ಲವ್, ಸೆಕ್ಸ್, ದೋಖಾ | ಪ್ರೀತಿಸಿದ ಹುಡುಗಿಯ ಗಂಡನ ಹೆಸರಲ್ಲಿ ಪಾಗಲ್ ಪ್ರೇಮಿಯೊಬ್ಬ ಮಾಡಿದ್ದೇನು ಗೊತ್ತಾ?

ಮೊದಲ ಪ್ರೀತಿಯನ್ನು ಮರೆಯುವುದು ಅಸಾಧ್ಯ. ತನ್ನಿಂದ ದೂರಾದ ಮೊದಲ ಪ್ರೀತಿ ಪಡೆಯಲು ಗೆಳೆಯನಿಗೆ ಉಗ್ರ ಎಂದು ಪಟ್ಟ ಕಟ್ಟಿದವ ಪಾಗಲ್ ಪ್ರೇಮಿಯ ಕಥೆಯಿದು.

Seema.R | news18
Updated:December 1, 2018, 2:51 PM IST
ಲವ್, ಸೆಕ್ಸ್, ದೋಖಾ | ಪ್ರೀತಿಸಿದ ಹುಡುಗಿಯ ಗಂಡನ ಹೆಸರಲ್ಲಿ ಪಾಗಲ್ ಪ್ರೇಮಿಯೊಬ್ಬ ಮಾಡಿದ್ದೇನು ಗೊತ್ತಾ?
ಪ್ರಾತಿನಿಧಿಕ ಚಿತ್ರ
  • Advertorial
  • Last Updated: December 1, 2018, 2:51 PM IST
  • Share this:
"ಆಕೆಯ ಹೆಸರು ಕರುಣಾ. ಆದರೆ ಹೆಸರಿಗೆ ಮಾತ್ರ. ಆಕೆಗೆ ನನ್ನ ಮೇಲೆ ಕೊಂಚ ಕರುಣೆ ಇದ್ದಿದ್ದರೆ, ನಾನು ಇಂದು ಈ ಸ್ಥಿತಿಗೆ ಬರುತ್ತಿರಲಿಲ್ಲ. ಆಕೆಗಾಗಿ ನಾನು ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದ ಹೆಂಡತಿಯನ್ನು ದೂರ ಮಾಡಿಕೊಂಡೆ. ಆದರೂ ಆಕೆ ಮೇಲೆ ನನಗೆ ಕೋಪವಿಲ್ಲ ಆಕೆಯನ್ನು ಪಡೆಯಲೇಬೇಕೆಂದು ನಾನು ನಿರ್ಧರಿಸಿದ್ದು, ಇದಕ್ಕಾಗಿ ನನ್ನ ದಾರಿಗೆ ಅಡ್ಡವಿರುವ ಆಕೆಯ ಗಂಡನನ್ನು ತೆಗೆದುಹಾಕುವುದು ನನ್ನ ಗುರಿ," ಎನ್ನುತ್ತಾ  ಗೋಕುಲ್​ ತನ್ನ ಲಾಪ್​ಟಾಪ್​ ನೋಡುತ್ತಿದ್ದ.

ಬೆಂಗಳೂರಿನ ಹೆಸರಾಂತ ಐಟಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಗೋಕುಲ್​ ಐದು ವರ್ಷಗಳ ಹಿಂದೆ ಕಾಲೇಜ್​ನಲ್ಲಿದ್ದಾಗ ಕರುಣಾ ಎಂಬ ಹುಡುಗಿಯನ್ನು ಇಷ್ಟಪಟ್ಟಿದ್ದ. ಆಕೆಯ ಬಗ್ಗೆ ಆದ ತೀರಾ ಗಾಢವಾದ ಸಂಬಂಧವನ್ನು ಹೊಂದಿದ್ದ.  ಆಕೆ ಕೂಡ ಆತನೊಂದಿಗೆ ಚಾಟ್​ ಮಾಡುತ್ತಾ ಇರುತ್ತಿದ್ದಳು. ಹೀಗೆ ದಿನಗಳಂತೆ ಕಾಲೇಜ್​ ಜೀವನ ಮುಗಿಯಿತು. ಬಳಿಕ ಕರುಣಾ 2015ರಲ್ಲಿ ಜೋಸ್​ ಎಂಬಾಂತನನ್ನು ಮದುವೆಯಾಗಿ ದೂರದೂರಿಗೆ ಪ್ರಯಾಣ ಬೆಳೆಸಿದಳು.

ದಿನಗಳೆದಂತೆ ಗೋಕುಲ್​ ಜೀವನದಿಂದ ಕರುಣಾ ಮರೆಯಾದಳು. ಆದರೆ ಗೋಕುಲ್​ನಲ್ಲಿ ಆಕೆಯ ಪ್ರೀತಿ ಇನ್ನು ಜೀವಂತವಾಗಿತ್ತು. ಆದರೂ ಕೂಡ ಆತ ಬೇರೊಂದು ಯುವತಿ ಜೊತೆ ಜೀವನ ಹಂಚಿಕೊಳ್ಳಲು ಮುಂದಾದ. ಹೆಂಡತಿ ಬಂದರೂ ಕರುಣಾ ಮೇಲಿನ ಪ್ರೀತಿ ಕುಗ್ಗಲಿಲ್ಲ. ಸದಾ ಆಕೆಯ ಧ್ಯಾನದಲ್ಲಿರುತ್ತಿದ್ದ ಗೋಕುಲ್​ ನಡವಳಿಕೆ ಮೇಲೆ ಹೆಂಡತಿಗೆ ಅನುಮಾನ ಶುರುವಾಯಿತು. ಹೀಗೆ ಒಂದುದಿನ ಕರುಣಾ ಪೋಟೊ ನೋಡುವಾಗ ಆಕೆ ಅನುಮಾನ ಬಲವಾಗಿ ಗಂಡ ಹೆಂಡತಿ ನಡುವೆ ಜೋರಾಗಿ ಗಲಾಟೆ ನಡೆಯಿತು. ಇದೇ ವೇಳೆಯಲ್ಲಿ ಹೆಂಡತಿಯ ಜೀವವನ್ನೇ ತೆಗೆದ ಗೋಕುಲ್​

ಹೆಂಡತಿಯ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿದ ಗೋಕುಲ್​ ಬಳಿಕ ಕರುಣಾ ವಿಷಯದಲ್ಲಿ ಮತ್ತಷ್ಟು ಪಾಗಲ್​ ಪ್ರೇಮಿಯಾದ. ಈ ನಡುವೆ ಕರುಣಾ ಗಂಡನೇ ಪ್ರಪಂಚ ಎಂದು ತಿಳಿದ ವಿಷಯ ಕೇಳಿ ಕುಗ್ಗಿ ಹೋದ. ತಮ್ಮ ದಾರಿಗೆ ಆತ ಅಡ್ಡನಾಗಿದ್ದು, ಆತನನ್ನು ದಾರಿಯಿಂದ ದೂರಸರಿಸಿದರೆ ಕರುಣಾ ನನ್ನವಳು ಆಗುತ್ತಾಳೆ ಎಂಬ ಹುಚ್ಚು ಕಲ್ಪನೆ ಕಂಡ ಇದಕ್ಕಾಗಿ ಒಂದು ಮಾಸ್ಟರ್​ ಪ್ಲಾನ್​ನನ್ನೇ ಮಾಡಿದ.

ಇದನ್ನು ಓದಿ: ಹಾಲುಣಿಸುವುದು ಮಾಲ್​ನಲ್ಲಲ್ಲ ಮನೆಯಲ್ಲಿ, ಅಮ್ಮಂದಿರಿಗೆ ಪ್ರತ್ಯೇಕ ಕೋಣೆ ಅಸಾಧ್ಯ ಎಂದ ಮಾಲ್​ ಸಿಬ್ಬಂದಿ

ಜೋಸ್​ ಹೆಸರಿನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಸ್ಲಾಮಿಕ್​ ಸ್ಟೇಟ್​ ಹೆಸರಿನಲ್ಲಿ ಭಯೋತ್ಪಾದಕ ಸಂದೇಶ ರವಾನಿಸಿದ. ಜೋಸ್​ಗೂ ಉಗ್ರರಿಗೂ ಸಂಬಂಧವಿದೆ ಎಂಬ ಅನುಮಾನ ಸೃಷ್ಟಿಸುವ ರೀತಿ ಎಲ್ಲ ಯೋಜನೆ ರೂಪಿಸಿದೆ.

ಆದರೆ ಬೆದರಿಕೆ ಸಂದೇಶ ಕುರಿತು ಆಳದ ತನಿಖೆಗೆ ಇಳಿದ ಪೊಲೀಸರಿಗೆ ಕಡೆಗೆ ನಿಜ ಆರೋಪಿ ದೊರಕಿದ. ಗೋಕುಲ್​ ಕಡೆಗೆ ಪೊಲೀಸರ ಮುಂದೆ ಮಾಡಿದ ತಪ್ಪನ್ನು ಬಹಿರಂಗ ಪಡಿಸಿದ. ಕರುಣಾಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ನನ್ನ ದಾರಿಗೆ ಅಡ್ಡವಿದ್ದ ಜೋಸ್​ನನ್ನು ದೂರಮಾಡಲು ಆತನಿಗೂ ಉಗ್ರ ಸಂಘಟನೆಗೆ ಸಂಬಂಧ ಕಲ್ಪಸಿದೆ. ನನ್ನ ಹೆಂಡತಿಯನ್ನು ನಾನೇ ಹತ್ಯೆ ಮಾಡಿದೆ ಎಂದು ತಿಳಿಸಿದ. ಹುಚ್ಚು ಪ್ರೇಮಕ್ಕೆ ಬಲಿಯಾದ ಗೋಕುಲ್​ ಸದ್ಯ ಜೈಲು ಪಾಲಾಗಿದ್ದಾರೆ.(ಇದು ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯಾಗಿದೆ)

First published:December 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ