Coffee Face Mask: ಕೇವಲ 2 ರೂಪಾಯಿಗೆ ಸಿಗುವ ಕಾಫಿ ಪುಡಿಯಿಂದ ಮುಖ ಆಗುತ್ತೆ ಲಕಲಕ..!

ಫೇಸ್ ಮಾಸ್ಕ್ ರೂಪದಲ್ಲಿ ಕಾಫಿ ಪುಡಿಯನ್ನು ಇತರ ವಸ್ತುಗಳೊಂದಿಗೆ ಮಿಶ್ರ ಮಾಡುವುದರಿಂದ ನೀವು ಅತ್ಯದ್ಭುತ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಕಾಫಿಯಿಂದ ಫೇಸ್ ಮಾಸ್ಕ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ನಟಿ ಅಲಯಾ

ನಟಿ ಅಲಯಾ

  • Share this:

    ಸೌಂದರ್ಯದ ವಿಷಯದಲ್ಲಿ ಹೆಂಗಳೆಯರು ತುಂಬಾ ಚ್ಯೂಸಿಯಾಗಿರುತ್ತಾರೆ. ದುಬಾರಿ ಪ್ರಾಡಕ್ಟ್‌ಗಳಿಂದ ಮೇಕಪ್ ಮಾಡಿಕೊಳ್ಳುವುದು. ಜೊತೆಗೆ ಹೆಚ್ಚು ನೈಸರ್ಗಿಕ ಪದ್ಧತಿಯಲ್ಲಿ ಮುಖದ ಕಾಳಜಿ ಮಾಡುವುದು. ಹೀಗೆ ಹತ್ತು ಹಲವು ವಿಧಾನಗಳನ್ನು ಅನುಸರಿಸುತ್ತಿದ್ದರೂ ತಾವು ಬಳಸುವ ವಸ್ತುಗಳಿಂದ ಸೌಂದರ್ಯಕ್ಕೆ ಯಾವುದೇ ಕುಂದು ಉಂಟಾಗಬಾರದು ಎಂಬುದು ಅವರ ಕಾಳಜಿಯಾಗಿರುತ್ತದೆ. ಈ ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ಹೆಂಗಳೆಯರಿಗೆ ಸೌಂದರ್ಯದ ಕಾಳಜಿಯೇ ಸಮಸ್ಯೆಯಾಗಿರುತ್ತದೆ. 


    ನಿಮ್ಮ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿಯೇ ಮನೆಯಲ್ಲಿಯೇ ತಯಾರಿಸಬಹುದಾದ ಕಾಫಿ ಫೇಸ್ ಮಾಸ್ಕ್‌ನೊಂದಿಗೆ ಬಂದಿದ್ದೇವೆ. ಹೌದು ಇದು ಮನೆಯಲ್ಲಿಯೇ ತಯಾರಿಸಬಹುದಾದ ಫೇಸ್ ಮಾಸ್ಕ್ ಆಗಿದ್ದು ಯಾವುದೇ ಕಿರಿಕಿರಿ ಇಲ್ಲದೆ ಸರಳವಾಗಿ ತಯಾರಿಸಿಕೊಳ್ಳಬಹುದು. ಬೆಳಗೆದ್ದು ಕಾಫಿ ಕುಡಿಯದಿದ್ದರೆ ಆ ದಿನ ಚೆನ್ನಾಗಿ ನಡೆಯುವುದಿಲ್ಲ ಎಂಬುದು ಹಲವರ ಅಭಿಪ್ರಾಯ. ತಲೆನೋವಿರಲಿ ಸರಿಯಾಗಿ ನಿದ್ದೆಯಾಗದೇ ಮೂಡ್ ಸ್ವಿಂಗ್ ಆಗುತ್ತಿರಲಿ ಒಂದು ಕಪ್ ಬಿಸಿಬಿಸಿ ಕಾಫಿ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವ ಉಂಟಾಗುತ್ತದೆ.


    ಇಂತಹ ಕಾಫಿ ಬರಿಯ ಸೇವನೆಯಿಂದ ನಿಮ್ಮ ದೇಹಕ್ಕೆ ಎನರ್ಜಿ ಬೂಸ್ಟರ್‌ನಂತೆ ಕೆಲಸ ಮಾಡುವುದಲ್ಲದೆ ನಿಮ್ಮ ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸಲೂ ಅನುಕೂಲಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಆ್ಯಂಟಿ ಆ್ಯಕ್ಸಿಡೆಂಟ್ ಇದೆ. ಇದು ತ್ವಚೆಯ ಆರೋಗ್ಯವನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ. ಇದು ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗಾಗಿ ಫೇಸ್ ಮಾಸ್ಕ್ ರೂಪದಲ್ಲಿ ಕಾಫಿ ಪುಡಿಯನ್ನು ಇತರ ವಸ್ತುಗಳೊಂದಿಗೆ ಮಿಶ್ರ ಮಾಡುವುದರಿಂದ ನೀವು ಅತ್ಯದ್ಭುತ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಕಾಫಿಯಿಂದ ಫೇಸ್ ಮಾಸ್ಕ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.


    ಕಾಫಿ ಮತ್ತು ಜೇನಿನ ಫೇಸ್ ಮಾಸ್ಕ್
    ಈ ಮಾಸ್ಕ್ ತಯಾರಿಸಲು ನಿಮಗೆ ಬೇಕಾಗಿರುವುದು ಒಂದು ಚಮಚ ಕಾಫಿ ಹುಡಿ ಮತ್ತು ಒಂದು ಚಮಚ ಜೇನಾಗಿದೆ. ಇದೆರಡನ್ನೂ ಮಿಶ್ರ ಮಾಡಿಕೊಂಡು ಮುಖಕ್ಕೆ ಹಚ್ಚಿ. ಕಣ್ಣಿನ ಸುತ್ತ ಹಚ್ಚಬೇಡಿ. 20 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.


    ಕಾಫಿ ಮತ್ತು ಹಾಲಿನ ಫೇಸ್ ಮಾಸ್ಕ್
    ಇದಕ್ಕೆ ನಿಮಗೆ ಬೇಕಾಗಿರುವುದು ಒಂದು ಚಮಚ ಕಾಫಿ ಹುಡಿ ಮತ್ತು ಒಂದೆರಡು ಚಮಚ ಹಾಲಾಗಿದೆ. ಇದೆರಡನ್ನೂ ಮಿಶ್ರ ಮಾಡಿ ಮತ್ತು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.


    ಇದನ್ನೂ ಓದಿ: ನೇರಳೆ ಹಣ್ಣು ಪ್ರಯೋಜನಕಾರಿಯೂ ಹೌದು, ಅಪಾಯಕಾರಿಯೂ ಹೌದು..!

    ಕಾಫಿ, ಅರಿಶಿನ ಮತ್ತು ಮೊಸರಿನ ಮಾಸ್ಕ್
    ಈ ಮಾಸ್ಕ್ ತಯಾರಿಸಲು ಒಂದು ಚಮಚ ಕಾಫಿ ಹುಡಿಯನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ಚಮಚ ಅರಿಶಿನ ಹುಡಿ ಮತ್ತು ಒಂದು ಚಮಚ ಮೊಸರನ್ನು ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಹಾಗೆಯೇ ಬಿಡಿ. ಈ ಮಾಸ್ಕ್ ಅನ್ನು ವೃತ್ತಾಕಾರವಾಗಿ ಮುಖಕ್ಕೆ ಹಚ್ಚಿಕೊಳ್ಳಿ ನಂತರ ಮಸಾಜ್ ಮಾಡಿ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.


    ಕಾಫಿ ಮತ್ತು ಲಿಂಬೆ ಹಣ್ಣಿನ ಮಾಸ್ಕ್
    ಒಂದು ಚಮಚ ಲಿಂಬೆ ರಸದೊಂದಿಗೆ ಒಂದು ಚಮಚ ಕಾಫಿಯನ್ನು ಮಿಶ್ರ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ


    ಕಾಫಿ ಮತ್ತು ಅಲೊವೇರಾ ಮಾಸ್ಕ್
    ಎರಡು ಚಮಚ ಕಾಫಿ ಹುಡಿ ಮತ್ತು ಎರಡು ಚಮಚ ಅಲೊವೇರಾ ಜೆಲ್ ಅನ್ನು ತೆಗೆದುಕೊಳ್ಳಿ. ಇದನ್ನು ಮಿಶ್ರ ಮಾಡಿಕೊಂಡು ಮುಖಕ್ಕೆ ಹಚ್ಚಿ. 15-20 ನಿಮಿಷ ಹಾಗೆಯೇ ಬಿಡಿ. ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

    Published by:Kavya V
    First published: