Heaದಿನದ ಆಯಾಸ, ಕೆಲಸದ ಒತ್ತಡ, ಖುಷಿಗಾಗಿ, ಸಂಜೆಯ ವಾಕಿಂಗ್ ವೇಳೆ, ಹೀಗೆ ಯಾವಾಗ ಬೇಕಾದ್ರೂ ಜನರು ಒಂದು ಕಪ್ ಕಾಫಿ ಕುಡಿಯಬೇಕು ಅಂತಾ ಇಷ್ಟ ಪಡ್ತಾರೆ. ಒಂದು ಕಪ್ ಕಾಫಿ ಕುಡಿದರೆ ಆಯಾಸ ದೂರವಾಗುತ್ತದೆ ಅಂತಾ ಹೇಳ್ತಾರೆ. ಎಷ್ಟೋ ಬಾರಿ ಮನಸ್ಸು ಕೆಟ್ಟಾಗ, ಯಾರಾದ್ರೂ ಬೈದಾಗ, ಕೆಲಸದ ವೇಳೆ ಸಹೋದ್ಯೋಗಿಗಳು, ಬಾಸ್ ಜೊತೆಗಿನ ವೈಮನಸ್ಸು ಇದೆಲ್ಲವೂ ಮಾನಸಿಕ ನೆಮ್ಮದಿ ಹಾಳು ಮಾಡಿ, ಹೆಚ್ಚು ಸ್ಟ್ರೆಸ್ ಗೆ ಒಳಗಾಗುವಂತೆ ಮಾಡುತ್ತದೆ. ಆಗೆಲ್ಲಾ ಒಂದು ಕಪ್ ಕಾಫಿ ಬೇಕು ಅನ್ನಿಸುತ್ತದೆ. ಹಾಗಾದ್ರೆ ಕಾಫಿ ಕುಡಿಯುವ ಸರಿಯಾದ ವಿಧಾನದ ಬಗ್ಗೆ ನಾವು ಇಲ್ಲಿ ನೋಡೋಣ.
ಕಾಫಿ ಮತ್ತು ಆರೋಗ್ಯ
ತಪ್ಪಾದ ಸಮಯದಲ್ಲಿ ಮತ್ತು ತಪ್ಪಾದ ರೀತಿಯಲ್ಲಿ ಕಾಫಿ ಕುಡಿಯುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂದ ಹಾಗೇ ಕಾಫಿಯಲ್ಲಿ ಸಾಕಷ್ಟು ಕೆಫೀನ್ ಇದೆ. ಇದರ ಹೆಚ್ಚು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಆರೋಗ್ಯ ಹದಗೆಡಿಸುತ್ತದೆ. ಕೆಫಿನ್ ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಕಾಫಿ ಕುಡಿಯುವುದನ್ನು ಆರೋಗ್ಯಕರ ರೀತಿಯಲ್ಲಿ ಮಾಡಬೇಕು.
ಸಾಮಾನ್ಯ ಕಾಫಿಯನ್ನು ಹೆಚ್ಚು ಆರೋಗ್ಯಕರವಾಗಿಸಲು ಕೆಲವು ಸಲಹೆಗಳು ಹೀಗಿವೆ
ಕೃತಕ ಕ್ರೀಮ್ ಬಳಸುವುದು ತಪ್ಪಿಸಿ
ಮಾರುಕಟ್ಟೆಯಲ್ಲಿ ಸಿಗುವ ಕೃತಕ ಕ್ರೀಮ್ ಗಳು ಸಂಸ್ಕರಿಸಲಾಗಿರುತ್ತದೆ. ಇದು ವಿವಿಧ ರೀತಿಯ ಸಂರಕ್ಷ ಹೊಂದಿದೆ. ಇದು ಕಾಫಿ ಕುಡಿದ ನಂತರ ವ್ಯಕ್ತಿಯನ್ನು ಅನಾರೋಗ್ಯಕ್ಕೆ ದೂಡುತ್ತದೆ. ಹಾಗಾಗಿ ಸಂಸ್ಕರಿಸಿದ ಕೆನೆ ಬಳಕೆ ತಪ್ಪಿಸಿ. ಮನೆಯಲ್ಲಿ ನೈಸರ್ಗಿಕವಾಗಿ ತಯಾರಿಸಿದ ಪೂರ್ಣ ಕೊಬ್ಬಿನ ಕೆನೆ ಬಳಕೆ ಮಾಡಿ. ಇದು ಹೆಚ್ಚು ಪ್ರಯೋಜನಕಾರಿ. ಇದರಲ್ಲಿ ಕ್ಯಾಲ್ಸಿಯಂ ಹಾಗು ಹಲವು ಪ್ರಮುಖ ಪೋಷಕಾಂಶಗಳಿವೆ.
ಕಾಫಿಯಲ್ಲಿ ದಾಲ್ಚಿನ್ನಿ ಪುಡಿ ಸೇರಿಸಿ
ದಾಲ್ಚಿನ್ನಿ ಪ್ರತಿಯೊಬ್ಬರ ನೆಚ್ಚಿನ ಮಸಾಲೆ ಆಗಿದೆ. ಇದು ಆಹಾರದ ರುಚಿ ಮತ್ತು ಪರಿಮಳ ಹೆಚ್ಚಿಸುತ್ತದೆ. ಇದು ಉರಿಯೂತ ನಿವಾರಕ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಂತಹ ಹಲವು ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ಗುಣಮಟ್ಟ ಮತ್ತಷ್ಟು ಹೆಚ್ಚಿಸುತ್ತದೆ.
ದೇಹದಲ್ಲಿ ರಕ್ತದ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟ ಸಾಮಾನ್ಯಗೊಳಿಸುತ್ತದೆ. ಇದು ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತದೆ. 1 ಕಪ್ ಕಾಫಿಯನ್ನು 1/2 ಟೀಚಮಚ ದಾಲ್ಚಿನ್ನಿ ಪುಡಿ ಹಾಕಿ ಕುಡಿಯಿರಿ.
ಮಧ್ಯಾಹ್ನ 2 ಗಂಟೆಯ ನಂತರ ಕಾಫಿ ಕುಡಿಯುವುದನ್ನು ತಪ್ಪಿಸಿ
ಕಾಫಿಯಲ್ಲಿ ಅನೇಕ ರೀತಿಯ ನೈಸರ್ಗಿಕ ಪೋಷಕಾಂಶಗಳಿವೆ. ಹಾಗೆಯೇ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಾಗಿ ಕಾಫಿಯನ್ನು ಕುಡಿಯಲು ಸರಿಯಾದ ಸಮಯ ಮತ್ತು ಸರಿಯಾದ ಪ್ರಮಾಣ ತಿಳಿಯಬೇಕು.
ಒಂದು ಅಧ್ಯಯನದ ಪ್ರಕಾರ, ಮಲಗುವ ಸುಮಾರು 6 ಗಂಟೆಗಳ ಮೊದಲು ಕೆಫೀನ್ ಕುಡಿಯಬಾರದು. ಇದು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. ಕಾಫಿಯಲ್ಲಿ ಸಾಕಷ್ಟು ಪ್ರಮಾಣದ ಕೆಫೀನ್ ಕೂಡ ಇದೆ. ಮಧ್ಯಾಹ್ನ 2 ರಿಂದ 3 ರ ನಂತರ, ಕಾಫಿ ಕುಡಿಯಬೇಡಿ.
ಕಪ್ಪು ಕಾಫಿ ಹೆಚ್ಚು ಪ್ರಯೋಜನಕಾರಿ
ಕಪ್ಪು ಕಾಫಿಯಲ್ಲಿ ಕ್ಯಾಲೊರಿ ಪ್ರಮಾಣವು ತುಂಬಾ ಕಡಿಮೆ. ಇದು ನಿಮ್ಮ ಚರ್ಮ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಅದರ ತಯಾರಿಕೆಯಲ್ಲಿ ಹಾಲು ಮತ್ತು ಹೆಚ್ಚು ಸಕ್ಕರೆಯ ಬಳಕೆಯು ಅದರ ಗುಣಮಟ್ಟ ಕಡಿಮೆ ಮಾಡುತ್ತದೆ. ಕಪ್ಪು ಕಾಫಿಯ ರುಚಿ ಕಹಿ ಆದರೆ ಆರೋಗ್ಯಕ್ಕೆ ಉತ್ತಮ.
ಇದನ್ನೂ ಓದಿ: ಸದೃಢ ಆರೋಗ್ಯಕ್ಕೆ ಈ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ!
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬೇಡಿ
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ಹಾನಿ ಮಾಡುತ್ತದೆ. ಇದರ ಕುಡಿಯುವುದು ಹೊಟ್ಟೆಯ ಒಳಪದರ ಮಾಡುತ್ತದೆ. ಇದು ಆತಂಕ ಹೆಚ್ಚಿಸುತ್ತದೆ.ಇದರೊಂದಿಗೆ, ಕಾಫಿಯಲ್ಲಿರುವ ಕೆಫೀನ್ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಬ್ಬುವಿಕೆ ಉಂಟು ಮಾಡುತ್ತದೆ. ಅದಕ್ಕಾಗಿಯೇ ಏನಾದರೂ ತಿಂದ ನಂತರ ಯಾವಾಗಲೂ ಕಾಫಿ ಕುಡಿಯಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ