಟ್ಟುವ ಮತ್ತು ನಿರ್ವಹಿಸುವ ಮಾರ್ಗಗಳು:


* ವಯಸ್ಸಾದವರು ತಮ್ಮ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸೇರಿಸುವುದು ಉತ್ತಮ. 


* ಚೆನ್ನಾಗಿ ನೀರು ಕುಡಿಯುವುದು


* ಕರುಳಿನ ಚಲನ-ವಲನ ಆರೋಗ್ಯಕರವಾಗಿರುವಂತೆ ಕಾಪಾಡಿಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡುವುದು.


* ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು. ಇದರಿಂದಲೂ ಸಹಾಯವಾಗದಿದ್ದಾಗ ತಜ್ಞ ವೈದ್ಯರ ಸಲಹೆ ಪಡೆಯುವುದು.


ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪರಿಸ್ಥಿತಿಗಳು: ದೈಹಿಕ ಆರೋಗ್ಯದಂತೆಯೇ, ಮಾನಸಿಕ ಆರೋಗ್ಯವು ವಯಸ್ಸಾದಂತೆ ಕ್ಷಿಣಿಸುತ್ತದೆ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು 15% ಜನರು ಕನಿಷ್ಠ ಒಂದು ಮಾನಸಿಕ ಆರೋಗ್ಯ ಸ್ಥಿತಿಯೊಂದಿಗೆ ಪ್ರಭಾವಿತರಾಗಿರುತ್ತಾರೆ ಎಂಬುದನ್ನು ತಿಳಿದು ಬಂದಿದೆ. ವಯಸ್ಸಾದ ಜನರು ಆಲ್ಝೈಮರ್ಸ್ ಕಾಯಿಲೆ, ಖಿನ್ನತೆ ಮತ್ತು ಆತಂಕವನ್ನು ಹೆಚ್ಚಾಗಿ ಅನುಭವಿಸುವ ಸಾಧ್ಯತೆಯಿದೆ. 


ಹೆಚ್ಚಿನ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೆಲವು ಹೊಂದಾಣಿಕೆಯಿಂದ ಕೂಡಿದ ವಿಧಾನದ ಅಗತ್ಯವಿದ್ದು ಅದನ್ನು ಪಾಲಿಸಬಹುದು. ಆದಾಗ್ಯೂ, ಈ ಕೆಳಗಿನ ಹಂತಗಳು ಸಾಮಾನ್ಯ ರೀತಿಯಲ್ಲಿ ಸಹಾಯ ಮಾಡಬಹುದು:


* ನೆರೆಹೊರೆಯವರು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು. ಅವರೊಂದಿಗೆ ಬೆರೆಯುವುದು, ಉತ್ತಮ ಸಮಯ ಕಳೆಯುವುದು ಇತ್ಯಾದಿ. ನಿಮ್ಮ ಪ್ರೀತಿಪಾತ್ರರ ಸುತ್ತಲೂ ನೀವು ದೈಹಿಕವಾಗಿ ಇರಲು ಸಾಧ್ಯವಾಗದಿದ್ದ ಪಕ್ಷದಲ್ಲಿ ವರ್ಚುವಲ್ ಆಗಿ ಸಂಪರ್ಕ ಹೊಂದುವುದು ಅತ್ಯಂತ ಮಹತ್ವದ್ದಾಗಿದೆ. 


* ನಿಮಗೆ ಪ್ರಾಣಿಗಳು ಇಷ್ಟವಿದ್ದಲ್ಲಿ ಸಾಕುಪ್ರಾಣಿಯನ್ನು ದತ್ತು ಪಡೆಯುವುದು ಹಗೂ ಅವುಗಳೊಂದಿಗೆ ಸಮಯ ಕಳೆಯುವುದು. 


* ನಿಸರ್ಗ ಪ್ರೀಯರಾಗಿದ್ದರೆ ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದು, ಅಥವಾ ಹೊಸ ಹೊಸ ಮನಸ್ಸಿಗೆ ಸಂತಸ ನೀಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು.


ಇದನ್ನೂ ಓದಿ: ಕೇಕ್​ ಉಳಿದು ಹೋದ್ರೆ ಚಿಂತೆ ಬಿಡಿ, ಈ ಟೇಸ್ಟಿ ರೆಸಿಪಿ ಮಾಡಿ


ಮೂಳೆ ಮತ್ತು ಕೀಲು ಸಂಬಂಧಿತ ಅಸ್ವಸ್ಥತೆಗಳು:ಅಸ್ಥಿಸಂಧಿವಾತ, ರುಮಟಾಯ್ಡ್ ಸಂಧಿವಾತ ಮತ್ತು ಸ್ನಾಯು ನೋವುಗಳು ವಯಸ್ಸಾದವರಲ್ಲಿ ಸಾಮಾನ್ಯವಾಗಿದೆ. ವಾಸ್ತವವಾಗಿ, ಸಂಧಿವಾತವು 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅರ್ಧದಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ಮೂಳೆ ಮತ್ತು ಕೀಲು ಸಂಬಂಧಿತ ಅಸ್ವಸ್ಥತೆಗಳು ದೈನಂದಿನ ಚಟುವಟಿಕೆಗಳಲ್ಲಿ ನಿಮ್ಮ ಭಾಗವಹಿಸುವಿಕೆಯ ಮೇಲೆ ಪರಿಣಾಮ ಬೀರುವುದರಿಂದ ಜೀವನದ ಗುಣಮಟ್ಟದ ಮೇಲೆ ಭಾರಿ ಪರಿಣಾಮ ಬೀರಬಹುದು.ಇದನ್ನು ನಿರ್ವಹಿಸುವ ವಿಧಾನಗಳು:


* ನಿಮ್ಮ ಚಲನ-ವಲನಗಳ ಸಾಮರ್ಥ್ಯದ ವ್ಯಾಪ್ತಿಯಲ್ಲೇ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು


* ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು. ಇದರಿಂದ ಮೂಳೆಗಳಿಗೆ ಶಕ್ತಿ ಸಿಗುತ್ತದೆ. 


* ಸಾಕಷ್ಟು ಸೂರ್ಯನ ಬೆಳಕು ದೇಹಕ್ಕೆ ಸೋಕುವುದನ್ನು ಖಚಿತಪಡಿಸಿಕೊಳ್ಳುವುದು. 


* ದೈನಂದಿನ ಆಹಾರದಲ್ಲಿ ವಿವಿಧ ವಿವಿಧ ಪೋಷಕಾಂಶಗಳಿಂದ, ಜೀವಸತ್ವಗಳಿಂದ ಸಮೃದ್ಧವಾಗಿರುವ ಪದಾರ್ಥಗಳನ್ನು ಸೇವಿಸುವುದು.

Published by:Sandhya M
First published: