Weight Loss: ಪ್ರತಿದಿನ ಕಾಫಿ ಕುಡಿದ್ರೆ ತೂಕ ಇಳಿಸಬಹುದಂತೆ -ಹೇಗೆ ಅಂತೀರಾ ಇದನ್ನ ಓದಿ

Weight loss: ನಿಂಬೆ ಕಾಫಿ ಮಾಡಲು ಕೆಲವೇ ನಿಮಿಷಗಳು ಸಾಕು. ಗಾಢವಾದ ಬೆಚ್ಚಗಿರುವ ಕಾಫಿ ಡಿಕಾಕ್ಷನ್‍ಗೆ ಅರ್ಧ ನಿಂಬೆಹಣ್ಣನ್ನು ಸೇರಿಸಿ ಕಾಫಿ ಮಾಡಬಹುದು. ನಿಂಬೆಯಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲ ಸಮೃದ್ಧವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿದಿನ ನಮ್ಮ ದಿನ ಒಂದು ಕಪ್ ಕಾಫಿ(Coffee) ಅಥವಾ ಟೀ(Tea) ಕುಡಿಯುವುದರಿಂದ ಪ್ರಾರಂಭವಾಗುತ್ತದೆ. ಕಾಫಿ, ಟೀಯು ಒಂದು ಶಕ್ತಿಯುತ ಪಾನೀಯವಾಗಿ (Powerful Drink)ವರ್ತಿಸುವುದರ ಜೊತೆಗೆ ವ್ಯಕ್ತಿಯ ದೇಹವನ್ನು ಉತ್ಸಾಹದಿಂದರಲು ಸಹಾಯ ಮಾಡುತ್ತದೆ. ಆದರೆ ಇದೇ ಕಾಫಿಯಿಂದ ನಿಮ್ಮ ದೇಹ ತೂಕ (Lose Weight)ಕಡಿಮೆಮಾಡಿಕೊಳ್ಳಬಹುದು. ಹೌದು ಕಾಫಿಯನ್ನು ದೇಹ ತೂಕ ಇಳಿಕೆಯ ಪಾನೀಯವಾಗಿ ಮಾಡಿಕೊಂಡು ನಮ್ಮ ದೇಹ ತೂಕ ಇಳಿಸಿಕೊಳ್ಳಬಹುದು. ಹಾಗಾದರೆ ವಿವಿಧ ರೀತಿಯ (Different Types)ದೇಹ ತೂಕ ಇಳಿಕೆಯ ಕಾಫಿಯ ಪಾನೀಯಗಳು ಇಲ್ಲಿವೆ.

ಜಾಯಿಕಾಯಿ ಕಾಫಿ
ಇದು ಕಾಫಿಯ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ. ಜಾಯಿಕಾಯಿಯಲ್ಲಿ ಮ್ಯಾಂಗನೀಸ್ ಅಂಶ ತುಂಬಾ ಸಮೃದ್ಧವಾಗಿರುವ ಕಾರಣ ಇದು ಕೊಬ್ಬಿನ ಅಣುಗಳನ್ನು ಒಡೆಯಲು ಸಹಾಯ ಮಾಡುತ್ತದೆ ಮತ್ತು ನಾರಿನಾಂಶ ಹೆಚ್ಚಿರುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಈ ಕಾಫಿ ಉತ್ತಮವಾಗಿದೆ. ಇದು ವೇಗವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೀವು ಈ ಮಸಾಲೆಯನ್ನು ನಿಮ್ಮ ಕಾಫಿಗೆ ಸೇರಿಸಬಹುದು ಮತ್ತು ಬಿಸಿ ಬ್ರೂಗೆ ಚೆನ್ನಾಗಿ ಮಿಶ್ರಣ ಮಾಡಬಹುದು.

ಇದನ್ನೂ ಓದಿ: Health Tips: ನೀವು ಕಾಫಿ ಪ್ರಿಯರೇ? ಹಾಗಾದ್ರೆ ಇಲ್ಲಿದೆ ಒಂದು ಗುಡ್‌ ನ್ಯೂಸ್..!

ನಿಂಬೆ ಕಾಫಿ
ಈ ಕಾಫಿ ಮಾಡಲು ಕೆಲವೇ ನಿಮಿಷಗಳು ಸಾಕು. ಗಾಢವಾದ ಬೆಚ್ಚಗಿರುವ ಕಾಫಿ ಡಿಕಾಕ್ಷನ್‍ಗೆ ಅರ್ಧ ನಿಂಬೆಹಣ್ಣನ್ನು ಸೇರಿಸಿ ಕಾಫಿ ಮಾಡಬಹುದು. ನಿಂಬೆಯಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲ ಸಮೃದ್ಧವಾಗಿದೆ. ಇದು ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ, ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ದೇಹದಲ್ಲಿನ ವಿಷವನ್ನು ಹೊರಹಾಕುತ್ತದೆ. ಕೆಫೀನ್ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ವ್ಯಾಯಾಮ ಮಾಡುವವರಿಗೆ ವ್ಯಾಯಾಮ ಮಾಡುವ ಮೊದಲು ಕುಡಿಯಬಹುದಾದ ಉತ್ತಮ ಪಾನೀಯವಾಗಿದೆ.

ಬೆಣ್ಣೆ ಅಥವಾ ತೆಂಗಿನ ಎಣ್ಣೆ ಕಾಫಿ
ನೀವು ಕೀಟೋ ಡಯಟ್‍ನಲ್ಲಿದ್ದರೆ, ಬುಲೆಟ್ ಕಾಫಿ ಎಂದೂ ಕರೆಯಲ್ಪಡುವ ಈ ಫ್ಯಾಡ್ ಕಾಫಿಯಿಂದ ತೂಕ ಇಳಿಸಿಕೊಳ್ಳಬಹುದು. ಟ್ರೈಗ್ಲಿಸರೈಡ್‍ನಂತಹ ಉಪ್ಪುರಹಿತ ಬೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಕಾಫಿಗೆ ಸೇರಿಸಲಾಗುತ್ತದೆ. ಕಾಫಿಯಲ್ಲಿ ಹೆಚ್ಚಿನ ಕ್ಯಾಲೋರಿ ಸಿಗುತ್ತದೆ ಇದರಿಂದ ಹೊಟ್ಟೆ ತುಂಬಿದ ರೀತಿ ಅನಿಸುತ್ತದೆ. ಇದು ವೇಗವಾಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಊಟಕ್ಕೆ ಬದಲಿಯಾಗಿ ಇದನ್ನು ಹೆಚ್ಚಾಗಿ ಸವಿಯಲಾಗುತ್ತದೆ.

ಡಾರ್ಕ್ ಚಾಕೊಲೇಟ್ ಕಾಫಿ
ಹೌದು, ಕಾಫಿಯನ್ನು ತೂಕ ಇಳಿಸುವ ಪಾನೀಯವನ್ನಾಗಿ ಮಾಡಲು ಇದು ರುಚಿಕರವಾದ ಆದರೆ ಆರೋಗ್ಯಕರವಾದ ಮಾರ್ಗವಾಗಿದೆ. ಡಾರ್ಕ್ ಚಾಕೊಲೇಟ್ ಅಥವಾ ಸಿಹಿಗೊಳಿಸದ ಕೋಕೋ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಕೆಫೀನ್ ಮತ್ತು ಡಾರ್ಕ್ ಚಾಕೊಲೇಟ್ ಸಂಯೋಜನೆಯು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನಿಮ್ಮ ಕಾಫಿಯ ಸರಳ ಮಿಶ್ರಣಕ್ಕೆ ಡಾರ್ಕ್ ಚಾಕೊಲೇಟ್ ಸೇರಿಸುವುದರಿಂದ ಹಸಿವಿನ ಸಂಕಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ನೀವು ಸಕ್ಕರೆ ರಹಿತ ಡಾರ್ಕ್ ಚಾಕೊಲೇಟ್‍ಗಳನ್ನು ಆರಿಸಿಕೊಳ್ಳುವುದರ ಮೂಲಕ ನಿಮ್ಮ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Beauty Tips: ಚರ್ಮ ಸುಕ್ಕು ಸುಕ್ಕಾಗುತ್ತಿದೆಯೇ? ಹಾಗಾದ್ರೆ ಗ್ರೀನ್ ಕಾಫಿಯ ಬಗ್ಗೆ ನೀವು ತಿಳಿಯಲೇಬೇಕು

ಕೆಫಿನ್ ಅಧಿಕವಾಗಿ ಇರುವಂತಹ ಕಾಫಿ ಸೇವನೆ ಮಾಡಬಾರದು ಎನ್ನುವಂತಹ ಮಾತನ್ನು ನಾವು ಹೆಚ್ಚಿನವರ ಬಾಯಿಯಿಂದ ಕೇಳುತ್ತಲಿರುತ್ತೇವೆ. ಕಾಫಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸುವವರು ಹಲವಾರು ಮಂದಿ. ಆದರೆ ಕೆಲವು ಜನರು ಕಾಫಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವವರು ಇದ್ದಾರೆ. ಕಾಫಿ ಸೇವಿಸಿದರೆ ಅದರಿಂದ ದೇಹಕ್ಕೆ ಒಳ್ಳೆಯದು ಎನ್ನುವ ಮಾತುಗಳು ಈಗ ಬರುತ್ತಿದೆ.
Published by:vanithasanjevani vanithasanjevani
First published: