ಬಹುತೇಕರಿಗೆ ಕಾಫಿ (Coffee) ಎಂದರೆ ತುಂಬಾನೇ ಪ್ರೀತಿ, ಬೆಳಗ್ಗೆ ಹಲ್ಲುಜ್ಜಿದ (Brushing) ತಕ್ಷಣ ಮತ್ತು ಸಂಜೆ ಹೊತ್ತಿನಲ್ಲಿ ಕಚೇರಿಯಿಂದ ಮನೆಗೆ ಬಂದು ಕೈಕಾಲು ಮುಖ ತೊಳೆದ ನಂತರ ಒಂದು ಕಪ್ ಬಿಸಿ ಬಿಸಿ ಕಾಫಿ ಬೇಕೇ ಬೇಕು. ಇವರಿಗೆ ಕಾಫಿ ಕುಡಿಯದೆ ಇದ್ದರೆ ಅದೇನೋ ಒಂದು ತರಹದ ಚಡಪಡಿಕೆ ಅಂತಾನೆ ಹೇಳಬಹುದು. ನೀವು ಇಷ್ಟ ಪಟ್ಟು ಕುಡಿಯುವ ಕಾಫಿಯಿಂದ ನಿಮ್ಮ ಆರೋಗ್ಯಕ್ಕೆ(Health) ಅನೇಕ ಪ್ರಯೋಜನಗಳಿವೆ(Benefits) ಎಂದು ಇತ್ತೀಚಿನ ವೈದ್ಯಕೀಯ ಅಧ್ಯಯನವು (Medical Study) ತಿಳಿಸಿದೆ.
ನ್ಯೂಟ್ರಿಯೆಂಟ್ಸ್ ಜರ್ನಲ್
ಹೌದು.. ಕಾಫಿ ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನ ಆರೋಗ್ಯಕ್ಕೂ ಇದು ಒಳ್ಳೆಯದು ಎಂದು ತಿಳಿಸಲಾಗಿದೆ. ಈ ಅಧ್ಯಯನವನ್ನು 'ನ್ಯೂಟ್ರಿಯೆಂಟ್ಸ್ ಜರ್ನಲ್' ನಲ್ಲಿ ಪ್ರಕಟಿಸಲಾಗಿದ್ದು, 194 ಸಂಶೋಧನಾ ಪ್ರಕಟಣೆಗಳ ವಿಮರ್ಶೆಯು ಮಧ್ಯಮ ಕಾಫಿ ಸೇವನೆಯು (ದಿನಕ್ಕೆ 3 ರಿಂದ 5 ಕಪ್ ಕಾಫಿ) ಜೀರ್ಣಾಂಗವ್ಯೂಹದ ವಿವಿಧ ಅಂಗಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಕಂಡು ಬಂದಿಲ್ಲ ಎಂದು ಸೂಚಿಸಿತು.
ಈ ಸಂಶೋಧನೆಯಿಂದ ಹೊರ ಹೊಮ್ಮಿದ ನಿರ್ದಿಷ್ಟ ಆಸಕ್ತಿಯ 2 ವಿಷಯಗಳೆಂದರೆ ಕಾಫಿ ಸೇವನೆಯಿಂದ ಪಿತ್ತಕೋಶದಲ್ಲಿ ಉಂಟಾಗುವ ಅಪಾಯ ಕಡಿಮೆ ಮತ್ತು ಕಾಫಿ ಸೇವನೆಯನ್ನು ಪ್ಯಾಂಕ್ರಿಯಾಟೈಟಿಸ್‌ನ ಕಡಿಮೆ ಅಪಾಯದೊಂದಿಗೆ ಜೋಡಿಸುವ ಪುರಾವೆಗಳು. ಆದರೂ, ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
ಇದನ್ನೂ ಓದಿ: Health tips: ಪ್ರತಿದಿನ ಮೊಟ್ಟೆ ಸೇವಿಸಿದರೆ ಮಧುಮೇಹ ಬರುತ್ತಾ? ಏನ್ ಹೇಳುತ್ತೆ ಸಂಶೋಧನೆ?
ಜಠರ ಗರುಳಿನ ಮೂಲಕ ಹಾದು ಹೋಗುವ ಕಾಫಿ ಮೂರು ಮುಖ್ಯ ಪರಿಣಾಮಗಳನ್ನು ಬೀರುತ್ತದೆ, ಅವುಗಳನ್ನು ಈ ಕೆಳಗೆ ನೀಡಲಾಗಿದೆ.
1. ಕಾಫಿಯು ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುವ ಜಠರ, ಪಿತ್ತಜನಕಾ೦ಶ ಮತ್ತು ಪ್ಯಾಂಕ್ರಿಯಾಟಿಕ್ ಸ್ರವಿಸತಗಳೊಂದಿಗೆ ಸ೦ಬ೦ಧಿಸಲ್ಪಟ್ಟಿದೆ. ಕಾಫಿಯು ಜೀರ್ಣಾಂಗ ಹಾರ್ಮೋನ್ ಗ್ಯಾಸ್ಟ್ರಿಕ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಕಂಡು ಬಂದಿದೆ ಮತ್ತು ಗ್ಯಾಸ್ಟ್ರಿಕ್ ರಸದಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲ ಇವೆರಡೂ ಹೊಟ್ಟೆಯಲ್ಲಿ ಆಹಾರವನ್ನು ಒಡೆಯಲು ಸಹಾಯ ಮಾಡುತ್ತದೆ. ಕಾಫಿಯು ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುವ ಕೊಲೆಸಿಸ್ಟೋಕಿನ್ ಎಂಬ ಹಾರ್ಮೋನ್‌ನ ಸ್ರವಿಸುವಿಕೆಯನ್ನು ಸಹ ಉತ್ತೇಜಿಸುತ್ತದೆ, ಇದು ಅಜೀರ್ಣವನ್ನು ಸಹ ಒಳಗೊಂಡಿರುತ್ತದೆ.
2. ಕಾಫಿಯು ಕರುಳಿನ ಮೈಕ್ರೋಬಯೋಟಾ ಸಂಯೋಜನೆಯಲ್ಲಿನ ಬದಲಾವಣೆಗಳೊಂದಿಗೆ ಸಂಬಂಧ ಹೊಂದಿರುವಂತೆ ತೋರಿತು. ವಿಮರ್ಶಿಸಿದ ಅಧ್ಯಯನಗಳಲ್ಲಿ, ಕಾಫಿ ಸೇವನೆಯು ಕರುಳಿನ ಮೈಕ್ರೋಬಯೋಟಾದ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಪ್ರೇರೇಪಿಸುತ್ತದೆ ಎಂದು ಕಂಡು ಬಂದಿದೆ.
3. ಕಾಫಿಯು ಕರುಳಿನ ಚಲನೆಗೆ ಸಂಬಂಧಿಸಿದೆ ಎಂದರೆ ಆಹಾರವು ಜೀರ್ಣಾಂಗವ್ಯೂಹದ ಮೂಲಕ ಪ್ರಯಾಣಿಸುವ ಪ್ರಕ್ರಿಯೆ ಎಂದು ಹೇಳಲಾಗುತ್ತದೆ. ಪರಿಶೀಲಿಸಲಾದ ದತ್ತಾಂಶವು ಕಾಫಿಯು ಧಾನ್ಯಗಳಷ್ಟೇ ಕರುಳಿನಲ್ಲಿ ಚಲನೆಯನ್ನು ಉತ್ತೇಜಿಸಬಹುದು ಮತ್ತು ಇದು ದೀರ್ಘಕಾಲದ ಮಲಬದ್ಧತೆಯ ಅಪಾಯ ಕಡಿಮೆ ಮಾಡುತ್ತದೆ ಎಂದು ಸೂಚಿಸಿದೆ.
4. ಇತ್ತೀಚಿನ ಸಂಶೋಧನೆಯು ಯಕೃತ್ತಿನ ಕ್ಯಾನ್ಸರ್‌ನ ಸಾಮಾನ್ಯ ವಿಧಗಳಲ್ಲಿ ಒಂದಾದ ಹೆಪಟೊಸೆಲ್ಯುಲಾರ್ ಕಾರ್ಸಿನೋಮಾ ಸೇರಿದಂತೆ ಯಕೃತ್ತಿನ ಕಾಯಿಲೆಗಳ ವಿರುದ್ಧ ಕಾಫಿಯು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
5. ಕಾಫಿ ಸೇವನೆಯು ಜೀರ್ಣಕ್ರಿಯೆಯ ಮೊದಲ ಹಂತಗಳನ್ನು ಬೆಂಬಲಿಸಬಹುದು ಎಂದು ಸೂಚಿಸುವ ಪುರಾವೆಗಳ ಹೊರತಾಗಿಯೂ, ಹೆಚ್ಚಿನ ದತ್ತಾಂಶವು ಕಾಫಿಯು ಗ್ಯಾಸ್ಟ್ರೋ-ಅನ್ನನಾಳದ ರಿಫ್ಲಕ್ಸ್ ಮೇಲೆ ನೇರ ಪರಿಣಾಮ ಬೀರಿದೆ ಎಂಬ ಸಂಶೋಧನೆಯನ್ನು ಬೆಂಬಲಿಸಲಿಲ್ಲ.
ಇದನ್ನೂ ಓದಿ: Vitamin D ಸಪ್ಲಿಮೆಂಟ್ಸ್ ತೆಗೆದುಕೊಳ್ತಿದ್ರೆ ಹುಷಾರಾಗಿರಿ... ಯಾಕೆ ಅಂತಾ ಈ ಸ್ಟೋರಿ ಓದಿ..!
ಜೀರ್ಣಾಂಗ ಸಮಸ್ಯೆ
ಫ್ರೆಂಚ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮೆಡಿಕಲ್ ರಿಸರ್ಚ್‌ನಲ್ಲಿ ಎಮೆರಿಟಸ್ ಸಂಶೋಧನಾ ನಿರ್ದೇಶಕರಾದ ಆಸ್ಟ್ರಿಡ್ ನೆಹ್ಲಿಗ್ "ಕೆಲವು ಊಹೆಗಳಿಗೆ ವಿರುದ್ಧವಾಗಿ, ಕಾಫಿ ಸೇವನೆಯು ಒಟ್ಟಾರೆಯಾಗಿ ಕರುಳು ಅಥವಾ ಜೀರ್ಣಾಂಗ ಸಮಸ್ಯೆಗಳಿಗೆ ಸಂಬಂಧಿಸಿಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ ಕಾಫಿಯು ಮಲಬದ್ಧತೆಯಂತಹ ಸಾಮಾನ್ಯ ಜೀರ್ಣಕಾರಿ ದೂರುಗಳ ವಿರುದ್ಧ ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸಬಹುದು. ಜೀರ್ಣಾಂಗವ್ಯೂಹದಾದ್ಯಂತ ಕಾಫಿಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಇನ್ನೂ ಹೆಚ್ಚುವರಿ ದತ್ತಾಂಶದ ಅಗತ್ಯವಿದೆ” ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ