Cold Water Bath: ತಣ್ಣೀರಿನ ಸ್ನಾನವು ಹೃದಯಾಘಾತಕ್ಕೆ ಹೇಗೆ ಕಾರಣವಾಗುತ್ತದೆ?

ಹೃದಯದ ಪರಿಧಮನಿಯ ಹಠಾತ್ ಕಿರಿದಾಗುವಿಕೆ ಮತ್ತು ಅವುಗಳಲ್ಲಿ ಅತ್ಯಂತ ನಿಧಾನವಾದ ರಕ್ತದ ಹರಿವಿನಿಂದ ಹೃದಯಾಘಾತ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವಿಕೆಯ ರಚನೆಯಿಂದಾಗಿ ಉಂಟಾಗುತ್ತದೆ. ಇದು ನಿಮ್ಮ ಹೃದಯಕ್ಕೆ ಆಮ್ಲಜನಕದ ಪೂರೈಕೆ ಕಡಿಮೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಿಮ್ಮ ಹೃದಯ ಸ್ನಾಯುವಿನ (Heart Muscle) ಒಂದು ಭಾಗವು (Part) ಸಾಕಷ್ಟು ರಕ್ತ (Blood) ಪಡೆಯದೇ ಹೋದಾಗ ಹೃದಯಾಘಾತ (Heart Attack) ಸಂಭವಿಸುತ್ತದೆ. ಹೃದಯದ ಪರಿಧಮನಿಯ ಹಠಾತ್ ಕಿರಿದಾಗುವಿಕೆ ಮತ್ತು ಅವುಗಳಲ್ಲಿ ಅತ್ಯಂತ ನಿಧಾನವಾದ ರಕ್ತದ ಹರಿವಿನಿಂದ ಹೃದಯಾಘಾತ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವಿಕೆಯ ರಚನೆಯಿಂದಾಗಿಯೂ ಆಗುತ್ತದೆ. ಇದು ನಿಮ್ಮ ಹೃದಯಕ್ಕೆ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಜೀವಕ್ಕೆ ಅಪಾಯಕಾರಿಯಾಗಬಹುದು. ಜೊತೆಗೆ ವ್ಯಕ್ತಿಯ ಮೇಲೆ ಅಡ್ಡ ಹಾಗೂ ಮಾರಣಾಂತಿಕ ಪರಿಣಾಮ ಉಂಟು ಮಾಡಬಹುದು. ನಿಮ್ಮ ಹೃದಯ ಸ್ನಾಯುವಿನ ಒಂದು ಭಾಗವು ಸಾಕಷ್ಟು ರಕ್ತವನ್ನು ಪಡೆಯದೇ ಹೋದಾಗ ಹೃದಯಾಘಾತ ಉಂಟಾಗುತ್ತದೆ.

    ಹೃದಯದ ಪರಿಧಮನಿಯ ಹಠಾತ್ ಕಿರಿದಾಗುವಿಕೆ

    ಹೃದಯದ ಪರಿಧಮನಿಯ ಹಠಾತ್ ಕಿರಿದಾಗುವಿಕೆ ಮತ್ತು ಅವುಗಳಲ್ಲಿ ಅತ್ಯಂತ ನಿಧಾನವಾದ ರಕ್ತದ ಹರಿವಿನಿಂದ ಹೃದಯಾಘಾತ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವಿಕೆಯ ರಚನೆಯಿಂದಾಗಿ ಉಂಟಾಗುತ್ತದೆ. ಇದು ನಿಮ್ಮ ಹೃದಯಕ್ಕೆ ಆಮ್ಲಜನಕದ ಪೂರೈಕೆ ಕಡಿಮೆ ಮಾಡುತ್ತದೆ. ಇದು ಅಪಾಯಕಾರಿ ಪರಿಣಾಮ ಉಂಟು ಮಾಡಬಹುದು.

    ತಣ್ಣೀರು ಸ್ನಾನ ಹೃದಯದ ಮೇಲೆ ಪರಿಣಾಮ ಬೀರುತ್ತದೆ

    ಕೆಲವು ತಜ್ಞರ ಪ್ರಕಾರ, ಹಠಾತ್ ತಣ್ಣೀರಿಗೆ ಒಡ್ಡಿಕೊಳ್ಳುವುದು ಅಪಾಯಕಾರಿ ಎಂದು ಹೇಳುತ್ತಾರೆ. ವಿಶೇಷವಾಗಿ ಹೃದಯ ಕಾಯಿಲೆ ಇರುವವರಿಗೆ ಇದು ಹೃದಯಾಘಾತ ಅಥವಾ ಹೃದಯದ ಲಯದಲ್ಲಿ ಅಡಚಣೆಗೆ ಕಾರಣವಾಗುತ್ತದೆ. ತಣ್ಣೀರು ದೇಹವನ್ನು ಕುಗ್ಗಿಸಬಹುದು. ಇದು ಚರ್ಮದ ರಕ್ತನಾಳಗಳು ಸಂಕುಚಿತಗೊಳಿಸುತ್ತದೆ.

    ಇದನ್ನೂ ಓದಿ: ಹಸೆಮಣೆ ಏರುವ ಮೊದಲು ವಧು ಈ ವಿಷಯ ತಿಳಿದರೆ ದಾಂಪತ್ಯ ಮತ್ತಷ್ಟು ಸುಂದರ

    ಇದು ನಿಮ್ಮ ದೇಹದಲ್ಲಿ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಹಾಗಾಗಿ ನಿಮ್ಮ ಹೃದಯವು ವೇಗವಾಗಿ ಹೊಡೆದುಕೊಳ್ಳುತ್ತದೆ. ಆಗ ದೇಹದಾದ್ಯಂತ ರಕ್ತ ಪಂಪ್ ಆಗುತ್ತದೆ. ಇದು ನಿಮ್ಮ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ.

    ತಣ್ಣೀರು ಹೇಗೆ ಹೃದಯಾಘಾತಕ್ಕೆ ಕಾರಣವಾಗುತ್ತದೆ?

    ಆರೋಗ್ಯವಂತರು, ಸದೃಢರು, ಯುವಕರು ಯಾರೇ ಆಗಲಿ, ತಣ್ಣೀರು ಸಹ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಬಿಸಿ ವಾತಾವರಣದಲ್ಲಿ ಸಂಭವಿಸುತ್ತದೆ ಎಂದು ಸಂಶೋಧನೆ ಹೇಳಿದೆ. ಜನರು ತಕ್ಷಣ ತಣ್ಣೀರಿನ ಸ್ನಾನ ಮಾಡುತ್ತಾರೆ. ಜರ್ನಲ್ ಆಫ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಅಪಾಯವನ್ನು ಮೊದಲೇ ಹೇಳಲಾಗಿದೆ. ತಣ್ಣೀರಿನ ಹಠಾತ್ ಸ್ನಾನ ದೇಹಕ್ಕೆ ಹಾನಿಕಾರಕವಾಗಿದೆ.

    ಹೃದಯಾಘಾತದ ಲಕ್ಷಣಗಳು

    ಹೆಚ್ಚಿನ ಹೃದಯಾಘಾತ ಎದೆಯ ಮಧ್ಯದಲ್ಲಿ ಅಥವಾ ಎಡಭಾಗದಲ್ಲಿ ನೋವು, ಒತ್ತಡ ಅಸ್ವಸ್ಥತೆ ಉಂಟು ಮಾಡುತ್ತದೆ. ಇದು ಕೆಲವು ನಿಮಿಷಗಳಿಗಿಂತ ಹೆಚ್ಚು ಕಾಲ ಇರಬಹುದು ಅಥವಾ ಕಡಿಮೆ ಅವಧಿ ಇರಬಹುದು ಅಥವಾ ಬಂದು ಹೋಗಬಹುದು. ಇದು ಉಸಿರಾಟದ ತೊಂದರೆ ಉಂಟು ಮಾಡಬಹುದು. ತಣ್ಣನೆಯ ಬೆವರು ಕೂಡ ಹೃದ್ರೋಗದ ಸಾಮಾನ್ಯ ಲಕ್ಷಣವಾಗಿದೆ.

    ನೀವು ಮೂರ್ಛೆ ಹೋಗಬಹುದು, ದಣಿದ ಅಥವಾ ದೌರ್ಬಲ್ಯ ಅನುಭವಿಸಬಹುದು. ನೋವು ಹೃದಯಾಘಾತದ ಪ್ರಮುಖ ಲಕ್ಷಣವಾಗಿದೆ. ಎದೆಯ ಹೊರತಾಗಿ ಇದು ದವಡೆ, ಬೆನ್ನು, ಕುತ್ತಿಗೆ, ತೋಳು ಅಥವಾ ಭುಜಗಳಲ್ಲಿ ನೋವು ಉಂಟಾಗಬಹುದು. ಹೃದಯಾಘಾತದ ಇತರ ಲಕ್ಷಣಗಳಲ್ಲಿ ವಾಕರಿಕೆ ಅಥವಾ ವಾಂತಿ ಸೇರಿದೆ.

    ಸ್ನಾನ ಮಾಡುವ ಸರಿಯಾದ ಮಾರ್ಗ ಯಾವುದು?

    ತಣ್ಣನೆಯ ಶವರ್‌ ಬದಲು ಬಕೆಟ್‌ ನಲ್ಲಿ ನೀರು ತುಂಬಿಸಿದ ಸುರಕ್ಷಿತ ಆಯ್ಕೆ. ಆಘಾತ ತಪ್ಪಿಸಲು ದೇಹದ ಮೇಲೆ ನೀರಿನ ಹರಿವನ್ನು ನಿಯಂತ್ರಿಸಬಹುದು. ಅಪಾಯಕಾರಿ ಪ್ರತಿಕ್ರಿಯೆ ತಡೆಯಲು ನಿಧಾನವಾಗಿ ನೀರು ಸುರಿದುಕೊಳ್ಳಿ. ಇದು ತಾಪಮಾನದ ಬದಲಾವಣೆಗೆ ಹೊಂದಿಕೊಳ್ಳಲು ನಿಮ್ಮ ದೇಹಕ್ಕೆ ಸಮಯ ನೀಡುತ್ತದೆ. ಅಪಾಯ ತಪ್ಪಿಸಲು, ಉಗುರುಬೆಚ್ಚನೆಯ ನೀರಿನ ಸ್ನಾನ ಉತ್ತಮ.

    ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

    ತಣ್ಣೀರಿನಿಂದ ಸ್ನಾನ ಮಾಡುವುದರ ಪ್ರಯೋಜನಗಳು

    ತಣ್ಣೀರು ಸ್ನಾನವನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸಿ. ಹೃದ್ರೋಗದಿಂದ ಬಳಲುತ್ತಿರುವವರು ತಣ್ಣೀರಿನ ಸ್ನಾನ ತಪ್ಪಿಸಿ. ತಣ್ಣೀರಿನ ಸ್ನಾನವು ಕೆಲವು ಆರೋಗ್ಯ ಪ್ರಯೋಜನ ನೀಡುತ್ತದೆ. ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತವೆ. ಚಯಾಪಚಯ ಸುಧಾರಿಸುತ್ತದೆ.
    Published by:renukadariyannavar
    First published: