Coffee: ಕಾಫಿ ಸೇವಿಸಿದರೆ ಸಂಧಿವಾತ ಗುಣಮುಖವಾಗುತ್ತಾ? ಈ ವಿಚಾರ ನಿಮಗೂ ಗೊತ್ತಿರ್ಲಿ

Gout: ಕೆಲವು ಆಹಾರಗಳು ಅಪಾಯವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಸಾಮರ್ಥ್ಯ ಹೊಂದಿವೆ, ಮತ್ತು 2010ರ ಅಧ್ಯಯನವು ಜನಪ್ರಿಯ ಉಪಾಹಾರ ಪಾನೀಯವು ಅಪಾಯದ ಮಟ್ಟವನ್ನು ತಗ್ಗಿಸುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಕೀಲುಗಳನ್ನು ದುರ್ಬಲಗೊಳಿಸುವ ಸಂಧಿವಾತದ (Arthritis) ಒಂದು ರೂಪವಾದ ತೀವ್ರ ನೋವು ಯೂರಿಕ್ ಆಮ್ಲದ (uric acid) ನಿರ್ಮಾಣದಿಂದ ಪ್ರಚೋದನೆಗೊಳಪಟ್ಟು ಪ್ರಮುಖವಾಗಿ ಕಾಲಿನ ಹೆಬ್ಬರಳಿನ ಮೇಲೆ ಪರಿಣಾಮ ಬೀರುತ್ತದೆ. ಈ ನೋವಿನಿಂದ ಕೀಲುಗಳಲ್ಲಿ ಊತ ಕಂಡುಬರುತ್ತದೆ. ಅಂತೆಯೇ ರಾತ್ರಿ ವೇಳೆಯಲ್ಲಿ ಈ ನೋವು ಹೆಚ್ಚು ಕಂಡುಬರುತ್ತದೆ. ಯೂರಿಕ್ ಆ್ಯಸಿಡ್ ಹಲವಾರು ಕಾರಣಗಳಿಂದ ರಚನೆಯಾಗುತ್ತದೆ. ಕೆಲವೊಂದು ಆಹಾರಗಳನ್ನು ನಿರಂತರವಾಗಿ ಸೇವಿಸುವುದರಿಂದ ಕೂಡ ಆಮ್ಲ ಉಲ್ಬಣಗೊಳ್ಳುವ ಅಪಾಯ ಹೆಚ್ಚಿರುತ್ತದೆ. ಯೂರಿಕ್ ಆಮ್ಲದ ನಿರ್ಮಾಣ ತಡೆಗಟ್ಟುವಲ್ಲಿ ಆಹಾರವು ನಿರ್ಣಾಯಕ ಪಾತ್ರ ವಹಿಸುತ್ತದೆ; ಕೆಲವು ಆಹಾರಗಳು ಅಪಾಯವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಸಾಮರ್ಥ್ಯ ಹೊಂದಿವೆ, ಮತ್ತು 2010ರ ಅಧ್ಯಯನವು ಜನಪ್ರಿಯ ಉಪಾಹಾರ ಪಾನೀಯವು ಅಪಾಯದ ಮಟ್ಟವನ್ನು ತಗ್ಗಿಸುತ್ತದೆ.

    ಯೂರಿಕ್ ಆ್ಯಸಿಡ್ (Uric Acid) ನಿರ್ಮಾಣ ತಗ್ಗಿಸುವ ಉಪಾಹಾರ ಪಾನೀಯ:

    2010ರ ನರ್ಸಸ್ ಹೆಲ್ತ್ ಸ್ಟಡಿ ಹೇಳುವಂತೆ ಹೆಚ್ಚು ಕಾಫಿ ಸೇವಿಸುವವರಲ್ಲಿ ಸಂಧಿವಾತದ ಬೆಳವಣಿಗೆ ಅಪಾಯ ಕಡಿಮೆಯಾಗಿದೆ. ಈ ಅಧ್ಯಯನಕ್ಕಾಗಿ 3 ಮಹಿಳೆಯರಲ್ಲಿ ಸಂಶೋಧನೆ ನಡೆಸಲಾಗಿದ್ದು ದಿನಕ್ಕೆ 3 ಕಪ್ ಕಾಫಿ ಸೇವಿಸುವವರಲ್ಲಿ ಸಂಧಿವಾತದ ಬೆಳವಣಿಗೆಯು 22% ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಇನ್ನು 4 ಕಪ್‌ಗಿಂತ ಹೆಚ್ಚು ಕಾಫಿ ಸೇವಿಸಿದವರಲ್ಲಿ ಈ ಪರಿಣಾಮವು 57% ಕಡಿಮೆಯಾಗಿದೆ. ಯೂರಿಕ್ ಆ್ಯಸಿಡ್ ಮಟ್ಟವನ್ನು ತಗ್ಗಿಸುವಲ್ಲಿ ಕಾಫಿಯು ಪರಿಣಾಮಕಾರಿ ಎಂದು ತಿಳಿದುಬಂದಿದೆ.

    ಕಾಫಿ ಯೂರಿಕ್ ಆ್ಯಸಿಡ್ ಮಟ್ಟವನ್ನು ಹೇಗೆ ತಗ್ಗಿಸುತ್ತದೆ?

    ಕಾಫಿಯು ಕಿಣ್ವವನ್ನು ಹೊಂದಿದ್ದು ದೇಹದಲ್ಲಿ ಪ್ಯೂರಿನ್‌ಗಳನ್ನು ಒಡೆಯುತ್ತದೆ ಹಾಗೂ ಯೂರಿಕ್ ಆಮ್ಲದ ರಚನೆಯ ವೇಗವನ್ನು ಕಡಿಮೆ ಮಾಡುತ್ತದೆ. ಕಾಫಿಯಲ್ಲಿರುವ ಇತರ ಸಂಯುಕ್ತಗಳು ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡಲು ಕಾರಣವೆಂದು ಸಂಶೋಧನೆ ಹೇಳುತ್ತದೆ. 2014ರಲ್ಲಿ 3ನೇ ರಾಷ್ಟ್ರೀಯ ಆರೋಗ್ಯ ಮತ್ತು ಪೌಷ್ಟಿಕಾಂಶ ಪರೀಕ್ಷೆಯ ಸಮೀಕ್ಷೆಯ ಪ್ರಕಾರ, ಚಹಾ ಸೇವನೆಯು ಯೂರಿಕ್ ಆಸಿಡ್ ನಿರ್ವಹಣೆಗೆ ಸಂಬಂಧಿಸಿಲ್ಲ.

    ಸಂಧಿವಾತವನ್ನು ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುವ ಸ್ಥಿತಿಯಿಂದ ಪ್ರಚೋದಿಸಲಾಗುತ್ತದೆ, ಇದನ್ನು ದೇಹದಲ್ಲಿ ಹೆಚ್ಚು ಯೂರಿಕ್ ಆಮ್ಲದ ಶೇಖರಣೆಯಿಂದ ನಿರೂಪಿಸಲಾಗಿದೆ. ದೇಹದಲ್ಲಿರುವ ಪ್ಯೂರಿನ್‌ಗಳು ಹಾಗೂ ಸೇವಿಸುವ ಆಹಾರದಲ್ಲಿರುವ ಪ್ಯೂರಿನ್‌ಗಳು ವಿಭಜನೆಗೊಂಡಾಗ ದೇಹದಲ್ಲಿ ಕಂಡುಬರುವ ಸಂಯುಕ್ತ ಮತ್ತು ತಿನ್ನುವ ಆಹಾರವು - ಯೂರಿಕ್ ಆಮ್ಲವು ರೂಪುಗೊಳ್ಳುತ್ತದೆ.


    ಪ್ಯೂರಿನ್‌ಗಳು ಇರುವ ಆಹಾರ ಪದಾರ್ಥಗಳು




    • ಅತಿಯಾದ ಮದ್ಯ

    • ಅಧಿಕ ಕೊಬ್ಬಿನ ಡೈರಿ

    • ಕೆಂಪು ಮಾಂಸಗಳು (ರೆಡ್ ಮೀಟ್)

    • ಬೇಕನ್ (ಉಪ್ಪು ಹಾಕಿ ಒಣಗಿಸಿದ ಹಂದಿ ಮಾಂಸ)

    • ಹೆಚ್ಚಿನ ಸಕ್ಕರೆ ಆಹಾರಗಳು ಮತ್ತು ಪಾನೀಯಗಳು

    • ಟ್ರೌಟ್, ಟ್ಯೂನ ಮತ್ತು ಹ್ಯಾಡಾಕ್ ಮುಂತಾದ ಮೀನುಗಳು

    • ಅಂಗಗಳ ಮಾಂಸ


    ಮೆಟಬಾಲಿಕ್ ಅಥವಾ ಚಯಾಪಚಯ ಅಸ್ವಸ್ಥತೆಗಳು, ಥೈರಾಯ್ಡ್ ಅಥವಾ ಮೂತ್ರಪಿಂಡದ ಸಮಸ್ಯೆಗಳು ಸಂಧಿವಾತವನ್ನು ಪ್ರಚೋದಿಸಬಹುದು. 2014ರ 3ನೇ ರಾಷ್ಟ್ರೀಯ ಆರೋಗ್ಯ ಹಾಗೂ ಪೌಷ್ಟಿಕಾಂಶ ಸಮೀಕ್ಷೆಯ ಪ್ರಕಾರ ಚಹಾ ಸೇವನೆಯು ಯೂರಿಕ್ ಆಮ್ಲದ ರಚನೆಯ ಮೇಲೆ ಪರಿಣಾಮ ಬೀರಿಲ್ಲ ಎಂಬುದಾಗಿ ತಿಳಿದುಬಂದಿದೆ.


    Published by:Harshith AS
    First published: