ಎಲ್ಲಾ ವಯಸ್ಸಿನವರಲ್ಲಿಯೂ ಸಾಮಾನ್ಯವಾಗಿ ಕಾಣುವಂತದ್ದು ಎಂದರೆ ಹಿಮ್ಮಡಿಗಳಲ್ಲಿ ಬಿರುಕು ಬಿಡುವುದು ಮತ್ತು ಆ ಬಿರುಕು ಬಿಟ್ಟಂತಹ ಹಿಮ್ಮಡಿಗಳನ್ನು ನೆಲಕ್ಕೆ ತಾಕಿಸಿದರೆ ಸಾಕು, ಅಬ್ಬಾ ಎಂತಾ ನೋವು. ಇದನ್ನು ಎಲ್ಲರೂ ಒಂದಾನೊಂದು ಸಮಯದಲ್ಲಿ ಅನುಭವಿಸಿರುತ್ತಾರೆ. ಕೆಲವರಿಗೆ ಹಿಮ್ಮಡಿಗಳಲ್ಲಿ ಬಿರುಕು ಬಿಟ್ಟರೂ ಸಹ ಯಾವುದೇ ನೋವು ಇರುವುದಿಲ್ಲ ಅಮೆರಿಕ ದೇಶದಲ್ಲಿ ಸುಮಾರು 20 ಪ್ರತಿಶತ ಜನರು ಹಿಮ್ಮಡಿಗಳಲ್ಲಿ ಬಿರುಕು ಬಿಟ್ಟಿರುವಂತಹ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಸಮಸ್ಯೆಗೆ ಮನೆಯಲ್ಲಿಯೇ ಹಲವಾರು ಚಿಕಿತ್ಸೆಯನ್ನು ನಾವು ಪಡೆದುಕೊಳ್ಳಬಹುದಾಗಿದೆ.
ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ:
ಮೊದಲನೆಯ ಚಿಕಿತ್ಸೆ ನಾವು ಮನೆಯಲ್ಲಿಯೇ ವೈದ್ಯರು ನೀಡುವಂತಹ ಕ್ರೀಮ್ ಗಳನ್ನು ಹಚ್ಚುವುದು. ಈ ಕ್ರೀಮ್ ಹಚ್ಚುವುದರಿಂದ ಇದರಲ್ಲಿರುವಂತಹ ಔಷಧಿ ಅಂಶಗಳು ನಮ್ಮ ಬಿರುಕು ಬಿಟ್ಟಂತಹ ಹಿಮ್ಮಡಿಗಳನ್ನು ಮೃದುವಾಗಿಸುತ್ತವೆ, ಹಾಳಾದಂತಹ ಚರ್ಮವನ್ನು ಹೋಗಲಾಡಿಸುತ್ತದೆ. ಕೆಲವು ಕ್ರೀಮ್ ಗಳು ಹಚ್ಚಿದ ಕೂಡಲೇ ತುರಿಕೆಯಾಗುವುದು ಸಾಮಾನ್ಯ ಮತ್ತು ತುರಿಕೆ ಹೆಚ್ಚಾದರೆ ನಿಮ್ಮ ವೈದ್ಯರನ್ನು ಕೂಡಲೇ ಸಂಪರ್ಕಿಸಿರಿ.
ಬಿರುಕು ಬಿಟ್ಟಿರುವ ಹಿಮ್ಮಡಿಗಳನ್ನು ಸರಿಪಡಿಸಿಕೊಳ್ಳಲು ಕೆಲ ಟಿಪ್ಸ್:
ಬೆಳಗ್ಗೆ ನಿಮ್ಮ ದಿನವನ್ನು ಶುರು ಮಾಡುವುದಕ್ಕೂ ಮುಂಚೆ ಕ್ರೀಮ್ ಅನ್ನು ಬಿರುಕು ಬಿಟ್ಟಿರುವ ಹಿಮ್ಮಡಿಗಳಿಗೆ ಹಚ್ಚಿದರೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಪ್ರತಿದಿನ ಶೂ ಹಾಕಿಕೊಳ್ಳುವುದರಿಂದ ನಿಮ್ಮ ಹಿಮ್ಮಡಿಗಳನ್ನು ಬಿರುಕು ಬಿಡದಂತೆ ನೋಡಿಕೊಳ್ಳಬಹುದು.ನಿಮ್ಮ ಹಿಮ್ಮಡಿಗಳಿಗೆ ಪ್ರತಿದಿನ ಎರಡು ಬಾರಿ ಕ್ರೀಮ್ ಹಚ್ಚಿ
ನಿಮ್ಮ ಪಾದಗಳನ್ನು ನೀರಿನಲ್ಲಿ ನೆನಸಿಟ್ಟುಕೊಳ್ಳಿ:
ನಿಮ್ಮ ಬಿರುಕು ಬಿಟ್ಟಿರುವಂತಹ ಹಿಮ್ಮಡಿಗಳ ಸುತ್ತ ಮುತ್ತಲು ಚರ್ಮವು ತುಂಬಾ ಗಡುಸಾಗಿರುತ್ತದೆ. ಅದರಿಂದ ನೋವು ಜಾಸ್ತಿಯಾಗಿರುತ್ತವೆ, ಆದ್ದರಿಂದ ಸ್ವಲ್ಪ ಬೆಚ್ಚಗಿರುವ ನೀರಿನಲ್ಲಿ ತಮ್ಮ ಎರಡು ಬಿರುಕು ಬಿಟ್ಟಿರುವಂತಹ ಹಿಮ್ಮಡಿಗಳನ್ನು 20 ನಿಮಿಷಗಳ ಕಾಲದವರೆಗೆ ನೆನೆಸಿಟ್ಟುಕೊಳ್ಳಿ. ಫೂಟ್ ಸ್ಕ್ರಬ್ಬರ್ನಿಂದ ಒದ್ದೆಯಾದಂತಹ ಹಿಮ್ಮಡಿಗಳನ್ನು ಉಜ್ಜಿ ನಂತರ ಅದಕ್ಕೆ ಕ್ರೀಮ್ ಹಚ್ಚುವುದರಿಂದ ಬಿರುಕು ಬಿಟ್ಟಿದಂತಹ ಹಿಮ್ಮಡಿಗಳು ಬೇಗನೆ ವಾಸಿಯಾಗುತ್ತವೆ.
ಜೇನುತುಪ್ಪ ಹಚ್ಚಿ:
ಜೇನುತುಪ್ಪವು ಬಿರುಕು ಬಿಟ್ಟಿರುವಂತಹ ಹಿಮ್ಮಡಿಗಳನ್ನು ಗುಣಪಡಿಸಬಹುದಾದಂತಹ ನೈಸರ್ಗಿಕವಾದ ಮನೆ ಮದ್ದಾಗಿದ್ದು,ಜೇನುತುಪ್ಪವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಂತಹ ಗುಣವನ್ನು ಹೊಂದಿದ್ದು,ಬಿರುಕು ಬಿಟ್ಟಿರುವಂತಹ ಹಿಮ್ಮಡಿಗಳನ್ನು ಒದ್ದೆ ಮಾಡಿಕೊಂಡು ರಾತ್ರಿ ಜೇನುತುಪ್ಪವನ್ನು ಅದರ ಮೇಲೆ ಲೇಪಿಸಿದರೆ, ಬೆಳಿಗ್ಗೆ ಎದ್ದಾಗ ನಿಮ್ಮ ಹಿಮ್ಮಡಿಗಳು ತುಂಬಾ ಮೃದುವಾಗಿರುತ್ತವೆ.
ಕೊಬ್ಬರಿ ಎಣ್ಣೆಯನ್ನು ಸಹ ಹಚ್ಚಬಹುದು:
ಕೊಬ್ಬರಿ ಎಣ್ಣೆಯು ಸಹ ಜೇನುತುಪ್ಪದಂತೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಂತಹ ಅಂಶವನ್ನು ಹೊಂದಿದ್ದು,ಬಿರುಕು ಬಿಟ್ಟಿರುವಂತಹ ಹಿಮ್ಮಡಿಗಳನ್ನು ಗುಣಪಡಿಸಬಹುದಾದಂತಹ ನೈಸರ್ಗಿಕವಾದ ಪರಿಹಾರವಾಗಿದೆ.ಬಿರುಕು ಬಿಟ್ಟಿರುವಂತಹ ಹಿಮ್ಮಡಿಗಳನ್ನು ನೆನೆಸಿಕೊಂಡು ಒದ್ದೆ ಮಾಡಿಕೊಂಡು ಕೊಬ್ಬರಿ ಎಣ್ಣೆಯನ್ನು ಅದರ ಮೇಲೆ ಲೇಪಿಸಿದರೆ ಉತ್ತಮ. ಕೊಬ್ಬರಿ ಎಣ್ಣೆಯು ಒಡೆದಂತಹ ಹಿಮ್ಮಡಿಗಳ ಆಳದಲ್ಲಿ ಹೋಗಿ ಹಿಮ್ಮಡಿಗಳನ್ನು ಮೃದುವಾಗಿಸುತ್ತವೆ.
ನಿಮ್ಮ ಹಿಮ್ಮಡಿಗಳು ಬಿರುಕು ಬಿಡಲು ಕಾರಣಗಳೇನು?
ನಿಮ್ಮ ಹಿಮ್ಮಡಿಗಳ ಚರ್ಮವು ಗಡುಸಾಗುವುದು ಮತ್ತು ಅಲ್ಲಿ ನೋವು ಆಗುವುದು ನಿಮ್ಮ ಹಿಮ್ಮಡಿಗಳು ಬಿರುಕು ಬಿಡಲಿವೆ ಎಂಬುದರ ಮುನ್ಸೂಚನೆಯನ್ನು ನೀಡಿದಂತೆ. ನಿಮ್ಮ ಹಿಮ್ಮಡಿಗಳು ಬಿರುಕು ಬಿಡಲು ಅನೇಕ ಕಾರಣಗಳಿವೆ.
ತುಂಬಾ ಹೊತ್ತಿನವರೆಗೆ ನಿಲ್ಲುವುದು
ಬರಿಗಾಲಿನಲ್ಲಿ ಚಪ್ಪಲಿಯನ್ನು ಹಾಕಿಕೊಳ್ಳದೆ ತಿರುಗಾಡುವುದು
ನಿಮ್ಮ ಹಿಮ್ಮಡಿಗಳಿಗೆ ಸರಿಹೊಂದುವಂತಹ ಶೂ ಧರಿಸುವುದರಿಂದಲೂ ಸಹ ನಿಮ್ಮ ಹಿಮ್ಮಡಿಗಳಲ್ಲಿ ಬಿರುಕು ಬಿಡಬಹುದು.
ವಾತಾವರಣದ ಕಾರಣದಿಂದಲೂ ಸಹ ಹಿಮ್ಮಡಿಗಳು ಬಿರುಕು ಬಿಡಬಹುದು
ಹಿಮ್ಮಡಿಗಳು ಬಿರುಕು ಬಿಡಲುವೈದ್ಯಕೀಯ ಕಾರಣಗಳು:
ವಿಟಮಿನ್ ಕೊರತೆ
ಅತಿಯಾದ ಬೊಜ್ಜು
ವಯಸ್ಸಾಗುವುದು
ಗರ್ಭಿಣಿ ಆದಾಗ
ಚರ್ಮ ರೋಗಗಳು ಬಂದಾಗ
ಇವೆಲ್ಲಾ ವೈದ್ಯಕೀಯ ಕಾರಣಗಳಿಂದಾಗಿ ನಮ್ಮ ಹಿಮ್ಮಡಿಗಳಲ್ಲಿ ಬಿರುಕು ಬಿಡುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ.
ಇನ್ನೂ ಯಾವುದೆಲ್ಲ ರೋಗಲಕ್ಷಣಗಳು ಬಿರುಕು ಹಿಮ್ಮಡಿಗಳೊಂದಿಗೆ ಹುಟ್ಟಿ ಕೊಳ್ಳುತ್ತವೆ:
ಹಿಮ್ಮಡಿಗಳಲ್ಲಿ ನೋವು
ಹಿಮ್ಮಡಿಗಳಲ್ಲಿ ರಕ್ತ ಬರುವುದು ಮತ್ತು ಗಾಯವಾಗುವುದು
ಹಿಮ್ಮಡಿಗಳಲ್ಲಿ ಅತಿಯಾದ ತುರಿಕೆ
ಹೇಗೆ ಹಿಮ್ಮಡಿಗಳನ್ನು ಬಿರುಕು ಬಿಡದಂತೆ ಕಾಪಾಡಿಕೊಳ್ಳುವುದು:
ನಿಮ್ಮ ಹಿಮ್ಮಡಿಗಳು ಪದೇ ಪದೇ ಬಿರುಕು ಬಿಡುತ್ತಿದ್ದರೇ, ನೀವು ಪ್ರತಿದಿನ ತುಂಬಾ ಆರಾಮದಾಯಕ ಎನಿಸುವಂತಹ ಶೂಗಳನ್ನು ಹಾಕಿಕೊಳ್ಳುವುದರಿಂದ ನಿಮ್ಮ ಹಿಮ್ಮಡಿಗಳನ್ನು ಕಾಪಾಡಿಕೊಳ್ಳಬಹುದು. ಚಪ್ಪಲಿಗಳನ್ನು ಮತ್ತು ಸ್ಯಾಂಡಲ್ಸ್ ಹಾಕಿಕೊಳ್ಳುವುದು ಆದಷ್ಟು ಕಡಿಮೆ ಮಾಡಿ ಮತ್ತು ತುಂಬಾ ಟೈಟ್ ಆಗುವಂತಹ ಶೂಗಳನ್ನು ಹಾಕಿಕೊಳ್ಳಬೇಡಿ.
ತುಂಬಾ ಹೊತ್ತು ಒಂದೇ ಜಾಗದಲ್ಲಿ ನಿಲ್ಲಬೇಡಿ
ತುಂಬಾ ಹೊತ್ತು ಬರಿಗಾಲಿನಲ್ಲಿ ಓಡಾಡಬೇಡಿ
ಪ್ರತಿದಿನ ರಾತ್ರಿ ಮಲಗುವ ಮುನ್ನವೇ ಕಾಲುಗಳನ್ನು ಚೆನ್ನಾಗಿ ತೊಳೆದುಕೊಂಡು ಕ್ರೀಮ್ ಹಚ್ಚಿಕೊಂಡು ಕಾಲ್ ಚೀಲಗಳನ್ನು ಹಾಕಿಕೊಂಡು ಮಲಗುವುದರಿಂದ ನಿಮ್ಮ ಹಿಮ್ಮಡಿಗಳು ಆರೋಗ್ಯವಾಗಿರುತ್ತವೆ.
ನಿಮಗೆ ಮಧುಮೇಹ ಇದ್ದರೇ ನಿಮ್ಮ ಕಾಲುಗಳನ್ನು ಮತ್ತು ಹಿಮ್ಮಡಿಗಳನ್ನು ಪ್ರತಿದಿನ ನೋಡಿಕೊಳ್ಳಿ
ತುಂಬಾ ನೀರು ಕುಡಿಯಿರಿ ಮತ್ತು ಬೇರೆ ದ್ರವ ಪದಾರ್ಥಗಳನ್ನೂ ಸೇವಿಸಿರಿ
ತುಂಬಾ ಒಳ್ಳೆಯ ಗುಣಮಟ್ಟದ ಕಾಲು ಚೀಲಗಳನ್ನು ಉಪಯೋಗಿಸಿ
ಬಹುತೇಕ ಸಂದರ್ಭಗಳಲ್ಲಿ ನಿಮ್ಮ ಹಿಮ್ಮಡಿಗಳು ಬಿರುಕು ಬಿಟ್ಟಾಗ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು,ಈ ನೋವು ಹೆಚ್ಚಾದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ