Snacks Recipe: ಮಹಾರಾಷ್ಟ್ರದ ಫೇಮಸ್ ಭಾಕರವಾಡಿ ರುಚಿ ನೋಡಿದ್ದೀರಾ? ಇಲ್ಲಿದೆ ನೋಡಿ ಸೂಪರ್ ರೆಸಿಪಿ

ಆಹಾರ

ಆಹಾರ

ಫಾಫ್ಡಾದಿಂದ ಥೆಪ್ಲಾವರೆಗೆ, ಸಮೋಸಾದಿಂದ ಕಚೋರಿವರೆಗೆ ಹೀಗೆ ನಮಗೆ ಬಿಸಿ ಬಿಸಿ ಚಹಾದ ಜೊತೆಗೆ ಆನಂದಿಸಲು ಅನೇಕ ಅದ್ಭುತ ತಿಂಡಿಗಳಿವೆ. ಇಲ್ಲೊಂದು ಚಹಾದ ಜೊತೆಯಲ್ಲಿ ತಿನ್ನುವಂತಹ ತುಂಬಾನೇ ಜನಪ್ರಿಯವಾಗಿರುವ ಮಹಾರಾಷ್ಟ್ರದ ತಿಂಡಿ ಎಂದರೆ ಅದು, ಭಾಕರ್ವಾಡಿ ಅಂತ ಹೇಳಬಹುದು.

  • Share this:

ನಮ್ಮ ಭಾರತ (India) ದೇಶದ ಪಾಕಪದ್ಧತಿಯಲ್ಲಿ ಎಷ್ಟೆಲ್ಲಾ ವಿಧ ವಿಧವಾದ ತಿಂಡಿ (Food)  ತಿನಿಸುಗಳಿವೆ ಅಂತ ಬಹುಶಃ ಲೆಕ್ಕ ಹಾಕಲು ಸಹ ಸಾಧ್ಯವಿಲ್ಲ ಬಿಡಿ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಅನೇಕ ರೀತಿಯ ಪಾಕಪದ್ದತಿಗಳಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನೀವು ದೇಶದ (Country) ಯಾವುದೇ ಭಾಗಕ್ಕೆ ಪ್ರಯಾಣಿಸಿದರೂ, ಪ್ರಯತ್ನಿಸಲು ನೀವು ಅದ್ಭುತ ಭಕ್ಷ್ಯಗಳನ್ನು ಪಡೆಯುತ್ತೀರಿ ಅಂತ ಹೇಳಬಹುದು. ಇದು ಮುಖ್ಯವಾದ ಆಹಾರ ಪದಾರ್ಥಗಳಿಗೆ ಮಾತ್ರವಲ್ಲದೆ, ತಿಂಡಿ ತಿನಿಸುಗಳಿಗೂ ಸಹ ಇದು ಅನ್ವಯಿಸುತ್ತದೆ ಅಂತ ಹೇಳಬಹುದು.


ಫಾಫ್ಡಾದಿಂದ ಥೆಪ್ಲಾವರೆಗೆ, ಸಮೋಸಾದಿಂದ ಕಚೋರಿವರೆಗೆ ಹೀಗೆ ನಮಗೆ ಬಿಸಿ ಬಿಸಿ ಚಹಾದ ಜೊತೆಗೆ ಆನಂದಿಸಲು ಅನೇಕ ಅದ್ಭುತ ತಿಂಡಿಗಳಿವೆ.


ಚಹಾದ ಜೊತೆಗೆ ಆನಂದಿಸುವಂತಹ ಜನಪ್ರಿಯ ತಿಂಡಿ ಭಾಕರ್ವಾಡಿ


ಇಲ್ಲೊಂದು ಚಹಾದ ಜೊತೆಯಲ್ಲಿ ತಿನ್ನುವಂತಹ ತುಂಬಾನೇ ಜನಪ್ರಿಯವಾಗಿರುವ ಮಹಾರಾಷ್ಟ್ರದ ತಿಂಡಿ ಎಂದರೆ ಅದು, ಭಾಕರ್ವಾಡಿ ಅಂತ ಹೇಳಬಹುದು.


ವಿಶೇಷವಾಗಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಜನರು ಹೆಚ್ಚಾಗಿ ಈ ಭಾಕರ್ವಾಡಿಯನ್ನು ಇಷ್ಟಪಡುತ್ತಾರೆ ಅಂತ ಹೇಳಬಹುದು. ಇತ್ತೀಚೆಗೆ, ಭಕರ್ವಾಡಿ ಬಗ್ಗೆ ಟ್ವಿಟರ್ ಥ್ರೆಡ್ ಆನ್ಲೈನ್ ನಲ್ಲಿ ನೆಟ್ಟಿಗರ ಗಮನ ಸೆಳೆಯಿತು.


ಭಾಕರ್ವಾಡಿಯ ಬಗ್ಗೆ ಕಾಮೆಂಟ್ ಮಾಡಿದ ಕಾಮಿಡಿಯನ್..


ಜನಪ್ರಿಯ ಹಾಸ್ಯನಟ ತನ್ಮಯ್ ಭಟ್ ಅವರು ಮಾರ್ಚ್ 27 ರಂದು ಒಂದು ಟ್ವೀಟ್ ಮಾಡಿದ್ದಾರೆ ನೋಡಿ. "ಭಾಕರ್ವಾಡಿಯನ್ನು ತಿನ್ನುವ ಜನರನ್ನು ನಿಜವಾಗಿಯೂ ಗೌರವಿಸಿ" ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.


"ಬಿಸಿ ದಾಲ್ ರೈಸ್ ನೊಂದಿಗೆ ಸ್ವಲ್ಪ ಭಾಕರ್ವಾಡಿಯನ್ನು ಯಾವಾಗಲೂ ಪುಡಿಪುಡಿ ಮಾಡಿ ತಿಂದಿರುತ್ತೀರಿ" ಎಂದು ಅವರು ಮುಂದಿನ ಪೋಸ್ಟ್ ನಲ್ಲಿ ಹೇಳಿದರು.


ಈ ಟ್ವೀಟ್ ಭಾರತೀಯ ಆಹಾರ ಪ್ರಿಯರನ್ನು ತುಂಬಾನೇ ಆಕರ್ಷಿಸಿತು ಮತ್ತು ಅವರಲ್ಲಿ ಅನೇಕರು ಈ ಭಕರ್ವಾಡಿಯ ಬಗ್ಗೆ ಅವರಿಗಿರುವ ಪ್ರೀತಿಯನ್ನು ಹಂಚಿಕೊಂಡರು.


ಇದನ್ನೂ ಓದಿ: ಚಿಕನ್​ ಕರಿಗಿಂತಲೂ ರುಚಿಯಾಗಿರುತ್ತೆ ಈ ಬಾಳೆಕಾಯಿ ಗ್ರೇವಿ! ನೀವೂ ಒಮ್ಮೆ ಮಾಡಿ ಸವಿಯಿರಿ


ಈ ಟ್ವೀಟ್ ಈಗಾಗಲೇ 84.6 ಸಾವಿರ ವೀಕ್ಷಣೆಗಳು ಮತ್ತು 1.7 ಸಾವಿರ ಲೈಕ್ ಗಳನ್ನು ಪಡೆದಿದೆ. ಅವರಲ್ಲಿ ಅನೇಕರು ಚಹಾ ಅಥವಾ ಕಾಫಿಯೊಂದಿಗೆ ಈ ಭಾಕರ್ವಾಡಿಯನ್ನು ಹೇಗೆ ಆನಂದಿಸುತ್ತಾರೆ ಎಂಬುದನ್ನು ಹಂಚಿಕೊಂಡರು. ಇತರರು ಈ ರುಚಿಕರ ತಿಂಡಿಯನ್ನು ಆನಂದಿಸಲು ತಮ್ಮ ನೆಚ್ಚಿನ ಸ್ಥಳದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.


ಮಹಾರಾಷ್ಟ್ರದ ಭಾಕರ್ವಾಡಿ ತಯಾರಿಸುವುದು ಹೇಗೆ ಗೊತ್ತೇ?




    • ಭಾಕರ್ವಾಡಿಯನ್ನು ತಯಾರಿಸಲು, ಮೊದಲು ಮೈದಾ, ಕಡಲೆ, ಎಣ್ಣೆ ಮತ್ತು ಉಪ್ಪನ್ನು ಒಟ್ಟಿಗೆ ಮಿಶ್ರಣ ಮಾಡಿಕೊಳ್ಳಿ. ನಯವಾದ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿಕೊಳ್ಳಿ. ತೇವವಾದ ಬಟ್ಟೆಯಿಂದ ಆ ಕಲಿಸಿಕೊಂಡ ಹಿಟ್ಟನ್ನು ಮುಚ್ಚಿಡಿ.




top videos




    • ಆನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಳ್ಳು ಮತ್ತು ಸಾಸಿವೆ ಕಾಳುಗಳನ್ನು ಚೆನ್ನಾಗಿ ಹುರಿದುಕೊಳ್ಳಿರಿ. ಜಜ್ಜಿದ ಗಸಗಸೆ ಬೀಜಗಳು, ಫೆನ್ನೆಲ್ ಬೀಜಗಳು ಮತ್ತು ಕೊತ್ತಂಬರಿ ಬೀಜಗಳನ್ನು ಸೇರಿಸಿ. ಈ ಬಾಣಲೆಯನ್ನು ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಿ.

    • ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ ಜೀರಿಗೆಯನ್ನು ಹಾಕಿ ಅವುಗಳನ್ನು ಹುರಿಯಲು ಬಿಡಿ. ನಂತರ ಶುಂಠಿ, ಬೆಳ್ಳುಳ್ಳಿ ಹಾಕಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಇತರ ಎಲ್ಲಾ ಪುಡಿ ಮಾಡಿದ ಬೀಜಗಳನ್ನು ಸೇರಿಸಿಕೊಳ್ಳಿ. ತೆಂಗಿನಕಾಯಿ, ಸೇವ್, ಮಸಾಲಾ, ಸಕ್ಕರೆ, ಕಡಲೆ ಹಿಟ್ಟು ಮತ್ತು ಉಪ್ಪನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.


    ಇದನ್ನೂ ಓದಿ: ಈರುಳ್ಳಿಯನ್ನು ಹೀಗೆ ತಿಂದ್ರೆ ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಹೀರುತ್ತೆ!

    • ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಅದನ್ನು ತೆಳುವಾದ ಚಪಾತಿ ರೀತಿಯಲ್ಲಿ ಮಾಡಿಕೊಳ್ಳಿ. ತಯಾರಿಸಿದ ಆ ಭರ್ತಿಯನ್ನು ಚಪಾತಿ ಮೇಲೆ ಹರಡಿ ಮತ್ತು ಅದನ್ನು ಬಿಗಿಯಾದ ರೋಲ್ ಮಾಡಿ ಮತ್ತು ಅಂಚುಗಳನ್ನು ಒತ್ತಿರಿ.

    • ನಂತರ ಅವುಗಳನ್ನು ಒಂದು ಇಂಚಿನ ತುಂಡುಗಳಾಗಿ ಕತ್ತರಿಸಿ ಮತ್ತು ಗರಿಗರಿ ಮತ್ತು ಚಿನ್ನದ ಕಂದು ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ. ಗಾಳಿಯಾಡದ ಕಂಟೇನರ್ ನಲ್ಲಿ ಸಂಗ್ರಹಿಸುವ ಮೊದಲು ಅವುಗಳನ್ನು ತಣ್ಣಗಾಗಲು ಬಿಡಿ.

    First published: