• Home
  • »
  • News
  • »
  • lifestyle
  • »
  • Coffee Disadvantages: ಕಾಫಿ ಸೇವನೆ ಯಾರಿಗೆ ತೊಂದರೆ ಉಂಟು ಮಾಡುತ್ತದೆ? ಇಲ್ಲಿದೆ ಮಾಹಿತಿ

Coffee Disadvantages: ಕಾಫಿ ಸೇವನೆ ಯಾರಿಗೆ ತೊಂದರೆ ಉಂಟು ಮಾಡುತ್ತದೆ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಫಿಯನ್ನು ಪಾನೀಯವಾಗಿ ಮಾತ್ರ ಸೇವಿಸದೇ ಇದನ್ನು ಹಲವು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಕಾಫಿ ಸೇವನೆಯಿಂದ ಎಷ್ಟು ಪ್ರಯೋಜನವಿದ್ಯೋ ಅದನ್ನು ಹೆಚ್ಚು ಕುಡಿದರೆ ಅಷ್ಟೇ ತೊಂದರೆಗಳೂ ಉಂಟಾಗುತ್ತವೆ. ಕೆಲವು ಜನರು ಕಾಫಿ ಕುಡಿಯಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.

  • Share this:

    ಕಾಫಿ (Coffee) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕಾಫಿಯ ಪರಿಮಳ (Fragrance) ದೂರದಲ್ಲೆಲ್ಲಿಂದಲೀ ಬಂದ್ರೆ ಇಲ್ಲಿ ಕುಳಿತವರಿಗೆ ಕಾಫಿಯ ಘಮ ಗೊತ್ತಾಗಿ ಬಿಡುತ್ತದೆ. ಯಾರೋ ಕಾಫಿ ಕುಡಿಯುವುದನ್ನ (Drinking) ನೋಡಿದ ಕೂಡಲೇ ನಮಗೂ ಕಾಫಿ ಕುಡಿಯುವ ಬಯಕೆ ಉಂಟಾಗುವುದು ಸಾಮಾನ್ಯ. ಜಗತ್ತಿನಲ್ಲಿ ಹಲವರು ಕಾಫಿ ಪ್ರಿಯರು (Coffee Lovers). ತಮಗೆ ಯಾವಾಗ ಬೇಕೋ ಆಗ ಕಾಫಿ ಕುಡಿಯುತ್ತಾರೆ. ಹೀಗಾಗಿ ಕಾಫಿ ಪ್ರಿಯರಿಗಾಗಿಯೇ ಪ್ರತಿ ವರ್ಷ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಅಕ್ಟೋಬರ್ 1 ರಂದು ಆಚರಿಸುತ್ತಾರೆ. ಕಾಫಿ ಪ್ರಪಂಚದಾದ್ಯಂತ ಜನರು ಖುಷಿಯಾಗಿ ಮತ್ತು ಸ್ಟ್ರೆಸ್ ರಿಲೀಫ್ ಗಾಗಿ ಸೇವಿಸುವ ಪಾನೀಯವಾಗಿದೆ.


    ಹಲವು ವಿಷಯಗಳಲ್ಲಿ ಕಾಫಿ ಬಳಕೆ


    ಕಾಫಿಯನ್ನು ಪಾನೀಯವಾಗಿ ಮಾತ್ರ ಸೇವಿಸದೇ ಇದನ್ನು ಹಲವು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಚರ್ಮದ ಆರೈಕೆ, ಮುಖದ ಅಂದದ ಕಾಳಜಿ ಮತ್ತು ಫೇಸ್ ಪ್ಯಾಕ್ ಮಾಡುವಾಗ ಬಳಕೆ ಮಾಡಲಾಗುತ್ತದೆ. ಅನೇಕ ಆಹಾರ ಪದಾರ್ಥಗಳಲ್ಲಿಯೂ ಕಾಫಿಯನ್ನು ಬಳಕೆ ಮಾಡುತ್ತಾರೆ.


    ಕಾಫಿಯ ಪ್ರಯೋಜನಗಳ ಬಗ್ಗೆ ಮಾತನಾಡಿದರೆ, ಕಾಫಿ ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹಾಪ್ಕಿನ್ಸ್ಮೆಡಿಸಿನ್ ಪ್ರಕಾರ, ಕಾಫಿಯ ನಿಯಮಿತ ಸೇವನೆ ಪ್ರಾಸ್ಟೇಟ್ ಕ್ಯಾನ್ಸರ್, ಹೃದಯ ವೈಫಲ್ಯ,


    ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


    ಯಕೃತ್ತು ಬಲಪಡಿಸುವುದು, ಪಾರ್ಕಿನ್ಸನ್ ಕಾಯಿಲೆ, ಆಲ್ಝೈಮರ್ನ ಕಾಯಿಲೆ ಮತ್ತು ಪಾರ್ಶ್ವವಾಯು ಮುಂತಾದ ಗಂಭೀರ ಪರಿಸ್ಥಿತಿಗಳ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದೆ.


    ಕಾಫಿ ಸೇವನೆಯಿಂದ ಎಷ್ಟು ಪ್ರಯೋಜನವಿದ್ಯೋ ಅದನ್ನು ಹೆಚ್ಚು ಕುಡಿದರೆ ಅಷ್ಟೇ ತೊಂದರೆಗಳೂ ಉಂಟಾಗುತ್ತವೆ. ಅತಿಯಾದ ಕಾಫಿ ಸೇವನೆಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವು ಜನರು ಕಾಫಿ ಕುಡಿಯಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಯಾಕಂದ್ರೆ ಇದು ಅವರ ಸಂಪೂರ್ಣ ಆರೋಗ್ಯಕ್ಕೆ ಅನೇಕ ಹಾನಿ ಉಂಟು ಮಾಡುತ್ತದೆ.


    IBS ಹೊಂದಿರುವ ಜನರು ಕಾಫಿ ಸೇವನೆ ತಪ್ಪಿಸಿ


    ಕಾಫಿಯಲ್ಲಿ ಕೆಫೀನ್ ಇದೆ. ಇದು ಕರುಳಿನ ಕಾರ್ಯ ನಿರ್ವಹಣೆ ಹೆಚ್ಚಿಸುತ್ತದೆ. ಇದು ಅತಿಸಾರದ ಸಾಧ್ಯತೆ ಹೆಚ್ಚಿಸುತ್ತದೆ. ನೀವು ಈಗಾಗಲೇ ದೊಡ್ಡ ಕರುಳಿನ ಕಾಯಿಲೆ, ಕೆರಳಿಸುವ ಕರುಳಿನ ಸಹಲಕ್ಷಣಗಳಿಂದ (IBS) ಬಳಲುತ್ತಿದ್ದರೆ ಕಾಫಿ ಸೇವನೆ ಮಾಡಬೇಡಿ.


    ಗ್ಲುಕೋಮಾದಿಂದ ಬಳಲುತ್ತಿರುವ ಜನರು ಕಾಫಿ ಕುಡಿಯಬೇಡಿ


    ಕಣ್ಣಿನ ಕಾಯಿಲೆ ಗ್ಲುಕೋಮಾದಿಂದ ಬಳಲುತ್ತಿರುವವರು ಕಾಫಿ ಸೇವನೆ ಮಾಡಬಾರದು. ಎನ್ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಂತಹ ಜನರಲ್ಲಿ ಕಾಫಿ ಸೇವನೆಯು ಕಣ್ಣುಗಳ ಮೇಲೆ ಒತ್ತಡ ಉಂಟು ಮಾಡುತ್ತದೆ.


    ರೋಗಿಯು ಹೆಚ್ಚು ಮೂತ್ರ ವಿಸರ್ಜನೆ ಮಾಡಬೇಕಾದ ಸ್ಥಿತಿ ಇದ್ದಾಗ ಕಾಫಿ ಸೇವನೆ ಮಾಡಬಾರದು.  ಇದು ಕೆಫೀನ್ ಸೇವನೆಯು ಹೆಚ್ಚು ಮೂತ್ರ ವಿಸರ್ಜನೆ ಮಾಡುವ ಪ್ರಚೋದನೆ ನೀಡುತ್ತದೆ.


    ಆರ್ಹೆತ್ಮಿಯಾ ಹೊಂದಿರುವ ಜನರು ಕಾಫಿ ಸೇವನೆ ತಪ್ಪಿಸಿ


    ಕಾಫಿಯಲ್ಲಿರುವ ಕೆಫೀನ್ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ತಾತ್ಕಾಲಿಕ ಹೆಚ್ಚಳಕ್ಕೆ ಕಾರಣವಾಗಬಹುದು . ನೀವು ಈಗಾಗಲೇ ಆರ್ಹೆತ್ಮಿಯಾ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ಕಾಫಿ ಕುಡಿಯುವುದನ್ನು ತಪ್ಪಿಸಿ.


    ನಿದ್ರೆಯ ಕಾಯಿಲೆಯಿಂದ ಬಳಲುತ್ತಿರುವವರು ಕಾಫಿ ಕುಡಿಯಬೇಡಿ


    NCBI ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಾಫಿಯ ಅಭ್ಯಾಸವು ನಿದ್ದೆಗೆ ತೊಂದರೆ ಉಂಟು ಮಾಡುತ್ತದೆ. ಕಾಫಿಯಲ್ಲಿ ಕೆಫೀನ್ ನಿದ್ರೆ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಥಿತಿಯು ಹದಗೆಡಬಹುದು.


    ಅತಿಸಾರದಿಂದ ಬಳಲುತ್ತಿರುವವರು ಕಾಫಿ ಕುಡಿಯಬಾರದು


    ಇದು ಕರುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಅತಿಸಾರದಂತಹ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ಕಾಫಿ ಸೇವನೆ ತಪ್ಪಿಸಿ.


    ಇದನ್ನೂ ಓದಿ: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ


    ಸ್ತನ್ಯಪಾನ ಮಾಡುವವರು ಮತ್ತು ಗರ್ಭಿಣಿಯರು ಕಾಫಿಯಿಂದ ದೂರವಿರಬೇಕು


    ಅಪಸ್ಮಾರದ ರೋಗಗ್ರಸ್ತತೆ ಹೊಂದಿರುವವರು, ಹೆಚ್ಚು ಚಿಂತೆ ಮಾಡುವವರು ಸ್ತನ್ಯಪಾನ ಮಾಡುವವರು ಮತ್ತು ಗರ್ಭಿಣಿಯರು ಕಾಫಿ ಸೇವನೆ ತಪ್ಪಿಸಿ.

    Published by:renukadariyannavar
    First published: